ಚುನಾವಣಾ ಕುರುಕ್ಷೇತ್ರ 2018 – ಬೊಮ್ಮನಹಳ್ಳಿ (ಬೆಂಗಳೂರು)

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ

ಇವತ್ತು ನಾವು ಕುರುಕ್ಷೇತ್ರದಲ್ಲಿ ಹೇಳ್ತಿರೋ ಕ್ಷೇತ್ರ ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರ. ಸತತ ಎರಡು ಬಾರಿ ಇಲ್ಲಿ ಗೆದ್ದು ಶಾಸಕರಾಗಿರೋ ಸತೀಶ್ ರೆಡ್ಡಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಹಾಗಿದ್ರೆ  ಈ ಬಾರಿ ಇಲ್ಲೇನಾಗತ್ತೆ ಇಲ್ಲಿನ ರಾಜಕೀಯ ಸ್ಥಿತಿಗತಿ ಏನು ನೋಡೋಣ ಬನ್ನಿ.

ಬೊಮ್ಮನ ಹಳ್ಳಿ ವಿಧಾನಸಬಾ ಕ್ಷೇತ್ರ. ಬೆಂಗಳೂರಿನ ಪ್ರತಿಷ್ಟಿತ ಕ್ಷೇತ್ರಗಳಲ್ಲಿ ಒಂದು. 2008ರಲ್ಲಿ ದೇಶದ ಅತಿ ದೊಡ್ಡ ವಿಧಾನ ಸಭಾ ಕ್ಷೇತ್ರವಾಗಿದ್ದ ಉತ್ತರಹಳ್ಳಿ ವಿಧಾನ ಸಭಾ ಕ್ಷೇತ್ರ ಪುನರ್ ವಿಂಗಡಣೆ ಆಯ್ತು. ಆಗ ರೂಪುಗೊಂಡಿದ್ದ ಕ್ಷೇತ್ರ ಬೊಮ್ಮನ ಹಳ್ಳಿ ವಿಧಾನಸಭಾ ಕ್ಷೇತ್ರ. ಇಲ್ಲಿ ಪ್ರತಿಷ್ಠಿತ ಕೈಗಾರಿಕೆಗಳು, ಪ್ರತಿಷ್ಠಿತ ಬಡಾವಣೆಗಳು ಕ್ಷೇತ್ರದಲ್ಲಿ ಇವೇ. ಇಲ್ಲಿ ಗಾರ್ಮೆಂಟ್ಸ್ ಸೇರಿದಂತೆ ನೌಕರ ವರ್ಗದವರೇ ಜಾಸ್ತಿ ಇದ್ದಾರೆ. ಇನ್ನು ತಮಿಳು,ಮಲಯಾಳಂ, ತೆಲುಗು ಭಾಷಿಕರು ಸೇರಿದಂತೆ ಉತ್ತರ ಭಾರತದಿಂದ ಅಂದ್ರೆ ಹೊರ ರಾಜ್ಯ, ಹೊರ ಜಿಲ್ಲೆಗಳಿಂದ ಕೆಲಸ ಹುಡುಕಿಕೊಂಡು ಬಂದು ಈ ಕ್ಷೇತ್ರದಲ್ಲಿ ಬಾಡಿಗೆ ಮನೆಗಳನ್ನು ಮಾಡಿಕೊಂಡು ಜೀವನ ನಡೆಸುತ್ತಿರುವವರೆ ಹೆಚ್ಚಾಗಿದ್ದಾರೆ. ಸದಾ ಜನಜಂಗುಳಿಯಿಂದಲೆ ತುಂಬಿರೋ ಈ ಕ್ಷೇತ್ರದಲ್ಲಿ ಪ್ರಮುಖವಾಗಿ ನಡೆಯುವುದೆಂದರೆ ರೀಯಲ್​ ಎಸ್ಟೇಟ್​​ ಉದ್ಯಮ. ಇಲ್ಲಿನ ವಿಧಾನ ಸಭಾ ಕ್ಷೇತ್ರದ ಚುನಾವಣೆಯಲ್ಲಿ ಗೌಡ ಮತ್ತು ಎಸ್​​ ಸಿ ಎಸ್​​ ಟಿ ಸಮುದಾಯಗಳ ಮತಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಕ್ಷೇತ್ರ ರೂಪಿತವಾದ ನಂತರದಲ್ಲಿ ಅಂದ್ರೆ 208 ಹಾಗೂ 2013ರಲ್ಲಿ ನಡೆದ 2 ಚುನಾವಣೆಯಲ್ಲೂ ಕೂಡಾ ಬಿಜೆಪಿಯ ಸತೀಶ್ ರೆಡ್ಡಿಯವರೇ ಇಲ್ಲಿ ಗೆದ್ದಿರೋದು ನೋಡಿದ್ರೆ ಯಾರು ಬೇಕಾದ್ರೂ ಹೇಳಬಹುದು ಇದು  ಬಿಜೆಪಿಯ ಭದ್ರ ಕೋಟೆ ಅಂತಾ. ಹಾಗಿದ್ರೆ ಈ ಬಾರಿ ಇಲ್ಲಿನ ರಾಜಕೀಯ ಸ್ಥಿತಿ ಗತಿ ಏನು ಅನ್ನೋದನ್ನು ನೋಡಣ ಆದ್ರೆ ಅದಕ್ಕೂ ಮೊದಲು 2013ರ ಮತಬರಹ ನೋಡೋಣ ಬನ್ನಿ

 

2013ರ ಮತಬರಹ

ಇದು 2013ರ ಮತಬರಹ. ಇದರಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿದ್ದ ಸತೀಶ್ ರೆಡ್ಡಿ 86482 ಮತಗಳನ್ನು ಪಡೆದ್ರು. ಇನ್ನು ಕಾಂಗ್ರೆಸ್ ಅಭ್ಯರ್ಥಿ ನಾಗಭೂಷಣ್​ 60661 ಮತಗಳನ್ನು ಪಡೆದು ಸೋತ್ರು. ಇನ್ನು ಜೆಡಿಎಸ್ ಪಕ್ಷದ ಅಭ್ಯರ್ಥಿ ಆರ್​​ ಶರತ್ ಚಂದ್ರ ಬಾಬು ಕೇವಲ 10611 ಮತಗಳನ್ನಷ್ಟೇ ಪಡೆದ್ರು.

ಬೊಮ್ಮನ ಹಳ್ಳಿ ಕ್ಷೇತ್ರದಲ್ಲಿ ಒಟ್ಟು 323091 ಮತದಾರರಿದ್ದಾರೆ. ಇನ್ನು ಇಲ್ಲಿರೋ ಒಟ್ಟು 9 ಬಿಬಿಎಂಪಿ ವಾರ್ಡ್​​ಗಳಲ್ಲಿ 8 ರಲ್ಲಿ ಬಿಜೆಪಿ ಮತ್ತು 1 ರಲ್ಲಿ ಕಾಂಗ್ರೆಸ್ ಗೆದ್ದಿದೆ. ಹಾಗಾಗಿ ಇದು ಬಿಜೆಪಿ ಪ್ರಾಬಲ್ಯದ ಕ್ಷೇತ್ರ ಅನ್ನೋದ್ರಲ್ಲಿ ಅನುಮಾನ ಇಲ್ಲ. ಅಲ್ಲದೆ ಕಳೆದ ಚುನಾವಣೆಯಲ್ಲಂತೂ ಸತೀಶ್ ರೆಡ್ಡಿ 24 ಸಾವಿರ ಮತಗಳ ಅಂತರದಲ್ಲಿ ಗೆದ್ದಿರೋದು ನೋಡಿದ್ರೆ ಗೊತ್ತಾಗತ್ತೆ ಅವರ ಪ್ರಬಾವ, ವರ್ಚಸ್ಸು ಇಲ್ಲಿ ಹೇಗಿದೆ ಅಂತಾ. ಇನ್ನು  2008 ರಲ್ಲೂ ಕೂಡಾ ಅಷ್ಟೇನೇ ಬಿಜೆಪಿ ಯಿಂದ ಚುನಾವಣೆಗೆ ನಿಂತಿದ್ದ ಸತೀಶ್​​ ರೆಡ್ಡಿ ಭರ್ಜರಿ ಜಯ ಗಳಿಸಿದ್ರು. ಹಾಗಾಗಿ ಈ ಬಾರಿ ಸತೀಶ್ ರೆಡ್ಡಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.ಹಾಗಿದ್ರೆ ಬನ್ನಿ ಈ ಬಾರಿ ಇಲ್ಲಿಂದ ಯಾರ್ಯಾರು ಕಣದಲ್ಲಿರ್ತಾರೆ ಅವ್ರ ಬಲಾಬಲ ಏನು ನೋಡೋಣ

ಬಿಜೆಪಿ ಅಭ್ಯರ್ಥಿ

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ಅಂದ್ರೆ ಅದು ಬಿಜೆಪಿಯ ಅದ್ರಲ್ಲೂ ಹಾಲಿ ಶಾಸಕರಾಗಿರೋ ಸತೀಶ್ ರೆಡ್ಡಿ ಅವ್ರ ಭದ್ರ ಕೋಟೆ. ವಿಧಾನಸಬಾ ಕ್ಷೇತ್ರವಾಗಿ ರೂಪುಗೊಂಡ ಮೇಲೆ ಸತೀಶ್ ರೆಡ್ಡಿಯವರನ್ನು ಇಲ್ಲಿ ಸತತವಾಗಿ 2 ಬಾರಿ ಗೆದ್ದಿರೋದು ನೋಡಿದ್ರೆನೇ ಅದನ್ನು ಹೇಳಬಹುದು. ಇನ್ನು ಸುಮ್ ಸುಮ್ನೇ ಇಲ್ಲಿ ಗೆಲ್ಲೋದಕ್ಕೆ ಸಾಧ್ಯ ಇಲ್ಲ. ಸತೀಶ್ ರೆಡ್ಡಿ ಶಾಸಕರಾಗಿ ಆಯ್ಕೆಯಾದ ಮೇಲೆ ಇಲ್ಲಿ ಮಾಡಿರೋ ಅಭಿವೃದ್ಧಿ ಪೂರಕವಾದ ಕೆಲ್ಸಗಳೇ ಅವ್ರನ್ನು ಇಲ್ಲಿ ಗೆಲ್ಲುವಂತೆ ಮಾಡಿದೆ ಅನ್ನೋದ್ರಲ್ಲಿ ಆಶ್ಚರ್ಯ ಇಲ್ಲ. ಇಲ್ಲಿ ಒಂದು ವಿಚಾರ ಹೇಳಲೇ ಬೇಕು ಇಲ್ಲಿನ ಜನ ಸತೀಶ್ ರೆಡ್ಡಿ ಅವ್ರನ್ನು ಇಷ್ಟ ಪಡೋಕೆ ಕಾರಣ ಇದೆ. ಪುನರ್ವಿಂಗಡಣೆಯಾದ ಕ್ಷೇತ್ರಗಳಲ್ಲಿ ಯಾವ ಕ್ಷೇತ್ರಕ್ಕೂ ಸರಿಯಾಗಿ ಕಾವೇರಿ ನೀರು ತರಕ್ಕಾಗಿಲ್ಲ. ಆದ್ರೆ ಬೊಮ್ಮನ ಹಳ್ಳಿ ಕ್ಷೇತ್ರದಲ್ಲಿ ಪ್ರತಿ ಮನೆ ಮನೆಗೂ ಶಾಸಕರು 2008 ರಿಂದ ನೇ ಕಾವೇರಿ ನೀರು ಬರುವಂತೆ ಮಾಡಿದ್ದಾರೆ. ಇದು ಇಲ್ಲಿನ ಜನರಲ್ಲಿ ಸತೀಶ್ ರೆಡ್ಡಿ ಮೇಲೆ ಒಳ್ಳೆಯ ಅಭಿಪ್ರಾಯ ಬರೋದಕ್ಕೆ ಕಾರಣ. ಇನ್ನು ಇಲ್ಲಿನ ಒಳಚರಂಡಿ ವ್ಯವಸ್ಥೆ, ರಸ್ತೆ ನಿರ್ಮಾಣ, ಎಲ್ಎಂಡ್ ಟಿ ಕಂಪನಿ ಜತೆ ಸೇರಿ ಮಾಡಿರೋ 300 ಕೋಟಿಯ ಅಭಿವೃದ್ಧಿ ಕೆಲ್ಸಗಳ ಬಗ್ಗೆ ಇಲ್ಲಿನ ಜನ ಮಾತಾಡ್ತಾರೆ. ಅಷ್ಟೇ ಅಲ್ಲ ಅಗರಕೆರೆ,ಪುಟ್ಟೇನಹಳ್ಳಿ ಕೆರೆ ಸಾರಕ್ಕಿ ಕೆರೆ, ಹೀಗೇ ಕೆರೆಗಳನ್ನು ಉಳಿಸಲು, ಸ್ವಚ್ಛಗೊಳಿಸಲು ಕೈಗೊಂಡ ಕಾರ್ಯಕ್ರಮಗಳು ಜನಮನ್ನಣೆ ಪಡೆದಿವೆ. ಇದೆಲ್ಲದರ ಜತೆಗೆ ಒಬ್ಬ ಜನ ಪ್ರತಿನಿಧಿಯಾಗದಿ ಸರ್ಕಾರಕ್ಕೆ ಜರಗನ ಹಳ್ಳಿ ಬಳಿ ಸುಮಾರು 100 ಕೋಟಿ ಬೆಲೆ ಬಾಳುವ ಒತ್ತುವರಿಯಾಗಿದ್ದ ಜಮೀನನ್ನು ಉಳಿಸಿಕೊಟ್ಟಿದ್ದಾರೆ. ಇದೆಲ್ಲವೂ ಶಾಸಕರ ಹೆಸರು ಮತ್ತಷ್ಟು ಪ್ರಖ್ಯಾತಿ ಪಡೆಯೋದಕ್ಕೆ ಕಾರಣವಾಗಿದೆ. ಹಾಗೇನೇ ಜೆಡಿ ಮರದಿಂದ ಮೀನಾಕ್ಷಿ ಮಾಲ್ ವರೆಗು ಫ್ಲೈ ಓವರ್, ರಸ್ತೆ ಅಗಲೀಕರಣ ಮಾಡೋದು ಸೇರಿದಂತೆ ಇನ್ನೊಂದಷ್ಚ ಅಭಿವೃದ್ಧಿ ಯೋಜನೆಗಳನ್ನು ಮಾಡಬೇಕು ಅಂತಾ ಶಾಸಕರು ಹೇಳ್ತಿರೋದು ನೋಡಿದ್ರೆ ಈ ಬಾರಿ ಕೂಡಾ ಸುಲಭವಾಗಿ ದೊಡ್ಡ ಅಂತರದಲ್ಲಿ ಸತೀಶ್ ರೆಡ್ಡಿ ಗೆಲ್ತಾರೆ ಅಂತಾ ಇಲ್ಲಿನ ಮತದಾರರೇ ಹೇಳ್ತಿದ್ದಾರೆ.

ಕೈ ಟಿಕೆಟ್ ಆಕಾಂಕ್ಷಿಗಳು

ನಾಗಭೂಷಣ್ ರೆಡ್ಡಿ, ಆಕಾಂಕ್ಷಿ

ಕಳೆದ ಬಾರಿ ಬೊಮ್ಮನಹಳ್ಳಿಯಲ್ಲಿ  ಸತೀಶ್ ರೆಡ್ಡಿ ವಿರುದ್ಧ ನಿಂತು ಸೋತಿದ್ದ ಕಾಂಗ್ರೆಸ್ ನ ನಾಗಭೂಷಣ ರೆಡ್ಡಿ ಅವ್ರು ಈ ಬಾರಿ ಕೂಡಾ ಕಾಂಗ್ರೆಸ್ ನಿಂದ ಕಣಕ್ಕಿಳಿಯೋದಕ್ಕೆ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಮೂಲತಃ ಹೊಂಗಸಂದ್ರದವರಾಗಿದ್ದು ಕ್ಷೇತ್ರದ ಪರಿಚಯ ತುಂಬಾ ಚೆನ್ನಾಗಿದೆ. ಆದ್ರೆ ಈ ಭಾಗದಲ್ಲಿ ಕಾಂಗ್ರೆಸ್ ಪ್ರಬಲವಾಗಿಲ್ಲದೇ ಇರದಕ್ಕೆ ಕಾರಣ ಪಕ್ಷ ಸಂಘಟನೆ ಸರಿಯಾದ ರೀತಿಯಲ್ಲಿ ಆಗದೇ ಇರೋದು. ಹಾಗಾಗಿ ಏನೇ ಆದ್ರೂ ಸತೀಶ್ ರೆಡ್ಜಿ ವಿರುದ್ಧ ಗೆಲ್ಲ ಬೇಕು ಅಂದ್ರೆ ಈ ಬಾರಿ ಜಾಸ್ತಿ ಹೋಮ್ ವರ್ಕ್ ಮಾಡಬೇಕಾಗತ್ತೆ.

ಕವಿತಾ ರೆಡ್ಡಿ ಆಕಾಂಕ್ಷಿ

ಇನ್ನು ಈಗಾಗಲೇ ಪ್ರಸಿದ್ಧಿ ಪಡೆದುಕೊಳ್ತಿರೋ ಕಾಂಗ್ರೆಸ್ ನಾಯಕಿ ಕವಿತಾ ರೆಡ್ಡಿ ಅವ್ರು ಈ ಕ್ಷೇತ್ರದಿಂದ ಕಣಕ್ಕಿಳಿಯೋದಕ್ಕೆ ಆಕಾಂಕ್ಷಿ.ಯಾಗಿದ್ದಾರೆ. ಕ್ಷೇತ್ರದಲ್ಲಿ ಓಡಾಡ್ತಾ ಮತದಾರರ ಮನ ಗೆಲ್ಲೋ ಪ್ರಯತ್ನವನ್ನು ಕವಿತಾ ರೆಡ್ಡಿಯವ್ರು ಮಾಡ್ತಿದ್ದಾರೆ. ಇನ್ನು ಮಹಿಳೆಯರಿಗೆ ಅವಕಾಶ ಕಡಲೇ ಬೇಕು ಅಂತಾ ಕಾಂಗ್ರೆಸ್ ನಾಯಕರು  ಮುಂದಾದ್ರೆ ಖಂಡಿತವಾಗ್ಲೂ ಈ ಬಾರಿ ಕವಿತಾ ರೆಡ್ಡಿ ಅವ್ರಿಗೆ ಇಲ್ಲಿಂದ ಟಿಕೆಟ್ ಸಿಗ್ತತೆ. ಇನ್ನುಳಿದಂತೆ ಅಗರ ಗ್ರಾಮದ ವಾಸುದೇವ ರೆಡ್ಡಿ, ಹಾಗೇನೇ ನಿರ್ಮಾಪಕ ಉಮಾಪತಿ ಕಣದಲ್ಲಿದ್ದಾರೆ. ಆದ್ರೆ ಉಮಾಪತಿ ಅವ್ರ ಮೇಲೆ ಗಾರೆಬಾವಿಪಾಳ್ಯ ಕೆರೆ ಒತ್ತುವರಿ ವಿಚಾರಕ್ಕೆ ಸಂಬಂಧಿಸಿದಂತೆ ಇವ್ರ ನಿಲುವು ಸರಿ ಇಲ್ಲ. ಅನ್ನೋ ಆರೋಪ ಇದ್ದು ಉಮಾಪತಿ ಅವ್ರಿಗೆ ಕೈ ಟಿಕೆಟ್ ಸಿಗೋದೇ ಡೌಟ್. ಹಾಗಾಗಿ  ಕವಿತಾ ರೆಡ್ಡಿ ಅಥವಾ ನಾಗಭೂಷಣ ರೆಡ್ಡಿ ಅವ್ರಲ್ಲಿ ಒಬ್ರಿಗೆ ಟಿಕೆಟ್ ಗ್ಯಾರಂಟಿ.

ತೆನೆ ಹೊರೋದ್ಯಾರು?

ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಜೆಡಿಎಸ್ ಹವಾ ಅಷ್ಟೊಂದು ಇರ್ಲಿಲ್ಲ. ಕಳೆದ ಬಾರಿ ಜೆಡಿಎಸ್ ಅಭ್ಯರ್ಥಿ ಕೇವಲ 10 ಸಾವಿರ ಮತಗಳನಷ್ಟೇ ಪಡೆದಿದ್ರು. ಆದ್ರೆ ಇದೇ ಏರಿಯಾದ ಕುಪೇಂದ್ರ ರೆಡ್ಡಿ ಅವ್ರು ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರಿ ರಾಜ್ಯಸಭಾ ಸದಸ್ಯರಾಗಿರೋ ಕಾರಣ ಈ ಬಾರಿ ಉತ್ತಮ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಬಿಜೆಪಿ ಫೈಟ್ ಕೊಡೋ ಪ್ರಯತ್ನ ಮಾಡಬಹುದು. ಆದ್ರೆ ಈ ವರೆಗೆ ಜೆಡಿಎಸ್​ ಅಭ್ಯರ್ಥಿ ಯಾರಾಗಬಹುದು ಇಲ್ಲಿ ಅನ್ನೋದು ಯಾರಿಗೂ ಗೊತ್ತೇ ಇಲ್ಲ.

ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾರರು ಗೌಡ, ಎಸ್​​ ಸಿ ಹಾಗೂ ಎಸ್​​ ಟಿ, ಮುಸ್ಲಿಂ, ರೆಡ್ಡಿ ಸಮುದಾಯಕ್ಕೆ ಸೇರಿದವರಾಗಿದ್ದು ಅವರೇ ನಿರ್ಣಾಯಕರೂ ಆಗಿದ್ದಾರೆ. ಕಳೆದ ಎರಡು ಚುನಾವಣೆಗಳನ್ನು ಗಮನಿಸಿದರೆ ಬಿಜೆಪಿ ತಮ್ಮ ಮತದಾರರನ್ನು ಹೆಚ್ಚು ಮಾಡಿಕೊಂಡು ಸಂಘಟನೆಯನ್ನು ಕಟ್ಟಿಕೊಂಡು ಬರುತ್ತಿರುವುದರಿಂದ ಬಿಜೆಪಿ ಮತ್ತೆ ಗೆಲ್ಲುವ ಅವಕಾಶ ಸಿಗಬಹುದು. ಇನ್ನು ಇಲ್ಲಿ ಶಾಸಕ ಸತೀಶ್ ರೆಡ್ಡಿ ಅವ್ರು ಮಾಡಿರೋ ಅಭಿವೃದ್ಧಿ ಕೆಲ್ಸಗಳಿಂದಾಗಿ ಇಲ್ಲಿನ ಜನ ಮತ್ತೆ ಸತೀಶ್ ರೆಡ್ಡಿ ಅವ್ರನ್ನು ಗೆಲ್ಲಿಸೋ ಮುನ್ಸೂಚನೆ ಸಿಕ್ತಿದೆ.

ಬೊಮ್ಮನ ಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಒನ್ ಸೈಡ್ ಮ್ಯಾಚ್ ಅಂತಿದ್ದಾರೆ. ಅಂದ್ರೆ ಬಿಜೆಪಿಗೆ ಅಥವಾ ಸತೀಶ್ ರೆಡ್ಡಿ ಗೆ ಎದುರಾಳಿಗಳೇ ಇಲ್ಲದಂತಾಗಿದೆ. ಕಾರಣ ಕಾಂಗ್ರೆಸ್​​ ಹಾಗು ಜೆಡಿಎಸ್​ ಪಕ್ಷಗಳಲ್ಲಿರೋ ಅಭ್ಯರ್ಥಿಗಳ ಗೊಂದಲ. ಹಾಗು ಸತೀಶ್ ರೆಡ್ಡಿ ಸರಿಸಮನಾಗಿ ನಿಲ್ಲೋ ವರ್ಚಸ್ ಇರೋ ಅಭ್ಯರ್ಥಿಗಳ ಕೊರತೆ. ಈ ವರೆಗಗೂ ಇಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆ ಸೇರಿದಂತೆ ಪಕ್ಷಗಳಲ್ಲಿರುವ ಕಾರ್ಯಕರ್ತರನ್ನು ಗಣನೆಗೆ ತೆಗೆದುಕೊಳ್ಳದಿರೋದು ಕೂಡಾ ಕಾಂಗ್ರೆಸ್ ಸೋಲಿಗೆ ಕಾರಣವಾಗಬಹುದು. ಇನ್ನು ಇಲ್ಲಿನ ಸ್ಥಳೀಯರೇ ಹೇಳೋ ಹಾಗೆ ಹಾಲಿ ಶಾಸಕರು ಅಭಿವೃದ್ಧಿ ಪರ ಇದ್ದಾರೆ. ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಬೇಕಾದ ಕೆಲ್ಸಗಳನ್ನು ಮಾಡಿಕೊಡ್ತಾರೆ.ಹಾಗಿರುವಾಗ ಬೇರೆಯವರು ಬೇಕಾಗಿಲ್ಲ ಮತ್ತೊಮ್ಮೆ ಅವ್ರೇ ಶಾಸಕರಾಗಲಿ ಅನ್ನೋದು ನೋಡಿದ್ರೆ ಸತೀಶ್ ರೆಡ್ಡಿ ಚುನಾವಣೆಗೂ ಮುನ್ನವೆ ಗೆದ್ದಿದ್ದಾರೆ ಅಂತಾ ಹೇಳಬಹುದು.

From the web

ಪ್ರತ್ಯುತ್ತರ ನೀಡಿ

Please enter your comment!
Please enter your name here