ವೀಕೆಂಡ್​​ ಅಂದ್ರೆ ಬೆಂಗಳೂರಿನಲ್ಲಿ ಮೋಜು ಮಸ್ತಿಗೇನು ಕಮ್ಮಿ ಇಲ್ಲ… ಅದ್ರಲ್ಲೂ ಹೊರ ರಾಜ್ಯದ ಯುವಕ, ಯುವತಿಯರ ಮೋಜು ಹೆಚ್ಚೇನೆ. ಇದೇ ರೀತಿ ನಿನ್ನೆ ರಾತ್ರಿ ವಿಕೇಂಡ್ ಮೂಡ್ ನಲ್ಲಿ ಹೂರ ರಾಜ್ಯದ ಯುವತಿ ರಂಪಾಟ ಮಾಡಿದ್ದಾಳೆ. ಮದ್ಯದ ನಶೆಯಲ್ಲಿ ಮಧ್ಯರಾತ್ರಿ ನಡು ರಸ್ತೆಯಲ್ಲೇ ಯುವತಿ ಫುಲ್ ಡ್ಯಾನ್ಸ್ ಮಾಡಿ, ಬಿದ್ದು ಒದ್ದಾಡಿರೋ ಘಟನೆ ಬೆಂಗಳೂರಿನ ಬಿಟಿಎಂ ಲೇಔಟ್​​ನಲ್ಲಿ ನಡೆದಿದೆ. ನಶೆ ಇಳಿಯುವ ತನಕ ಆ ಯುವತಿ ಬೀದಿಯಲ್ಲೇ ಮಲಗಿದ್ದಾಳೆ. ಯುವತಿಯ ಅವಾಂತರ ನೋಡಿ ಕಂಟ್ರೋಲ್ ರೂಂಗೆ ಕರೆ ಮಾಡಿದ್ರೂ ಪ್ರಯೋಜನವಿಲ್ಲ ಅಂತ ಸಾರ್ವಜನಿಕರು ಸುಮ್ಮನಾಗಿದ್ದಾರೆ…

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here