ಕೋಳಿ ತಿನ್ನಲು ಹೋಗಿ ಸಿಡಿಮದ್ದು ತಿಂದು ಇಹಲೋಕ ತ್ಯಜಿಸಿದ ನಾಯಿ

ನೆಲಮಂಗಲದಲ್ಲಿ ಸಿಡಿಮದ್ದು ಸ್ಪೋಟಗೊಂಡು ನಾಯಿಯೊಂದು ಬಲಿಯಾಗಿದೆ. ನೆಲಮಂಗಲ ತಾಲೂಕಿನ ಚಿಕ್ಕಮಾರಹಳ್ಳಿಯಲ್ಲಿ ಬಂಡೆ ಸಿಡಿಸುವ ಸಿಡಿಮದ್ದು ಸ್ಪೋಟಗೊಂಡು ಈ ದುರ್ಘಟನೆ ಸಂಭವಿಸಿದೆ.

ad


ಈ ನಾಯಿ ಗ್ರಾಮದ ಅಂಜನಮೂರ್ತಿ ಎಂಬುವವರಿಗೆ ಸೇರಿದೆ. ದುಷ್ಕರ್ಮಿಗಳು ಕೋಳಿ ಮಾಂಸದಲ್ಲಿ ಸ್ಪೋಟಕವನ್ನು ಇರಿಸಿದ್ದು ನಾಯಿ ಕೋಳಿ ತಿನ್ನುವಾಗ ಸ್ಪೋಟಗೊಂಡು ಸ್ಥಳದಲ್ಲೇ ಮೃತಪಟ್ಟಿದೆ. ಈ ಘಟನೆಯಿಂದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದ್ದು, ನೆಲಮಂಗಲ ಗ್ರಾಮಾಂತರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.