ಐಟಿ ಸಾಕ್ಷ್ಯ ನಾಶ ಪ್ರಕರಣದಲ್ಲಿ ಪವರ್​​ ಮಿನಿಸ್ಟರ್​​ಗೆ ಜಾಮೀನು!!

ಅತ್ಯಂತ ಕುತೂಹಲ ಮೂಡಿಸಿದ್ದ ಐಟಿ ದಾಳಿ ವೇಳೆಯಲ್ಲಿ ಸಾಕ್ಷ್ಯ ನಾಶ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಇಂಧನ್​ ಸಚಿವ ಡಿ.ಕೆ.ಶಿವಕುಮಾರ್​ಗೆ ಜಾಮೀನು ದೊರೆತಿದೆ.

ad


ಆರ್ಥಿಕ ಅಪರಾಧಗಳ ನ್ಯಾಯಾಲಯ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ 25 ಸಾವಿರ ರೂಪಾಯಿಗಳ ನಗದು ಹಾಗೂ 2 ಶ್ಯೂರಿಟಿ ಜೊತೆ ಜಾಮೀನು ಮಂಜೂರು ಮಾಡಿದೆ. ನೃಪತುಂಗ ರಸ್ತೆಯ ಮ್ಯಾಜಿಸ್ಟ್ರೇಟ್​ ಕೋರ್ಟ್​​ ಕಟ್ಟಡದಲ್ಲಿರುವ ಆರ್ಥಿಕ ಅಪರಾಧಗಳ ನ್ಯಾಯಾಲಯಕ್ಕೆ ಡಿಕೆಶಿ ಹಾಜರಾಗಿದ್ದರು. ಡಿ.ಕೆ.ಶಿವಕುಮಾರ್ ಜೊತೆ ಡಿ.ಕೆ.ಸುರೇಶ್​ ಕೂಡ ಕೋರ್ಟ್​​ ವಿಚಾರಣೆಗೆ ಹಾಜರಾಗಿದ್ದರು. ಡಿಕೆಶಿ ಜಾಮೀನು ವೇಳೆ ಸಾಕ್ಷಿಗಳ ಮೇಲೆ ಪ್ರಭಾವ ಬೀರದಂತೆ ನ್ಯಾಯಾಲಯ ಸೂಚಿಸಿದೆ. ಗುಜರಾತ ರಾಜ್ಯಸಭಾ ಚುನಾವಣೆ ವೇಳೆ ಅಲ್ಲಿನ ಕೆಲ ಸದಸ್ಯರನ್ನು ಡಿ.ಕೆ.ಶಿವಕುಮಾರ್ ಈಗಲ್​ ಟನ್​ ರೆಸಾರ್ಟ್​​ಗೆ ಕರೆತಂದಿದ್ದರು.

ಆ ವೇಳೆ ಧೀಡಿರ ಐಟಿ ದಾಳಿ ನಡೆದಿತ್ತು. ಈ ವೇಳೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಕೆಲವು ಸಾಕ್ಷ್ಯಗಳನ್ನು ನಾಶ ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಮೇಲೆ ಪ್ರಕರಣ ದಾಖಲಿಸಿಕೊಂಡ ಐಟಿ ವಿಚಾರಣೆ ನಡೆಸಿತ್ತು. ಇನ್ನು ವಿಚಾರಣೆಗೂ ಮುನ್ನ ಡಿಕೆಶಿ ತಮ್ಮ ಸಹೋದರ ಹಾಗೂ ವಕೀಲರ ಜೊತೆಗೆ ಕೋರ್ಟ್​ಗೆ ಹಾಜರಾಗಿದ್ದರು. ಜಾಮೀನು ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಡಿಕೆಶಿ, ನಾನು ಈಗ ಏನು ಮಾತನಾಡೋದಿಲ್ಲ. ನನಗೆ ಮಾತನಾಡಲು ಶಕ್ತಿ ಇಲ್ಲ. ಎಲ್ಲ ನಿಮಗೆ ಗೊತ್ತಿರುವ ವಿಚಾರ ಎಂದರು.