ಬಿಜೆಪಿಯಿಂದ ಕಣಕ್ಕಿಳಿತಾರಾ ವೈದ್ಯರು?- ವೈದ್ಯರ ಆಶ್ವಾಸನೆಗೆ ಒಲಿತಾರಾ ಮತದಾರರು?!

ರಾಜಕಾರಣಿಗಳು ಚುನಾವಣೆ ಕಣಕ್ಕಿಳಿಯೋದು ಸಾಮಾನ್ಯ ಸಂಗತಿ. ಆದರೇ ಇಲ್ಲಿ ಚುನಾವಣೆ ಕಣಕ್ಕಿಳಿತಾ ಇರೋದು ವೈದ್ಯರು.

ad


ಹೌದು ಐಟಿ ಸಿಟಿಯಲ್ಲಿ ವೈದ್ಯರೊಬ್ಬರು ಚುನಾವಣೆ ಕಣ್ಣಕ್ಕಿಳಿಯಲಿದ್ದು, ಮಹಾಲಕ್ಷ್ಮೀ ಲೇಔಟ್​​ ನಿಂದ ಡಾ.ಪ್ರಸನ್ನ ಚುನಾವಣೆಗೆ ಸ್ಪರ್ಧಿಸುವ ಮುನ್ಸೂಚನೆ ನೀಡಿದ್ದಾರೆ. ವೃತ್ತಿಯಲ್ಲಿ ಅರ್ಥೋಪೆಡಿಕ್​ ಆಗಿರುವ ಸರ್ಜನ್​ ಡಾ.ಪ್ರಸನ್ನಗೆ ಬಿಜೆಪಿಯಿಂದ ಟಿಕೇಟ್​ ನೀಡಬೇಕೆಂಬ ಆಗ್ರಹ ವ್ಯಕ್ತವಾಗಿದೆ. ಪ್ರಸನ್ನ ಅವರು ಹಲವು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಅಲ್ಲದೇ ಮಹಾಲಕ್ಷ್ಮೀ ಲೇಔಟ್​ ಕ್ಷೇತ್ರದ ಜನರ ಜೊತೆಗೆ ಸಾಕಷ್ಟು ಒಡನಾಟ ಹೊಂದಿದ್ದಾರೆ. ಹೀಗಾಗಿ ಅವರಿಗೆ ಬಿಜೆಪಿಯಿಂದ ಟಿಕೇಟ್​ ನೀಡುವಂತೆ ಬಿಜೆಪಿ ಘಟಕ ಒತ್ತಾಯಿಸಿದೆ.

ಕಳೆದ 10 ವರ್ಷಗಳಿಂದ ಮಹಾಲಕ್ಷ್ಮೀ ಲೇಔಟ್​ ಕ್ಷೇತ್ರದಲ್ಲಿ ಪ್ರಸನ್ನ ಬಿಜೆಪಿ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ. ಹೀಗಾಗಿ ಬಿಜೆಪಿಯಿಂದ ಡಾ.ಪ್ರಸನ್ನಗೆ ಟಿಕೇಟ್ ಕೊಟ್ಟರೇ ಗೆಲುವು ನಿಶ್ಚಿತ ಎಂದು ಸ್ಥಳೀಯರು ಅಭಿಪ್ರಾಯಿಸಿದ್ದಾರೆ. ಇನ್ನು ರಾಜ್ಯ ಬಿಜೆಪಿ ನಾಯಕರು ಕೂಡ ಪ್ರಸನ್ನ ಹೆಸರನ್ನ ಶಿಫಾರಸ್ಸು ಮಾಡಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ವೈದ್ಯರೊಬ್ಬರು ರಾಜಕೀಯ ಅದೃಷ್ಟ ಪರೀಕ್ಷೆಗೆ ಮುಂಧಾಗಿದ್ದು, ಜನರು ಹೇಗೆ ಸ್ವೀಕರಿಸ್ತಾರೆ ಕಾದು ನೋಡಬೇಕಿದೆ.