ಚುನಾವಣಾ ಕುರುಕ್ಷೇತ್ರ 2018 – ಬಾಗೇಪಲ್ಲಿ (ಚಿಕ್ಕಬಳ್ಳಾಪುರ ಜಿಲ್ಲೆ)

ಬಾಗೇಪಲ್ಲಿ ವಿಧಾನಸಬಾ ಕ್ಷೇತ್ರ

ಇವತ್ತು ನಾವು ಕುರುಕ್ಷೇತ್ರದಲ್ಲಿ ಹೇಳ್ತಿರೋದು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಬಗ್ಗೆ. ಕಾಂಗ್ರೆಸ್ ನಿಂದ ಬಂಡಾಯ ಎದ್ದು ಪಕ್ಷೇತರ ಅಭ್ಯರ್ಥಿಯಾಗಿ ನಿಂತಿದ್ದವರು ಇಲ್ಲಿ ಶಾಸಕರಾಗಿದ್ದಾರೆ. ಕಳೆದ ಬಾರಿಯ ಚುನಾವಣೆಯೇ ಇಷ್ಟೊಂದು ಇಂಟ್ರೆಸ್ಟಿಂಗ್ ಆಗಿದ್ರೆ ಈ ಬಾರಿ ಇಲ್ಲಿ ರಾಜಕೀಯ ಬೆಳವಣಿಗೆಗಳು ಹೇಗಿವೆ ಈಗ ನಾವು ಹೇಳ್ತೀವಿ ನೋಡಿ.

ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರ. ರಾಜ್ಯದ ಅತ್ಯಂತ ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿ ಹೊಂದಿರುವ ರಾಜಧಾನಿ ಬೆಂಗಳೂರಿಗೆ ಸಮೀಪವಿರುವ ಆಂಧ್ರದ ಗಡಿಯಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ವಿಧಾನಸಭಾ ಕ್ಷೇತ್ರ. ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ರೈತ, ದಲಿತ ಹೋರಾಟಗಳ ತವರು.  ಗುಲಾಮಗಿರಿಯ ವಿರುದ್ಧ ಶೋಷಿತರಿಗೆ ಕ್ರಾಂತಿ ಗೀತೆಗಳ ಮೂಲಕ ಅರಿವು ಮೂಡಿಸಿದ್ದ ಕೆಂಪುಭೂಮಿ ಇದು. ಆಂಧ್ರಪ್ರದೇಶದಂತೆ ಇಲ್ಲಿನ ಮತದಾರರು ಸೆಂಟಿಮೆಂಟ್ ಗೆ ಹೆಚ್ಚು ಮಾರು ಹೋಗ್ತಾರೆ. ಡಿ.ಎಂ. ನಂಜುಂಡಪ್ಪ ವರದಿಯಂತೆ ಅತ್ಯಂತ ಹಿಂದುಳಿದ ತಾಲ್ಲೂಕಾಗಿರುವ ಇಲ್ಲಿ ಎಷ್ಟೇ ಜನಪ್ರತಿನಿಧಿಗಳು ಬದಲಾದರೂ ಕ್ಷೇತ್ರದ ಅಭಿವೃದ್ಧಿ ಮಾತ್ರ ಸುಧಾರಿಸಿಲ್ಲ.. ಗುಡಿಬಂಡೆ ಹಾಗೂ ಬಾಗೇಪಲ್ಲಿ ಸೇರಿ 2 ತಾಲ್ಲೂಕುಗಳನ್ನೊಂಡ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರ ರಾಜ್ಯದಲ್ಲೇ ವಿಶೇಷ ವಿಧಾನಸಭೆಯಾಗಿದೆ. ಇಲ್ಲಿನ ಮತದಾರರು, ಪಕ್ಷಕ್ಕಿಂತ ವ್ಯಕ್ತಿ ಹಾಗೂ ಜಾತಿಗೆ ಹೆಚ್ಚು ಪ್ರಾಮುಖ್ಯತೆ ಕೊಡ್ತಾರೆ. ಇಲ್ಲಿ ಒಮ್ಮೆ ಗೆದ್ದವರು ಸರಣಿಯಾಗಿ ಮತ್ತೊಮ್ಮೆ ಗೆದ್ದ ಉದಾಹರಣೆ ಇಲ್ಲ. ಕಮ್ಯುನಿಸ್ಟ್ ನೆಲೆಯ ಭದ್ರಬುನಾದಿಯಾಗಿರುವ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರ ಬಯಲು ಸೀಮೆಯ ಹೋರಾಟಗಳ ನೆಲೆವೀಡು. ಕಾಂಗ್ರೆಸ್ ನಿಂದ ಬಂಡಾಯ ಎದ್ದು ಇಲ್ಲಿಂದ ಕಣಕ್ಕಿಳಿದಿದ್ದ ಅಭ್ಯರ್ಥಿ ಗೆಲುವಿನ ಪತಾಕೆ ಹಾರಿಸಿರೋದು ನೋಡಿದ್ರೆ ಪಕ್ಷಕ್ಕಿಂತ ವ್ಯಕ್ತಿಗೆ ಇಲ್ಲಿನ ಜನ ಮನ್ನಣೆ ಕೊಡ್ತಾರೆ ಅನ್ನೋದು ಗೊತ್ತಾಗತ್ತೆ. ಹಾಗಿದ್ರೆ ಈ ಬಾರಿ ಇಲ್ಲಿನ ರಾಜಕೀಯ ಚಿತ್ರಣ ಏನು ಅನ್ನೋದನ್ನು ನೋಡೋದಕ್ಕಿಂತ ಮೊದಲು 2013ರ ಮತಬರಹ ನೋಡೋಣ ಬನ್ನಿ

 

2013ರ ಮತಬರಹ

ಇದು 2013ರ ಮತಬರಹ. ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಎಸ್ಎನ್ ಸುಬ್ಬಾರೆಡ್ಡಿ 65817 ಮತಗಳನ್ನು ಪಡೆದು ಗೆದ್ದು ಶಾಸಕರಾದ್ರೆ ಸಿಪಿಐಎಂ ನ ಜಿವಿ ಶ್ರೀರಾಮರೆಡ್ಡಿ 30554 ಮತಗಳನ್ನು ಪಡೆದು 2 ನೇ ಸ್ಥಾನ ಪಡೆದ್ರು. ಜೆಡಿಎಸ್ ನ ಹರಿನಾಥ ರೆಡ್ಡಿ 16539 ಮತಗಳನ್ನು ಪೆಡೆದ್ರೆ ಕಾಂಗ್ರೆಸ್ ಎನ್ ಸಂಪಂಗಿ ಅವ್ರು 15431 ಮತಗಳನ್ನು ಪಡೆದ್ರು.

ಕಳೆದ ಬಾರಿ ಬಾಗೇಪಲ್ಲಿ ಕ್ಷೇತ್ರದಲ್ಲಿ ಯಾರೂ ಏಣಿಸದೇ ಇರೋ ರೀತಿಯ ಕ್ಷಿಪ್ರ ರಾಜಕೀಯ ಬೆಳವಣಿಗೆಗಳಾದ್ವು. ಹಾಗಾಗಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸುಬ್ಬಾರೆಡ್ಡಿ ಅವ್ರು ಗೆಲುವಿನ ಪತಾಕೆ ಹಾರಿಸಿದ್ರು, ಆದ್ರೆ ಈ ಬಾರಿ ಹಾಗಿಲ್ಲ. ಯಾಕಂದ್ರೆ ಕ್ಷೇತ್ರದ ಜನ ಹಾಲಿ ಶಾಸಕರ ವರ್ತನೆಯಿಂದ ರೋಸಿಹೋಗಿದ್ದಾರೆ. ಹಾಲಿ ಶಾಸಕರು ‌ಉದ್ಯಮಿಗಳಾಗಿರೋದರಿಂದ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಿಲ್ಲ. ಕ್ಷೇತ್ರದ ಜನ ಪ್ಲೋರೈಡ್  ನೀರಿನ ಮಸ್ಯೆಗಳಿಂದ ನರಳುತ್ತಿದ್ದರೂ ಕುಡಿಯುವ ನೀರಿಗೆ ಹೆಚ್ಚು ಆದ್ಯತೆ ನೀಡಲಿಲ್ಲ. ಅಲ್ಲದೇ ಬಲಿಜಿಗರಿಗೆ ರಾಜಕೀಯ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ಆದ್ಯತೆ ನೀಡಲಿಲ್ಲ ಎಂಬ  ಗಂಭೀರ ಆರೋಪವಿರೋದರಿಂದ ಹಾಲಿ ಶಾಸಕರನ್ನು ಈ ಬಾರಿ ಗೆಲ್ಲಿಸೋದ ಅನುಮಾನ.  ಹಾಗಿದ್ರೆ ಬನ್ನಿ ಈ ಬಾರಿ ಯಾರ್ಯಾರು ಯಾವ ಯಾವ ಪಕ್ಷದಿಂದ ಕಣಕ್ಕಿಳಿತಾರೆ ನೋಡೋಣ

ಕೈ ಟಿಕೆಟ್ ಆಕಾಂಕ್ಷಿ

ಎನ್ ಸಂಪಂಗಿ, ಮಾಜಿ ಶಾಸಕ

ಸಂಪಂಗಿ ಅವ್ರು ಈ ಹಿಂದೆ ಪಕ್ಷೇತರರಾಗಿ ಒಂದು ಬಾರಿ ಹಾಗೇನೇ 2008 ರಲ್ಲಿ ಕಾಂಗ್ರೆಸ ನಿಂದ ಕಣಕ್ಕಿಳಿದು ಇದೇ ಕ್ಷೇತ್ರದಿಂದ ಗೆದ್ದಿದ್ರು. ಆದ್ರೆ 2013ರಲ್ಲಿ ಇಲ್ಲಾದ ರಾಜಕೀಯ ಬೆಳವಣಿಗೆಗಳಿಂದಾಗಿ ಕಣದಲ್ಲಿದ್ರೂ ಕೂಡಾ ಮಾಜಿ ಶಾಸಕರಾಗಿರೋ ಎನ್ ಸಂಪಂಗಿ ಅವ್ರು ಸೋಲಬೇಕಾಯ್ತು. ಇಲ್ಲಿನ ಜನ ಕೂಡಾ ಪಕ್ಷ ಬಿಟ್ಟು ಪಕ್ಷೇತರರಾಗಿದ್ದ ಸುಬ್ಬಾರೆಡ್ಡಿ ಅವ್ರನ್ನು ಗೆಲ್ಲಿಸಿದ್ರು. ಆದ್ರೆ ಈಗ ಮತ ಹಾಕಿದ ಮತದಾರ ಇವತ್ತು ಇಂತಹ ಶಾಸಕರನ್ನು ಯಾಕೆ ಆಯ್ಕೆ ಮಾಡಿಬಿಟ್ವೋ ಅಂತಾ ನೋವು ತೋಡಿಕೊಳ್ತಿದ್ದಾರೆ. ಹಾಗಾಗಿ ಈ ಬಾರಿ ಕಾಂಗ್ರೆಸ್ ನಿಂದ ಸಂಪಂಗಿ ಅವ್ರು ಕಣಕ್ಕಿಳಿದ್ರೆ ಗೆಲ್ಲೋದ್ರಲ್ಲಿ ಅನುಮಾನ ಇಲ್ಲ. ಯಾಕಂದ್ರೆ ಸಂಪಂಗಿ ಅವ್ರು ಇಲ್ಲಿ ಈ ಹಿಂದಿನಿಂದಲೂ ಕ್ಷೇತ್ರಕ್ಕೆ ಒಳ್ಳೆ ಅಭಿವೃದ್ಧಿ ಕೆಲ್ಸಗಳನ್ನು ಮಾಡ್ಕೊಂಡು ಬಂದಿದ್ದಾರೆ. ಅದಕ್ಕೆ ಉದಾಹರಣೆ ಅಂದ್ರೆ ಪರೆಗೋಡು ನಲ್ಲಿ ನಿರ್ಮಿಸಿರೋ ಚಿತ್ರಾವತಿ ಅಣೆಕಟ್ಟು ಸೇರಿದಂತೆ ಸಾಕಷ್ಚು ನೀರಾವರಿ ಯೋಜನೆಗಳನ್ನು ಇಲ್ಲಿ ಅನುಷ್ಠಾನಗೊಳಿಸಿದ್ದಾರೆ. ಇನ್ನು ಇವ್ರಿಗೆ ಕಾಂಗ್ರೆಸ್ನ ಹಿರಿಯ ನಾಯಕರ ಸಪೋರ್ಟ್ ಕೂಡಾ ಇದೆ. ಇಲ್ಲಿನ ಪ್ರಬಲ ಸಮುದಾಯವಾಗಿರೋ ಬಲಜಿಗ ಸಮುದಾಯದವ್ರೂ ಕೂಡಾ ಇವ್ರ ಹಿಂದೆ ಇದ್ದಾರೆ. ಇನ್ನು  ಕಳೆದ ಬಾರಿ ಸೋತಿದ್ರು ಕೂಡಾ ಕ್ಷೇತ್ರ ಬಿಟ್ಟು ಹೋಗಿಲ್ಲ. ಕ್ಷೇತ್ರದಲ್ಲೇ ಇದ್ಕೊಂಡು ಜನರಿಗೆ ಸಹಕಾರ ನೀಡ್ತಾನೆ ಬಂದಿದ್ದಾರೆ. ಹಾಗಾಗಿ ಇಲ್ಲಿನ ಜನ ಈಗ ಸಂಪಂಗಿ ಪರ ಇದ್ದಾರೆ. ಇನ್ನು ಒಂದ್ವೇಳೆ ಕಾಂಗ್ರೆಸ್ ನಿಂದ ಇವ್ರಿಗೆ ಟಿಕೆಟ್ ಸಿಕ್ಕಿಲ್ಲ ಅಂದ್ರೂ ಕೂಡಾ ಪಕ್ಷೇತರರಾಗಿ ನಿಂತ್ರೂ ಇಲ್ಲಿನ ಜನ ಇವ್ರನ್ನು ಗೆಲ್ಲಿಸೋದ್ರಲ್ಲಿ ಅನುಮಾನ ಇಲ್ಲ.

ಎಸ್ ಎನ್ ಸುಬ್ಬಾರೆಡ್ಡಿ, ಶಾಸಕ

ಯಸ್ ಕಳೆದ ಬಾರಿ ಟಿಕೆಟ್ ಸಿಕ್ಕಿಲ್ಲ ಅನ್ನೋ ಕಾರಣಕ್ಕೆ ಕಾಂಗ್ರೆಸ್ ನಿಂದ ಬಂಡಾಯವಾಗಿ ನಿಂತು ಗೆದ್ದಿದ್ದ ಸುಬ್ಬಾರೆಡ್ಡಿ ಅವ್ರು ಮತ್ತೆ ಕಾಂಗ್ರೆಸ್ ಗೆ ಸೇರಿದ್ದಾರೆ. ಅಲ್ಲದೆ ಈ ಬಾರಿ ಕಾಂಗ್ರೆಸ್ ನಿಂದ ಕಣಕ್ಕಿಳಿಯೋದಕ್ಕೆ ಮುಂದಾಗಿದ್ದಾರೆ. ಯಾಕಂದ್ರೆ ಅವರಿಗೂ ಗೊತ್ತಾಗಿದೆ ಮತ್ತೊಮ್ಮೆ ಪಕ್ಷೇತರನಾಗಿ ನಿಂತ್ರೆ ಇಲ್ಲಿನ ಜನ ಕೈ ಹಿಡಿಯೋದಿಲ್ಲ ಅಂತಾ. ಹಾಗಾಗಿ ಅಧಿಕಾರಕ್ಕೋಸ್ಕರ ಕಾಂಗ್ರೆಸ್ ಗೆ ಸೇರಿದ್ದಾರೆ. ಇನ್ನು ಸಿಎಂ ಕೂಡಾ ಅಷ್ಟೇನೇ ಸುಬ್ಬಾರೆಡ್ಡಿ ಅವ್ರು ಕಳೆದ ಬಾರಿ ಕಾಂಗ್ರೆಸ್ ನ ಸೋಲಿಸಿದ್ದಾರೆ ಅನ್ನೋದನ್ನೂ ಮರೆತು ಕ್ಷೇತ್ರ ದಲ್ಲಿ ಇವರ ವರ್ಚಸ್ಸು ಎಷ್ಟು ಕಡಿಮೆ ಆಗಿದೆ ಅನ್ನೋದನ್ನು ಪರಿಗಣಿಸದೇನೇ ಮೊನ್ನೆ ನಡೆದ ಕಾರ್ಯಕ್ರಮದಲ್ಲಿ ಇವ್ರ ಪರ ಬ್ಯಾಟ್ ಮಾಡಿದ್ದಾರೆ ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕ್ಷೇತ್ರದ ಮತದಾರರಿಗೂ ಗೊತ್ತಾಗಿದೆ ಅವ್ರು ಅಧಿಕಾರಕ್ಕಾಗೇ ಹೀಗೆ ಮಾಡ್ತಿದ್ದಾರೆ. ಈ ಬಾರಿ ಶಾಸಕರಾಗಿದ್ರೂ ಕೂಡಾ ಕ್ಷೇತ್ರದ ಜನರ ಸಮಸ್ಯೆ ಬಗೆಹರಿಸೋದಕ್ಕೆ ಮುಂದಾಗಿಲ್ಲ. ಇದಷ್ಟೇ ಅಲ್ಲದೆ ಶಾಸಕರ ಕೆಲ ಸಂಬಂಧಿಕರು, ಹಿಂಬಾಲಕರ ವರ್ತನೆ ಅವರ ಸೋಲಿಗೆ ಕಾರಣವಾಗಬಹುದು ಎಂಬ ಮಾತುಗಳು ಕ್ಷೇತ್ರದಲ್ಲಿದೆ. ಇನ್ನು ಬಾಗೇಪಲ್ಲಿ ಕ್ಷೇತ್ರದ ಬಗ್ಗೆ ವಿಧಾನಸಭೆಯಲ್ಲಿ ಮಾತಾಡೇ ಇಲ್ಲ. ಇಲ್ಲಿನ ರೈಲ್ವೇ ಯೋಜನೆ ಬಗ್ಗೆ ಈ ವರೆಗೂ ಚಕಾರವೆತ್ತಿಲ್ಲ ಅದು ಹಾಗೇ ಪೆಂಡಿಗ್ ಇದೆ. ಇದಷ್ಟೇ ಅಲ್ಲದೇ ಜಾತಿ ರಾಜಕಾರಣ ಮಾಡ್ತಾರೆ ಅನ್ನೋ ಆರೋಪವಿದ್ದು ಬಲಜಿಗ ಸಮುದಾಯದವರನ್ನು ಇವ್ರು ಸಂಪೂರ್ಣ ನಿರ್ಲಕ್ಷಿಸಿದ್ದಾರೆ.ಹಾಗಾಗಿ ಈ ಬಾರಿ ಕ್ಷೇತ್ರದ ಪ್ರಬಲ ಸಮುದಾಯ ಬಲಜಿಗರು ಒಗ್ಗಟ್ಟಾಗಿ ಇವ್ರನ್ನು ಸೋಲಿಸಲು ಮುಂದಾಗಿದ್ದಾರೆ.

ಸಿಪಿಐಎಂ ಅಭ್ಯರ್ಥಿ

ಜಿವಿ ಶ್ರೀರಾಮ ರೆಡ್ಡಿ ಅಂದ್ರೆ ಹೋರಾಟ..ಯಾಕಂದ್ರೆ ಕ್ಷೇತ್ರಕ್ಕೆ ಏನಾದ್ರೂ ಮಾಡಬೇಕು ಅಭಿವೃದ್ಧಿ ಆಗಬೇಕು ಅನ್ನೋ ನಿಟ್ಟಿನಲ್ಲಿ ಸಾಕಷ್ಟು ಹೋರಾಟಗಳನ್ನು ಮಾಡ್ತಾ ಬಂದವರು ಮಾಜಿ ಶಾಸಕರಾಗಿರೋ ಶ್ರೀರಾಮರೆಡ್ಡಿ ಅವ್ರು. ಇವ್ರಿಗೆ ಇವ್ರದ್ದೇ ಆದ ವೋಟ್ ಬ್ಯಾಂಕ್ ಇದೆ. ಅವು ಯಾವುದೇ ಕಾರಣಕ್ಕೂ ಬೇರೆಯವರ ಪಾಲಾಗೋದಿಲ್ಲ.ಕಳೆದ ಬಾರಿ ಚುನಾವಣೆಯಲ್ಲಿ 2 ಸ್ಥಾನ ಪಡೆದಿರೋದು ನೋಡಿದ್ರೆ ಗೊತ್ತಾಗತ್ತೆ ಈಗಲೂ ಕ್ಷೇತ್ರದಲ್ಲಿ ಇವ್ರಿಗೆ ಯಾವ ರೀತಿ ಹೋಲ್ಡ್ ಇದೆ ಅನ್ನೋದು. ಹಾಗಾಗಿ ಈ ಬಾರಿ ಕೂಡಾ ಸಿಪಿಐಎಂ ನಿಂದ ಶ್ರೀರಾಮ ರೆಡ್ಡಿ ಕಣಕ್ಕಿಳಿತಾರೆ.

ತೆನೆ ಹೊರೋದ್ಯಾರು?

ಕಳೆದ ಬಾರಿ ಜೆಡಿಎಸ್ ನಿಂದ ಅಖಾಡಕ್ಕಿಳಿದಿದ್ದ ಹರಿನಾಥ ರೆಡ್ಡಿ ಅವ್ರು ಈ ಬಾರಿ ಕೂಡಾ ಜೆಡಿಎಸ್ ಟಿಕೆಟ್ ಆಕಾಂಕ್ಷಿ.ಸೋತಿದ್ರೂ ಕೂಡಾ ಕ್ಷೇತ್ರದಲ್ಲಿ ಓಡಾಡ್ತಾ ಜನರನ್ನು ತಮ್ಮತ್ತ ಸೆಳೆಯೋ ಕೆಲ್ಸ ಮಾಡ್ತಿದ್ದಾರೆ. ಹಾಗಾಗಿ ಈ ಬಾರಿ ಇವ್ರಿಗೆ ಟಿಕೆಟ್ ಸಿಕ್ರೆ ಇವ್ರು ಗೆಲ್ತಾರೋ ಬಿಡ್ತಾರೋ ಇವ್ರಿಗೆ ಬರೋ ಮತಗಳು ಬಾಕಿ ಉಳಿದ ಅಭ್ಯರ್ಥಿಗಳ ಸೋಲಿಗೆ ಕಾರಣವಾಗೋ ಚಾನ್ಸ್ ಇದೆ. ಇನ್ನುಳಿದಂತೆ ವಿಧಾನಪರಿಷತ್ ಸದಸ್ಯರಾಗಿರೋ ಸಿಆರ್ ಮನೋಹರ್, ಜೆಡಿಎಸ್ ಮುಖಂಡರಾಗಿರೋ ಡಿ.ಜೆ.ನಾಗರಾಜರೆಡ್ಡಿ ಇವ್ರುಗಳ ಹೆಸರು ಕೂಡಾ ಈ ಕ್ಷೇತ್ರದಲ್ಲಿ ಕೇಳಿ ಬರ್ತಿದೆ. ಹಾಗಾಗಿ ಅಂತಿಮವಾಗಿ ಜೆಡಿಎಸ್ ನಾಯಕರು ಯಾರಿಗೆ ಮಣೆ ಹಾಕ್ತಾರೆ ನೋಡಬೇಕು

ಬಿಜೆಪಿ ಅಭ್ಯರ್ಥಿ

ಸಾಯಿಕುಮಾರ್- ಚಿತ್ರನಟ.

ಕಳೆದ ಬಾರಿ ಬಿಜೆಪಿ  ಈ ಕ್ಷೇತ್ರದಲ್ಲಿ ಹೇಳಿಕೊಳ್ಳೋ ಸಾಧನೆ ಏನೂ ಮಾಡಿಲ್ಲ. ಆದ್ರೆ ಈ ಬಾರಿ ನಟ ಸಾಯಿಕುಮಾರ್ ಅವ್ರು ಕಣಕ್ಕಿಳಿಯೋದಕ್ಕೆ ಮುಂದಾಗಿದ್ದಾರೆ. ಇದು ಬಿಜೆಪಿ ಗೆ ಪ್ಲಸ್ ಪಾಯಿಂಟ್. .ಯಾಕಂದ್ರೆ ಒಂದು ಸಾಯಿಕುಮಾರ್ ಅವ್ರು ಚಿತ್ರ ನಟರು ಹಾಗೂ ಜನರ ಅಬಿಮಾನವನ್ನು ಪಡೆದವ್ರು. ಇನ್ನೊಂದು ಈ ಕ್ಷೇತ್ರದಲ್ಲಿ ಬಲಜಿಗ ಸಮುದಾಯದವರು ನಿರ್ಣಾಯಕರಾಗಿರೋ ಕಾರಣ ಸಾಯಿಕುಮಾರ್ ಕೂಡಾ ಅದೇ ಸಮುದಾಯಕ್ಕೆ ಸೇರಿರೋದ್ರಿಂದ ಸಾಯಿ ಕುಮಾರ್ ಅವ್ರಿಗೆ ಮತಗಳು ಬೀಳೋದ್ರಲ್ಲಿ ಅನುಮಾನ ಇಲ್ಲ. ಇನ್ನು ಇವ್ರ ಜತೆಗೆ ಅರಿಕೆರೆ ಕೃಷ್ಣಾರೆಡ್ಡಿ,  ಬಿಜೆಪಿ ಮುಖಂಡರಾಗಿರೋ ರಾಮಲಿಂಗಪ್ಪ ಕೂಡಾ ರೇಸ್ ನ್ಲಲಿದ್ದಾರೆ. ಹಾಗಾಗಿ ಬಿಜೆಪಿ ನಾಯಕರು ಯಾರಿಗೆ ಬಿ ಫಾರ್ಮ್ ಕೊಡ್ತಾರೆ ಕಾದು ನೋಡಬೇಕು.

ಇನ್ನು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ವಿಶೇಷತೆ ಅಂದ್ರೆ ಇಲ್ಲಿ ಪಕ್ಷಗಳಿಗಿಂತಲೂ ಅಖಾಡಕ್ಕಿಳಿಯಿವ ವ್ಯಕ್ತಿಗಳೇ ಮುಖ್ಯ ಆಗ್ತಾರೆ. ಕಾಂಗ್ರೆಸ್ ನ ಅಬ್ಬರ ಇದ್ರೂ  ಜೆಡಿಎಸ್, ಸಿಪಿಐಎಂ ಪಕ್ಷಗಳೂ ಕೂಡಾ ಇಲ್ಲಿ ಪ್ರಬಲವಾಗಿವೆ,.ಹಾಗಾಗಿ ಮೊದಲೇ ಹೇಳಿದ ಹಾಗೇ ಇಲ್ಲಿ ಪಕ್ಷಕ್ಕಿಂತ ವ್ಯಕ್ತಿಯೇ ಮುಖ್ಯವಾಗಿರೋದರಿಂದ ಕಾಂಗ್ರೆಸ್ ನಿಂದ ಸಂಪಂಗಿ  ಇಳಿದ್ರೆ ತೀವ್ರ ಪೈಪೋಟಿ ನೀಡೋದ್ರಲಲಿ ಅನುಮಾನವಿಲ್ಲ.

 

ಬಾಗೇಪಲ್ಲಿಯ ಹಾಲಿ ಶಾಸಕರು ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲ್ಸಗಳನ್ನು ಮಾಡಿಲ್ಲ ಅನ್ನೋದ್ರ ಜತೆಗೆ ಅವ್ರ ಕೆಲ ಸಂಬಂಧಿಕರು, ಹಿಂಬಾಲಕರ ವರ್ತನೆ ಕ್ಷೇತ್ರದ ಜನತೆಯ ಅಸಮಾಧಾನಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲದೆ ಕ್ಷೇತ್ರದಲ್ಲಿ ನಿರ್ಣಾಯಕ ಮತದಾರರಾಗಿರೋ ಬಲಜಿಗ ಸಮುದಾಯವನ್ನು ಕಡೆಗಣಿಸಿರೋದ್ರಿಂದ ಹಾಲಿ ಶಾಸಕರು ಈ ಬಾರಿ ಗೆಲ್ಲೋದು ಕಷ್ಟ. ಆದ್ರೆ ಕಾಂಗ್ರೆಸ್ ಬಲಜಿಗ ಸಮುದಾಯದವರೇ ಆಗಿರೋ ಎನ್ ಸಂಪಂಗಿ ಅವ್ರಿಗೆ ಟಿಕೆಟ್ ಕೊಟ್ರೆ ಕಳೆದ ಬಾರಿ ಕಳೆದುಕೊಂಡ ಬಾಗೇಪಲ್ಲಿ ಕ್ಷೇತ್ರವನ್ನು ಕಾಂಗ್ರೆಸ್ ಮತ್ತೆ ತನ್ನ ತೆಕ್ಕೆಗೆ ಹಾಕಿಕೊಳ್ಳಬಹುದು.

 

 

ಪ್ರತ್ಯುತ್ತರ ನೀಡಿ

Please enter your comment!
Please enter your name here