ಕಾದ ಬಂಡೆ ಮೇಲೆ ಉರುಳಾಡಿದ ಡ್ರೈವರ್​- ಯಾಕಿಂಥ ಶಿಕ್ಷೆ ಗೊತ್ತಾ!?

ಲಾರಿ ಚಾಲಕನನ್ನು ಬಿಸಿಲಿನಲ್ಲಿ ಬಂಡೆ ಮೇಲೆ ಉರುಳಿಸಿದ ಕ್ರೂರಿಗಳು ದೌರ್ಜನ್ಯದ ಮೆರೆದ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಬಳ್ಳಾರಿಯ ಸಿರಗುಪ್ಪದಲ್ಲಿ ಘಟನೆ ನಡೆದಿದ್ದು, ಲಾರಿಗೆ ಓವರ್​ ಲೋಡ್ ಹಾಕಿಸಿದ್ದಾನೆ ಎಂದು ಲಾರಿ ಅಸೋಶಿಯನೇಶ್​ನವರು ಈ ಕ್ರೌರ್ಯ ಮೆರೆದಿದ್ದಾರೆ ಎನ್ನಲಾಗಿದೆ.

ad


 
ಬಿಸಿಲಿನಲ್ಲಿ ಕಾದ ಬಂಡೆ ಮೇಲೆ ಲಾರಿ ಚಾಲಕನಿಗೆ ಉರುಳಾಡುವಂತೆ ಹೇಳಲಾಗಿದ್ದು, ಈ ಅಮಾನವೀಯ ವಿಡಿಯೋ ಬಿಟಿವಿನ್ಯೂಸ್​ಗೆ ಲಭ್ಯವಾಗಿದೆ. ಸಲೀಂ ಶೇಕ್ಷಾವಲಿ ಎಂಬುವವರು ಹೀಗೆ ಕ್ರೂರವಾಗಿ ಶಿಕ್ಷೆ ನೀಡಿದ್ದಾರೆ ಎನ್ನಲಾಗಿದೆ. ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ ಕುಡಿದ ಡ್ರೈವರ್​​ ಜೊತೆಗೆ ತಮಾಷೆ ಮಾಡಿದ್ದಾರೆ ಎನ್ನುತ್ತಿದ್ದಾರೆ.

ಇನ್ನೊಂದೆಡೆ ಈ ಕ್ರೂರ ಘಟನೆ ಬಗ್ಗೆ ಸಾರ್ವಜನಿಕರಿಂದ ತೀವ್ರ ಟೀಕೆ ವ್ಯಕ್ತವಾಗಿದ್ದು, ಓವರ್ ಲೋಡ್ ಆಗಿದ್ದರೇ ಪ್ರಶ್ನಿಸುವ ಅಧಿಕಾರ ಆರ್.ಟಿ.ಓ ಅಧಿಕಾರಿಗಳಿಗಿದೆ. ಆದರೇ ಇದನ್ನು ಪ್ರಶ್ನಿಸಿ ಅಮಾಯಕ ಲಾರಿ ಡ್ರೈವರ್​ ಮೇಲೆ ಹಲ್ಲೆ ಮಾಡಿರೋದು ಎಷ್ಟು ಸರಿ ಎಂಬ ಪ್ರಶ್ನೆ ಉದ್ಭವವಾಗಿದೆ.