ಚುನಾವಣೆಗೆ ನಿಂತ ಅಭ್ಯರ್ಥಿಗೇ ಕುರಿ ನೀಡಿದ ಪ್ರಜೆಗಳು!! ಆಶ್ಚರ್ಯಕರವಾದರೂ ಸತ್ಯ!! ಯಾಕಾಗಿ ಕೊಟ್ರು?

ಸಾಮಾನ್ಯವಾಗಿ ಚುನಾವಣೆಗೆ ನಿಂತ ಅಭ್ಯರ್ಥಿಗಳು ಜನರಿಗೆ ಹಣ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ಉಡುಗೊರೆ ಕೊಡುವುದನ್ನ ನೋಡಿದ್ದಿರಿ. ಆದ್ರೆ ವಿಜಯಪುರದ ಇಂಡಿ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಿ.ಡಿ. ಪಾಟೀಲಗೆ ಕುರಿಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಅಂಕಲಗಿ ಗ್ರಾಮದ ಹಾಲುಮತ ಸಮಾಜದ ರೈತರು ಬೆಂಬಲ ನೀಡಿದ್ದಾರೆ.

ಬಿ ಡಿ ಪಾಟೀಲ್ ಗೆ 35 ಕುರಿಗಳನ್ನು ರೈತರು ಕಾಣಿಕೆ ನೀಡಿದ್ದು, ಮುಂದಿನ ದಿನಗಳಲ್ಲಿ 150 ಕುರಿಗಳನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಇನ್ನು ಕುರಿಗಳನ್ನು ಮಾರಾಟ ಮಾಡಿ ಬಂದ ಹಣವನ್ನು ಚುನಾವಣೆಗೆ ಬಳಸಲು ಸಮಾಜ ಬಾಂಧವರು ಸೂಚಿಸಿದ್ದು, ತಮ್ಮ ಸಮಾಜದ ಅಭ್ಯರ್ಥಿ ಶಾಸಕನಾಗಬೇಕು ಎಂದು ಕುರಿಗಳ ಕಾಣಿಕೆ ನೀಡಿರುವುದಾಗಿ ಹೇಳಿದ್ದಾರೆ. ಇನ್ನು ಸಮಾಜ ಬಾಂಧವರ ಈ ಪ್ರೀತಿ ಮತ್ತು ಪ್ರೋತ್ಸಾಹಕ್ಕೆ ಅಭ್ಯರ್ಥಿ ಬಿ ಡಿ ಪಾಟೀಲ ಧನ್ಯವಾದ ಅರ್ಪಿಸಿದ್ದಾರೆ…

Avail Great Discounts on Amazon Today click here