ಚುನಾವಣಾ ಕುರುಕ್ಷೇತ್ರ 2018 ಬೀದರ್ ದಕ್ಷಿಣ (ಬೀದರ್ ಜಿಲ್ಲೆ)

ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರ

ಈಗ ನಾವು ಹೇಳ್ತಾ ಇರೋ ಕ್ಷೇತ್ರ ಬಿದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಗ್ಗೆ. ಪ್ರಸ್ತುತ ಅಶೋಕ್ ಖೇಣಿ ಇಲ್ಲಿ ಶಾಸಕರಾಗಿದ್ದಾರೆ. ಹಾಗಿದ್ರೆ ಈ ಬಾರಿ 2018ರ ಮಹಾ ಸಮರಕ್ಕೆ ಕ್ಷೇತ್ರ ಹೇಗೆ ಸಜ್ಜಾಗಿದೆ ಇಲ್ಲಿನ ಗ್ರೌಂಡ್ ರಿಯಾಲಿಟಿ ಏನು ನೋಡೋಣ ಬನ್ನಿ

     

ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರ. ಕ್ಷೇತ್ರ ಪುನರ್ ವಿಂಗಡಣೆ ಸಂದರ್ಭದಲ್ಲಿ 105 ಹಳ್ಳಿಗಳನ್ನ ಒಗ್ಗೂಡಿಸಿ ನಿರ್ಮಾಣವಾದ ಕ್ಷೇತ್ರವಿದು.ಈ ಕ್ಷೇತ್ರದಲ್ಲಿ ಮೊದಲು ಶಾಸಕನಾಗಿ ಆಯ್ಕೆಯಾಗಿದ್ದು ಮಾಜಿ ಸಚಿವ ಜೆಡಿಎಸ್ ನ ಬಂಡೆಪ್ಪಾ ಕಾಶಂಪೂರ್. ಅನಂತರ ನಡೆದ ಚುನಾವಣೆಯಲ್ಲಿ ಜನರಿಗೆ ಸಿಂಗಾಪೂರ್ ಮಾಡುತ್ತೇನೆ ಅಂತಾ ಆಸೆ ತೋರಿಸಿ ಆಯ್ಕೆಯಾದವರು ಹಾಲಿ ಶಾಸಕ ಅಶೋಕ ಖೇಣಿ. ಆದ್ರೆ ಅವರ ಸಿಂಗಾಪೂರ್ ಮಾತ್ರ ಈ ಹಳ್ಳಿಗಳ ಕ್ಷೇತ್ರದಲ್ಲಿ ಕಾಣಲೆ ಇಲ್ಲಾ..ಈ ಕ್ಷೇತ್ರ ಬಹುತೇಕ  ಕೃಷಿಗೆ ಮೀಸಲಾಗಿದೆ.ಆದ್ರೆ ಇಲ್ಲಿ ಕೃಷಿ ಅಬೀವೃದ್ದಿಗೆ ಏನೇನೂ ಆಗಿಲ್ಲ. ಹದಗೆಟ್ಟ ರಸ್ತೆಗಳು,ಬಡತನ,ಕುಡಿಯುವ ನೀರಿನ ಸಮಸ್ಯೆ ಕ್ಷೇತ್ರ ಹುಟ್ಟಿದಾಗಿನಿಂದಲು ಇವೆ. ಈಗಲೂ ಇವೆ. ಇಬ್ಬರು ಶಾಸಕರು ಬಂದ್ರು ಹೋದ್ರು ಆಯಾ ರಾಮ್ ಗಯಾ ರಾಮ್ ಅನ್ನೋ ಹಾಗೆ ಆಗಿದೆ ಕ್ಷೇತ್ರದ ಸ್ಥಿತಿ. ಹಾಗಿದ್ರೆ ಈ ಬಾರಿಯ ಚುನಾವಣೆಯಲ್ಲಿ ಇಲ್ಲಿ ಏನಾಗಬಹುದು ಅನ್ನೋದನ್ನು ಹೇಳ್ತೀವಿ ಆದ್ರೆ ಅದಕ್ಕೂ ಮೊದಲು 2013ರ ಮತಬರಹ ನೋಡೋಣ.

 

2013ರ ಮತಬರಹ

 

ಇದು 2013ರ ಮತಬರಹ. ಕಳೆದ ಬಾರಿ ಕರ್ನಾಟಕ ಮಕ್ಕಳ ಪಕ್ಷದಿಂದ ಕಣಕ್ಕಿಳಿದಿದ್ದ ಅಶೋಕ್ ಖೇಣಿ 47763 ಮತಗಳನ್ನು ಪಡೆದು ಗೆದ್ದು ಶಾಸಕರಾದ್ರು, ಇನ್ನು ಜೆಡಿಎಸ್ ಬಂಡೆಪ್ಪ ಕಾಶಂಪುರ್  ಅವ್ರು 31975 ಮತಗಳನ್ನು ಪಡೆಯೋ ಮೂಲಕ 15788 ಮತಗಳ ಅಂತರದಿಂದ ಸೋತ್ರು.

ಕಳೆದ ಬಾರಿಯಂತೂ ಹಿಂದಿನ ಶಾಸಕರಾಗಿದ್ದ ಬಂಡೆಪ್ಪ ಕಾಶೆಂಪುರ್ ಅವ್ರ ಬಗ್ಗೆ ಜನ ಜಾಸ್ತಿ ಒಲವು ತೋರಿಸಿರಲಿಲ್ಲ. ಜತೆಗೆ ಉದ್ಯಮಿ ನೈಸ್ ಸಂಸ್ಥೆಯ ಮಾಲಿಕ ಅಶೋಕ್ ಖೇಣಿ ಕ್ಷೇತ್ರದ ಜನರಿಗೆ ನಾನು ಗೆದ್ರೆ ಸಿಂಗಾಪುರ್ ಮಾಡ್ತೀನಿ ಕ್ಷೇತ್ರವನ್ನು ಅಂತಾ ಆಸೆ ತೋರಿಸಿದ್ರು. ಪಾಪ ಮುಗ್ಧ ಮತದಾರರು ಖೇಣಿ ಮಾತನ್ನು ನಂಬಿ ಅವ್ರನ್ನು ಗೆಲ್ಲಿಸಿದ್ರು ಕೂಡಾ. ಆದ್ರೆ ಕ್ಷೇತ್ರ ಸಿಂಗಾಪುರ ಆಗೋದಿರಲಿ ಕ್ಷೇತ್ರದಲ್ಲಿ ಅಭಿವೃದ್ಧಿಯೂ ಆಗಿಲ್ಲ ಕ್ಶೇತ್ರದಲ್ಲಿ ಖೇಣಿಯೂ ಜಾಸ್ತಿ ಕಾಣಿಸಿಕೊಂಡಿಲ್ಲ. ಹಾಗಾಗಿ ಈಗಾಗಲೇ ಕ್ಷೇತ್ರದ ಜನ ಜೆಡಿಎಸ್ ನ ಬಂಡೆಪ್ಪ ಕಾಶಂಪುರ್ ಹಾಗೂ ಖೇಣಿಗೆ ಚಾನ್ಸ್ ಕೊಟ್ಟು ನೋಡಿದ್ದಾಗಿದೆ. ಆದ್ರೆ ಕ್ಷೇತ್ರ ಏನೂ ಬದಲಾವಣೆಯಾಗಿಲ್ಲ ಹಾಗಾಗಿ ಈ ಬಾರಿ ಇಲ್ಲಿ ಬದಲಾವಣೆ ಆಗಬೇಕು ಅಂತಾ ಹೇಳ್ತಿದ್ದಾರೆ.ಈ ಬಾರಿ ತನಗೆ ಮತದಾರ ಮಣೆ ಹಾಕೋದು ತುಂಬಾ ಕಷ್ಟ ಇದೆ ಅನ್ನೋದು ಗೊತ್ತಾಗ್ತಿದ್ದಂತೆ ಅಶೋಕ್ ಖೇಣಿ ಕಾಂಗ್ರೆಸ್ ನಿಂದ ಸ್ಪರ್ಧಿಸೋದಕ್ಕೆ ಮುಂದಾಗ್ತಿದ್ದಾರೆ. ಹಾಗಿದ್ರೆ ಈ ಬಾರಿ ಯಾರ್ಯಾರು ಯಾವ್ಯಾವ ಪಕ್ಷದಿಂದ ಕಣಕ್ಕಿಳಿತಾರೆ, ಅವ್ರ ಬಲಾ ಬಲ ಏನು ನೋಡೋಣ

 

ಕೈ ಹಿಡಿಯೋರ್ಯಾರು?

ಕಳೆದ ಬಾರಿಯ ಚುನಾವಣೆಯಲ್ಲಿ ಕರ್ನಾಟಕ ಮಕ್ಕಳ ಪಕ್ಷದಿಂದ ಗೆದ್ದು ಶಾಸಕರಾದ ಅಶೋಕ್ ಖೇಣಿ ಈ ಬಾರಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದ್ರೆ ಈ ಬಾರಿ ಇಲ್ಲಿ ಗೆಲ್ಲೋ ಚಾನ್ಸ್ ತುಂಬಾ ಕಡಿಮೆ ಇದೆ ಅನ್ನೋದನ್ನು ಮನಗಂಡಿರೋ ಖೇಣಿ ಜನರ ಅಕ್ರೋಶವನ್ನು ಮೊದಲೆ ಗ್ರಹಿಸಿ ಕಾಂಗ್ರೆಸ್ ನಿಂದ ಸ್ಪರ್ಧಿಸೋಕೆ ಟ್ರೈ ಮಾಡ್ತಿದ್ದಾರೆ ಅನ್ನೋ ಮಾತು ಕೇಳಿ ಬರ್ತಿದೆ. ಹಾಗಿದ್ರೂ ಕೂಡಾ ಗೆಲುವು ಅವ್ರಿಗೆ ಅಷ್ಟು ಸುಲಭವಲ್ಲ. ಯಾಕಂದ್ರೆ ಬೀದರ್ ದಕ್ಷಿಣ ಕ್ಷೇತ್ರವನ್ನ ಸಿಂಗಾಪೂರ್ ಮಾಡುತ್ತೇನೆ ಅಂತಾ ಆಶ್ವಾಸನೆ ಕೊಟ್ಟಂತಹ ಖೇಣಿಯನ್ನು ಜನ ನಂಬಿದ್ರು. ಖೇಣಿ ಮನೆತನದಿಂದ ಬಂದವರು ನೈಸ್ ರಸ್ತೆ ಮಾಡಿದವರು ಅದೇ ರೀತಿ ಕ್ಷೇತ್ರವನ್ನ ಅಭಿವೃದ್ದಿ ಮಾಡುತ್ತಾರೆ, ಸಿಂಗಾಪೂರ್ ಮಾಡ್ತಾರೆ ಅಂತಾ ಜನ ಭಾರಿ ಅಂತರದಿಂದಲೇ ಗೆಲ್ಲಿಸಿದ್ರು.ಆದ್ರೆ ಖೇಣಿ ಗೆದ್ದ ಮೇಲೆ ಕ್ಷೇತ್ರವನ್ನ ಮರೆತು ಬೆಂಗಳೂರು ಅಮೇರಿಕಾ ಓಡಾಟದಲ್ಲೆ ಕಾಲ ಕಳೆದ್ರು. ಜೊತೆಗೆ ಕ್ಷೇತ್ರದ ಯಾವೊಬ್ಬ ಕಾರ್ಯಕರ್ತರ ಸಭೆ ಸಮಾರಂಭಗಳಿಗೆ ಹೋಗದೆ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದು, ಕ್ಷೇತ್ರದ ಹಳ್ಲಿಗಳನ್ನ ನಿರ್ಲಕ್ಷ ಮಾಡಿದ್ದು, ಸರಿಯಾಗಿ ಮೊಬೈಲ್ ನೆಟ್ ವರ್ಕ್ ಸಿಗದೇ ಇದ್ರೂ ಕೂಡಾ ಸಮಸ್ಯೆ ಇದ್ರೆ ಮೈಲ್ ಮಾಡಿ, ಇಲ್ಲಾ ನಮ್ಮ ಸಿಬ್ಬಂದಿಗೆ ಹೇಳಿ ಅನ್ನೋ ಅವರ ಧೋರಣೆ ಅವರ ಪಾಲಿಗೆ ಮುಳುವಾಗಿರೋದಂತೂ ಸತ್ಯ. ಹಾಗಾಗಿ ಕೊಟ್ಟ ಭರವಸೆಗಳನ್ನು ಈಡೇರಿಸದೇ ಇರೋದ್ರಿಂದ ಜನ ಈ ಬಾರಿ ಇವ್ರ ಮೇಲೆ ನಿರೀಕ್ಷೆ ಇಟ್ಕೊಂಡಿಲ್ಲ. ಇಲ್ಲಿನ ಪರಿಸ್ಥಿತಿ ನೋಡಿದ್ರೆ ಖೇಣಿ ಗೆಲ್ಲೋದು ಇರಲಿ ಮೂರನೆ ಸ್ತಾನಕ್ಕೆ ಉಳಿದರೆ ಅದೇ ದೊಡ್ಡ ಸಾಧನೆ ಅಂತಿದ್ದಾರೆ ಜನ. ಹಾಗಾಗಿ ಕಾಂಗ್ರೆಸ್ ನಾಯಕರಿಗೂ ಇದು ಗೊತ್ತಿದ್ದು ಕಾಂಗ್ರೆಸ್ ಟಿಕೇಟು ಇವ್ರಿಗೆ ಸಿಗೋ ಗ್ಯಾರಂಟಿ ಕೂಡಾ ಕಡಿಮೆ.

ಇನ್ನು ಕಾಂಗ್ರೆಸ್ ನಿಂದ ದಿ.ಮಾಜಿ ಮುಖ್ಯಮಂತ್ರಿ ಧರಂಸಿಂಗ ಅವರ ಅಳಿಯ ಚಂದ್ರಾಸಿಂಗ್ ಅವರ ಹೆಸರು ಕೂಡಾ ಕೇಳಿ ಬರುತ್ತಿದ್ದು, ಅವರು ಅಂತಿಮವಾಗಿ ಕಾಂಗ್ರೆಸ್ ನಿಂದ ಕಣಕ್ಕಿದರೆ ಅದು ಪ್ಲಸ್ ಆಗೋದು ಬಿಜೆಪಿಗೆ. ಇವರು ಬಂದ್ರೆ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ನೇರಾ ನೇರಾ ಹಣಾಹಣಿ ಏರ್ಪಡುತ್ತೆ. ಆಗ ಇಲ್ಲಿ ಜೆಡಿಎಸ್ ಹಾಗೂ ಹಾಲಿ ಶಾಸಕ ಅಶೋಖ ಖೇಣಿ ಮೂರನೆ ಸ್ಥಾನಕ್ಕೆ ಪೈಪೋಟಿ ನಡೆಸಬೇಕಾಗುವುದರಲ್ಲಿ ಅನುಮಾನವಿಲ್ಲ. ಚಂದ್ರಾ ಸಿಂಗ್ ಕ್ಷೇತ್ರದಲ್ಲಿ ಜೆಡಿಎಸ್ ಮತಗಳನ್ನ ಸೆಳೆಯುತ್ತಾರೆ ಹೊರತು ಬಿಜೆಪಿಯದ್ದು ಅಲ್ಲಾ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಇವರು ಕುರುಬ ಮತಗಳನ್ನ ಸೆಳೆದ್ರೆ ಅದರ ಲಾಭ ಆಗೋದು ಬಿಜೆಪಿಯ ಡಾ.ಶೈಲೆಂದ್ರ ಬೆಲ್ದಾಳೆಯವರಿಗೆ.

ಬಿಜೆಪಿ ಅಭ್ಯರ್ಥಿ

ಯಸ್ ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸೋದಕ್ಕೆ ಡಾ.ಶೈಲೇಂದ್ರ ಬೆಲ್ದಾಳೆ ಮುಂದಾಗಿದ್ದಾರೆ. ಈಗಾಗಲೇ ಕ್ಷೇತ್ರದಲ್ಲಿ ಓಡಾಡ್ತಾ ಕ್ಷೇತ್ರದ ಜನರ ಮನಸ್ಸನ್ನು ಗೆಲ್ತಿದ್ದಾರೆ. ಸಧ್ಯ ಕ್ಷೇತ್ರದ ತುಂಬೆಲ್ಲಾ ಬಿಜೆಪಿ ಅಭ್ಯರ್ಥಿ ಎಂದೆ ಬಿಂಬಿರಾಗಿದ್ದಾರೆ. ಡಾ.ಶೈಲೇಂದ್ರ ಬೆಲ್ದಾಳೆ ಯವರ ಹವಾ ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಕಾಣುತ್ತಿದೆ. ಕ್ಷೇತ್ರದಲ್ಲಿ ಯುವಕರ ಕಣ್ಮಣಿ, ಜನ ಸಾಮಾನ್ಯರ ಧ್ವನಿಯಾಗಿ ಬೆಲ್ದಾಳೆಯವರು ಬೆಳೆದಿದ್ದಾರೆ. ಕಳೆದ ಬಾರಿ ಸೋತರೂ ಕೂಡಾ ಕ್ಷೇತ್ರವನ್ನ ಬಿಡದೆ ಕ್ಷೇತ್ರದಲ್ಲಿ ಮತದಾರರ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಸದಾ ಜನಪರ ಕಾರ್ಯ ಮಾಡುತ್ತಾ ಕ್ಷೇತ್ರದ ಜನರ ಮಧ್ಯೆ ತಮ್ಮದೆ ಆದ ರೀತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸಲ ಇವರಿಗೊಂದು ಚಾನ್ಸ್ ಕೊಡೋಣ ನಮ್ಮವರೇ ನಮ್ಮ ಮಧ್ಯದಲ್ಲೇ ಇದ್ದಾರೆ ಅನ್ನೋ ಆತ್ಮಿಯತೆ ಕ್ಷೇತ್ರದ ಜನರಲ್ಲಿ ಕಂಡು ಬರುತ್ತಿದೆ. ಜೊತೆಗೆ ಇತ್ತೀಚಿಗೆ ನಡೆದ ಬಿಜಪಿ ಪರಿವರ್ತನಾ ಯಾತ್ರೆಯಲ್ಲಿ ರಾಜ್ಯಾಧ್ಯಕ್ಷ ಬಿಎಸ್ ವೈ ಬಹಿರಂಗವಾಗಿಯೇ ಬೆಲ್ದಾಳೆ ಹೆಸರನ್ನು ಹೆಸರನ್ನ ಘೋಷಣೆ ಮಾಡಿದ್ರು.ಇದು ಸಹಜವಾಗಿಯೇ ಬದಲಿ ಅಭ್ಯರ್ಥಿಗಳ ಹೆಸರಿಗೆ ಬ್ರೇಕ್ ಹಾಕಿದ್ದಂತು ಸತ್ಯ. ಇನ್ನು ಕ್ಷೇತ್ರದಲ್ಲಿ ಯುವಕರು ಹಿರಿಯರ ಮಧ್ಯೆ ತನ್ನದೆಯಾದ ಸ್ಥಾನವನ್ನ ಡಾ.ಶೈಲೆಂದ್ರ ಬೆಲ್ದಾಳೆ ನಿರ್ಮಿಸಿಕೊಂಡಿದ್ದಾರೆ. ಕ್ಷೇತ್ರದ ಎಲ್ಲಾ ವರ್ಗದವರಲ್ಲೂ ಅವರು ಹಮಾರಾ ಬೆಲ್ದಾಳೆ ಅನ್ನೊ ಹಾಗೆ ಗುರುತಿಸಿಕೊಂಡಿದ್ದಾರೆ. ಇವರ ಈ ಜನ ಪರ ಒಲವು ,ಜನರ ಮಧ್ಯೆ ಅವರ ಬೆರೆಯುವಿಕೆ ಜನ ಸಾಮಾನ್ಯರ ಕಾರ್ಯಕ್ರಮದಲ್ಲಿ ಭಾಗಿಯಾಗುವಿಕೆ ಈ ಸಲ ಅವರನ್ನ ಶಾಸಕರನ್ನಾಗಿ ಮಾಡಿದ್ದರ್ರೆ ಅಶ್ಚರ್ಯ ಇಲ್ಲ.

ಜೆಡಿಎಸ್ ಅಭ್ಯರ್ಥಿ

ಬಂಡೆಪ್ಪಾ ಕಾಶಂಪುರ್, ಮಾಜಿ ಸಚಿವರು

ಹೌದು ಈ ಬಾರಿ ಮತ್ತೆ ಮಾಜಿ ಸಚಿವರಾಗಿರೋ ಬಂಡೆಪ್ಪ ಕಾಶಂಪುರ್ ಅವ್ರು ಜೆಡಿಎಸ್ ನಿಂದ ಕಣಕ್ಕಿಳಿತಾರೆ. ಆದ್ರೆ ಬಂಡೆಪ್ಪಾ ಕಾಶಂಪೂರ್ ತಮ್ಮನ್ನ ತಾವು ರಾಜ್ಯ ಲೀಡರ್ ಅಂತಾ ಗುರುತಿಸಿಕೊಳ್ಳೋದರಲ್ಲೆ ಕ್ಷೇತ್ರದಿಂದ ದೂರಾದವರು. ಅವರ್ರು ಬೀದರ್ ಟೂ ಬೆಂಗಳೂರು ಓಡಾಟದಲ್ಲೆ ಕಾಲ ಕಳೆದಿದ್ದೆ ಹೆಚ್ಚು. ಈಗ ಕ್ಷೇತ್ರಕ್ಕೆ ಬಂದ್ರು ಜನರು ಅವರನ್ನ ಸ್ವೀಕರಿಸುವ ಹಂತದಲ್ಲಿ ಇಲ್ಲ. ಹಿಂದೆ ಎಲ್ಲಾ ವರ್ಗದ ಲೀಡರ್ ಆಗಿದ್ದ ಬಂಡೆಪ್ಪಾ ಕಾಶಂಫುರ್ ಇಗ ಕುರುಬ ಮುಖಂಡರು ಅನ್ನೋ ಮಟ್ಟಕ್ಕೆ ಮಾತ್ರ ಸಿಮೀತವಾಗಿದ್ದಾರೆ. ಹೀಗಾಗಿ ಕಳೆದ ಸಲ ಪಡೆದ ಮತಗಳನ್ನು ಈ ಸಲ ಪಡೆಯುವುದು ಅನುಮಾನ.

ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಸುಮಾರು 19500 ಮತದಾರರಿದ್ದಾರೆ. ಇನ್ನು ಕ್ಷೇತ್ರದ ಬಗ್ಗೆ ಹೇಳೋದಾದ್ರೆ  ಇದು ಮೊದಲಿನ ಕ್ಷೇತ್ರವಾಗಿ ಉಳಿದಿಲ್ಲ.ಇಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಪ್ರಚಾರಕ್ಕೆ ಬಂದ್ರೆ ಈ ಕ್ಷೇತ್ರದಲ್ಲಿ ಜನ ಸಾಗರವೇ ಹರಿದು ಬರುತ್ತೆ. ಜೊತೆಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿಎಸ್ ವೈ ಪ್ರಚಾರಕ್ಕೆ ಬಂದ್ರೆ ಕ್ಷೇತ್ರದ ಮತಗಳು ಬಿಜೆಪಿಯತ್ತ ವಾಲತ್ತೆ. ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದಲ್ಲಿ ಬಿಜೆಪಿ ಗ್ರೌಂಡ್ ಲೆವೆಲ್ ನಲ್ಲೂ ತನ್ನ ಬೇರುಗಳನ್ನ ಗಟ್ಟಿಗೊಳಿಸಿದೆ.ಅದೇ ರೀತಿ ಈ ಸಲ ಕಾಂಗ್ರೆಸ್ ಕೂಡಾ ಕ್ಷೇತ್ರವನ್ನ ಹಗುರುವಾಗಿ ಪರಿಗಣಿಸಿಲ್ಲ ಅದು ದಿ.ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಅಳಿಯ ಚಂದ್ರಾಸಿಂಗ್ ಅವರನ್ನ ಕಣಕ್ಕಿಳಿಸಿ ಅವರ ಪರವಾಗಿ ಪ್ರಚಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯಾ ಬಂದ್ರೆ ಇಲ್ಲಿನ ಕುರುಬ ಮತಗಳು ವಿಭಜನೆಯಾಗುವುದರಲ್ಲಿ ಅನುಮಾನವಿಲ್ಲ. ಇದು ಕುರುಬ ಮತಗಳ ಮೇಲೆ ಕಣ್ಣಿಟ್ಟಿರುವ ಜೆಡಿಎಸ್ ಗೆ ದೊಡ್ಡ ಹೊಡೆತವಾಗಲಿದೆ. ಹಾಗಾಗಿ ಈ ಸಲದ ಚುನಾವಣೆಯಲ್ಲಿ ಕಾಂಗ್ರೆಸ್ ಎರಡನೆ ಸ್ಥಾನಕ್ಕೆ ಬಂದ್ರೆ ಅದೊಂದು ದೊಡ್ಡ ಸಾಧ್ಯನೆಯಾಗಲಿದೆ. ಕ್ಷೇತ್ರದ ಜನರ ಮಧ್ಯೆ ಬಿಜೆಪಿ ಹವಾ ಜೊರಾಗಿಯೇ ಇರೋದ್ರಿಂದ ಡಾ.ಶೈಲೇಂದ್ರ ಬೆಲ್ದಾಳೆ ಗೆದ್ದು ಶಾಸಕರಾಗುವ ಸಾಧ್ಯತೆ ಹೆಚ್ಚಾಗಿದೆ.

 

ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಹೊಸ ಬೆಳವಣಿಗೆಗಳು ನಡೀತಾನೇ ಇವೆ. ಹಾಲಿ ಶಾಸಕ ಅಶೋಕ್ ಖೇಣಿ ಕಾಂಗ್ರೆಸ್ ನಿಂದ ಸ್ಪರ್ಧಿಸ್ತಾರೆ,ಅನ್ನೋ ಮಾತು ಜೋರಾಗಿದೆ. ಆದ್ರೆ ಶಾಸಕರಿಗೆ ಕಾರ್ಯಕರ್ತರ ಬಲ ಇಲ್ಲದೆ ಇರೋದು ಕೂಡಾ ಅಷ್ಟೇ ಸತ್ಯ.ಹಾಗಾಗಿ ಕೈ ಟಿಕೆಟ್ ಸಿಗತ್ತೆ ಅಂತಾನೇ ಹೇಳಕ್ಕಾಗಲ್ಲ. ಒಂದ್ವೇಳೆ ಕೈ ಟಿಕೆಟ್ ಸಿಗದೆ ಕಳೆದ ಬಾರಿಯಂತೇ ಕರ್ನಾಟಕ ಮಕ್ಕಳ ಪಕ್ಷದಿಂದ ಸ್ಪರ್ಧಿಸಿದ್ರೂ ಕೂಡಾ ಬಿಜೆಪಿ ಮತ್ತು ಕಾಂಗ್ರೆಸ್ ಜೆಡಿಎಸ್ ನಿಂದ ಬೇಸತ್ತವರೆ ಇವ್ರಿಗೆ ಮತ ಹಾಕ್ತಾರೆ ಅಷ್ಟೇ. ಆದ್ರೆ ಶಾಸಕರಾಗಿ ಅವ್ರು ವಿಫಲರಾಗಿರೋ ಕಾರಣ ಅದರ ಸಾಧ್ಯತೆನೂ ಕಡಿಮೆ..ಸಧ್ಯಕ್ಕೆ ಕ್ಷೇತ್ರದಲ್ಲಿ ಬಿಜೆಪಿಯ ಡಾ.ಶೈಲೆಂದ್ರ ಬೆಲ್ದಾಳೆ ತನ್ನದೆ ಆದಾ ಹವಾ ಕ್ರಿಯೆಟ್ ಮಾಡಿರೋದ್ರಿಂದ ಬಿಜೆಪಿಯ ಬೆಲ್ದಾಳೆ ಇಲ್ಲಿ ಗೆಲ್ಲೋ ಚಾನ್ಸಸ್ ಜಾಸ್ತಿ ಇದೆ ಅಂತಿದ್ದಾರೆ ಇಲ್ಲಿನ ಮತದಾರರು.