ಒಂದೇ ರಾತ್ರಿಗೆ ತುಂಬಿದ ಕೆರೆ ಬರಿದಾಯ್ತು

ad

ಕಳೆದೆರಡು ವರ್ಷದಿಂದ ಮಳೆಯನ್ನೇ ಕಾಣದ ಜನರಿಗೆ ಈ ವರ್ಷ ತುಂಬಿದ ಕೆರೆ ಖುಷಿ ತಂದಿತ್ತು. ಕೆರೆ ನೀರು ಬಳಸಿಕೊಂಡು ಒಂದೆರಡು ಬೆಳೆ ಬೆಳೆದುಕೊಳ್ಳುವ ಸಂಭ್ರಮದಲ್ಲಿದ್ದ ಅಲ್ಲಿನ ರೈತರಿಗೆ ನಿನ್ನೆ ತಡರಾತ್ರಿ ನಡೆದ ಘಟನೆ ಸಖತ್ ಶಾಕ್ ನೀಡಿದೆ. ಬರಿದಾದ ಕೆರೆ ಕಂಡು ರೈತರು ಕಣ್ಣೀರಿಡುತ್ತಿದ್ದಾರೆ. ತುಮಕೂರು ಜಿಲ್ಲೆ ತುರುವೇಕೆರೆ ದೊಡ್ಡ ಶೆಟ್ಟಿ ಹಳ್ಳಿ ಕೆರೆಯಲ್ಲಿ ಪ್ರಸಕ್ತ ವರ್ಷದ ಭಾರಿ ಮಳೆಗೆ ಮೈದುಂಬಿ ನಿಂತಿತ್ತು. ಆದರೇ ನಿನ್ನೆ ತಡರಾತ್ರಿ ಕೆರೆ ಏರಿ ಒಡೆದ ಪರಿಣಾಮ ಬೆಳಗಿನ ವೇಳೆಗೆ ತುಂಬಿದ ಕೆರೆ ಸಂಪೂರ್ಣವಾಗಿ ಬರಿದಾಗಿದ್ದು, ಹೊಳೆಯಾಗಿ ಹರಿದ ಕೆರೆಯ ನೀರಿಗೆ ಅಕ್ಕ-ಪಕ್ಕದ ಜಮೀನುಗಳು, ಮನೆಗಳು ಜಲಾವೃತಗೊಂಡಿವೆ.

ಕೆರೆಯಲ್ಲಿ ಅಪಾರ ಪ್ರಮಾಣದ ಹೂಳು ತುಂಬಿದ್ದರಿಂದ ಸ್ಥಳೀಯ ರೈತರು ಕೆರೆ ಹೊಳೆತ್ತಿಸಿಕೊಡುವಂತೆ ಹಲವಾರು ಭಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೇ ಅಧಿಕಾರಿಗಳು ಸ್ಪಂದಿಸಿರಲಿಲ್ಲ. ಅಲ್ಲದೇ  ಈ ಭಾಗದಲ್ಲಿ ಅಕ್ರಮ ಗಣಿಗಾರಿಕೆ ಕೂಡ ನಡೆಯುತ್ತಿದ್ದು  ಇದರಿಂದಾಗಿ ಹೀಗಾಗಿ ಕೆರೆ ಏರಿ ಒಡೆದುಹೋಗಿ ಈ ಅನಾಹುತ ಸಂಭವಿಸಿದೆ ಅನ್ನೋದು ಸ್ಥಳೀಯರ ಆರೋಪ.  ಒಟ್ಟಿನಲ್ಲಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ತುಂಬಿದ್ದ ಕೆರೆ ಬರಿದಾಗಿದ್ದು, ರೈತರಿಗೆ ನಿರಾಸೆ ಕಟ್ಟಿಟ್ಟ ಬುತ್ತಿ ಎಂಬಂತಾಗಿದೆ.

Watch Here: https://youtu.be/aw6lTW22rZ4