ಶಿಕ್ಷಣ ಸಚಿವರ ಭರ್ಜರಿ ಡ್ಯಾನ್ಸ್.. ಈ ಹಾಡು ಡ್ಯಾನ್ಸ್ ನೋಡಿದ್ರೆ ನೀವೂ ಒಂದೆರಡು ಸ್ಟೆಪ್ ಹಾಕ್ತೀರಿ..

ಇತ್ತೀಚೆಗೆ ಶಿಕ್ಷಣ ಸಚಿವ ಎನ್.ಮಹೇಶ್ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗ್ತಿದ್ದಾರೆ. ಆದ್ರೆ ಇದೀಗ ಸಚಿವರಾಗುವ ಮುನ್ನ ಬಿಎಸ್ಪಿಯ ಅಂಗಸಂಸ್ಥೆಯಾದ ಬಹುಜನ ವಿದ್ಯಾರ್ಥಿ ಸಂಘ ಆಯೋಜಿಸಿದ್ದ ಬುದ್ಧ ಪೂರ್ಣಿಮೆ ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸುವ ಮೂಲಕ ತಮ್ಮ ಕಾರ್ಯಕರ್ತರನ್ನು ಹುರಿದುಂಬಿಸಿದ್ದಾರೆ. ಈ ಕುರಿತ ಸ್ಪೆಷಲ್ ರಿಪೋರ್ಟ್ ಇಲ್ಲಿದೆ ನೋಡಿ.

ad


ಹೌದು. ಕೆಲವು ತಿಂಗಳ ಹಿಂದೆ ಬಹುಜನ ವಿದ್ಯಾರ್ಥಿ ಸಂಘದ ದಾವಣಗೆರೆ ಜಿಲ್ಲಾ ಘಟಕವು ಬುದ್ಧ ಪೂರ್ಣಿಮೆ ಆಯೋಜಿಸಿತ್ತು. ಅಂತಹ ಕಾರ್ಯಕ್ರಮದಲ್ಲಿ ಸಹಜವಾಗಿ ಬುದ್ಧ, ಬಸವ, ಅಂಬೇಡ್ಕರ್ ಕುರಿತ ಪರಿವರ್ತನಾ ಗೀತೆಗಳು ಮೊಳಗುತ್ತಲೇ ಇರುತ್ತವೆ. ಅಂದು ಸಹ ಬುದ್ಧನ ಕುರಿತಾದ ಇಂಪಾದ ಹಾಡೊಂದಕ್ಕೆ ಬಿವಿಎಸ್ ಸದಸ್ಯರು ಹೆಜ್ಜೆ ಹಾಕ್ತಿದ್ರು. ಅದೇ ವೇಳೆ ಆ ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದ, ಅಂದಿನ ಬಿಎಸ್ಪಿ ರಾಜ್ಯಾಧ್ಯಕ್ಷರಾದ ಎನ್.ಮಹೇಶ್ ಸಹ ವೇದಿಕೆಯಿಂದ ಕೆಳಗಿಳಿದು, ಹಾಡಿಗೆ ತಕ್ಕಂತೆ ಬಿವಿಎಸ್ ಯುವಕರೊಂದಿಗೆ ಸಖತ್ತಾಗಿ ಡ್ಯಾನ್ಸ್ ಮಾಡಿದ್ರು.

ಇನ್ನು ತಮ್ಮ ನಾಯಕರಾದ ಮಹೇಶ್ ಅವ್ರೇ ಈ ಮಟ್ಟಿಗೆ ಕುಣಿಯೋಕೆ ಶುರು ಮಾಡುತ್ತಿದ್ದಂತೆ ಬಿವಿಎಸ್ ಸದಸ್ಯರು, ಸಂಭ್ರಮದಿಂದ ಕುಣಿದಾಡಿದ್ರು. ತಮ್ಮ ಖುಷಿಯನ್ನು ತಡೆಯಲಾಗದೆ ಮಹೇಶ್ ಅವರನ್ನು ಮೇಲೆತ್ತಿ ಕೇಕೆ ಹಾಕಿದ್ರು. ಈ ದೃಶ್ಯಾವಳಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ಹಾಗೆಯೇ ಬೀದಿ ಬದಿಯಲ್ಲೆ ತಮ್ಮ ಕಾರ್ಯಕರ್ತರೊಂದಿಗೆ ಊಟ ಮಾಡಿ ಗಮನ ಸೆಳೆದಿರುವ ಪೋಟೋಗಳು ಸಹ ಭಾರಿ ಮೆಚ್ಚುಗೆಗೆ ವ್ಯಕ್ತವಾಗ್ತಿದೆ. ಅಲ್ಲದೆ ಬಿಎಸ್ಪಿ ಹಾಗೂ ಬಿವಿಎಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಫೇಸ್ಬುಕ್‍ನಲ್ಲಿ ತಮ್ಮ ನಾಯಕನ ಮಸ್ತ್ ಮಸ್ತ್ ಡ್ಯಾನ್ಸನ್ನು ಶೇರ್ ಮಾಡುತ್ತಿದ್ದಾರೆ.

ಒಟ್ಟಾರೆ ಕೆಲವು ದಿನಗಳ ಹಿಂದೆ ಅಮ್ಮ ಭಗವಾನ್ ಪಾದುಕೆಯನ್ನು ಮೈಮೇಲೆ ಸ್ಪರ್ಶಿಸಿಕೊಂಡ ಕಾರಣಕ್ಕೆ ಅಪಾರ ಟೀಕೆಗೆ ಒಳಗಾಗಿದ್ದ ಎನ್.ಮಹೇಶ್ ಅವ್ರು, ಇದೀಗ ತಮ್ಮ ಕುಣಿತದ ಮೂಲಕ ಕಾರ್ಯಕರ್ತರೊಂದಿಗೆ ಇರುವ ಸರಳ ಒಡನಾಟದ ಕಾರಣಕ್ಕೆ ಮೆಚ್ಚುಗೆಗೆ ಪಾತ್ರರಾಗ್ತಿದ್ದಾರೆ. ಮಹೇಶ್ ಅವ್ರು ಬಿವಿಎಸ್‍ನ ಬೆಳವಣಿಗೆಗೆ ಮೂಲ ಕಾರಣಕರ್ತರಾಗಿರೋದ್ರಿಂದ ತಮ್ಮ ನಾಯಕನ ಡ್ಯಾನ್ಸ್ ವಿಡಿಯೋವನ್ನು ಫೇಸ್ಬುಕ್‍ನಲ್ಲಿ ಹರಿಬಿಟ್ಟು, ಬಿವಿಎಸ್ ಸದಸ್ಯರು ಖುಷಿಪಡುತ್ತಿದ್ದಾರೆ.