ಪ್ರಕಾಶ್ ರೈಗೆ ಗೋವಿನ ಬಗ್ಗೆ ರಾಮಚಂದ್ರಾಪುರ ಮಠದವರಿಂದ ಜೊತೆ ಪಾಠ ಮಾಡಿಸ್ತೇನೆ – ಈಶ್ವರಪ್ಪ

ನಟ ಪ್ರಕಾಶ್ ರೈಗೆ ಗೋಮೂತ್ರ ಗೊತ್ತು.. ಗೋವಿನ ಸಗಣಿ ಬಗ್ಗೆ ಗೊತ್ತಿಲ್ಲ.. ಅದು ಪವಿತ್ರ.. ಒಂದು ದಿನ ಬಂದ್ರೆ ರಾಮಚಂದ್ರಾಪುರ ಮಠದವರ ಜೊತೆ ಕೂರಿಸಿ ಗೋಮೂತ್ರ, ಸಗಣಿ, ಗೋಮಾತೆಯ ಬಗ್ಗೆ ಪಾಠ ಮಾಡಿಸುತ್ತೇನೆ ಎಂದು ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಶಿವಮೊಗ್ಗದಲ್ಲಿ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಸಂವಿಧಾನ ಉಳಿಸಿ ಸಂಕಲ್ಪ ಸಮಾವೇಶದಲ್ಲಿ ಗೋಮೂತ್ರದ ಬಗ್ಗೆ ಬಿಜೆಪಿಯವರಿಗೆ ಎಷ್ಟು ಗೊತ್ತು ಅಂತ ಮಾತನಾಡಿದ್ರು. ಇದಕ್ಕೆ ತಿರುಗೇಟು ನೀಡಿದ ಈಶ್ವರಪ್ಪ ಬಂದ್ರೆ ಕರೆದುಕೊಂಡು ಹೋಗಿ ಮಹತ್ವ ತಿಳಿಸೋದಾಗಿ ಪ್ರಕಾಶ್ ರೈ ಅವರಿಗೆ ಸಲಹೆ ಕೊಟ್ರು.