ಚುನಾವಣಾ ಕುರುಕ್ಷೇತ್ರ 2018 – ಬ್ಯಾಟರಾಯನಪುರ

ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ

ಇವತ್ತು ನಾವು ಕುರುಕ್ಷೇತ್ರದಲ್ಲಿ ಹೇಳ್ತಿರೋದು ಬೆಂಗಳೂರಿನ ಪ್ರತಿಷ್ಚಿತ ರಣಕಣ ಬ್ಯಾಟರಾಯನರಪುರ ವಿಧಾನಸಭಾ ಕ್ಷೇತ್ರದ ಬಗ್ಗೆ. ಸದ್ಯ ಇಲ್ಲಿ ಸಚಿವ ಕೃಷ್ಣಭೈರೇಗೌಡರ ರಾಜ್ಯಭಾರ ಇದೆ. ಈ ಬಾರಿ ಇಲ್ಲೇನಾಗಬಹುದು, ಆಡಱಳಿತ ವಿರೋಧಿ ಅಲೆ ಇದ್ಯಾ, ಬಿಜೆಪಿ ಜೆಡಿಎಸ್ ಕ್ಷೇತ್ರವನ್ನು ತಮ್ಮತ್ತ ಸೆಳೆಯಲು ಏನೇನು ಮಾಡಿವೆ ಅದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ

ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ. ಬೆಂಗಳೂರಿನ ಪ್ರತಿಷ್ಚಿತ ಕ್ಷೇತ್ರಗಳಲ್ಲಿ ಇದೂ ಒಂದು. ರಿಯಲ್ ಎಸ್ಟೇಟ್ ಉದ್ಯಮ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದೇ ಇಲ್ಲಿ. ಹಾಗಾಗೀನೇ ಈ ಕ್ಷೇತ್ರವನ್ನು ಭೂಗಳ್ಳರ ಸ್ವರ್ಗ ಅಂತಾನೂ ಕರಿತಾರೆ. ದೊಡ್ಡ ದೊಡ್ಡ ಲ್ಯಾಂಡ್ ಹಗರಣಗಳು ಇಲ್ಲಿ ನಡೆದಿವೆ. ಇನ್ನು ನಗರ ಹಾಗೂ ಗ್ರಾಮೀಣ ಪ್ರದೇಶಗಳಿರೋ  ಈ ಕ್ಷೇತ್ರದಲ್ಲಿ ಒಟ್ಟು 7 ಬಿಬಿಎಂಪಿ ವಾರ್ಡ್ ಗಳು ಹಾಗೇನೇ 5 ಜಿಲ್ಲಾಪಂಚಾಯತ್ ಗಳಿದೆ.ಈ ಕ್ಷೇತ್ರದಲ್ಲಿ ಒಕ್ಕಲಿಗರೇ ಜಾಸ್ತಿ ಸಂಖ್ಯೆಯಲ್ಲಿದ್ದಾರೆ. ಹಾಗೇನೇ ಚುನಾವಣೆಯಲ್ಲಿ ಯಾರು ಗೆಲ್ಲಬೇಕು ಅನೋದನ್ನು ಇಲ್ಲಿ ನಿರ್ಧರಿಸೋರು ಅಂದ್ರೆ ನಿರ್ಣಾಯಕ ಮತಾದರರೇ ಒಕ್ಕಲಿಗರು. ಹಾಗಾಗಿ ಈ ಕ್ಷೇತ್ರದಲ್ಲಿ  ಕಾಂಗ್ರೆಸ್ ಬಿಜೆಪಿ ಮತ್ತು ಜೆಡಿಎಸ್ ನಿಂದ ಕಣಕ್ಕಿಳಿಯೋರು ಕೂಡಾ ಒಕ್ಕಲಿಗ ಸಮುದಾಯದವರೇ. ಕಳೆದೆರಡು ಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್ ಗೆದ್ದಿದೆ. ಕೃಷ್ಣ ಭೈರೇ ಗೌಡ್ರು ಇಲ್ಲಿಂದ ಗೆದ್ದು ಸಚಿವರಾಗಿದ್ದಾರೆ. ಹಾಗಿದ್ರೆ ಈ ಬಾರಿ ಇಲ್ಲಿ ಏನಾಗಬಹುದು? ಯಾರ ಯಾರ ನಡುವೆ ಫೈಟ್ ಇದೆ.ಸೋಲು ಗೆಲುವಿನ ಲೆಕ್ಕಾಚಾರವೇನು ಹೇಳ್ತೀವಿ. ಆದ್ರೆ ಅದಕ್ಕೂ ಮೊದಲು 2013ರ ಮತಬರಹ ನೋಡೋಣ

2013ರ ಮತಬರಹ

ಇದು 2013ರ ಮತಬರಹ. ಸಚಿವ ಕೃಷ್ಣ ಭೈರೇ ಗೌಡ 96125 ಮತಗಳನ್ನು ಪಡೆಯೋ ಮೂಲಕ ಶಾಸಕರಾಗಿ ಸಚಿವರೂ ಆಗಿದ್ದಾರೆ. ಅವ್ರಿಗೆ ತೀವ್ರ ಪೈಪೋಟಿ ನೀಡಿದ ಬಿಜೆಪಿಯ ಎ ರವಿ 63725 ಮತಗಳನ್ನು ಪಡೆಯೋ ಮೂಲಕ 2 ನೇ ಸ್ಥಾನದಲ್ಲಿದ್ರೆ ಜೆಡಿಎಸ್ ನ ಹನುಮಂತೇ ಗೌಡ 41360 ಮತಗಳನ್ನು ಪಡೆದ್ರು.

2008 ಹಾಗೂ 2013ರಲ್ಲಿ ಇಲ್ಲಿಂದ ಕಣಕ್ಕಿಳಿದು ಗೆದ್ದಿದ್ದು ಕಾಂಗ್ರೆಸ್ ನ ಕೃಷ್ಣಭೈರೇಗೌಡ. ಇವ್ರು ಹಿರಿಯ ರಾಜಕಾರಣಿ, ಮುತ್ಸದ್ದಿ, ಮಾಜಿ ಸಚಿವರಾಗಿದ್ದ ಭೈರೇಗೌಡರ ಪುತ್ರ. ಅಂದ್ಹಾಗೆ ಕೃಷ್ಣಭೈರೇಗೌಡ್ರು ಬ್ಯಾಟರಾಯನಪುರದ ಸ್ಥಳೀಯರಲ್ಲ ವಲಸಿಗರು. ಯಾಕಂದ್ರೆ ಕೃಷ್ಣಭೈರೇಗೌಡ್ರ ತಂದೆ ಭೈರೇಗೌಡ್ರ ಕಾರ್ಯ ಕ್ಷೇತ್ರ ಕೋಲಾರದ ವೇಮಗಲ್ ವಿಧಾನಸಭಾ ಕ್ಷೇತ್ರ. ಆದ್ರೆ ತಂದೆಯ ಅಕಾಲಿಕ ಮರಣದ ನಂತ್ರ ಅದೇ ಕ್ಷೇತ್ರದಲ್ಲಿ ನಿಂತು ಕೃಷ್ಣಬೈರೇ ಗೌಡ್ರು ಗೆದ್ದಿದ್ರು. ಅದಾದ ಮೇಲೆ 2008 ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಆದಾಗ ವೇಮಗಲ್ ಕ್ಷೇತ್ರ ಹೋಗಿಬಿಡ್ತು. ಆಗ ಕೃಷ್ಣಬೈರೇ ಗೌಡ್ರಿಗೆ ಚುನಾವಣೆಯಲ್ಲಿ ನಿಲ್ಲೋದಕ್ಕೆ  ಕ್ಷೇತ್ರ ಬೇಕಾಗಿತ್ತು. ಆಗ ಅವ್ರು ಹುಡುಕಿದ್ದೇ ಬೆಂಗಳೂರಿನ ಬ್ಯಾಟರಾಯನ ಪುರ ವಿಧಾನಸಭಾ ಕ್ಷೇತ್ರ. ಕಾರಣ ಇಲ್ಲಿ ಒಕ್ಕಲಿಗರ ಸಂಖ್ಯೆ ಜಾಸ್ತಿ ಇದೆ. ಹಾಗಾಗಿ ತಂದೆಯ ಹೆಸರಿನಲ್ಲಿ ಸುಲಭವಾಗಿ ಗೆಲ್ಲಬಹುದು ಅಂತಾ. ಅವರ ಪ್ಲಾನ್ ನಿಜ ಆಯ್ತು ಕೂಡಾ. ಕಳೆದೆರಡು ಚುನಾವಣೆಯಲ್ಲಿ ಗೆದ್ದಿದ್ದು ಮಾತ್ರವಲ್ಲದೆ ಸಚಿವರೂ ಆಗಿದ್ದಾರೆ. ಆದ್ರೆ ಸಚಿವರಾದ ಮಾತ್ರಕ್ಕೆ ಈ ಬಾರಿ ಗೆಲ್ಲೋದು ಸುಲಭವಲ್ಲ. ಈ ಬಾರಿ ಅಂತೂ ಜೆಡಿಎಸ್ ಮತ್ತು ಬಿಜೆಪಿ ತೀವ್ರ ಪೈಪೋಟಿ ನೀಡೋದಕ್ಕೆ ಮುಂದಾಗಿದೆ. ಅದ್ರ ಬಗ್ಗೆ ಹೇಳ್ತೀವಿ. ಆದ್ರೆ ಅದಕ್ಕೂ ಮೊದಲು ಬ್ಯಾಟರಾಯನಪುರದಿಂದ ಯಾವ ಪಕ್ಷದಿಂದ ಯಾರು ಕಣಕ್ಕಿಳಿತಾರೆ ನೋಡೋಣ

ಕೈ ಅಭ್ಯರ್ಥಿ

ಕೃಷ್ಣ ಭೈರೇಗೌಡ, ಸಚಿವ

ಯಸ್ 2 ಬಾರಿ ಸತತವಾಗಿ ಇದೇ ಕ್ಷೇತ್ರದಿಂದ ಗೆದ್ದು ಸಚಿವರಾಗಿರೋ ಕಾರಣ ಕಾಂಗ್ರೆಸ್ ನಿಂದ ಇಲ್ಲಿ ಕೃಷ್ಣಭೈರೇಗೌಡ್ರು ಕಣಕ್ಕಿಳಿಯೋದ್ರಲ್ಲಿ ಅನುಮಾನ ಇಲ್ಲ. ಆದ್ರೆ ಅವ್ರು ಶಾಸಕರಾಗಿದ್ದಾಗಲೇ ಇಲ್ಲಿನ ಜನ ಅವ್ರ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಕೊಂಡಿದ್ರು.ಇನ್ನು ಕಳೆದ ಬಾರಿ ಸಚಿವರಾದ ಮೇಲಂತೂ ಆ ನಿರೀಕ್ಷೆಗಳು ಇನ್ನೂ ಜಾಸ್ತಿ ಆದ್ವು. ಆದ್ರೆ ಕೃಷ್ಣಭೈರೇಗೌಡ್ರು ಮತದಾರರ ನಿರೀಕ್ಷೆಗಳನ್ನು ಪೂರೈಸುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ. ಈ ಕ್ಷೇತ್ರದಲ್ಲಿ ಅಭಿವೃದ್ದಿ ಅನ್ನೋದೇ ಆಗಿಲ್ಲ. ಸರಿಯಾದ ರಸ್ತೆ ಇಲ್ಲ. ಕುಡಿಯುವ ನೀರಿಗೂ ತತ್ವಾರ ಬಂದಿದೆ. ಒಂದರ್ಥದಲ್ಲಿ ಜನರಿಗೆ ಸಂಕಷ್ಟಗಳು ಬಂದಿದೆ. ಎಲ್ಲಕ್ಕಿಂತ ಹೆಚ್ಚಾಗಿ ಇಲ್ಲಿನ ಜನ ಇಲ್ಲಿ ನಡೆಯುತ್ತಿರೋ ಭೂ ಕಬಳಿಕೆಯಿಂದ ರೋಸಿಹೋಗಿದ್ದಾರೆ. ಅದ್ರಲ್ಲೂ ಸಚಿವ ಕೃಷ್ಣಭೈರೇಗೌಡ್ರ ಮೇಲೆ ಬಿಜೆಪಿ ವಕ್ತಾರ ಎನ್ ಆರ್ ರಮೇಶ್ ಮಾಡಿರೋ ಸರ್ಕಾರಿಭೂಮಿ ಕಬಳಿಕೆ, ಸರ್ಕಾರಿ ದಾಖಲೆಗಳ ತಿರುಚುವಿಕೆ, ಮತ್ತು ಭ್ರಷ್ಟಾಚಾರದಂತಹ ಗಂಭೀರ ಆರೋಪಗಳು ಜನರ ಮನಸ್ಸಿನಲ್ಲಿದೆ. ಇನ್ನು ಈ ಆರೋಪದಂತೆ ಈ ಕ್ಷೇತ್ರದಲ್ಲಿ ಅತೀ ಹೆಚ್ಚು ಕಲ್ಲು ಗಣಿಗಾರಿಕೆ ನಡೀತಿದೆ. ಸರ್ಕಾರಿ ಜಾಗವನ್ನು ಭೂ ಮಾಫಿಯ ತನ್ನ ತೆಕ್ಕೆಗೆ ಹಾಕ್ತಿದೆ. ಹಾಗಾಗಿ ಸಚಿವರ ಪಾತ್ರಾನೂ ಇದ್ರಲ್ಲಿ ಇದ್ಯಾ ಅನ್ನೋ ಪ ಅನುಮಾನ ಇಲ್ಲಿನ ಮತದಾರರಲ್ಲಿ ಕಾಡ್ತಿದೆ. ಅಷ್ಟೇ ಅಲ್ಲ. ಇನ್ನು ಕೃಷಿ ಸಚಿವರಾಗಿದ್ದು ಕೊಂಡು ರೈತರ ಸಮಸ್ಯೆಗೆಳನ್ನು ಇವ್ರು ಪರಿಹರಿಸಿಲ್ಲ. ಇನ್ನು ಕ್ಷೇತ್ರದ ಜನರಿಗೂ ಏನೂ ಮಾಡಿಲ್ಲ ಅಂದಾಗ ಆಡಳಿತ ವಿರೋಧಿ ಅಲೆ ಸಹಜವಾಗೇ ಇರತ್ತೆ. ಹಾಗಾಗಿ ಮತದಾರ ಈ ಬಾರಿ ಇವ್ರ ಕೈ ಹಿಡಿಯೋದು ಕಷ್ಟ.

ಕಮಲ ಹಿಡಿಯೋರು ಯಾರು?

  1. ಎ.ರವಿ, ಪ್ರಬಲ ಆಕಾಂಕ್ಷಿ

ಎ.ರವಿ ಬ್ಯಾಟರಾಯನಪುರದಲ್ಲಿ ಕಳೆದೆರಡು ಚುನಾವಣೆಯಲ್ಲೂ ಸ್ಪರ್ಧಿಸಿ ಕೃಷ್ಣಭೈರೇಗೌಡ್ರ ವಿರುದ್ಧ ಸೋತಿದ್ದಾರೆ. ಹಾಲಿ ಒಕ್ಕಲಿಗ ಸಂಘದ ನಿರ್ದೇಶಕರೂ ಆಗಿರೋ ರವಿ ಅವ್ರಿಗೆ ಈ ಬಾರಿ ಟಿಕೆಟ್ ಸಿಕ್ರೆ ಗೆಲ್ಲೋ ಚಾನ್ಸ್ ಇದೆ. ರವಿ ಅವ್ರು ಸ್ಥಳೀಯರಾಗಿದ್ದಾರೆ. ಅಷ್ಟೇ ಅಲ್ಲ 2 ಬಾರಿ ಸೋತಿದ್ರು ಕೂಡಾ ಈ ಕ್ಷೇತ್ರವನ್ನು ಬಿಟ್ಟು ಹೋಗಿಲ್ಲ. ಸಾಧು ಸ್ವಭಾವ ಎಲ್ಲಕ್ಕಿಂತ ಹೆಚ್ಚಾಗಿ ಜನರ ಕೈಗೆ ಎಟಕುವ ವ್ಯಕ್ತಿತ್ವ ಇವ್ರದ್ದು. ಕಾಂಗ್ರೆಸ್ ಕೈಯಲ್ಲಿ ಅಧಿಕಾರ ಇದ್ರೂ ಕೂಡಾ ಬಿಬಿಎಂಪಿಯಲ್ಲಿ ಕೆಲ ವಾರ್ಡ್ ಗಳನ್ನು ಗೆಲ್ಲಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ರವಿ ಅವ್ರು ಜನಪರವಾಗಿರೋ ಕಾರಣ  ಅಭಿವೃದ್ಧಿಯ ದೃಷ್ಟಿಕೋನ ರವಿ ಅವ್ರಿಗಿರೋ ಕಾರಣ ಇಲ್ಲಿನ ಜನ ರವಿ ಪರ ನಿಲುವು ಹೊಂದಿದ್ದಾರೆ.ಇನ್ನು ಇಲ್ಲಿ ಆಡಳಿತ ವಿರೋಧಿ ಅಲೆ ಇರೋದ್ರಿಂದ ಈ ಬಾರಿ ರವಿ ಅವ್ರಿಗೆ ಟಿಕೆಟ್ ಕನ್ಫರ್ಮ್ ಆದ್ರೆ ಖಂಡಿತಾ ಕೃಷ್ಣಭೈರೇಗೌಡ್ರನ್ನು ಸೋಲಿಸೋದ್ರಲ್ಲಿ ಅನುಮಾನ ಇಲ್ಲ.

 

  1. ಚಕ್ರಪಾಣಿ, ಪ್ರಬಲ ಆಕಾಂಕ್ಷಿ

ಬಿಜೆಪಿಯಲ್ಲಿ ಎ. ರವಿ ಅವ್ರ ಹೆಸರಿನ ಜತೆಗೆ ಈ ಕ್ಷೇತ್ರದಿಂದ ಕಣಕ್ಕಿಳಿಯೋದಕ್ಕೆ ದೊಡ್ಡ ಮಟ್ಟದಲ್ಲಿ ಕೇಳಿ ಬರ್ತಿರೋ ಮತ್ತೊಂದು ಹೆಸರೇ ಚಕ್ರಪಾಣಿ ಅವ್ರದ್ದು. ರಾಜಕೀಯ ಚಾಣಾಕ್ಷ ದೇವೇಗೌಡರ ಗರಡಿಯಲ್ಲಿ ಪಳಗಿರೋ ಹಾಗೂ ರಾಜಕೀಯದ ಒಳಸಳಿಗಳನ್ನು ಕಲಿತಿರೋರು ಚಕ್ರಪಾಣಿ ಅವ್ರು ಸ್ಥಳೀಯರು ಕೂಡಾ ಹೌದು.. ಕೃಷ್ಣಭೈರೇಗೌಡ್ರ ಹಗರಣಗಳ ಬಗ್ಗೆ ಸಂಪೂರ್ಣ ಮಾಹಿತಿ ಇವ್ರಿಗೆ ಇರೋದ್ರಿಂದ ಅದು ಬಿಜೆಪಿಗೆ  ಚುನಾವಣೆ ಸಮಯದಲ್ಲಿ ಕೃಷ್ಣಭೈರೇಗೌಡ್ರ ನ್ನು ಸೋಲಿಸಲು ಅಸ್ತ್ರವಾಗಬಹುದು. ಈಗಾಗಲೇ 2 ಬಾರಿ ರವಿ ಅವ್ರಿಗೆ ಟಿಕೆಟ್ ಕೊಟ್ಟಿದ್ದಾಗಿದೆ ಅವ್ರು ಗೆಲ್ಲೋದು ಕಷ್ಟವಾಗಿದೆ ಹಾಗಾಗಿ ಹೊಸ ಮುಖವಾಗಿದ್ರಿಂದ ತನಗೆ ಟಿಕೆಟ್ ಕೊಡಿ ಅಂತಿದ್ದಾರೆ ಚಕ್ರಪಾಣಿ. ಇವರಿಬ್ಬರಲ್ಲಿ ಬಿಜೆಪಿ ನಾಯಕರು ಯಾರಿಗೆ ಮಣೆ ಹಾಕ್ತಾರೆ ಕಾದು ನೋಡಬೇಕು

ದಳಪತಿ ಯಾರು?

3. ಚಂದ್ರು, ಆಕಾಂಕ್ಷಿ

ಯಸ್ ಕಾಂಗ್ರೆಸ್, ಬಿಜೆಪಿ ನಡುವಿನ ಫೈಟ್ ನ್ನು ಎನ್ ಕ್ಯಾಶ್ ಮಾಡಿಕೊಳ್ಳೋದಕ್ಕೆ ಜೆಡಿಎಸ್ ಈ ಕ್ಷೇತ್ರದಲ್ಲಿ ಪ್ಲಾನ್ ಮಾಡಿಕೊಂಡಿದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಈಗಾಗಲೇ ಜೆಡಿಎಸ್ ನ ತಿಂಡ್ಲು ಚಂದ್ರು  ಅಂತಾನೇ ಫೇಮಸ್ ಆಗಿರೋ ಚಂದ್ರು ಅವ್ರು ಇಲ್ಲಿಂದ ಕಣಕ್ಕಿಳಿಯೋದು ಬಹುತೇಕ ಕನ್ಫರ್ಮ್.ಮೂಲತಃ ಬಿಸಿನೆಸ್ ಮ್ಯಾನ್, ಆರ್ಥಿಕವಾಗಿ ಸಬಲರಾಗಿದ್ದಾರೆ.ಜತೆಗೆ  ಕ್ಷೇತ್ರದಲ್ಲಿ ಈಗಾಗಲೇ ಓಡಾಟವನ್ನು ಶುರು ಮಾಡಿದ್ದಾರೆ. ಜನರಿಗೆ ಹತ್ತಿರವಾಗ್ತಿದ್ದಾರೆ. ಇನ್ನು  ಒಕ್ಕಲಿಗರ ಮತಗಳೇ ಇಲ್ಲಿ ನಿರ್ಣಾಯಕವಾಗಿರೋ ಕಾರಣ ಈ ಬಾರಿ ಬಹುತೇಕ ಒಕ್ಕಲಿಗರ ಒಲವು ದೇವೇಗೌಡ್ರು ಹಾಗೂ ಹೆಚ್ ಡಿ ಕುಮಾರಸ್ವಾಮಿ ಅವ್ರತ್ತ ಇದೆ. ಹೆಚ್ ಡಿಕೆ ಯನ್ನು ಸಿಎಂ ಮಾಡಲೇ ಬೇಕು ಅಂತಾ ಇಲ್ಲಿನ ಜನ ಹೊರಟ್ರೆ ಕ್ಷೇತ್ರದ ನಾಡಿಮಿಡಿತ ಬಲ್ಲ ಚಂದ್ರು ಅವ್ರು ಕೃಷ್ಣ ಬೈರೇಗೌಡ್ರನ್ನು ಸೋಲಿಸೋದು ಗ್ಯಾರಂಟಿ ಅಂತಾ ಹೇಳ್ತಿದ್ದಾರೆ ಮತದಾರರು.

ಇನ್ನು ಈ ಕ್ಷೇತ್ರದಲ್ಲಿ ಈ ಬಾರಿ ರಾಜಕೀಯವಾಗಿ ಒಂದಷ್ಟು ಬೆಳವಣಿಗೆಗಳಾಗೋದ್ರಲ್ಲಿ ಅನುಮಾನ ಇಲ್ಲ. ಯಾಕಂದ್ರೆ ಕೃಷ್ಣಬೈರೇಗೌಡ್ರು ಸಚಿವರಾಗಿದ್ರೂ ತಮ್ಮ ಕ್ಷೇತ್ರಕ್ಕೆ ಏನೂ ಮಾಡಿಲ್ಲ ಅನ್ನೋದನ್ನು ಇಲ್ಲಿನ ಜನ ಒತ್ತಿ ಒತ್ತಿ ಹೇಳ್ತಿದ್ದಾರೆ.ಕೃಷಿ ಸಚಿವರಾಗಿದ್ದುಕೊಂಡು ರಾಜ್ಯದ ಕೃಷಿಕರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ.ರಾಜ್ಯದಲ್ಲಿ ಆಗ್ತಾ ಇರೋ ರೈತರ ಸರಣಿ ಆತ್ಮಹತ್ಯೆ ಸಂದರ್ಭದಲ್ಲಿ ಆ ಕಡೆಗೆ ಗಮನ ಹರಿಸಿಲ್ಲ. ಹಾಗಾಗಿ ಅವ್ರ ಮೇಲಿಟ್ಟಿರೋ ವಿಶ್ವಾಸವನ್ನು ಕ್ಷೇತ್ರದ ಜನ ಕಳೆದುಕೊಂಡಿದ್ದಾರೆ.ಹಾಗಾಗಿ ಆಡಳಿತ ವಿರೋಧಿ ಅಲೆ ಇಲ್ಲಿ ದೊಡ್ಡ ಮಟ್ಟದಲ್ಲಿದೆ. ಇನ್ನು ಬಿಜೆಪಿ ಇಲ್ಲಿ ಬೇರೂರಲು ಹೇಗೆ ಟ್ರೈ ಮಾಡ್ತಿದ್ಯೋ ಅದೇ ರೀತಿ ಜೆಡಿಎಸ್ ಕೂಡಾ ಈ ಕ್ಷೇತ್ರವನ್ನು ತನ್ನ ತೆಕ್ಕೆಗೆ ಹಾಕೋದಕ್ಕೆ ಹವಣಿಸುತ್ತಿದೆ. ಒಟ್ನಲ್ಲಿ ಈ ಬಾರಿ ಇಲ್ಲಿ  ಕಾಂಗ್ರೆಸ್ ನ್ನು ಜನ ಪರಿಗಣಿಸದೇ ಇದ್ರೆ ಈ ಬಾರಿಯ ಎಲೆಕ್ಷನ್ ನಲ್ಲಿ ಬಿಜೆಪಿ ವರ್ಸಸ್ ಜೆಡಿಎಸ್ ಆಗೋದ್ರಲ್ಲಿ ಅನುಮಾನ ಇಲ್ಲ.

ಈ ಕ್ಷೇತ್ರದ ಕೃಷ್ಣಬೈರೇಗೌಡ್ರು ಸಚಿವರಾಗಿದ್ರೂ ಕೂಡಾ ಕ್ಷೇತ್ರದಲ್ಲಿ ಹೋಲ್ಡ್ ಇಟ್ಕೊಂಡಿಲ್ಲ. ಸಚಿವ ಸ್ಥಾನವನ್ನು ನಿಭಾಯಿಸುವಲ್ಲಿ ಹೇಗೆ ವಿಫಲವಾಗಿದ್ದಾರೋ ಹಾಗೇ ಕ್ಷೇತ್ರದಲ್ಲೂ ಕೂಡಾ ಹಿಡಿತ ಕಳೆದುಕೊಳ್ತಿದ್ದಾರೆ. ಇದನ್ನು ಎನ್ ಕ್ಯಾಶ್ ಮಾಡಿಕೊಳ್ಳೋದಕ್ಕೆ ಮುಂದಾಗಿರೋ ಬಿಜೆಪಿ ಮತ್ತು ಜೆಡಿಎಸ್ ಕ್ಷೇತ್ರವನ್ನು ಗೆಲ್ಲೋದಕ್ಕೆ ಹರಸಾಹಸ ಮಾಡ್ತಿದೆ.ಆಡಳಿತ ವಿರೋಧಿ ಅಲೆ ಕೂಡಾ ದೊಡ್ಡಮಟ್ಚದಲ್ಲಿರೋದ್ರಿಂದ ಇಲ್ಲಿನ ಮತದಾರ ಬಿಜೆಪಿ ಅಥವಾ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸೋದು ಗ್ಯಾರಂಟಿ.

 

 

ಪ್ರತ್ಯುತ್ತರ ನೀಡಿ

Please enter your comment!
Please enter your name here