ಚುನಾವಣಾ ಕುರುಕ್ಷೇತ್ರ 2018 – ಅರಕಲಗೂಡು

ಅರಕಲಗೂಡು ವಿಧಾನಸಭಾ ಕ್ಷೇತ್ರ

ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಟ ದೇವೇಗೌಡ ಅವ್ರ ಕಾರ್ಯ ಕ್ಷೇತ್ರ ಹಾಸನ ಜಿಲ್ಲೆಯಲ್ಲಿರೋ ಪ್ರತಿಷ್ಚಿತ ಕ್ಷೇತ್ರ ಅರಕಲಗೂಡು ವಿಧಾನಸಬಾ ಕ್ಷೇತ್ರದ ಬಗ್ಗೆ. ಪ್ರಸ್ತುತ ಕಾಂಗ್ರೆಸ್ ನ ಎ ಮಂಜು ಇಲ್ಲಿನ ಶಾಸಕರಾಗಿದ್ದು ಈಗ ಸಚಿವರಾಗಿದ್ದಾರೆ. ಹಾಗಿದ್ರೆ ಈ ಬಾರಿ ಈ ಕ್ಷೇತ್ರದಲ್ಲಿ ಯಾರ ಹವಾ ಇದೆ…ಯಾವ ಪಕ್ಷ ಇಲ್ಲಿ ಜಯಭೇರಿ ಬಾರಿಸತ್ತೆ ನೋಡೋಣ

ಅರಕಲಗೂಡು ವಿಧಾನಸಭಾ ಕ್ಷೇತ್ರ. ಹಾಸನ ಜಿಲ್ಲೆಯಲ್ಲಿರೋ ಈ ಕ್ಷೇತ್ರ ರಾಜಕಾರಣದಿಂದಾಗೇ ರಾಜ್ಯದಲ್ಲಿ ಸದ್ದು ಮಾಡಿದೆ. ರಾಜಕಾರಣವನ್ನೇ ಜೀವನವನ್ನಾಗಿಸಿಕೊಂಡಿರೋ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವ್ರ ಭದ್ರ ಕೋಟೆ ಇದು. ಕಳೆದೆರಡು ಎಲೆಕ್ಷನ್ ನಲ್ಲಿ ಈ ಕ್ಷೇತ್ರವನ್ನು ಜೆಡಿಎಸ್ ಕಳೆದುಕೊಂಡಿತ್ತು. 2013ರ ಚುನಾವಣೆಯಲ್ಲಿ ಎ ಮಂಜು ಅವ್ರು ಇಲ್ಲಿಂದ ಗೆದ್ದು ಶಾಸಕರಾಗಿ ರೇಷ್ಮೆ ಮತ್ತು ಪಶುಸಂಗೋಪನಾ ಮಂತ್ರಿ ಕೂಡಾ ಆಗಿದ್ದಾರೆ. ಹಾಗಂದ ಮಾತ್ರಕ್ಕೆ ಈ ಬಾರಿ ಕೂಡಾ ಅವ್ರೇ ಗೆಲ್ಲಬೇಕು ಅಂತೇನಿಲ್ಲ. ಯಾಕಂದ್ರೆ ಈಗಾಗಲೇ ಕಳೆದುಕೊಂಡಿರೋ ಕ್ಷೇತ್ರವನ್ನು ಮತ್ತೆ ತಮ್ಮದಾಗಿಸಿಕೊಳ್ಳಲು ಜೆಡಿಎಸ್ ಹಾಗೂ ಇಲ್ಲಿ ಬೇರೂರಲು ಬಿಜೆಪಿ ಶತಾಯಗತಾಯ ಪ್ರಯತ್ನಿಸ್ತಿವೆ. ಈಗಾಗಲೇ ಇಲ್ಲಿ ರಾಜಕೀಯ ರಂಗು ಪಡೆದುಕೊಳ್ಳೋದಕ್ಕೆ ಪ್ರಾರಂಭವಾಗಿದೆ. ಯಾರ ಬಾಯಲ್ಲಿ ಕೇಳಿದ್ರು ಯಾರು ಈ ಬಾರಿ ಇಲ್ಲಿ ನಿಲ್ತಾರೆ..ಯಾರು ಗೆಲ್ತಾರೆ, ರಾಜಕೀಯ ಲೆಕ್ಕಾಚಾರ ಏನಾಗಬಹುದು ಅನ್ನೋ ಮಾತುಗಳೇ ಕೇಳಿ ಬರ್ತಿವೆ.ಇದ್ರ ಬಗ್ಗೆನೂ ಹೇಳ್ತಿವಿ ಅದಕ್ಕೂ ಮೊದಲು 2013ರ ಮತಬರಹ ನೋಡೋಣ ಬನ್ನಿ

 

2013ರ ಮತಬರಹ

 

ಇದು 2013ರ ಮತಬರಹ ಕಾಂಗ್ರೆಸ್ ಅಭ್ಯರ್ಥಿ ಎ ಮಂಜು 61 369 ಮತಗಳನ್ನು ಪಡೆಯೋ ಮೂಲಕ ಗೆದ್ದು ಶಾಸಕರಾದ್ರು. ಅವ್ರಿಗೆ ತೀವ್ರ ಪೈಪೋಟಿ ನೀಡಿದ ಜೆಡಿಎಸ್ ನ ಎಟಿ ರಾಮಸ್ವಾಮಿ ಅವ್ರು 52575 ಮತಗಳನ್ನು ಪಡೆಯೋ ಮೂಲಕ 8794 ಮತಗಳ ಅಂತರದಿಂದ ಸೋತ್ರು.

ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ದಲ್ಲಿ 1994ರಿಂದ ಎ.ಟಿ ರಾಮಸ್ವಾಮಿ ಹಾಗೂ ಎ ಮಂಜು ನಡುವೆ ಫೈಟ್ ನಡೀತಾನೇ ಬಂದಿದೆ. 1994ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎ.ಟಿ.ಆರ್, ಬಿಜೆಪಿಯಲ್ಲಿದ್ದ ಎ ಮಂಜುರನ್ನ ಸೋಲಿಸಿ ಶಾಸಕರಾಗಿದ್ರು. ಆ ಬಳಿಕ 1999ರಲ್ಲಿ ಆಗ ಬಿಜೆಪಿ ಅಭ್ಯರ್ಥಿಯಾಗಿದ್ದ ಎ.ಮಂಜು ಗೆದ್ರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಹಾಲಿ ಶಾಸಕರಾಗಿದ್ದ ಎ.ಮಂಜು 2004ರಲ್ಲಿ ಕಾಂಗ್ರೆಸ್​ಗೆ ಬಂದು ಪಕ್ಷದ ಅಭ್ಯರ್ಥಿಯಾದ್ರು. ಆಗ ಕಾಂಗ್ರೆಸ್​ನಲ್ಲಿದ್ದ ಎಟಿಆರ್, ವಿಧಿಯಿಲ್ಲದೇ ಜೆಡಿಎಸ್ ಸೇರಬೇಕಾಯ್ತು. ಇದು ಒಂಥರಾ ಎ.ಟಿ ಆರ್ ಗೆ ಲಾಭವಾಯ್ತು, ಎ.ಮಂಜು ಕಾಂಗ್ರೆಸ್ ಅಭ್ಯರ್ಥಿಯಾದ್ರು ಕೂಡಾ ಅವ್ರನ್ನು ಸೋಲಿಸುವಲ್ಲಿ ಎ.ಟಿ.ರಾಮಸ್ವಾಮಿ ಯಶಸ್ವಿಯಾದ್ರು. ಆದ್ರೆ ಆ ಬಳಿಕ 2008 ಹಾಗೂ 2013ರಲ್ಲಿ ಎ ಮಂಜು ಗೆಲುವಿನ ನಗೆ ಚೆಲ್ಲಿದ್ರು. ಈಗ ಮಂತ್ರಿ ಕೂಡಾ ಆಗಿದ್ದಾರೆ. ಹಾಗಾಗಿ ಈ ಬಾರಿ ಮತ್ತೆ ಮಂಜು ಮತ್ತು ಎಟಿ ರಾಮಸ್ವಾಮಿ ಅವ್ರ ಮಧ್ಯೆ ಇಲ್ಲಿ ತೀವ್ರ ಪೈಪೋಟಿ ಇದೆ. ಇನ್ನು ಈ ಬಾರಿ ಬಿಜೆಪಿ ಕೂಡಾ ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದು ಕಾಂಗ್ರೆಸ್ , ಜೆಡಿಎಸ್ ನಡುವಿನ ಫೈಟ್ ನ್ನು  ಹೇಗೆ ಲಾಭ ಮಾಡಿಕೊಳ್ಳಬಹುದು ಅಂತಾ ಕಾಯ್ತಾ ಇದೆ. ಹಾಗಿದ್ರೆ ಯಾವ ಪಕ್ಷದಿಂದ ಯಾರ್ಯಾರು ಇಲ್ಲಿ ಕಣಕ್ಕಿಳಿತಾರೆ, ಅವ್ರ ಬಲಾಬಲಾ ಏನು . ನೋಡೋಣ

ಕೈ ಅಭ್ಯರ್ಥಿ

 

ಎ ಮಂಜು, ಸಚಿವ

ಕಳೆದ ಎರಡು ಎಲೆಕ್ಷನ್ ನಲ್ಲೂ ಸತತವಾಗಿ ಜಯಭೇರಿ ಬಾರಿಸಿ ಮಂತ್ರಿಯಾಗಿರೋ ಎ ಮಂಜು ಅವ್ರೇ ಈ ಬಾರಿ ಕೂಡಾ ಕಾಂಗ್ರೆಸ್ ನಿಂದ ಇಲ್ಲಿ ಕಣಕ್ಕಿಳಿತಾರೆ ಅನ್ನೋದ್ರಲ್ಲಿ ಅನುಮಾನ ಇಲ್ಲ. ತವರೂರಿನಲ್ಲಿ ಮಂಜು ಅವ್ರು ತಾವು ಬೆಳೆದಿರೋದು ಬಿಟ್ರೆ ಎರಡನೇ ಹಂತದ ನಾಯಕರನ್ನು ಬೆಳಸಿಲ್ಲ.ಯಾರಿಗೂ ಅವಕಾಶವನ್ನೂ ನೀಡಿಲ್ಲ. ಇನ್ನು ಜೆಡಿಎಸ್ ಪ್ರಾಬಲ್ಯವಿರೋ ಕ್ಷೇತ್ರದಲ್ಲಿ ಜೆಡಿಎಸ್ ಗೆ  ಇಲ್ಲಿ ಸೆಡ್ಡು ಹೊಡೆಯಬೇಕು ಅನ್ನೋ ಕಾರಣಕ್ಕೇನೇ ಎ ಮಂಜು ಅವ್ರಿಗೆ ಸಚಿವ ಸ್ಛಾನ ಸಿಕ್ಕಿದೆ. ಅಷ್ಟೇ ಅಲ್ಲ ಜಿಲ್ಲಾ ಉಸ್ತುವಾರಿಯೂ ಹೊಣೆ ಕೂಡಾ ಇವ್ರ ಮೇಲಿರೋ ಕಾರಣ ಈ ಬಾರಿ ಮತ್ತೆ ಇಲ್ಲಿಂದ ಗೆಲ್ಲೋದಕ್ಕೆ ಹಾಗೂ ಅಕ್ಕ ಪಕ್ಕಧ ಕ್ಷೇತ್ರಗಳನ್ನು ಗೆಲ್ಲಿಸಲು ಮಂಜು ಪ್ರಯತ್ನಿಸ್ತಾರೆ.

‘ತೆನೆ’ ಹೊರೋದು ಯಾರು?

 

ಎಟಿ ರಾಮಸ್ವಾಮಿ

ಈ ಬಾರಿ ಜೆಡಿಎಸ್ ನಿಂದ ಎಟಿ ರಾಮಸ್ವಾಮಿ ಅವ್ರ ಹೆಸರು ಬಿಟ್ರೆ ಬೇರೆ ಯಾರ ಹೆಸರು ಕೂಡಾ ಕೇಳಿ ಬರ್ತಿಲ್ಲ. ಎಟಿ ರಾಮಸ್ವಾಮಿ ಅವ್ರು ಇಲ್ಲಿ ಒಟ್ಟು 3 ಬಾರಿ ಶಾಸಕರಾಗಿದ್ದಾರೆ. ಹಾಗಾಗಿ ವಯ್ಯಕ್ತಿಕ ವರ್ಚಸ್ಸು ಅವ್ರಿಗೆ ಇದ್ದೇ ಇದೆ. ಅದೇ ಕಾರಣಕ್ಕೆ ಈ ಬಾರಿ ಎಟಿ ರಾಮಸ್ವಾಮಿ ಅವ್ರ ಹೆಸರು ಕನ್ಫರ್ಮ್. ಕಳೆದ ಬಾರಿ ಸೋತ ಅನುಕಂಪ ಎ.ಟಿ ಆರ್ ಮೇಲೆ ಕ್ಷೇತ್ರದ ಜನತೆಗೆ ಇದೆ. ಇನ್ನು ಭೂಕಬಳಿಕೆ ಸೇರಿದಂತೆ ಸಾಕಷ್ಟು ಅಕ್ರಮಗಳ ವಿರುದ್ಧ ಸಾಮಾಜಿಕ ಹೋರಾಟಗಳನ್ನು ಮಾಡ್ತಾನೇ ಬಂದಿದ್ದಾರೆ ಎಟಿರಾಮ ಸ್ವಾಮಿ ಅವ್ರು.    ಇದು ಇವರಿಗೆ ಪ್ಲಸ್ ಪಾಯಿಂಟ್.ಇನ್ನು  ದೇವೇಗೌಡರ ಪರಮಾಪ್ತರಾಗಿರೋ ಕಾರಣ ಆಗಾಗ ಗೌಡರನ್ನ ಕರೆದುಕೊಂಡು ಬಂದು ಕಾರ್ಯಕ್ರಮಗಳನ್ನ ಮಾಡುತ್ತಾ, ಈಗಾಗಲೇ ಬಿರುಸಿನ ಪ್ರಚಾರವನ್ನ ಆರಂಭಿಸಿದ್ದಾರೆ. ಸ್ನೇಹಮಯಿ ಹಾಗೂ ಇರೋ ಅಭ್ಯರ್ಥಿಗಳಲ್ಲಿ ಉತ್ತಮ ವ್ಯಕ್ತಿ ಅನ್ನೋ ಲೇಬೆಲ್ ಕೂಡ ಇವ್ರಿಗಿರೋದ್ರಿಂದ ಈ ಬಾರಿ ಗೆಲುವಿನ ಕೇಕೆ ಹಾಕೋದು ಗ್ಯಾರಂಟಿ ಅನ್ನೋ ಮಾತು ಕೇಲಿ ಬರ್ತಿದೆ.

‘ಕಮಲ’ ಮುಡಿಯೋರ್ಯಾರು?

 

ಯೋಗಾ ರಮೇಶ್,ಬಿಜೆಪಿ ಜಿಲ್ಲಾಧ್ಯಕ್ಷ

ಈ ಬಾರಿ ಈ ಕ್ಷೇತ್ರದಲ್ಲಿ ಸ್ಪರ್ಧಿಸಲೇ ಬೇಕು ಅಂತಾ ಓಡಾಡ್ತಿರೋದು ಬಿಜೆಪಿಯ ಜಿಲ್ಲಾಧ್ಯಕ್ಷ ಯೋಗಾರಮೇಶ್. ರೈತ ಸಂಘದ ಬೆಂಬಲದ ನಿರೀಕ್ಷೆ ಇವ್ರಿಗಿದೆ ಯಾಕಂದ್ರೆ ರೈತ ಸಂಘದ ಮುಖಂಡ ಹೊ. ತಿ. ಹುಚ್ಚಪ್ಪ ಅವರ ಮಗ  ಇವ್ರು. 21 ವರ್ಷಗಳ ಸಾರಿಗೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿ ಸ್ವಯಂ ನಿವೃತ್ತಿ ತೆಗೆದುಕೊಂಡು 2012ರ ನಂತರ ರಾಜಕೀಯದಲ್ಲಿ ಸಕ್ರಿಯರಾದವರು. ಇವ್ರು ಆರಂಭಿಸಿದ ಪೊಟೆಟೋ ಕ್ಲಬ್ ಇವರಿಗೆ ಜನಪ್ರಿಯತೆ ತಂದುಕೊಟ್ಟಿತು. 2013ರಲ್ಲಿ ರಾಜಕೀಯಕ್ಕೆ ಧುಮುಕಿದ ಯೋಗಾರಮೇಶ್ ಚುನಾವಣೆಗೆ ಪಕ್ಷೇತರವಾಗಿ ಸ್ಪರ್ಧೆ ಮಾಡಿ, 32,000 ಮತಗಳನ್ನ ಪಡೆದು ಭವಿಷ್ಯದ ರಾಜಕೀಯ ನಾಯಕ ಅನ್ನೋದನ್ನ ತೋರಿಸಿದ್ರು. ಎರಡು ವರ್ಷದ ಹಿಂದೆ ಬಿಜೆಪಿ ಸೇರಿದ ಯೋಗಾ ರಮೇಶ್, ಪಕ್ಷದ ಜಿಲ್ಲಾಧ್ಯಕ್ಷರಾಗೋ ಮೂಲಕ ಜಿಲ್ಲೆಯಲ್ಲಿ ಪಕ್ಷವನ್ನ ಸಂಘಟಿಸೋ ಜವಾಬ್ದಾರಿ ಹೊತ್ತುಕೊಂಡರು. ಅಲ್ಲದೆ ಅರಕಲಗೂಡಿನಲ್ಲಿ ಬಿಜೆಪಿ ಗೆ ಭದ್ರ ಬುನಾದಿ ಹಾಕಲು ಹರಸಾಹಸ ಮಾಡುತ್ತಿದ್ದಾರೆ. ಹೇಗಾದ್ರು ಮಾಡಿ ಜಿಲ್ಲೆಯಲ್ಲಿ ಮಾಸಿರುವ ಬಿಜೆಪಿ ಅಕೌಂಟ್ ಓಪನ್ ಆಗಬೇಕು ಅಂತಾ ಪ್ರಯತ್ನ ಸಾಗ್ತಿದೆ.ಇನ್ನು ಬಿಎಸ್ವೈ ಗೆ ಪರಮಾಪ್ತರಾಗಿರೋದ್ರಿಂದ ಯೋಗಾ ರಮೇಶ್ ಗೆ ಯೋಗ ಕೂಡಿ ಬರೋ ಚಾನ್ಲ್ ಇದೆ.

  1. ರಾಮೇಗೌಡ, ನಿವೃತ್ತ ಐಎಎಸ್ ಅಧಿಕಾರಿ

ಈ ನಡುವೆ ನಿವೃತ್ತ ಸಾರಿಗೆ ಆಯುಕ್ತ ರಾಮೇಗೌಡ ಕೂಡ ಬಿಜೆಪಿ ಆಭ್ಯರ್ಥಿ ರೇಸ್ ನಲ್ಲಿದ್ದಾರೆ. ಈ ಬಾರಿ ಟಿಕೇಟ್ ನನಗೆ ಮಿಸ್ಸಾಗಲ್ಲ ಅನ್ನೋ ಕಾನ್ಫಿಡೆನ್ಸ್ ರಾಮೇಗೌಡರಿಗಿದೆ. ಆರ್.ಅಶೋಕ್ ಸಾರಿಗೆ ಮಂತ್ರಿಯಾಗಿದ್ದಾಗ ಸಾರಿಗೆ ಆಯುಕ್ತರಾಗಿದ್ದ ರಾಮೇಗೌಡ, ಯಡಿಯೂರಪ್ಪ ಮಂತ್ರಿಯಾಗಿದ್ದಾಗ ಅವರ ಆಪ್ತ ಕಾರ್ಯದರ್ಶಿ ಕೂಡ ಆಗಿದ್ರು.. ಸೋ, ಅಶೋಕ್ ಹಾಗೂ ಯಡಿಯೂರಪ್ಪ ಬೆಂಬಲವೂ ಇವ್ರಿಗೆ ಇದ್ಯಂತೆ.

  1. ಪುಟ್ಟಸ್ವಾಮಿ, ನಿವೃತ್ತ ಐಎಎಸ್ ಅಧಿಕಾರಿ

ಇನ್ನೂ ನಿವೃತ್ತ ಜಿಲ್ಲಾಧಿಕಾರಿ, ಈಶ್ವರಪ್ಪನವರ ಬೆಂಬಲಿಗರಾಗಿರೋ ಕುರುಬ ಸಮುದಾಯಕ್ಕೆ ಸೇರಿದವರಾಗಿರೋ ಪುಟ್ಟಸ್ವಾಮಿ ಅವ್ರು ಕೂಡಾ ಈ ಬಾರಿ ಇಲ್ಲಿನ ಬಿಜೆಪಿ ಆಕಾಂಕ್ಷಿ. ಸುಮಾರು 50 ಸಾವಿರ ಕುರುಬ ಮತದಾರರಿರುವ ಕ್ಷೇತ್ರದಲ್ಲಿ, ನನಗೂ ಬಿಜೆಪಿ ಟಿಕೇಟ್ ಸಿಕ್ಕಿದ್ರೆ ಒಂದ್ ಕೈ ನೋಡ್ತೇನೆ ಅನ್ನೋ ಹುಮ್ಮಸ್ಸು ಇವರದ್ದು

ಅರಕಲಗೂಡಿನಲ್ಲಿ ಜಾತಿವಾರು ಲೆಕ್ಕಾಚಾರ ನೋಡೋದಾದ್ರೆ 2 ಲಕ್ಷದ 8 ಸಾವಿರ ಮತದಾರರಿದ್ದಾರೆ. ಸುಮಾರು 60 ಸಾವಿರ ಒಕ್ಕಲಿಗ, 50 ಸಾವಿರ ಕುರುಬ, 40 ಸಾವಿರ ಪರಿಶಿಷ್ಟ ಮತದಾರರು ಇದ್ದಾರೆ. ಇನ್ನು ವೀರಶೈವ ಲಿಂಗಾಯುತ 25 ಸಾವಿರ,ಉಪ್ಪಾರ ಜನಾಂಗಕ್ಕೆ ಸೇರಿದ 12 ಸಾವಿರ ಮಂದಿ ಮತದಾರರಿದ್ದಾರೆ.  ಹಾಗಾಗೀ ಇಲ್ಲಿ 40 ಸಾವಿರದಷ್ಟಿರುವ ಪರಿಶಿಷ್ಟ ವರ್ಗಕ್ಕೆ ಸೇರಿದ ಮತದಾರರೇ ನಿರ್ಣಾಯಕ.ಇನ್ನು ಈ ಬಾರಿ ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ನಡುವೆ ಟ್ರಯಾಂಗಲ್ ಫೈಟ್ ನಡೆಯೋದ್ರಲ್ಲಿ ಅನುಮಾನವೇ ಇಲ್ಲ. ಈಗಾಗಲೇ ಮೂರು ಪಕ್ಷದವರು ತಮ್ಮ ತಮ್ಮ ಪಕ್ಷದ ಪರ ಪ್ರಚಾರ ಶುರು ಮಾಡಿದ್ದಾರೆ. ಆದ್ರೆ ಇಲ್ಲಿ ಪಕ್ಷಕ್ಕಿಂತ ಹೆಚ್ಚಾಗಿ ವಯ್ಯಕ್ತಿಕ ವರ್ಚಸ್ಸೇ ಪ್ರಮುಖವಾಗಿರೋ ಕಾರಣ ಅಭ್ಯರ್ಥಿಗಳ ನಡುವಿನ ನೇರ ಹಣಾಹಣಿಯ ಕ್ಷೇತ್ರ ಇದು. ಕಳೆದ ಬಾರಿ ಎ ಮಂಜು ಗೆಲ್ಲೋದಕ್ಕೆ ಕಾರಣ ಕುರುಬ ಸಮುದಾಯದವರು ಸಿದ್ದರಾಮಯ್ಯನವರನ್ನು ಸಿಎಂ ಮಾಡಲೇಬೇಕು ಅಂತಾ ಹೊರಟಿದ್ದು. ಪರಿಣಾಮ ಕುರುಬ ಸಮುದಾಯದ ಎಲ್ಲಾ ಮತಗಳು ಎ ಮಂಜು ಗೆ ಸಿಕ್ತು. ಹಾಗಾಗಿ ಈಸಿಯಾಗಿ ಗೆದ್ರು. ಆದ್ರೆ ಈ ಬಾರಿ ಹಾಗಲ್ಲ. ಯಾಕಂದ್ರೆ  ಹಿಂದಿನಿಂದಲೂ ಇಡೀ ಜಿಲ್ಲೆಯಲ್ಲಿ ಹಿಂದುಳಿದ ತಾಲೂಕು ಅರಕಲಗೂಡು ಎಂಬ ಹಣೆಪಟ್ಟಿ ಇದೆ. ಸ್ವತಃ ಎ. ಮಂಜು ಸಚಿವರಾದ ಮೇಲೂ ಅದು ಇನ್ನೂ ಬದಲಾಗಿಲ್ಲ, ರಸ್ತೆಗಳು ದುರಸ್ತಿ ಕಂಡಿಲ್ಲ ಅನ್ನೋ ಆರೋಪ ಸಚಿವರ ಮೇಲಿದೆ ಎ.ಮಂಜು ಬಗ್ಗೆ ಇಲ್ಲಿನ ಜನ ಅಸಮಾಧಾನ ವ್ಯಕ್ತಪಡಿಸ್ತಿದ್ದಾರೆ. ಹಾಗಾಗಿ ಈ ಬಾರಿ ಮಂಜು ಗೆ ಇಲ್ಲಿ ಗೆಲುವು ಕಬ್ಬಿಣದ ಕಡಲೆ ಅನ್ನೋದ್ರಲ್ಲಿ ಎರಡು ಮಾತಿಲ್ಲ.

ಕಳೆದ ಬಾರಿ ಕಷ್ಟಪಟ್ಟು ಎಂ ಮಂಜು ಅವ್ರು ಇಲ್ಲಿಂದ ಗೆದ್ದು ಸಚಿವರೂ ಆದ್ರು. ಆದ್ರೆ ಈ ಬಾರಿ ಅಂತೂ ಗೆಲುವು ಅಷ್ಟು ಸುಲಭವಲ್ಲ. ಸಚಿವರಾಗಿದ್ರೂ ಕೂಡಾ ತಮ್ಮ ಕ್ಷೇತ್ರಕ್ಕೆ ಮಂಜು ಏನೂ ಮಾಡಿಲ್ಲ ಅಂತಾ ಇಲ್ಲಿನ ಜನ ಹೇಳ್ತಿದ್ದಾರೆ. ಇದು ಆಡಳಿತವಿರೋಧಿ ಅಲೆ ಇಲ್ಲಿ ಜಾಸ್ತಿ ಇದೆ ಅನ್ನೋದನ್ನು ತೋರಿಸಿಕೊಡುತ್ತೆ. ಅಷ್ಟೇ ಅಲ್ಲ ಜೆಡಿಎಸ್ ಹಾಗೂ ಬಿಜೆಪಿ ಕೂಡಾ ಮಂಜು ಅವ್ರ ವೈಫಲ್ಯವನ್ನು ಎತ್ತಿ ತೋರಿಸ್ತಿದ್ದಾರೆ. ಹಾಗಾಗಿ ಬಹುತೇಕ ಈ ಬಾರಿ ಸಚಿವರಾಗಿರೋ ಎ ಮಂಜು ಈ ಕ್ಷೇತ್ರದಲ್ಲಿ ಸೋಲೋದು ಗ್ಯಾರಂಟಿ. ಈ ಬಾರಿ ಇಲ್ಲಿನ ಜನ ಯೋಗಾರಮೇಶ್ ಅಥವಾ ಎಟಿ ರಾಮಸ್ವಾಮಿಯವರನ್ನು ಗೆಲ್ಲಿಸಿದ್ರೂ ಅಚ್ಚರಿ ಇಲ್ಲ.

 

1 ಕಾಮೆಂಟ್

ಪ್ರತ್ಯುತ್ತರ ನೀಡಿ

Please enter your comment!
Please enter your name here