ಚುನಾವಣಾ ಕುರುಕ್ಷೇತ್ರ 2018 – ಬೀಳಗಿ

ಬೀಳಗಿ ವಿಧಾನಸಭಾ ಕ್ಷೇತ್ರ

ನಾವು ಹೇಳೋದಕ್ಕೆ ಹೊರಟಿರೋ ಕ್ಷೇತ್ರ ಬಾಗಲಕೋಟೆ ಜಿಲ್ಲೆಯ ಬೀಳಗಿ ವಿಧಾನಸಭಾ ಕ್ಷೇತ್ರದ ಬಗ್ಗೆ. ಸದ್ಯ ಕಾಂಗ್ರೆಸ್ ವಶದಲ್ಲಿರೋ ಈ ಕ್ಷೇತ್ರದಲ್ಲಿ ಆಗಿರೋ ಬೆಳವಣಿಗೆಗಳೇನು. ಈ ಬಾರಿ ಇಲ್ಲಿನ ಮತದಾರ ಯಾರತ್ತ ಚಿತ್ತ ಹರಿಸಿದ್ದಾನೆ ಅನ್ನೋದ್ರ ಬಗೆಗಿನ ಗ್ರೌಂಡ್ ರಿಯಾಲಿಟಿ ಇಲ್ಲಿದೆ ನೋಡಿ.

ಬೀಳಗಿ ವಿಧಾನಸಭಾ ಕ್ಷೇತ್ರ. ಬಾಗಲಕೋಟೆ ಜಿಲ್ಲೆಯ ಈ ಕ್ಷೇತ್ರ ಈ ಬಾರಿ ರಾಜಕೀಯವಾಗಿ ತೀವ್ರ ಕುತೂಹಲ ಕೆರಳಿಸಿದೆ. ಇನ್ನು ಈ ಕ್ಷೇತ್ರವನ್ನು ಕೋಟ್ಯಾಧೀಶರೇ ಅಖಾಡಕ್ಕಿಳಿಯುವ ಕ್ಷೇತ್ರ ಅಂತಾನೂ ಕರಿತಾರೆ. ಇಲ್ಲಿ ಪಕ್ಷಕ್ಕಿಂತ ಹೆಚ್ಚಾಗಿ ವಯ್ಯಕ್ತಿಕ ವರ್ಚಸ್ಸು ನೋಡಿ ಜನ ಮತ ಚಲಾಯಿಸ್ತಾರೆ. ಸದ್ಯ ಕಾಂಗ್ರೆಸ್ ನ ಜೆಟಿ ಪಾಟೀಲ್ ಇಲ್ಲಿನ ಶಾಸಕರಾಗಿದ್ದು ಈ ಬಾರಿ ಇಲ್ಲೇನಾಗತ್ತೆ ಅನ್ನೋ ಕುತೂಹಲ ರಾಜ್ಯದ ಜನರಿಗಿದೆ. ಈ ಹಿಂದೆ ರಾಜಕೀಯ ಜಿದ್ದಾ ಜಿದ್ದಿಗೆ ಕಾರಣವಾಗಿದ್ದ ಈ ಕ್ಷೇತ್ರದಲ್ಲಿ ಈ ಬಾರಿ ಕೂಡಾ ಪ್ರಬಲ ಪೈಪೋಟಿ ನಡೆಯೋದ್ರಲ್ಲಿ ಅನುಮಾನವಿಲ್ಲ. ಇಲ್ಲಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಹೇಳ್ತೀವಿ ಆದ್ರೆ ಅದಕ್ಕೂ ಮೊದಲು 2013ರ ಮತಬರಹ ನೋಡೋಣ.

 

2013ರ ಮತಬರಹ

 

ಇದು2013ರ ಮತಬರಹ. ಕಾಂಗ್ರೆಸ್ ಜೆಟಿ ಪಾಟೀಲ್ 66655 ಮತಗಳನ್ನು ಪಡೆಯೋ ಮೂಲಕ ಗೆದ್ದು ಶಾಸಕರಾದ್ರು. ಮಾಜಿ ಸಚಿವ ಮುರುಗೇಶ್ ನಿರಾಣಿ 55417 ಮತಗಲನ್ನು ಪಡೆದು ಹಿನ್ನಡೆ ಅನುಭವಿಸಿದ್ರು. ಇನ್ನು ಜೆಡಿಎಸ್ ನ ಬಸವನಗೌಡ ನರನಾಡಗೌಡರ್ 20067 ಮತಗದಳನ್ನು ಪಡೆದು ಸೋತ್ರು.

ಕಳೆದ 2013ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜೆ.ಟಿ.ಪಾಟೀಲರು ಗೆಲುವಿನ ನಗೆ ಬೀರಿದ್ದರು  ನಿಜ. ಆದ್ರೆ ಈ ಬಾರಿ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಕ್ಷೇತ್ರದಲ್ಲಿ ಜೆಟಿ ಪಾಟೀಲ್ ಗೆದ್ದ ನಂತರದಲ್ಲಿ ಅವ್ರ ಮೇಲೆ ಅಪಾರ ನಿರೀಕ್ಷೆಗಳನ್ನು ಇಟ್ಕೊಂಡಿದ್ರು. ಆದ್ರೆ ಈ ನಿರೀಕ್ಷೆಗೆ ತಕ್ಕಂತೆ ಪಾಟೀಲರು ಕೆಲ್ಸ ಮಾಡಿಲ್ಲ. ಇನ್ನು ಈಗಾಗಲೇ ಪಾಟೀಲ್ ಅವ್ರ ಮೇಲೆ ಸಾಕಷ್ಟು ಆರೋಪಗಳೂ ಕೂಡಾ ಕೇಳಿ ಬರ್ತಿರೋದ್ರಿಂದ ಜನ ಇವ್ರ ವಿರುದ್ಧ ಅಸಮಾಧಾನ ಹೊಂದಿದ್ದಾರೆ. ಹಾಗಿದ್ರೆ ಇಲ್ಲಿ ಆಡಳಿತ ವಿರೋಧಿ ಅಲೆ ಯಾವ ತರಹ ಇದೆ…ಪ್ರಸ್ತುತ ಯಾರ ಹವಾ ಇದೆ. ಈ ಬಾರಿ ಯಾರು ಕಣಕ್ಕಿಳಿತಾರೆ ಇಲ್ಲಿಂದ ಯಾರು ಗೆಲ್ಲಬಹುದು ಅನ್ನೋದನ್ನು ನೋಡೋಣ ಬನ್ನಿ

ಕೈ ಅಭ್ಯರ್ಥಿ

 

ಜೆಟಿ ಪಾಟೀಲ್, ಶಾಸಕ

ಕಾಂಗ್ರೆಸ್ ನ ಹಾಲಿ ಶಾಸಕ ಜೆಟಿ ಪಾಟೀಲ್ ಈ ಬಾರಿ ಈ ಕ್ಷೇತ್ರದಿಂದ ಕಣಕ್ಕಿಳಿಯೋದು ಗ್ಯಾರಂಟಿ. ಮೊನ್ನೆ ನಡೆದ ಕಾಂಗ್ರೆಸ್ ಸಾಧನಾ ಸಮಾರಂಭದ ವೇಳೆ ಸಿಎಂ ಸಿದ್ದಾರಾಮಯ್ಯನವರು ಜೆ.ಟಿ ಪಾಟೀಲರಿಗೆ ಮತಗಳನ್ನ ನೀಡಿ ಎಂದು ಹೇಳುವ ಮೂಲಕ ಇವರೇ ಅಭ್ಯರ್ಥಿ ಎಂಬುದನ್ನ ಘೋಷಿಸಿ ಹೋಗಿದ್ದಾರೆ ಇದರಿಂದ ಜೆ.ಟಿ,ಪಾಟೀಲರೇ ಅಭ್ಯರ್ಥಿ ಎಂಬುದು ಖಚಿತವಾಗಿದೆ. ಆದ್ರೆ ಈ ಬಾರಿ ಜೆಟಿ ಪಾಟೀಲರಿಗೆ ಗೆಲುವು ಕಷ್ಟ. ಯಾಕಂದ್ರೆ ಇಲ್ಲಿ ಆಡಳಿತ ವಿರೋಧಿ ಅಲೆ ದೊಡ್ಡ ಮಟ್ಟದಲ್ಲಿ ಇದೆ. ಜತೆಗೆ ಜೆಟಿ ಪಾಟೀಲ್ ಮೇಲೆ ಒಂದಷ್ಟು ಸುದ್ದಿಯ ಸದ್ದು  ಕೇಳಿಬರ್ತಿದೆ. ಎಲೆಕ್ಷನ್ ಹೊತ್ತಲ್ಲೇನಾದ್ರೂ ಅದು ಸಿಡಿದ್ರೆ ಅವ್ರಿಗೆ ಈ ಬಾರಿ ದೊಡ್ಡ ಹೊಡೆತವನ್ನೇ ಕೊಡಬಹುದು. ಇನ್ನು ಶಾಸಕರಾಗಿದ್ದುಕೊಂಡು ಏನು ಮಾಡಿದ್ದಾರೆ ಅತಾ ಕೇಳಿದ್ರೆ ಮುರುಗೇಶ್ ನಿರಾಣಿ ಅವ್ರು ಸಚಿವರಾಗಿದ್ದಾಗ ಇಲ್ಲಿ ಆಗಿದ್ದ ಅಭಿವೃದ್ಧಿ ಕೆಲ್ಸಗಳು ಬಿಟ್ರೆ ಆ ನಂತ್ರ ಇಲ್ಲಿನ ಜನ ಅಭಿವೃದ್ದಿಯನ್ನು ನೋಡೇ ಇಲ್ಲ. 32 ಕೋಟಿಯ ಕುಡಿಯೋ ನೀರಿನ ಸ್ಕೀಮ್ ನ್ನು ಶಾಸಕರು ಮುಂದುವೆರೆಸಿಲ್ಲ, 52000 ಎಕರೆ ಲಿಫ್ಟ್ ಇರಿಗೇಶನ್  ಮಂಜೂರಾಗಿತ್ತು ಅದ್ರಲ್ಲಿ ಕೇವಲ20000 ಎಕರೆಗೆ ಮಾತ್ರ ಆಗಿದೆ. ಅನಗವಾಡಿ ಕೆರೆ ಮತ್ತು ಬೀಳಗಿ ಕೆರೆ ತುಂಬಿಸುವ ಯೋಜನೆ ಹಳ್ಳ ಹಿಡಿದಿದೆ. ಎಲ್ಲಕ್ಕಿಂತ ಹೆಚ್ಚಾಗಿ ಬಿಜೆಪಿ ಅಧಿಕಾರದಲ್ಲಿದ್ದಾಗ ಮಾಡಿದ್ದ ಜನ ಪರ ಯೋಜನೆಯನ್ನೂ ಇವ್ರು ಕಂಟಿನ್ಯೂ ಮಾಡಿಲ್ಲ. ಅದಕ್ಕೆ ಅಡ್ಜಡಗಾಲು ಹಾಕಿದ್ದಾರೆ. ಇನ್ನು ನಿರಾಣಿ ಇರುವಾಗ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಒತ್ತು ಕೊಟ್ಟಿದ್ರು. ಅದರಂತೆ ಪಾಲಿಟೆಕ್ನಕ್ ಬಿಲ್ಡಿಂಗ್ ಕೂಡಾ ಆಗಿತ್ತು. ಆದ್ರೆ ಎಲ್ಲಿ ಅದರ ಕ್ರೆಡಿಟ್ ನಿರಾಣಿ ಅವ್ರಿಗೆ ಹೋಗತ್ತೆ ಅಂತಾ ಅದನ್ನು ಇನ್ನೂ ಓಪನ್ ಮಾಡಿಲ್ಲ. ಶಾಸಕರೂ ಕೂಡಾ ಶಿಕ್ಷಣಕ್ಕೆ ಸಂಬಂಧಿಸಿದಂತೆ ಏನೂ ಮಾಡಿಲ್ಲ. ಇನ್ನು ಇಲ್ಲಿನ ಜನ ಮರಳು ಸಿಗದೇ ಒದ್ದಾಡ್ತಿದ್ದಾರೆ. ಅಕ್ಕ ಪಕ್ಕದ ಕ್ಷೇತ್ರಗಳಲ್ಲಿ ಮರಳು ಸಿಕ್ಕಿದ್ರೂ ಇಲ್ಲಿ ಸಿಕ್ತಿಲ್ಲಾ ಕಾರಣ ಶಾಸಕರು ಮರಳು ದಂಧೆಗೆ ಬೆಂಗಾವಲಾಗಿ ನಿಂತಿದ್ದಾರೆ ಅಂತಾ ಜನ ಹೇಳ್ತಿದ್ದಾರೆ. ಕೆಲ್ಸ ಮಾಡದೇ ಇದ್ರೂ ಕೂಡಾ ಜೆಟಿ ಪಾಟೀಲರು ಮತದಾರರ ಬಳಿ ಹೋಗಿ ತನಗೆ ಮತ ಹಾಕಬೇಕು ಅಂತಾ ಆಣೆ ಪ್ರಮಾಣ ಮಾಡಿಸ್ತಿದ್ದಾರೆ. ಈ ಎಲ್ಲಾ ಕಾರಣಗಳಿಂದ ಜೆಟಿ ಪಾಟೀಲ್ ಬಹುತೇಕ ಈಗಾಗಲೇ ಸೋತಿದ್ದಾರೆ ಅಧಿಕೃತವಾಗಿ ಅದು ಎಲೆಕ್ಷನ್ ನಲ್ಲಿ ಗೊತ್ತಾಗತ್ತೆ ಅಂತಾರೆ ಇಲ್ಲಿನ ಮತದಾರರು. ಇನ್ನು ಈ ಹಿಂದೆ ಜೆ.ಟಿಪಾಟೀಲರು ತಮ್ಮ ಆಪ್ತರ ಬಳಿ 2013ರ ಚುನಾವಣೆ ಕೊನೆಯ ಚುನಾವಣೆ ಎಂದು ಹೇಳಿಕೊಂಡಿದ್ದರಂತೆ. ಆ ಪ್ರಕಾರ ಜೆ.ಟಿ.ಪಾಟೀಲರು ಚುನಾವಣೆಯಿದ ಹಿಂದೆ ಸರಿದರೆ ಬಸವಪ್ರಭು ಸರನಾಡಗೌರಡು ಅಭ್ಯರ್ಥಿ ಎಂದು ಹೇಳಲಾಗುತ್ತಿತ್ತು. ಆದ್ರೆ ಮೊನ್ನೆ  ಸಿಎಂ  ಹೇಳಿದ ಹಾಗೇ  ಆದ್ರೆ ಜೆ.ಟಿ.ಪಾಟೀಲರಿಗೆ ಟಿಕೆಟ್ ಎಂಬುದು ಧೃಢವಾಗಿದ್ದು ಜೆ.ಟಿಪಾಟೀಲರು ತಯಾರಿ ಆರಂಭಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ

ಯಸ್ ಬಿಜೆಪಿಯಿಂದ ಇಲ್ಲಿ ಕಣಕ್ಕಿಳಿಯೋದು ಒನ್ ಎಂಡ್ ಓನ್ಲಿ ಮಾಜಿ ಸಚಿವ ಮುರುಗೇಶ್ ನಿರಾಣಿ. ಇವ್ರು ತಾವು ಸಚಿವರಾಗಿದ್ದಾಗ ಈ ಕ್ಷೇತ್ರದಲ್ಲಿ ಮಾಡಿರೋ ಕೆಲ್ಸಗಳೇ ಇವರ ಕೈ ಹಿಡಿಯತ್ತೆ. ತಾವು ಸಚಿವರಾಗಿದ್ದಾಗ ಕ್ಷೇತ್ರಕ್ಕೆ ಸಲ್ಲಿಸಿರೋ ಸೇವೆಯನ್ನ ಇವ್ರು ಜನರ ಮುಂದಿಡ್ತಾರೆ. ಅಲ್ಲದೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರೋ ಕಾರಣ ಅದರ ಸಾಧನೆಗಳು ಹಾಗೂ ಮೋದಿ ಅಲೆ ಇಲ್ಲಿ ವರ್ಕೌಟ್ ಆಗತ್ತೆ. ಬಿಜೆಪಿ ಸರ್ಕಾರದಲ್ಲಿದ್ದಾಗ ನಿರಾಣಿ ಅವ್ರು ಮಿನಿಸ್ಟರ್ ಆಗಿದ್ರು. ಈ ಬಾರಿ ಗೆದ್ರೆ ಮತ್ತೊಮ್ಮೆ ಸಚಿವರಾಗ್ತಾರೆ ಅದು ಇಲ್ಲಿನ ಅಭಿವೃದ್ಧಿಗೆ ಪೂರಕವಾಗತ್ತೆ ಅನ್ನೋದು ಇಲ್ಲಿನ ಜನರ ನಂಬಿಕೆ. ಈ ಹಿಂದೆ ಸಚಿವರಾಗಿದ್ದಾಗ ಹೇಗೆ ಅಭಿವೃದ್ಧಿ ಮಾಡಿದ್ರೋ ಅದೇ ತರಹ ಶಿಕ್ಷಣ, ನೀರಾವರಿ ಇನ್ನಿತರ ಕ್ಷೇತ್ರಗಳಲ್ಲಿ ಅಭಿವೃದ್ಧಿ ಮಾಡ್ತಾರೆ ಅನ್ನೋ ನಂಬಿಕೆ ಜನ್ರಲ್ಲಿದೆ. ಇನ್ನು ಈ ಹಿಂದೆ ಆಲಮಟ್ಟಿ  ಬ್ಯಾಕ್ ವಾಟರ್ ನಲ್ಲಿ ಸುಮಾರು 125000 ಎಕರೆ ಭೂಮಿ ಕಳೆದುಕೊಂಡವರಿಗೆ ಪರಿಹಾರ ಕೊಡೋವಾಗ 30 ಲಕ್ಷ ಕೊಡಬೇಕು ಅಂತಾ ಭೂಮಿ ಕಳೆದುಕೊಂಡವರು ಪ್ರತಿಭಟನೆ ಮಾಡ್ತಿದ್ರು. ಆಗ ನಿರಾಣಿ ಅವ್ರು 15 ಲಕ್ಷ ಕೊಡೋದಕ್ಕೆ ಒಪ್ಪಿಕೊಂಡಿದ್ರು ಬಿಜೆಪಿ ಅಧಿಕಾರದಲ್ಲಿದ್ದಾಗ. ಆದ್ರೆ ಜೆಟಿ ಪಾಟೀಲ್ ಶಾಸಕರಾದ ಮೇಲೆ ಕೇವಲ 6 ಲಕ್ಷ ಕೊಡ್ಟಿದ್ದಾರೆ. ಹಾಗಾಗಿ ಮತ್ತೆ ನಿರಾಣಿ ಅವ್ರು ಬಂದ್ರೆ ತಮಗೆ ಜಾಸ್ತಿ ಪರಿಹಾರ ಸಿಗಬಹುದು ಅನ್ನೋ ನಂಬಿಕೆ ಇದೆ. ಹಾಗಾಗಿ ಮತ್ತೆ ಮುರುಗೇಶ್ ನಿರಾಣಿ ಅವ್ರನ್ನು ಇಲ್ಲಿನ ಜನ ಆರಿಸೋದ್ರಲ್ಲಿ ಅನುಮಾನ ಇಲ್ಲ.

ತೆನೆ ಹೊರೋದ್ಯಾರು?

ಪರಮರಾಮಾರೂಢ ಸ್ವಾಮೀಜಿ , ಆಕಾಂಕ್ಷಿ

ಈ ಹಿಂದೆ ತಾನು ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿ ಎಂದು ಚುನಾವಣೆ ಪ್ರಚಾರಕ್ಕೆ ಇಳಿದಿದ್ದ ಬಾಗಲಕೋಟೆಯ ಪರಮರಾಮಾರೂಢ ಮಠದ,  ಪರಮರಾಮಾರೂಢ ಸ್ವಾಮೀಜಿ ಈಗ ಜೆಡಿಎಸ್ ನಿಂದ ಗುರ್ತಿಸಿಕೊಂಡಿದ್ದು ಜೆಡಿಎಸ್ ಅಭ್ಯರ್ಥಿ ತಾವೇ ಎಂದು ಸ್ವಯಂ ಘೋಷಿಸಿಕೊಂಡು ಚುನಾವಣಾ ತಯಾರಿಯಲ್ಲಿ ತೊಡಗಿದ್ದಾರೆ. ಒಂದು ವೇಳೆ ಜೆಡಿಎಸ್ ಪರಮರಾಮಾರೂಢ ಶ್ರೀಗಳಿಗೆ ಟಿಕೆಟ್ ಕೊಟ್ಟರೆ ಸ್ವಮೀಜಿಯೊಬ್ಬರು ಈ ಕ್ಷೇತ್ರದಿಂದ ಸ್ಪರ್ಧಿಸಿದಂತಾಗುತ್ತದೆ.ಸಹಜವಾಗಿ ಇದರಿಂದ ಇದು ರಾಜ್ಯದ ಗಮನ ಸೆಳೆಯಲಿದೆ. ಇವ್ರ ಜತೆಗೆ ಬೀಳಗಿ ಕ್ಷೇತ್ರದಲ್ಲಿ ಜೆಡಿಎಸ್ ಆಕಾಂಕ್ಷಿಗಳ ಪಟ್ಟಿ ಇದ್ದು ಈ ಟಿಕೆಟ್ ಪೈಪೋಟಿಯಲ್ಲಿ ಯಾರಿಗೆ ಟಿಕೆಟ್ ಸಿಗತ್ತೆ ಕಾದುನೋಡಬೇಕು

ಒಟ್ನಲ್ಲಿ ಒಟ್ಟು 289206 ಮತದಾರರಿರೋ ಈ ಕ್ಷೇತ್ರದಲ್ಲಿ ಮುರುಗೇಶ್ ನಿರಾಣಿ ತಮ್ಮ ಪ್ರಭಾವ ಬೀರೋರುದ ನಿಜ. ಅಷ್ಟೇ ಅಲ್ಲ ಬಿಜೆಪಿ ಹೈ ಕಮಾಂಡ್ ನಡೆಸಿದ ಸರ್ವೆಯಲ್ಲೂ ಕೂಡಾ ನಿರಾಣಿಯವರೇ ಇಲ್ಲಿಂದನಿಂತ್ರೆ ಗೆಲ್ತಾರೆ ಅಂತಾ ಹೇಳಿವೆಯಂತೆ.ಹಾಗಾಗಿ ನಿರಾಣಿ ಗೆಲ್ಲೋದ್ರಲ್ಲಿ ಅನುಮಾನ ಇಲ್ಲ.ಇನ್ನು ಈ ಕ್ಷೇತ್ರ ಗಾಣಿಗ ಸಮಾಜದ ಪ್ರಾಭಲ್ಯ ಇರುವ ಕ್ಷೇತ್ರ.ಇದು ನಂಜುಡ್ಡಪ್ಪ ವರದಿಯ ಪ್ರಕಾರ ಅತೀ ಹಿಂದುಳಿದ ಕ್ಷೇತ್ರ .ಆದ್ರೆ ಇತ್ತೀಚಿಗೆ ನೀರಾವರಿ ಪ್ರದೇಶದಿಂದ ಕಬ್ಬು ಬೆಳೆಗಾರರ ಸಂಖ್ಯೆ ಏರಿಕೆಯಾಗಿ ಸೂಕ್ತ ಆರ್ಥೀಕ ಸ್ಥಿತಿಗತಿಯಲ್ಲಿರುವ ಕ್ಷೇತ್ರ. ಇಲ್ಲಿ ಹಣಬಲ,ಜಾತಿ ಬಲ ವರ್ಕೌಟ ಆಗುತ್ತೆ ಎನ್ನಲಾಗುತ್ತಿದೆ. ಈ ಬಾರಿ ಚುನಾವಣಾ ಸಂದರ್ಭದಲ್ಲಿ ರಾಜಕೀಯ  ದ್ವೇಷದಿಂದ ಅಭ್ಯರ್ಥಿಗಳು ಪರಸ್ಪರ ಕೆಸರೆರಚಾಟದಲ್ಲಿ ವೈಯಕ್ತಿಯ ವಿಚಾರಗಳನ್ನು ಸ್ಪೋಡಿಸ ಬಹುದು ಎನ್ನಲಾಗುತ್ತಿದೆ.ಇದರಿಂದ ಈ ಕ್ಷೇತ್ರ ಭಾರಿ ಕೂತೂಹಲವನ್ನ ಕೆರಳಿಸಿದ್ದು. ಚುನಾವಣೆಯ ವೇಳೆ ಯಾವೆಲ್ಲ ಬದಲಾವಣೆಗಳಾಗುತ್ತವೆ ಎನ್ನುವುದು ಮಾತ್ರ ಇನ್ನೂ ನಿಗೂಢ. ಇನ್ನು ವೀರಶೈವ-ಲಿಂಗಾಯತರ ಒಳಪಂಗಡ ಮತಗಳು ಇಲ್ಲಿ ಗುಪ್ತಗಾಮಿನಿಯಾಗಿ ಕೆಲಸಮಾಡಲಿದ್ದು ರಿಸಲ್ಟ್ ಗೆ ಬಿಗ್ ಟ್ವಿಸ್ಟ್ ಕೊಡೋದು ಖಂಟಿತಾ ಎನ್ನುವುದು ರಾಜಕೀಯ ಪಂಡಿತರ ಲೆಕ್ಕಾಚಾರ.

ಬೀಳಗಿ ವಿಧಾನಸಬಾ ಕ್ಷೇತ್ರದಲ್ಲಿ ಈ ಬಾರಿ ಮಾಜಿ ಸಚಿವ ಮುರುಗೇಶ್ ನಿರಾಣಿ ನಿರಾಯಾಸವಾಗಿ ಗೆಲ್ಲೋ ಸಾಧ್ಯತೆಗಳು ಕಾಣಿಸ್ತಿವೆ. ಜೆಟಿ ಪಾಟೀಲ್ ಅವ್ರ ಮೇಲೆ ಇರೋ ಆರೋಪಗಳು, ಹಾಗೂ ಅವ್ರಾಗೇ ಮಾಡಿಕೊಂಡಿರೋ ಸ್ವಯಂಕೃತಾಪರಾಧಗಳು ಎಲೆಕ್ಷನ್ ಟೈಮ್ ನಲ್ಲಿ ಬೃಹದಾಕಾರವಾಗಿ ನಿಂತು ಡ್ಯಾಮೇಜ್ ಮಾಡೋದಂತೂ ಗ್ಯಾರಂಟಿ. ಹಾಗಾಗಿ ಬೀಳಗಿ ಕ್ಷೇತ್ರದಲ್ಲಿ ಒನ್ ಸೈಡ್ ಮ್ಯಾಚ್ ತರಹ ನಿರಾಣಿ ಯಾವ ಕಷ್ಟನೂ ಇಲ್ಲದೆ ಅದ್ಭುತ ಗೆಲುವು ಸಾಧಿಸೋ ಹಾಗೇ ಕಾಣಿಸ್ತಿದೆ

ಪ್ರತ್ಯುತ್ತರ ನೀಡಿ

Please enter your comment!
Please enter your name here