ಚಂದ್ರಗ್ರಹಣದ ದಿನವೇ ಕಂಪಿಸಿದ ಭೂಮಿ- ತತ್ತರಿಸಿದ ಜನತೆ!!

150 ವರ್ಷಗಳ ಬಳಿಕ ನಡೆಯುತ್ತಿರುವ ಚಂದ್ರ ಗ್ರಹಣದ ದಿನವೇ ಭಾರತ ಪ್ರಕೃತಿ ವಿಕೋಪಕ್ಕೆ ಸಾಕ್ಷಿಯಾಗಿದ್ದು, ಉತ್ತರ ಭಾರತದ ಹಲವೆಡೆ ಪ್ರಬಲ ಭೂಕಂಪ ಸಂಭವಿಸಿದ್ದು, ಜನರು ಗಢಗಢ ನಡುಗಿ ಹೋಗಿದ್ದಾರೆ.

ದೆಹಲಿ ಸೇರಿದಂತೆ ಉತ್ತರ ಭಾರತದ ಹಲವೆಡೆ ಪ್ರಬಲ ಭೂಕಂಪವಾಗಿದ್ದು, ಮಧ್ಯಾಹ್ನ 12.42 ರ ಸುಮಾರಿಗೆ ಭೂಮಿ ಕಂಪಿಸಿದೆ. ರಿಕ್ಟರ್​ ಮಾಪಕದಲ್ಲಿ ಭೂಕಂಪದ ತೀವ್ರತೆ 6.2 ರಷ್ಟು ದಾಖಲಾಗಿದ್ದು, ಜನರು ಭೂಕಂಪಕ್ಕೆ ಹೆದರಿ ಮನೆಯಿಂದ ಹೊರಕ್ಕೆ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಪಂಜಾಬ್,ಹಿಮಾಚಲ ಪ್ರದೇಶ್, ಹರ್ಯಾಣಾ ಉತ್ತರ ಪ್ರದೇಶ, ಕಜಕಿಸ್ತಾನ್, ಬಲೂಚಿಸ್ತಾನ್​ ಸೇರಿ ಹಲವೆಡೆಯೂ ಭೂಕಂಪನದ ಅನುಭವವಾಗಿದೆ. ಇನ್ನು ಚಂದ್ರಗ್ರಹಣದ ದಿನವೇ ಭೂಕಂಪನವಾಗಿರೋದರಿ ಜನರು ಂದ ಭಯಭೀತರಾಗಿದ್ದಾರೆ.

From the web

ಪ್ರತ್ಯುತ್ತರ ನೀಡಿ

Please enter your comment!
Please enter your name here