ರಾಜಕೀಯ ನಿವೃತ್ತಿಯತ್ತ ಖರ್ಗೆ ಯ ಚಿತ್ತ..?!

ಶಾಸಕ ಸ್ಥಾನಕ್ಕೆ ಉಮೇಶ ಜಾದವ್ ರವರು ರಾಜಿನಾಮೆ ಕೊಟ್ಟು ಬಿಜೆಪಿ ಗೆ ಜಂಪ್ ಆಗುತ್ತಿದ್ದಂತೆ ಕಲಬುರಗಿ ಜಿಲ್ಲೆ ಸೇಡಂನಲ್ಲಿ ಕೈ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ರವರು ಫಸ್ಟ್ ರಿಯಾಕ್ಷನ್ ಕೊಟ್ಟಿದ್ದಾರೆ . ‘ನನಗೂ ವಯಸ್ಸಾಗ್ತಿದೆ, ಇದೇ ನನ್ನ ಕೊನೆಯ ಚುನಾವಣೆ . 9 ಬಾರಿ ಶಾಸಕನಾಗಿ, ಎರಡು ಬಾರಿ ಸಂಸದನಾಗಿ ಸತತ 11 ಬಾರಿ ಜನ ಆಯ್ಕೆ‌ ಮಾಡಿದ್ದು ಈ ಬಾರಿಯೂ ಗೆದ್ದರೆ ಒಂದು ಡಜನ್ ಬಾರಿ ಗೆದ್ದು ದಾಖಲೆ ಮಾಡಿದಂತಾಗುತ್ತದೆ’ ಎಂದು ಹೇಳಿದ್ದಾರೆ .

ಕ್ಷೇತ್ರದ ಜನರು ನನ್ನ ಕೈ ಹಿಡಿಯುತ್ತಾರೆ ಎಂಬ ಸಂಪೂರ್ಣ ನಂಬಿಕೆ ಇದೆ . ನನ್ನನ್ನು ಸೋಲಿಸುವುದು ಗೆಲ್ಲಿಸುವುದು ನಿಮ್ಮ ಕೈ ಯಲ್ಲಿದೆ ಎಂದಿದ್ದಾರೆ ಹನ್ನೊಂದು ಇನ್ನೊಂದು ಎನ್ನುವಂತೆ 12 ನೆಯ ಚುನಾವಣೆಯೆ ನನ್ನ ಕೊನೆಯ ಚುನಾವಣೆ ಎಂದು ನಿವೃತ್ತಿ ಮಾತನಾಡಿ ಚುನಾವಣೆಯಲ್ಲಿ ಅನುಕಂಪದ ಮತಗಳ ಸೆಳೆಯಲು ಖರ್ಗೆ ಪ್ಲ್ಯಾನ್ ನಡೆಸಿದಂತಿದೆ

ಮೊದಲನೇ ಬಾರಿ 9 ಸಾವಿರ ಹೆಚ್ಚಿನ ಮತಗಳಿಂದ ವಿಜಯಶಾಲಿಯಾಗಿದ್ದೇನೆ 2ನೇ ಬಾರಿ 18 ಸಾವಿರ ಬಹುಮತವನ್ನ ಪಡೆದಿದ್ದೇನೆ 3 ನೇ ಬಾರಿ 20 ಸಾವಿರ ಬಹುಮತ ಪಡೆದಿದ್ದೇನೆ .4 ನೇ ಬಾರಿ 22 ಸಾವಿರ ಹಾಗೂ 11 ನೇ ಬಾರಿ 49 ಸಾವಿರ ಬಹುಮತಗಳಿಮದ ಗೆದ್ದಿದ್ದೇನೆ. ಈಗೆ ನಿಮ್ಮ ಆಶೀರ್ವಾದ ನನ್ನ ಮೇಲೆ ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯವರೆಗೂ ನನ್ನನ್ನು ಯಾರೂ ಸೋಲಿಸಲು ಸಾಧ್ಯವಿಲ್ಲ ಎಂದು ರಾಜಕೀಯ ಗಾಳವನ್ನು ಬೀಸಿದ್ದಾರೆ