ಕಾಫಿ ನಾಡಿನ ಹಲವೆಡೆ ಕಂಪಿಸಿದ ಭೂಮಿ- ಕಂಗಾಲಾದ ಜನರು!

ಕಳೆದೆರಡು ತಿಂಗಳಿನಿಂದ ಸುರಿಯುತ್ತಿರೋ ಧಾರಾಕಾರ ಮಳೆಯಿಂದ ಕಂಗೆಟ್ಟಿದ್ದ ಮಲೆನಾಡಿಗರೀಗ ಭೂಕಂಪದ ಭಯದಲ್ಲಿದ್ದಾರೆ. ಭೂಮಿ ಒಳಗಿನಿಂದ ಕೇಳಿ ಬರ್ತೀರೋ ಭಾರೀ ಸದ್ದಿನಿಂದ ಆತಂಕ್ಕೀಡಾಗಿದ್ದಾರೆ. ಚಿಕ್ಕಮಗಳೂರು ಕೊಪ್ಪ ತಾಲೂಕಿನ ಕೊಗ್ರೆ ಸಮೀಪದ ಮೇಗುಂದಾ ಹೋಬಳಿಯ ಅತ್ತಿಕುಡಿಗೆ, ಬೈರೇದೇವರು, ಬೆತ್ತದಕೊಳಲು ಗ್ರಾಮಗಳ ಸುತ್ತಮುತ್ತಲಿನ ಪ್ರದೇಶದ ಭೂಮಿಯಲ್ಲಿ ಕಳೆದ ನಾಲ್ಕು ತಿಂಗಳಿನಿಂದಲೂ ವಿಚಿತ್ರವಾದ ಶಬ್ಧ ಕೇಳಿ ಬರ್ತಿದೆ.

 

ಇಂದು ಬೆಳಗ್ಗೆ ಕೂಡ 9.40ಕ್ಕೆ ಭಾರೀ ಶಬ್ಧವಾಗಿದ್ದು, ಜನ ಆತಂಕದಲ್ಲಿ ಮನೆಯಿಂದ ಹೊರಬಂದಿದ್ದಾರೆ. ಮನೆಯ ಪಾತ್ರೆಗಳು ಕೂಡ ಕೆಳಗೆ ಬಿದ್ದಿವೆ. ಶಬ್ಧದಿಂದ ಆತಂಕಕ್ಕೀಡಾಗಿರೋ ಗ್ರಾಮಸ್ಥರು ಈ ಬಗ್ಗೆ ತಹಶೀಲ್ದಾರ್ಗೆ ಲಿಖಿತ ದೂರು ನೀಡಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗೂ ಕೂಡ ದೂರು ನೀಡಿರೋ ಗ್ರಾಮಸ್ಥರು ವಿಪತ್ತು ನಿರ್ವಹಣ ಇಲಾಖೆಯಿಂದ ಪರಿವೀಕ್ಷಣೆ ನಡೆಸಿ ಈ ಅಸಹಜ ಕ್ರಿಯೆಗೆ ತಿಳಿಸಿ ಜನರ ಆತಂಕವನ್ನ ದೂರು ಮಾಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಅತಿಯಾದ ಮಳೆಯಿಂದ ಈ ರೀತಿ ಸಮಸ್ಯೆ ಉಂಟಾಗಿರಬಹುದೆಂಬ ಶಂಕೆ ವ್ಯಕ್ತವಾಗಿದ್ದರೂ ಸ್ಪಷ್ಟವಾಗಿ ಯಾವುದೇ ಲಭ್ಯವಾಗಿಲ್ಲ. ಇದರಿಂದ ಗ್ರಾಮದ ಜನರು ಆತಂಕಕ್ಕಿಡಾಗಿದ್ದು, ಜಿಲ್ಲಾಢಳಿತ ಈ ಬಗ್ಗೆ ತಜ್ಞರಿಂದ ಮಾಹಿತಿ ಒದಗಿಸಿಕೊಡಬೇಕೆಂದು ಒತ್ತಾಯಿಸಿದ್ದಾರೆ.