ಒಂದೇ ಚಿತ್ರದಲ್ಲಿ ನಟಸ್ತಾರಾ ದೊಡ್ಮನೆ‌ ಬ್ರದರ್ಸ್ ?- ಪೇಸ್ ಬುಕ್ ಲೈವ್ ನಲ್ಲಿ ಶಿವಣ್ಣ-ಅಪ್ಪು ಹೇಳಿದ್ದೇನು?

ಡಾ.ಶಿವರಾಜ್ ಕುಮಾರ್ ಮತ್ತು ಪುನೀತ್ ರಾಜಕುಮಾರ್ ಇಬ್ಬರು ಕನ್ನಡ ಚಿತ್ರರಂಗದ ಹೆಮ್ಮೆಯ ನಟರು. ನಟಸಾರ್ವಭೌಮನ ಪುತ್ರರಾದ ಇವರಿಬ್ಬರನ್ನು ಒಟ್ಟಿಗೆ ಒಂದೇ ಚಿತ್ರದಲ್ಲಿ ನೋಡಬೇಕು ಎಂಬುದು ಕನ್ನಡಿಗರ ಕನಸು. ಈಗ ಈ ಕನಸು ನನಸಾ ಗುವ ಕಾಲ ಬಂದಿದೆ. ಹೌದು ಶಿವಣ್ಣ ಮತ್ತು ಪುನೀತ್ ಒಂದೇ‌ ಚಿತ್ರದಲ್ಲಿ ನಟಿಸಲು‌ ಸಿದ್ಧವಾಗಿದ್ದು ಒಳ್ಳೆ ಸ್ಕ್ರಿಪ್ಟ್ ಸಿಕ್ಕರೇ ನಾನು ಮತ್ತು ಪುನೀತ್ ಒಂದೇ ಚಿತ್ರದಲ್ಲಿ ನಟಿಸಲು ಸಿದ್ಧರಿದ್ದೇವೆ ಎಂದು ಸ್ವತಃ ಶಿವಣ್ಣ ಹೇಳಿಕೊಂಡಿದ್ದಾರೆ. ಇದೇ ಮೊದಲ ಭಾರಿಗೆ ಶಿವಣ್ಣ ಮತ್ತು ಪುನೀತ್ ಒಟ್ಟಿಗೆ ಪೇಸ್ ಬುಕ್ ಲೈವಗೆ ಬಂದಿದ್ದು ಆ ವೇಳೆ ಈ ಅಂಶ‌ ಬಹಿರಂಗಗೊಳಿಸಿದ್ದಾರೆ.

ನಿನ್ನೆ ರಾತ್ರಿ ವೇಳೆ ಶಿವಣ್ಣ ಮತ್ತು ಪುನೀತ್ ದೊಡ್ಮನೆಯ ಪಿ.ಆರ್.ಕೆ ಆಡಿಯೋ ಸಂಸ್ಥೆಯ ಅಧಿಕೃತ ಪೇಜ್ ನಲ್ಲಿ ಪೇಸ್‌ಬುಕ್ ಲೈವಗೆ ಬಂದಿದ್ದರು. ಟಗರು ಆಡಿಯೋವನ್ನು ಇದೆ ೨೩ ರಂದು ತಮ್ಮ ಮನೆಯ ಪಿಆರ್ಕೆ ಪಲ ಆಡಿಯೋ ಮೂಲಕ ರಿಲೀಸ್ ಮಾಡುತ್ತಿರುವುದಾಗಿ ಹೇಳಿದ ಶಿವಣ್ಣ ಇಬ್ಬರು ಒಟ್ಟಿಗೆ ನಟಿಸುವ ವಿಚಾರ ಬಹಿರಂಗಗೊಳಿಸಿದರು.

 

ಇನ್ನು ಟಗರು ಸಿನಿಮಾ ಬಗ್ಗೆ ಮಾತನಾಡಿದ ಪುನೀತ್ ಚಿತ್ರದಲ್ಲಿ ೮ ಹಾಡುಗಳಿದ್ದು ಪಿಆರ್ಕೆ ಆಡಿಯೋ ರಿಲೀಸ್ ಮಾಡಲಿದೆ. ಹಾಡುಗಳನ್ನು ಕೇಳಿ ಆನಂದಿಸಿ ಎಂದರು. ಸೂರಿ ನಿರ್ದೇಶಿಸಿರುವ ಟಗರು ಚಿತ್ರಕ್ಕೆ‌ ಶರಣ ಸಂಗೀತವಿದೆ. ಇದೇ ವೇಳೆ ೧೦ ನಿಮಿಷಕ್ಕೂ ಹೆಚ್ಚು ಕಾಲ ಪೇಸ್ ಬುಕ್ ಲೈವ್ ನಡೆಸಿದ ಶಿವಣ್ಣ ಪುನೀತ್ ಅಭಿಮಾನಿಗಳ ಪ್ರಶ್ನೆಗೆ ಖುಷಿ ಖುಷಿಯಾಗಿ ಉತ್ತರಿಸಿದರು. ಇದೇ ಮೊದಲ ದೊಡ್ಡ ನೆಯ ಇಬ್ಬರು ಬ್ರದರ್ಸ್ ನ್ನು ಒಟ್ಟಿಗೆ ಲೈವ್ ನಲ್ಲಿ ಫ್ಯಾನ್ಸ್ ಕಮೆಂಟ್ ಮಾಡಿ ಪ್ರಶ್ನೆ ಕೇಳಿ ಸಂಭ್ರಮಿಸಿದರು. ಒಟ್ಟಿನಲ್ಲಿ ದೊಡ್ಮನೆಯಿಂದ ಆರಂಭಿಸಲಾಗಿರುವ ಪಿ.ಆರ್.ಕೆ ಆಡಿಯೋ ಪ್ರೊಡಕ್ಷನ್ ಪ್ರಚಾರಕ್ಕೆ ಪುನೀತ್ ಹಾಗೂ ಶಿವಣ್ಣ ಜಂಟಿಯಾಗಿ ಪೇಸ್ ಬುಕ್ ಲೈವ್ ನಡೆಸಿ ಅಭಿಮಾನಿಗಳನ್ನು ಸೆಳೆಯುವ ಪ್ರಯತ್ನ ನಡೆಸಿದ್ದಾರೆ ಎಂದರೆ ತಪ್ಪಿಲ್ಲ.

From the web

ಪ್ರತ್ಯುತ್ತರ ನೀಡಿ

Please enter your comment!
Please enter your name here