ರಾಷ್ಟ್ರ ರಾಜಧಾನಿ ದೆಹಲಿಯ ಸುತ್ತಮುತ್ತ ಲಘು ಭೂಕಂಪ ..!

Earthquake in delhi

ಬುಧವಾರ ಮುಂಜಾನೆ 8 ಗಂಟೆಯ ಸುಮಾರಿಗೆ ದೆಹಲಿಯ ಎನ್‌ಸಿಆರ್ ಸೇರಿ ಉತ್ತರ ಭಾರತದ ಹಲವೆಡೆ ಲಘು ಭೂಕಂಪವಾಗಿರುವುದಾಗಿ ವರದಿಯಾಗಿದೆ.  ಉತ್ತರ ಪ್ರದೇಶದ ಶಾಮ್ಲಿ-ಭಾಗ್ಪತ್​ ​ ಜಿಲ್ಲೆ  ಭೂಕಂಪದ ಕೇಂದ್ರ ಬಿಂದುವಾಗಿದೆ.

Earthquake in Delhi

ಭೂಕಂಪದ ಕೇಂದ್ರ ಬಿಂದು ಎನ್‌ಸಿಆರ್‌ನಲ್ಲಿ 10 ಕಿ.ಮೀ ಭೂಮಿಯ ಆಳದಲ್ಲಿ ಕೇಂದ್ರೀಕೃತವಾಗಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ. ಅದೇ ರೀತಿ ಉತ್ತರ ಭಾರತದ ಇನ್ನೂ ಅನೇಕ ಪ್ರದೇಶಗಳಲ್ಲಿ ಭೂಕಂಪದ ಅನುಭವವಾಗಿದೆ. ಎಲ್ಲೂ ದುರಂತ ನಡೆದಿರುವ ಬಗ್ಗೆ ಮಾಹಿತಿ ದಾಖಲಾಗಿಲ್ಲ.

 

ಸೋಮವಾರ ಜಮ್ಮು ಮತ್ತು ಕಾಶ್ಮೀರದಲ್ಲಿ 5.1 ಭೂಕಂಪ ತೀವ್ರತೆ ರಿಕ್ಟರ್ ಮಾಪಕದಲ್ಲಿ ದಾಖಲಾಗಿತ್ತು. ಯಾವುದೇ ಹಾನಿ ಸಂಭವಿಸಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.