ಗ್ರಾ.ಪಂ ಸದಸ್ಯನ ಕಿವಿ ಕಚ್ಚಿ ತುಂಡರಿಸಿದ ಅಧ್ಯಕ್ಷೆ ಪತಿ

 

ಗ್ರಾ.ಪಂ ಸದಸ್ಯನ ಕಿವಿ ಕಚ್ಚಿ ತುಂಡರಿಸಿದ ಅಧ್ಯಕ್ಷೆ ಪತಿ

ಸ್ಥಳೀಯ ಆಡಳಿತದಲ್ಲೂ ಪಾರದರ್ಶಕತೆ ತರುವ ಉದ್ದೇಶದಿಂದ ಗ್ರಾಮ ಪಂಚಾಯತ್​ ಕಟ್ಟಡಗಳಿಗೂ ಸಿಸಿಟಿವಿ ಅಳವಡಿಸಬೇಕೆಂಬ ಆಗ್ರಹ ಕೇಳಿಬರುತ್ತಿದೆ. ಆದರೇ ಇಲ್ಲೊಬ್ಬ ಗ್ರಾ.ಪಂ ಸದಸ್ಯ ಗ್ರಾಮ ಪಂಚಾಯತ್​ ಕಟ್ಟಡದಲ್ಲಿ ಸಿಸಿಟಿವಿ ಅಳವಡಿಸಲು ಸೂಚಿಸಿದ್ದಕ್ಕೆ ತನ್ನ ಕಿವಿಯನ್ನೇ ಕಳೆದುಕೊಂಡಿದ್ದಾನೆ. ಹೌದು ಸಿಸಿಟಿವಿ ಅಳವಡಿಸಲು ಆಗ್ರಹಿಸಿದ್ದಕ್ಕೆ ಗ್ರಾ.ಪಂ ಅಧ್ಯಕ್ಷೆಯ ಗಂಡ ಸದಸ್ಯನ ಕಿವಿಯನ್ನೇ ಕಚ್ಚಿ ಕತ್ತರಿಸಿದ್ದಾನೆ.

ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕು ಶೆಟ್ಟಿಕೆರೆ ಗ್ರಾ.ಪಂ ಕಚೇರಿಗೆ ಭ್ರಷ್ಟಾಚಾರ ತಡೆಯುವ ಹಾಗೂ ಸುಗಮ ಆಡಳಿತಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಗ್ರಾ.ಪಂಚಾಯತ್ ಕಚೇರಿಗೆ ಸಿಸಿಟಿವಿ ಅಳವಡಿಸುವಂತೆ ಗ್ರಾ.ಪಂ ಸದಸ್ಯ ಜಗದೀಶ್​ ಅಧ್ಯಕ್ಷೆ ನಾಗಮಣಿಯವರನ್ನು ಒತ್ತಾಯಿಸಿದ್ದ.

ಕಿವಿಯನ್ನಿ ಕಚ್ಚಿದ ಭೂಪ: ಆದರೇ ಜಗದೀಶ್ ಆಗ್ರಹಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷೆ ನಾಗಮಣಿ ಪತಿ ಪರಮೇಶ್​ ವಿರೋಧ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಬಗ್ಗದ ಜಗದೀಶ್ ಮತ್ತೆ ಒತ್ತಾಯಿಸಿದ್ದಾನೆ. ಇದರಿಂದ ಕೋಪಗೊಂಡ ನಾಗಮಣಿ ಪತಿ ಪರಮೇಶ್ ತನ್ನ ಪತ್ನಿ ವಿರುದ್ಧ ವೆ ಮಾತನಾಡುತ್ತಿದ್ದೀಯಾ ಎಂದು ಜಗದೀಶ್​ನ ಕಿವಿ ಕಚ್ಚಿ ತುಂಡರಿಸಿದ್ದಾನೆ.

ಬಳಿಕ ಜಗದೀಶ್ ಕಟ್​ ಆದ ಕಿವಿಯನ್ನು ತಗೊಂಡು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾನೆ. ಇನ್ನು ಅಧ್ಯಕ್ಷೆ ನಾಗಮಣಿ ಪತಿ ಪರಮೇಶ್ ವಿರುದ್ಧ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಜಗದೀಶ್​ ದೂರು ನೀಡಿದ್ದಾನೆ. ಒಟ್ಟಿನಲ್ಲಿ ಭ್ರಷ್ಟಾಚಾರ ವಿರೋಧಿಸಲು ಹೋದ ಗ್ರಾ.ಪಂ ಸದಸ್ಯ ಕಿವಿ ಕಳೆದುಕೊಂಡಿದ್ದು ಮಾತ್ರ ವಿಪರ್ಯಾಸವೇ ಸರಿ.

From the web

ಪ್ರತ್ಯುತ್ತರ ನೀಡಿ

Please enter your comment!
Please enter your name here