ಚುನಾವಣಾ ಕುರುಕ್ಷೇತ್ರ 2018 ಚಿಕ್ಕಪೇಟೆ (ಬೆಂಗಳೂರು ಜಿಲ್ಲೆ)

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ

ಇವತ್ತಿನ ಕುರುಕ್ಷೇತ್ರದಲ್ಲಿ ನಾವು ಹೇಳ್ತಿರೋದು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಬಗ್ಗೆ. ಕಾಂಗ್ರೆಸ್ ನ ಆರ್ ವಿ ದೇವರಾಜ್ ಶಾಸಕರಾಗಿದ್ದಾರೆ. ಈ ಬಾರಿ ಅಂತೂ ಕ್ಷೇತ್ರದಲ್ಲಿ ಭಾರಿ ಬದಲಾವಣೆಯ ಗಾಳಿ ಬೀಸ್ತಿದೆ. ಹಾಗಿದ್ರೆ ಇಲ್ಲಿನ ರಣಕಣ ಹೇಗಿದೆ ನೋಡೋಣ ಬನ್ನಿ.

    

 

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ. ಬೆಂಗಳೂರಿನಲ್ಲಿರೋ ವಿಶ್ವವಿಖ್ಯಾತಿಯನ್ನು ಪಡೆದಿರೋ ಕ್ಷೇತ್ರಗಳಲ್ಲಿ ಒಂದು. ಈ ಕ್ಷೇತ್ರದಲ್ಲಿ ಧರ್ಮರಾಯನ ದೇವಸ್ಥಾನ ಇದೆ. ಇಲ್ಲಿನ ವಿಶೇಷತೆ ಅಂದ್ರೆ ಕರಗಮಹೋತ್ಸವ.  ವರ್ಷ ವರ್ಷ ನಡೆಯೋ ಕರಗ ಮಹೋತ್ಸವನ್ನು ನೋಡಲು ದೇಶ ವಿದೇಶಗಳಿಂದ ಜನ ಬರ್ತಾರೆ. ಬೆಂಗಳೂರಿನಲ್ಲಿ ಚಿಕ್ಕಪೇಟೆಗೆ ಅದರದ್ದೇ ಆದ ಇತಿಹಾಸ ಇದೆ. ಚಿಕ್ಕಪೇಟೆ ಅಂದ್ರೆ ವ್ಯಾಪಾರ, ವ್ಯಾಪಾರ ಅಂದ್ರೆ ಚಿಕ್ಕಪೇಟೆ. ಚಿಕ್ಕಪೇಟೆ ಅಂದ್ರೆ ಜನರಿಂದ ಗಿಜಿಗುಡೋ ಪ್ರದೇಶನೂ ಹೌದು. ಬೀದಿ ಬದಿ ವ್ಯಾಪಾರದಿಂದ ಹಿಡಿದು ಅಂತಾರಾಷ್ಚ್ರೀಯ ಮಟ್ಟದ ದೊಡ್ಡ ದೊಡ್ಡ ಬಿಸಿನೆಸ್ ಮ್ಯಾನ್ ಗಳಿರೋ ಪ್ರದೇಶ ಇದು. ಚಿಕ್ಕಪೇಟೆಯಲ್ಲಿ ಮಾರ್ಕೇಟ್ ಇದೆ, ಹೋಲ್ ಸೇಲ್ ಅಂಗಡಿಗಳಿದ್ದಾವೆ, ಹಳೇ ಬೀದಿಗಳಿದ್ದಾವೆ. ಅಷ್ಟೇ ಅಲ್ಲ ಬೆಂಗಳೂರಿನ ಅತಿ ಪುರಾತನ ಊರುಗಳಲ್ಲಿ ಪ್ರಮುಖವಾಗಿರೋದೇ ಚಿಕ್ಕಪೇಟೆ. ಈ ಬಗ್ಗೆ ಹೇಳೋಕೆ ಹೊರಟ್ರೆ ತುಂಬಾ ಇದೆ. ಆದ್ರೆ ನಾವು ಈಗ ಹೇಳ್ತಿರೋದು ರಾಜಕೀಯದ ಬಗ್ಗೆ…ಹಾಗಾಗಿ ರಾಜಕೀಯದ ಬಗ್ಗೆ ಮಾತಾಡೋಣ…ಬೆಂಗಳೂರು ನಗರದಲ್ಲಿ ಈ ಹಿಂದೆ ಕೂಡಾ ಚಿಕ್ಕಪೇಟೆ ಕ್ಷೇತ್ರ ಇತ್ತು. ಈಗಿನ ಗಾಂಧೀನಗರ,ಚಾಮರಾಜ ಪೇಟೆ ಕೆಲ ಭಾಗಗಳನ್ನು ಒಳಗೊಂಡು ದೊಡ್ಡ  ಕ್ಷೇತ್ರವಾಗಿತ್ತು. ಆದ್ರೆ ಕ್ಷೇತ್ರ ಪುನರ್ ವಿಂಗಡಣೆ ಆದ ಮೇಲೆ ಮೇಲೆ ತನ್ನದೇ ಆದ ವ್ಯಾಪ್ತಿಯನ್ನು ಹೊಂದಿದೆ. ಕಾಂಗ್ರೆಸ್ ನ ಆರ್ ವಿ ದೇವರಾಜ್ ಇಲ್ಲಿ ಶಾಸಕರಾಗಿದ್ದಾರೆ.ಇಲ್ಲಿನ ಇನ್ನೊಂದಷ್ಟು ವಿಚಾರ ಹೇಳೋ ಮುಂಚೆ 2013ರ ಮತಬರಹ ನೋಡೋಣ

2013ರ ಮತಬರಹ

ಇದು 2013ರ ಮತಬರಹ. ಕಾಂಗ್ರೆಸ್ ನ ಆರ್ ವಿ ದೇವರಾಜ್ 44714 ಮತಗಳನ್ನು ಪಡೆದು ಗೆದ್ದು ಶಾಸಕರಾದ್ರು,. ಇನ್ನು ಬಿಜೆಪಿಯ ಉದಯ್ ಗರುಡಾಚಾರ್ ಅವ್ರು 31655 ಮತಗಳನ್ನು ಪಡೆದು ಫೈಟ್ ಕೊಟ್ರು.

ಅಂದ್ಹಾಗೇ ಈಗೇನೋ ಆರ್ ವಿ ದೇವರಾಜ್ ಶಾಸಕರಾಗಿದ್ದಾರೆ. ಆದ್ರೆ ಇಲ್ಲಿನ ಇತಿಹಾಸ ನೋಡೋದಾದ್ರೆ 2004ರಲ್ಲಿ ಎಸ್ ಎಂ ಕೃಷ್ಣ ಅವ್ರಿಗೆ ಆರ್ ವಿ ದೇವರಾಜ್ ಅವ್ರು ಕ್ಷೇತ್ರವನ್ನು ಬಿಟ್ಟು ಕೊಡ್ತಾರೆ. ಅದಾದ ನಂತ್ರ ಎಸ್ಎಂ ಕೆ ಕ್ಷೇತ್ರ ಬಿಟ್ಟು ಹೋದ ಮೇಲೆ ಉಪಚುನಾವಣೆ ನಡೆದಾಗ ದೇವರಾಜ್ ನಿಲ್ತಾರೆ. ಆದ್ರೆ ಆಗ ಜೆಡಿಎಸ್ ನ ಜಮೀರ್ ಅಹ್ಮದ್ ವಿರುದ್ಧ ಸೋಲ್ತಾರೆ. ಹೀಗೇ ಆರ್ ವಿಡಿ 10 ವರ್ಷದಿಂದ ಅಧಿಕಾರ ಇಲ್ಲದೇ ಇರ್ತಾರೆ. ಅಷ್ಚೇ ಅಲ್ಲ 2008ರಲ್ಲಿ ಕ್ಷೇತ್ರ ವಿಂಗಡಣೆ ಆದ ಮೇಲೆ ಬಿಜೆಪಿಯ ಹೇಮಚಂದ್ರ ಸಾಗರ್ ವಿರುದ್ಧ ನಿಂತು ಆಗ ಸೋಲ್ತಾರೆ. ಆದ್ರೆ 2013ರಲ್ಲಿ ಬಿಜೆಪಿಯಲ್ಲಿದ್ದ ಒಳ ಜಗಳದ ಲಾಭ ಪಡೆದು ದೇವರಾಜ್ ಗೆದ್ದು ಶಾಸಕರಾಗ್ತಾರೆ. ಬಿಜೆಪಿ ಕೆಜೆಪಿ ಹಾಗೂ ಜೆಡಿಎಸ್ ಮತಗಳು ವಿಭಜನೆ ಆಗಿದ್ರಿಂದ ಕಾಂಗ್ರೆಸ್ ಗೆ ಗೆಲುವು ಸುಲಭವಾಯ್ತು. ಆದ್ರೆ ಈಗ ಹಾಗಿಲ್ಲ. ಈ ಬಾರಿ ಅಂತೂ ದೇವರಾಜ್ ಸೋಲೋ ಸಾಧ್ಯತೇನೇ ಜಾಸ್ತಿ ಇದೆ. ಅದಕ್ಕೆ ಕಾರಣಾನೂ ಇದೆ. ಅದ್ರ ಬಗ್ಗೆ ಹೇಳ್ತೀವಿ ಆದ್ರೆ ಅದಕ್ಕೂ ಮುಂಚೆ ಈ ಬಾರಿ ಯಾರ್ಯಾರು ಕಣದಲ್ಲಿರ್ತಾರೆ ನೋಡೋಣ.

ಕೈ ಅಭ್ಯರ್ಥಿ

ಹೌದು ಶಾಸಕ ಆರ್ ವಿ ದೇವರಾಜ್ ಅವ್ರೇ ಈ ಬಾರಿ ಕಾಂಗ್ರೆಸ್ ನಿಂದ ಕಣಕ್ಕಿಳಿತಾರೆ ಅನ್ನೋದ್ರಲ್ಲಿ ಅನುಮಾನ ಇಲ್ಲ. ಕಳೆದ ಬಾರಿ ಬಿಜೆಪಿ ಒಳ ಜಗಳ ಕಾಂಗ್ರೆಸ್ ಗೆ ಲಾಭವಾಗಿ ದೇವರಾಜ್ ಗೆದ್ದಿದ್ರು. ಆದ್ರೆ ಗೆದ್ದ ಮೇಲೆ ಶಾಸಕರು ಏನು ಮಾಡಿದ್ದಾರೆ ಅಂತಾ ನೋಡಿದ್ರೆ ಅಭಿವೃದ್ಧಿ ಅನ್ನೋದು ಇಲ್ಲಿ ಏನೇನೂ ಆಗಿಲ್ಲ ಅಂತಾ ಕ್ಷೇತ್ರದ ಜನ ಹೇಳ್ತಿದ್ದಾರೆ. ಒಟ್ಟು 63 ಸ್ಲಂಗಳು ಈ ಕ್ಷೇತ್ರದಲ್ಲಿದೆ.ಸ್ವತಃ ಕೊಳಚೆ ನಿರ್ಮೂಲನಾ ಮಂಡಳಿಯ ಅಧ್ಯಕ್ಷರಾಗಿದ್ರೂ ಕೂಡಾ ಶಾಸಕರು ಸ್ಲಂ ನಿರ್ಮೂಲನೆಗೆ ಸಂಬಂಧಿಸಿದಂತೆ ಏನೂ ಮಾಡಿಲ್ಲ ಅನ್ನೋ ಆರೋಪವಿದೆ. ಸಿದ್ದಾಪುರ,ವಿನೋಬಾ ನಗರ, ಬಂಡೇ ಸ್ಲಂ,ಕೆಎಸ್ ಗಾರ್ಡನ್  ಹೀಗೇ ಹೆಸರು ಹೇಳ್ತಾ ಹೋದ್ರೆ ಹಲವಾರು ಸ್ಲಂಗಳು ಈ ಹಿಂದೆ ಹೇಗಿತ್ತೋ ಇನ್ನೂ ಹಾಗೇ ಇವೆ, ಮೂಲಭೂತ ಸೌಕರ್ಯದ ಕೊರತೆ ದೊಡ್ಡದಾಗಿ ಕಾಣ್ತಿದೆ. ಆದ್ರೆ ಶಾಸಕರ ವರ್ತನೆ ನೋಡ್ತಾ ಇದ್ರೆ ಕಳೆದ ಬಾರಿಯಂತೆ ಈ ಬಾರಿ ಕೂಡಾ ಸುಲಭವಾಗಿ ಗೆಲ್ಲಬಹುದು ಅನ್ನೋ ಲೆಕ್ಕಾಚಾರ ಶಾಸಕರಿಗೆ ಇದ್ದಂತೆ ಕಾಣ್ತಿದೆ. ಟ್ರಾನ್ಸಫರ್, ಕಾಂಟ್ರಾಕ್ಟ್, ಲೈಸೆನ್ಸ್ ಹೀಗೆ ಹತ್ತಾರು ವಿಶ್ಯಗಳಿಗೆ ಖುದ್ದಾಗಿ ಶಾಸಕರೇ ತೊಡಗಿಕೊಂಡಿದ್ದಾರೆ. ಕ್ಷೇತ್ರಕ್ಕಿಂತ ಹೆಚ್ಚಾಗಿ ಸ್ವಲ್ಪ ವ್ಯವಹಾರದ ಕಡೆ ಹಿಡಿತ ಇಟ್ಕೊಳ್ಳಕ್ಕೆ ನೋಡಿದ್ರು. ಗೆದ್ದೇ ಗೆಲ್ತೀವಿ  ಅನ್ನೋ ಓವರ್ ಕಾನ್ಫಿಡೆನ್ಸ್ನಿಂದ ಕ್ಷೇತ್ರದ ಕಡೆ ಗಮನ ಕೊಟ್ಟಿಲ್ಲ. ಇಲ್ಲಿ ಪ್ರಜ್ನಾವಂತರಿದ್ದಾರೆ, ಮಧ್ಯಮವರ್ಗದವರಿದ್ದಾರೆ, ಕೂಲಿ ಕಾರ್ಮಿಕರಿದ್ದಾರೆ. ಆದ್ರೆ .ಯಾರೋಬ್ರ ಯಾವ ಸಮಸ್ಯಗಳಿಗೂ ಶಾಸಕರು ಸ್ಪಂದಿಸ್ತಿಲ್ವಂತೆ. ಇವತ್ತು ಚಿಕ್ಕಪೇಟೆ ಅಂದ್ರೆ ಹಪ್ತಾ ವಸೂಲಿ, ಗಲಾಟೆ, ಗೂಂಡಾಗಿರಿ ಅನೈತಿಕ ಚಟುವಟಿಕೆಗಳ ತಾಣ ಅನ್ನುನಂತಾಗಿರೋದ್ರಿಂದ ಜನ ಭಯದ ವಾತಾವರಣದಲ್ಲಿದ್ದಾರೆ. ಹೀಗೇ ಆರೋಪಗಳ ಪಟ್ಟಿ ದೊಡ್ಡದಿರೋದ್ರಿಂದ ಇಲ್ಲಿ ಆಡಳಿತ ವಿರೋಧಿ ಅಲೆ ಜೋರಾಗಿದೆ. ಹಾಗಾಗಿ ಆರ್ ವಿ ದೇವರಾಜ್ ಈ ಬಾರಿ ಗೆಲ್ಲೋದು ಡೌಟ್.

ಬಿಜೆಪಿ ಅಭ್ಯರ್ಥಿ

ಚಿಕ್ಕಪೇಟೆ ವಿಧಾನಸಭಾಕ್ಷೇತ್ರದಲ್ಲಿ ಉದಯ್ ಗರುಡಾಚಾರ್ ಹೆಸರು ಕೇಳದೇ ಇರೋರು ಇರ್ಲಿಕ್ಕಿಲ್ಲ. ಅಷ್ಟೊಂದು ಖ್ಯಾತಿಗಳಿಸಿರೋ ಉದಯ್ ಗರುಡಾಚಾರ್ ಈ ಬಾರಿ ಚಿಕ್ಕಪೇಟೆಯಿಂದ ಕಣಕ್ಕಿಳಿತಿದ್ದಾರೆ. ಅಂದ್ಹಾಗೆ 2008ರಲ್ಲೇ ಉದಯ್ ಗರುಡಾಚಾರ್ ಈ ಕ್ಷೇತ್ರದಿಂದ ಕಣಕ್ಕಿಳಿಬೇಕಿತ್ತು. ಆದ್ರೆ ಪಕ್ಷದ ನಾಯಕರು ಹೇಮಚಂದ್ರ ಸಾಗರ್ ಗೆ ಟಿಕೆಟ್ ಕೊಡ್ತೀವಿ ನಂತ್ರ ನಿಮಗೆ ಕೊಡ್ತೀವಿ ಅವಕಾಶ ಮಾಡಿಕೊಡಿ ಅಂತಾ ಕೇಳಿಕೊಂಡಿದ್ರು. ಹಾಗಾಗಿ ಪಕ್ಷಕ್ಕಾಗಿ ಗರುಡಾಚಾರ್ ಅವ್ರು ಕ್ಷೇತ್ರ ಬಿಟ್ಟು ಕೊಟ್ರು. ಅಲ್ಲದೆ ಹೇಮಚಂದ್ರ ಸಾಗರ್ ಅವ್ರ ಬೆನ್ನಿಗೆ ನಿಂತು ಗೆಲ್ಲಿಸಿಕೊಟ್ರು. ಇದಾದ ಮೇಲೆ ಹೇಮಚಂದ್ರ ಸಾಗರ್ ಮಾತ್ರ ಕ್ಷೇತ್ರದಲ್ಲಿ ಕೆಲ್ಸ ಮಾಡಿಲ್ಲ. 2013ರ ಕ್ಕೆ ಬಂದಾಗ ಇಲ್ಲಿ ಬಿಜೆಪಿ ಶಾಸಕರ ವರ್ತನೆಯಿಂದಾಗಿ ಹವಾ ಕಡಿಮೆ ಆಗಿತ್ತು. ಮತ್ತು ಬಿಜೆಪಿಯ ಒಳ ಜಗಳ ದೊಡ್ಡದಾಗಿ ಸದ್ದು ಮಾಡ್ತಿತ್ತು. ಆಗಲೂ ಅಷ್ಟೇ ಉದಯ್ ಗರುಡಾಚಾರ್ ಅವ್ರಿಗೆ ಕೊನೆ ಕ್ಷಣದಲ್ಲಿ ಅಂದ್ರೆ ಚುನಾವಣೆಗೆ ಕೆಲವು ದಿನಗಳಿವೆ ಅಂದಾಗ ಟಿಕೆಟ್ ನೀಡಲಾಯ್ತು. ಆದ್ರೆ ತನಗೆ ಸಿಕ್ಕ ಕೊನೆ ಘಳಿಗೆಯಲ್ಲೂ ಕೂಡಾ ಬಿಜೆಪಿ, ಕೆಜೆಪಿ ಅನ್ನೋ ಗೊಂದಲಗಳ ಮಧ್ಯೆ ಪ್ರಚಾರ ಮಾಡಿ ಉದಯ್ ಗರುಡಾಚಾರ್ ಮೂವತ್ತು ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದ್ರು ಅಂದ್ರೆ ಅವರಿಗೆ ಕ್ಷೇತ್ರದಲ್ಲಿದ್ದ ವಯ್ಯಕ್ತಿಕ ವರ್ಚಸ್ಸೇ ಕಾರಣ. ಆದ್ರೆ ಹೀಗೇಲ್ಲಾದ್ರೂ ಕೂಡಾ ಉದಯ್ ಗರುಡಾಚಾರ್ ಮಾತ್ರ ಕ್ಷೇತ್ರ ಬಿಟ್ಟು ಹೋಗಿಲ್ಲ ನಿರಂತರವಾಗಿ ಕ್ಷೇತ್ರದಲ್ಲಿ ಓಡಾಡ್ತಾ ಜನರಿಗೆ ಹತ್ತಿರವಾಗ್ತಾ ಕೆಲ್ಸ ಮಾಡ್ತಾನೇ ಇದ್ದಾರೆ. ಬಿಬಿಎಂಪಿಯಲ್ಲಿ ಇವತ್ತು ಈ ಕ್ಷೇತ್ರದಲ್ಲಿ 3 ವಾರ್ಡ್ ಗಳಲ್ಲಿ ಬಿಜೆಪಿಯನ್ನು ಗರುಡಾಚಾರ್ ಗೆಲ್ಲಿಸಿಕೊಟ್ಟಿದ್ದಾರೆ ಅಂದ್ರೆ ಅವರ  ವರ್ಚಸ್ಸು, ಪ್ರಭಾವ ಎಷ್ಟಿದೆ ಅನ್ನೋದು ಗೊತ್ತಾಗತ್ತೆ. ಇನ್ನು ಇವ್ರ ತಂದೆ ಗರುಡಾಚಾರ್ ಅವ್ರು ಪೊಲೀಸ್ ಕಮೀಶನರ್ ಆಗಿದ್ದಾಗ ಮಾಡಿದ ಒಳ್ಳೆ ಕೆಲ್ಸಗಳನ್ನು ಜನ ಇನ್ನೂ ನೆನಪಿಟ್ಕೊಂಡಿದ್ದಾರೆ. ಉದಯ್ ಗರುಡಾಟಾರ್ ಎಲ್ಲಾ ಸಮುದಾಯದವರನ್ನು ಸಮನಾಗಿ ನೋಡ್ತಾರೆ ಮತ್ತು ಅವ್ರ ಜತೆ ಬೆರೆಯುತ್ತಾರೆ ಅಲ್ಲದೆ ಅವ್ರ ಕಷ್ಟಗಳಿಗೆ ಸ್ಪಂದಿಸ್ತಾರೆ. ಲಾಸ್ಟ್ ಟೈಮ್ ಮಳೆ ಬಂದು ಮನೆ ಕಳೆದುಕೊಂಡಾಗ ಅದೆಷ್ಟೋ ಜನರಿಗೆ ಮನೆ ಮಾಡಿಕೊಟ್ಟಿದ್ದಾರೆ. ಬೇರೆ ಬೇರೆ ಸಮಸ್ಯೆಗಳು ಅಂತಾ ಬಂದಾಗ ಪರಿಹಾರ ಕಲ್ಪಿಸಿಕೊಟ್ಟಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಜನಸಾಮಾನ್ಯರ ಕೈಗೆ ಸಿಕ್ತಾರೆ, ರೌಡಿಸಂ ಮಾಡಲ್ಲ, ಸಜ್ಜನ ವ್ಯಕ್ತಿ ಅಂತಾ ಗುರುತಿಸಿಕೊಂಡಿದ್ದಾರೆ. ಹಾಗಾಗಿ ಇಲ್ಲಿನ ಜನರಿಗೆ ಇವ್ರ ಮೇಲೆ ಎಲ್ಲಿಲ್ಲದ ಪ್ರೀತಿ. ಈಗಿನ ಶಾಸಕರ ಆಡಳಿತ ನೋಡಿದ ಜನ ಛೇ ಕಳೆದ ಬಾರಿಯೇ ಉದಯ್ ಅವ್ರನ್ನು ಗೆಲ್ಲಿಸಬೇಕಿತ್ತು ಅಂತಾ ಅಂದ್ಕೊತಿರೋದು ನೋಡಿದ್ರೆ ಈ ಬಾರಿ ಅಂತೂ ಉದಯ್ ಗರುಡಾಚಾರ್ ಗೆಲ್ಲೋದು ಕನ್ಫರ್ಮ್.

ತೆನೆ ಹೊರೋದ್ಯಾರು?

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಹವಾ ಕಡಿಮೆ ಇಲ್ಲ, ಇಲ್ಲಿ ಸ್ವಲ್ಪ ನಾಯಕರ ಕೊರತೆ ಇರೋದ್ರಿಂದ ಪಕ್ಷ ಸಂಘಟನೆ ಆಗದಿಲ್ಲ ಅನ್ನೋದನ್ನು ಬಿಟ್ರೆ ಖಂಡಿತವಾಗ್ಲೂ ಜೆಡಿಎಸ್ ಕೂಡಾ ರಾಷ್ರೀಯ ಪಕ್ಷಗಳಿಗೆ ಫೈಟ್ ಕೊಡುತ್ತೆ. ಈ ಬಾರಿ ಇಲ್ಲಿಂದ ಕಣಕ್ಕಿಳಿಯೋದಕ್ಕೆ ತನ್ವೀರ್  ಮತ್ತು ಮುಖಾರಾಂ ಅನ್ನೋ ಇಬ್ಬರ ಹೆಸರು ಕೇಳಿ ಬರ್ತಿದೆ. ಬಹುಷಃ ಜೆಡಿಎಸ್ ನಾಯಕರು ಇವ್ರ ಬೆನ್ನಿಗೆ ನಿಂತು ಸಪೋರ್ಟ್ ಮಾಡಿದ್ರೆ ಒಂದು ಮಟ್ಟಕ್ಕೆ ಫೈಟ್ ಕೋಡಬಹುದು.

ಎಸ್ ಡಿಪಿಐ ಅಭ್ಯರ್ಥಿ

ಮುಜಾಹಿದ್ ಪಾಶಾ, ಕೌನ್ಸಿಲರ್

ಹೌದು ಚಿಕ್ಕಪೇಟೆ ಕ್ಷೇತ್ರದಲ್ಲಿ ಎಸ್ ಡಿಪಿಐ ಕೂಡಾ ಸ್ವಲ್ಪ ಸ್ಟ್ರಾಂಗ್ ಇದೆ.  ಈ ಬಾರಿ ಕಾರ್ಪೋರೇಟರ್ ಆಗಿರೋ ಮುಜಾಹಿದ್ ಪಾಶಾ ಅವ್ರೇ ವಿಧಾನಸಭಾ ಚುನಾವಣೆಗೆ ಸ್ಪರ್ದಿಸ್ತಾರೆ. ಕಳೆದ ಬಾರಿಯ ಕಾರ್ಪೋರೇಟರ್ ಎಲೆಕ್ಷನ್ ನಲ್ಲಿ ಕಾಂಗ್ರೇಸ್ ನ ಪ್ರಬಲ ಮುಖಂಡರಾಗಿದ್ದ ಉದಯ್ ಶಂಕರ್ ಅವ್ರನ್ನೇ ಸೋಲಿಸಿದ್ದಾರೆ ಅಂದ ಮೇಲೆ ಕ್ಷೇತ್ರದಲ್ಲಿ ಇವ್ರಿಗೆ ಸ್ವಲ್ಪ ಹಿಡಿತವಿರೋದು ನಿಜ. ಇವ್ರು ಕಾಂಗ್ರೆಸ್ ಗೆ ಹೋಗೋ ಮತಗಳನ್ನು ಕಸಿಯೋದ್ರಲ್ಲಿ ಅನುಮಾನ ಇಲ್ಲ, ಇವ್ರು ಗೆಲ್ತಾರೋ ಬಿಡ್ತಾರೋ ಆದ್ರೆ ಇವ್ರಿಂದ ಕಾಂಗ್ರೆಸ್ ಗೆ ದೊಡ್ಡ ನಷ್ಟ ಆಗೋದಂತೂ ಖಚಿತ.

ಚಿಕ್ಕ ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 235000 ಮತದಾರರಿದ್ದಾರೆ. ಎಸ್ಸಿ ಎಸ್ಟಿ, ಹಿಂದುಳಿದ ವರ್ಗಗಳ ಮತದಾರರೇ ಇಲ್ಲಿ ನಿರ್ಣಾಯಕರು. ಇನ್ನು ಇಲ್ಲಿ ಶಾಸಕರನ್ನು ಸೋಲಿಸು ಜನರಿಂದ ಹೆಚ್ಚಾಗಿ ಸ್ವಪಕ್ಷೀಯರೇ ಪ್ಲಾನ್ ಮಾಡಿದ್ದಾರೆ. ಯಾಕಂದ್ರೆ ಆರ್ ವಿಡಿ ತಾನು ತನ್ನವರು ಬಿಟ್ಟು ಬೇರೆ ಯಾರನ್ನೂ ಕೂಡಾ ಹತ್ತಿರ ಸೇರಿಸಿಕೊಂಡಿಲ್ಲ. ತಮ್ಮ ಮಗನನ್ನು ಕಾರ್ಪೋರೇಟರ್ ಕೂಡಾ ಮಾಡಿದ್ದಾರೆ ಇದು ಕಾಂಗ್ರೆಸ್ ನಲ್ಲಿರೋ ಬಹುತೇಕ ನಾಯಕರಿಗೆ ಅಸಮಾಧಾನವನ್ನು ಉಂಟು ಮಾಡಿದೆ. ಇನ್ನುಳಿದಂತೆ ಈ ಬಾರಿ ಎಸ್ ಡಿಪಿಐ ಹಾಗೂ ಜೆಡಿಎಸ್ ಕೂಡಾ ಪ್ರಬಲ ಪೈಟ್ ಕೊಡೋ ಕಾರಣ ಕಾಂಗ್ರೆಸ್ ಗೆ ಬರೋ ಮತಗಳು ವಿಭಜನೆ ಆಗಿ ಆರ್ ವಿ ದೇವರಾಜ್ ಗೆ ನಷ್ಟವಾಗೋದು ಖಂಡಿತಾ.

ಈ ಬಾರಿ ಚಿಕ್ಕಪೇಟೆ ಕ್ಷೇತ್ರದಲ್ಲಿ ಆರ್ ವಿ ದೇವರಾಜ್ ಸೋಲೋದು ಖಚಿತ,ಬಿಜೆಪಿಯ ಉದಯ್ ಗರುಡಾಚಾರ್ ಗೆಲ್ಲೋದು ಗ್ಯಾರಂಟಿ ಅಂತಾ ಇಂಟೆಲಿಜೆನ್ಸ್ ರಿಪೋರ್ಟ್ ಕೂಡಾ ಹೇಳ್ತಿದೆ. ಜತೆಗೆ ಖುದ್ದು ಸಿಎಂ ಸಿದ್ಧರಾಮಯ್ಯನವರೇ ಆರ್ ವಿ ದೇವರಾಜ್ ಗೆ ಸೋಲೋ ಭೀತಿ ಇದೆ ಹುಷಾರಿಗಿರಿ ಅಂತಾ ಎಚ್ಚರಿಕೆ ನೀಡಿರೋದು ನೋಡಿದ್ರೆ ಇಲ್ಲಿ ಕಾಂಗ್ರೆಸ್ ಸೋಲೋದು ಪಕ್ಕಾ ಅನ್ನುವಂತಿದೆ. ಇನ್ನುಳಿದಂತೆ ಸ್ವಪಕ್ಷೀಯರ ವಿರೋಧ ಜತೆಗೆ ಎಸ್ ಡಿಪಿಐ ಹಾಗೂ ಜೆಡಿಎಸ್ ಗೆ ಕಾಂಗ್ರೆಸ ಮತಗಳು ಹರಿದು ಹಂಚಿ ಹೋಗೋದ್ರಿಂದ ಬಿಜೆಪಿಗೆ ಅದು ಲಾಭವಾಗತ್ತೆ. ಹಾಗಾಗಿ ಈ ಬಾರಿ ಉದಯ್ ಗರುಡಾಚಾರ್ ಇಲ್ಲಿ ಗೆಲ್ತಾರೆ ಅಂತಿದ್ದಾರೆ ರಾಜಕೀಯ ವಿಶ್ಲೇಷಕರು.