ಕನ್ನಡಿಗನಾಗಿ ಆಟೋ ಏರಿ ಖದರ್ ತೋರಿಸಿದ ‘ಕನಕ’..!

ದುನಿಯಾ ವಿಜಯ್​ ಸಿನಿಮಾ ಅದ್ಮೇಲೆ ಅಲ್ಲಿ ಆಕ್ಷನ್​ಗೆ ಕೊರತೆ ಇರೋದಿಲ್ಲ. ಮೈ ನವಿರೇಳಿಸುವ ಸ್ಟಂಟ್​ ಇದ್ದೇ ಇರುತ್ತೆ. ಇದೀಗ ಸ್ಯಾಂಡಲ್​​ವುಡ್​ ಕರಿಚಿರತೆ ಮತ್ತೊಮ್ಮೆ ಮಾಸ್​​ ಫ್ಯಾನ್ಸ್​ಗೆ ಭರ್ಜರಿ ಟ್ರೀಟ್​ ಕೊಡೋದಕ್ಕೆ ಸಜ್ಜಾಗಿದ್ದಾರೆ. ಅದು ಕನಕ ಸಿನಿಮಾದಲ್ಲಿ. ರಾಜ್ಯೋತ್ಸವದಂದೇ ಈ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಚಿತ್ರದಲ್ಲಿ ದುನಿಯಾ ವಿಜಿ ಕನ್ನಡದ ಅಪ್ಪಟ ಅಭಿಮಾನಿಯಾಗಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಈ ಚಿತ್ರದಲ್ಲಿ ವಿಜಿ ವರನಟ ಡಾ ರಾಜ್​ಕುಮಾರ್​ ಫ್ಯಾನ್​ ಕೂಡ ಹೌದು.
ಆಟೋ ಡ್ರೈವರ್ ಆಗಿ, ರಾಜ್ ಅಭಿಮಾನಿಯಾಗಿ ಕಾಣಿಸಿಕೊಂಡಿರುವ ಕನಕ ಸಿನಿಮಾದ ಟ್ರೇಲರ್​​ ಖಡಕ್​ ಆಕ್ಷನ್​​ಗಳಿಂದ ಗಮನ ಸೆಳೆದಿದೆ. ಸಾಹಸ ದೃಶ್ಯಗಳಲ್ಲಿ ಅದ್ಬುತವಾಗಿ ನಟಿಸೋ ವಿಜಯ್ ಕನಕಾ ಸಿನಿಮಾದಲ್ಲೂ ಭರ್ಜರಿ ಸ್ಟಂಟ್​ ಮಾಡಿದ್ದಾರೆ. ಕರಿಚಿರತೆಯ ಆ್ಯಕ್ಷನ್​, ಹಾಗು ಪಂಚ್​​ ಡೈಲಾಗ್​​ಗೆ ಎದುರಾಳಿಗಳು ಗಡ ಗಡ ನಡುಗಿದ್ದಾರೆ.

ಆರ್ ಚಂದ್ರು ನಿರ್ದೇಶನದ ದುನಿಯಾ ವಿಜಯ್ ನಟನೆಯ ಕನಕ ಸಿನಿಮಾ ಸೆಟ್ಟೇರಿದ ದಿನದಿಂದ ಕುತೂಹಲ ಹುಟ್ಟಿಸಿತ್ತು. ಇದೀಗ ರಿಲೀಸ್​ ಆಗಿರುವ ಟ್ರೇಲರ್​​ ವಿಜಿ ಫ್ಯಾನ್ಸ್​ಗೆ ಥ್ರಿಲ್​ ಹುಟ್ಟಿಸೋದರಲ್ಲಿ ಅನುಮಾನ ಇಲ್ಲ. ಕನಕ ‘ ಚಿತ್ರದಲ್ಲಿ ರವಿಶಂಕರ್‌ ವಿಲನ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆ್ಯಕ್ಷನ್​ ಜೊತೆಗೆ ಲವ್​​ ಕಹಾನಿ ಝಲಕ್​ ಕೂಡ ಟ್ರೇಲರ್​ನಲ್ಲಿದೆ.

ಅಂದಹಾಗೆ ಚಿತ್ರದಲ್ಲಿ ಮಾನ್ವಿತಾ ಹರೀಶ್​ ಮತ್ತು ಹರಿಪ್ರಿಯಾ ದುನಿಯಾ ವಿಜಯ್​​ಗೆ ನಾಯಕಿಯಾಗಿದ್ದಾರೆ. ಹೀಗಾಗಿ ಸಿನಿಮಾದಲ್ಲಿ ಕಲರ್​ಫುಲ್​ ಲವ್​ಸ್ಟೋರಿ ಕೂಡ ಇರಲಿದೆ. ಇದೇ ತಿಂಗಳ 19ರಂದು ಶಿಡ್ಲಘಟ್ಟದಲ್ಲಿ ಅದ್ದೂರಿಯಾಗಿ ಸಿನಿಮಾದ ಆಡಿಯೋ ಲಾಂಚ್​ ಆಗಲಿದೆ. ಸದ್ಯದಲ್ಲೇ ಚಿತ್ರದ ರಿಲೀಸ್​ ಡೇಟ್​ ಎನೌನ್ಸ್​ ಆಗಲಿದೆ