ಚುನಾವಣಾ ಕುರುಕ್ಷೇತ್ರ 2018 ಗಾಂಧಿನಗರ(ಬೆಂಗಳೂರು)

ಗಾಂಧಿನಗರ ವಿಧಾನಸಬಾ ಕ್ಷೇತ್ರ

ಈಗ ನಾವು ಹೇಳ್ತಿರೋದು ಗಾಂಧಿನಗರ ವಿಧಾನಸಭಾ ಕ್ಷೇತ್ರದ ಬಗ್ಗೆ. ಮಾಜಿ ಸಚಿವ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿರೋ ದಿನೇಶ್ ಗುಂಡೂರಾವ್ ಇಲ್ಲಿನ ಶಾಸಕರಾಗಿದ್ದಾರೆ, ಹಾಗಿದ್ರೆ  ಈ ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಹವಾ ಹೇಗಿದೆ..2018ರ ಮಹಾ ಸಮರಕ್ಕೆ ಕ್ಷೇತ್ರ ಹೇಗೆ ಸಜ್ಜಾಗಿದೆ ನೋಡೋಣ

ಗಾಂಧಿನಗರ ವಿಧಾನಸಭಾ ಕ್ಷೇತ್ರ. ಬೆಂಗಳೂರಿನ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದು. ರಾಜಧಾನಿ ಬೆಂಗಳೂರು ಅಂದ್ರೆ ತಟ್ಟನೆ ನೆನಪಾಗೋದೇ ಗಾಂಧೀನಗರ. ಇಲ್ಲಿ ಏನಿದೆ ಏನಿಲ್ಲ…ಇಡೀ ದೇಶ ವಿದೇಶಗಳೇ ಕಣ್ಣು ಬಿಟ್ಟು ನೋಡೋ ನಮ್ಮ ಕನ್ನಡ ಚಿತ್ರರಂಗದ ಮೂಲಸ್ಥಾನವೇ ಈ ಗಾಂಧಿ ನಗರ. ಇಡೀ ಸಿನಿಮಾ ಲೋಕವೇ ಇಲ್ಲಿದೆ. ರಾಜಧಾನಿಯ ಸೊಬಗು ತುಂಬಿರೋದೇ ಇಲ್ಲಿ. ಇನ್ನು ಹಲವಾರು ದಶಕಗಳಿಂದ ಇಡೀ ನಗರಕ್ಕೆ ಆಶ್ರಯ ತಾಣವಾಗಿರೋ ಬೆಂಗಳೂರಿನ ಜನರ ಜೀವನಾಡಿ ಬಿಎಂಟಿಸಿ ಬಸ್ ನಿಲ್ದಾಣ ಮೆಜೆಸ್ಟಿಕ್ ಹಾಗೇ  ಕೆಂಪೇಗೌಡ ಬಸ್ ನಿಲ್ದಾಣ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣ ಇರೋದು ಇದೇ ಕ್ಷೇತ್ರದಲ್ಲಿ. ಹಾಗೇನೇ ಪ್ರೀಡಂ ಪಾರ್ಕ್ ಸೇರಿದಂತೆ ಇಂಟರ್ ನ್ಯಾಷನಲ್ ಹೋಟೇಲ್ ಗಳು ಕೂಡಾ ಗಾಂಧಿನಗರದಲ್ಲಿದೆ. ಇನ್ನು ದೇಶ ವಿದೇಶಗಳಿಂದ ಬರೋ ದೊಡ್ಡ ದೊಡ್ಡ ಬಿಸಿನೆಸ್ ಮ್ಯಾನ್ ಗಳು ಮೊದಲು ಬರೋದೇ ಇಲ್ಲಿಗೆ. ಹೀಗಿರೋ ಗಾಂಧಿನಗರ ರಾಜಕೀಯದಲ್ಲೂ ದೊಡ್ಡ ಸದ್ದು ಮಾಡಿದೆ. ಮಾಜಿ ಮುಖ್ಯಮಂತ್ರಿ ದಿವಂಗತ ಗುಂಡೂರಾವ್ ಅವ್ರ ಪುತ್ರ ಮಾಜಿ ಸಚಿವ ,ಕೆಪಿಸಿ ಕಾರ್ಯಾಧ್ಯಕ್ಷರಾಗಿರೋ ದಿನೇಶ್ ಗುಂಡೂರಾವ್ ಅವ್ರ ಕಾರ್ಯಸ್ಥಾನವೇ ಈ ಕ್ಷೇತ್ರ. ಇದೇ ಕ್ಷೇತ್ರದಲ್ಲಿ ಸೋಲಿಲ್ಲದ ಸರದಾರನಾಗಿ ಅವ್ರು ಮುಂದುವರೆದಿದ್ದಾರೆ. ಹಾಗಿದ್ರೆ ಈ ಬಾರಿ ಯ ಚುನಾವಣೆಯಲ್ಲಿ ಏನಾಗಬಹುದು? ಇಲ್ಲಿನ ಇನ್ನೊಂದಷ್ಟು ವಿಚಾರಗಳನ್ನು ಹೇಳ್ತೀವಿ ಆದ್ರೆ ಅದಕ್ಕೂ ಮೊದಲು 2013ರ ಮತಬರಹ ನೋಡೋಣ.

2013ರ ಮತಬರಹ

ಇದು 2013ರ ಮತಬರಹ. ಕಾಂಗ್ರೆಸ್ ನಿಂದ ದಿನೇಶ್ ಗುಂಡೂರಾವ್ ಅವ್ರು 54968 ಮತಗಳನ್ನು ಪಡೆಯೋದ್ರ ಮೂಲಕ ಗೆದ್ರು. ಬಿಜೆಪಿಯ ಪಿಸಿ ಮೋಹನ್ ಅವ್ರು ಕೇವಲ 32361 ಮತಗಳನ್ನು ಪಡೆದ್ರೆ ಬಿಎಸ್ಆರ್ ಪಿಸಿ ಯ ವಿ ನಾಗರಾಜ್ 10875 ಮತಗಳು ಹಾಗೂ ಜೆಡಿಎಸ್ ನ ಸುಭಾಷ್ ಭರಣಿ ಅವ್ರು ಕೇವಲ 7418 ಮತಗಳನ್ನು ಪಡೆದ್ರು.

ಅಂದ್ಹಾಗೆ ಗಾಂಧಿನಗರ ವಿಧಾನಸಭಾ ಕ್ಷೇತ್ರ ಮಾಜಿ ಸಚಿವ ದಿನೇಶ್ ಗುಂಡೂರಾವ್ ಅವ್ರ ಭದ್ರ ಕೋಟೆ ಅನ್ನೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಯಾಕಂದ್ರೆ 1999 ರಿಂದ ಸತತವಾಗಿ ನಾಲ್ಕು ಬಾರಿ ಅಂದ್ರೆ 1999, 2004, 2008 ಹಾಗೂ 2013ರಲ್ಲಿ  ದಿನೇಶ್ ಗುಂಡೂರಾವ್ ಗೆಲ್ತಾನೆ ಬಂದು ಸೋಲಿಲ್ಲದ ಸರದಾರನಾಗಿದ್ದಾರೆ. ಸತತ 18-19 ವರ್ಷಗಳಿಂದ ಇವ್ರೇ ಇಲ್ಲಿ ಶಾಸಕರು. ಹಾಗಾಗಿ ಕ್ಷೇತ್ರದ ಜನರಿಗೆ ಇವ್ರ ಬಗ್ಗೆ ಎಷ್ಟು ಪ್ರೀತಿ ಇದೆ ಒಳ್ಳೆ ಅಭಿಪ್ರಾಯ ಇದೆ ಅನ್ನೋದು ಗೊತ್ತಾಗತ್ತೆ. ಇದ್ರ ಜತೆಗೆ ದಿನೇಶ್ ಗುಂಡೂರಾವ್ಅವ್ರಿಗೆ ಪ್ಲಸ್ ಪಾಯಿಂಟ್ ಅಂದ್ರೆ ಅವ್ರ ಪತ್ನಿ ತಬು ದಿನೇಶ್ ರಾವ್. ಬಹಳಷ್ಟು ರಾಜಕಾರಣಿಗಳ ಪತ್ನಿಯರು ರಾಜಕೀಯ ಅಂದಾಗ ತುಂಬಾ ದೂರಾನೇ ಇರ್ತಾರೆ ಆದ್ರೆ, ದಿನೇಶ್ ಗುಂಡೂರಾವ್ ಪತ್ನಿ ತಬು ದಿನೇಶ್ ರಾವ್ ಮಾತ್ರ ಹಾಗಲ್ಲ. ತಮ್ಮ ಪತಿಯ ರಾಜಕೀಯ ವಿಚಾರಗಳಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಅದ್ರ ಬಗ್ಗೆ ಕೂಡಾ ಹೇಳ್ತೀವಿ ಜತೆಗೆ  ಕ್ಷೇತ್ರದಲ್ಲಿ ದಿನೇಶ್ ಗುಂಡೂರಾವ್ ಅವ್ರಿಗೆ ಫೈಟ್ ಕೊಡೋಕೆ ಬೇರೆ ಬೇರೆ ಪಕ್ಷದಿಂದ ಯಾರ್ಯಾರು ಕಣಕ್ಕಿಳಿತಾರೆ ಅವ್ರ ಬಲಾಬಲ ಏನು ನೋಡೋಣ ಬನ್ನಿ

ಕೈ ಅಭ್ಯರ್ಥಿ

 

ದಿನೇಶ್ ಗುಂಡೂರಾವ್, ಮಾಜಿ ಸಚಿವರು ಕೆಪಿಸಿ ಕಾರ್ಯಾಧ್ಯಕ್ಷರು.

ಹೌದು ಗಾಂಧಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಸತತ ನಾಲ್ಕು ಚುನಾವಣೆಯನ್ನು ಗೆದ್ದಿರೋ  ಮಾಜಿ ಸಚಿವ ದಿನೇಶ್ ಗುಂಡೂರಾವ್ ಅವ್ರು ಈ ಬಾರಿ ಮತ್ತೊಮ್ಮೆ ಕಣಕ್ಕಿಳಿತಿದ್ದಾರೆ. ಈಗಾಗಲೇ 4 ಬಾರಿ ಗೆದ್ದು ತಾವೇನು ಅನ್ನೋದನ್ನು ಪ್ರೂವ್ ಮಾಡಿರೋ ದಿನೇಶ್ ಗುಂಡೂರಾವ್ 5 ನೇ ಗೆಲುವಿಗೆ ರೆಡಿಯಾಗಿದ್ದಾರೆ. ಬಹಳಷ್ಟು ವರ್ಷಗಳಿಂದ ಕ್ಷೇತ್ರದ ಬಗ್ಗೆ ಗೊತ್ತಿರೋ ಕಾರಣ ದಿನೇಶ್ ಗುಂಡೂರಾವ್ ಅವ್ರಿಗೆ ಇಲ್ಲಿನ ಪ್ರತಿ ಗಲ್ಲಿ ಗಲ್ಲಿಗಳೂ ಮತದಾರರೂ ಅವ್ರ ನಾಡಿಮಿಡಿತ ಚೆನ್ನಾಗಿ ಗೊತ್ತು. ಈಗಾಗಲೇ ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಪರಿಹರಿಸುತ್ತಾ ಜನಮನವನ್ನು ಗೆದ್ದಿದ್ದಾರೆ. ಇವ್ರ ಅಭಿವೃದ್ಧಿ ಕೆಲ್ಸಗಳನ್ನು ಹೇಳೋದಾದ್ರೆ ಮೆಜೆಸ್ಚಿಕ್ ಸುತ್ತಮುತ್ತಾ ನಡೀತಿರೋ ಟೆಂಡರ್ ಶ್ಯೂರ್ ಕೆಲ್ಸಗಳು,4 ಇಂಡೋರ್ ಸ್ಟೇಡಿಯಮ್ ಗಳು,ಪಾರ್ಕ್ ಗಳ ಅಭಿವೃದ್ಧಿ, ಸ್ಲಂ ಬೋರ್ಡ್ ನಿಂದ ರಾಜ್ಯದಲ್ಲಿ ಹೆಚ್ಚಿನ ಮನೆಗಳನ್ನು ಇಲ್ಲಿನ ಬಡವರಿಗೆ ವಿತರಿಸುವಲ್ಲೂ ಇವ್ರು ಯಶಸ್ವಿಯಾಗಿದ್ದಾರೆ. ಇ್ನನು ಫ್ರೀಡಂ ಪಾರ್ಕ್ ನಲ್ಲಿ ಮಲ್ಟಿ ಪಾರ್ಕಿಂಗ್ ವ್ಯವಸ್ಥೆ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಬಳಿಯಿಂದ ಸುಜಾತ ಥಿಯೇಟರ್ ವರೆಗೆ 8 ಲೈನ್ ಕಾರಿಡಾರ್, ಕ್ಷೇತ್ರದ ತುಂಬೆಲ್ಲಾ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಸೇರಿದಂತೆ ಹಲವಾರು ಅಭಿವೃದ್ಧಿ ಕೆಲ್ಸಗಳನ್ನು ಮಾಡಿದ್ದಾರೆ. ಇನ್ನು ಇವ್ರ ಬೆನ್ನಿಗೆ ನಿಂತಿರೋ ಪತ್ನಿ ತಬು ದಿನೇಶ್ ರಾವ್ ಅವ್ರ ಬಗ್ಗೆ ಹೇಳಲೇ ಬೇಕು. ತಬುದಿನೇಶ್ ರಾವ್ ವಿದ್ಯಾವಂತೆ, ಬುದ್ಧಿವಂತೆ, ಪತಿಯ ಕೆಲ್ಸಗಳಲ್ಲಿ ತಾವೂ ಕೂಡಾ ಸೇರಿಕೊಂಡು ಕ್ಷೇತ್ರದಲ್ಲಿ ಹೆಸರು ಮಾಡಿದವರು, ಈಗಾಗಲೇ ಆರ್ ಗುಂಡೂರಾವ್ ಫೌಂಡೇಶನ್ ಅನ್ನೋ ಎನ್ ಜಿ ವೋ ಸ್ಥಾಪನೆ ಮಾಡಿ ಅದರ ಮುಖಾಂತರ ಅಭಿವೃದ್ಧಿ ಕೆಲ್ಸಗಳನ್ನು ಮಾಡ್ತಿದ್ದಾರೆ. ಉಚಿತ ಆರೋಗ್ಯ ತಪಾಸಣೆ, ಉದ್ಯೋಗ ಮೇಳ, ಕ್ರೀಟಾ ಚಟುವಟಿಕೆಗಳು, ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ, ಕ್ಷೇತ್ರದ ಅಭಿವೃದ್ಧಿಗೋಸ್ಕರ ಸುಮಂಗಲಿ ಪೂಜೆ ಸೇರಿದಂತೆ ಜನರ ಸಮಸ್ಯೆಯನ್ನು ಆಲಿಸಿ ಪರಿಹರಿಸ್ತಿದ್ದಾರೆ. ಹಾಗೇನೇ ಸರ್ಕಾರದ ಸವಲತ್ತುಗಳನ್ನು ಜನರಿಗೆ ತಲುಪಿಸುವಲ್ಲಿ ಇವ್ರ ಪಾತ್ರ ಬಹಳಷ್ಟಿದೆ. ಇದೆಲ್ಲದರ ಜತೆಗೆ ಜನ ಸಾಮಾನ್ಯರ  ಜತೆ ಬೆರೆಯುವ ಇವ್ರ ಮೇಲೆ ಇಲ್ಲಿನ ಜನರಿಗೆ ಅಪಾರ ಪ್ರೀತಿ ಇದೆ. ಇದು ದಿನೇಶ್ ಗುಂಡೂರಾವ್ ಅವ್ರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸತ್ತೆ.

ಕಮಲ ಮುಡಿಯೋರ್ಯಾರು?

ಕಳೆದೆರಡು ಬಾರಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿದ್ದ  ಸಂಸದ ಪಿಸಿ ಮೋಹನ್ ಅವ್ರು ಇಲ್ಲಿ ಸೋತಿದ್ರು. ಹಾಗಾಗಿ ಸುಮಾರು 10 ವರ್ಷಗಳಿಂದ  ಬಿಜೆಪಿಗೆ ಪ್ರಬಲ ನಾಯಕರಿಲ್ಲದಂತಾಗಿದೆ. ಇನ್ನು ಮೋಹನೋ ಅವ್ರು ಸೋತ ನಂತ್ರ ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಒತ್ತು ಕೊಟ್ಟಿಲ್ಲ. ಹಾಗಾಗಿ ಇಲ್ಲಿ ನಾಯಕರ ಕೊರತೆ ಮತ್ತು ಸಂಘಟನೆ ಕೊರತೆ ಬಿಜೆಪಿಗೆ ಇದೆ. ಹಾಗಿದ್ರೂ ಕೂಡಾ ಈ ಬಾರಿ ಬಿಜೆಪಿಯಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಅದ್ರಲ್ಲಿ ಮಾಜಿ ಕ್ರೀಡಾ ಪ್ರಾಧಿಕಾರದ ಅಧ್ಯಕ್ಷರಾಗಿದ್ದ, ಮಾಜಿ ಕಾರ್ಪೋರೇಟರ್ ಶಿವಪ್ಪನವರು, ಮಾಜಿ ಕಾರ್ಪೋರೇಟರ್ ಆಗಿದ್ದ ಪದ್ಮರಾಜ್ ಅವ್ರು, ಇನ್ನೊಬ್ರು ಶಿವಕುಮಾರ್ ಅಂತಾ ಇದ್ದಾರೆ. ಅಷ್ಟೇ ಅಲ್ಲದೆ ಕಾಂಗ್ರೆಸ್ ನಿಂದ ಬಿಜೆಪಿ ಗೆ ಬಂದಿರೋ ಮಾಜಿ ಶಾಸಕ ನೆಲ ನರೇಂದ್ರ ಬಾಬು ಅವ್ರು ಕೂಡಾ ಗಾಂಧಿ ನಗರ ಕ್ಷೇತ್ರದ ಪ್ರಬಲ ಆಕಾಂಕ್ಷಿ. ನರೇಂದ್ರ ಬಾಬು ಅವ್ರು ಈ ಹಿಂದೆ ಪಕ್ಷೇತರರಾಗಿ ಆಪಲ್ ಚಿಹ್ನೆಯಿಂದ ರಾಜಾಜಿ ನಗರದಲ್ಲಿ ನಿಂತು ಫೈಟ್ ಕೊಟ್ಟಿದ್ರು. ಆ ನಂತ್ರ ಮಹಾಲಕ್ಷ್ಮಿ ಲೇ ಔಟ್ ನಲ್ಲಿ  ಕಾಂಗ್ರೆಸ್ ನಿಂದ ನಿಂತು ಗೆದ್ದು ಶಾಸಕರಾಗಿದ್ರು. ಆದ್ರೆ ಈ ಬಾರಿ ಬಿಜೆಪಿ ಗೆ ಬಂದಿರೋ ಕಾರಣ ಇಲ್ಲಿಂದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಹಾಗಾಗಿ ಬಿಜೆಪಿ ಯಾರಿಗೆ ಮಣೆ ಹಾಕತ್ತೋ ಕಾದು ನೋಡಬೇಕು

ತೆನೆ ಹೊರೋದ್ಯಾರು?

ಜೆಡಿಎಸ್ ನಿಂದ ಗಾಂಧಿನಗರದಲ್ಲಿ ಸ್ಪರ್ಧಿಸೋಕೆ ಸರ್ವೋದಯ ನಾರಾಯಣ ಸ್ವಾಮಿ ಅವ್ರು ರೆಡಿಯಾಗಿದ್ದಾರೆ. ಮೂಲತಃ ಸ್ಥಳೀಯರು. ಸರ್ವೋದಯ ಶಿಕ್ಷಣ ಸಂಸ್ಥೆಯ ಸ್ಥಾಪಕರು. ಉದ್ಯಮಿ. ಕಳೆದ ಕೆಲ ವರ್ಷಗಳಿಂದ ರಾಜಕೀಯದಲ್ಲಿರೋ ಇವ್ರು ಈ ಬಾರಿ ಗಾಂಧಿ ನಗರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ನಿಲ್ತಿದ್ದಾರೆ. ಕಳೆದ ಬಾರಿ ಜೆಡಿಎಸ್ ನಿಂದ ನಿಂತಿದ್ದ ಸುಭಾಷ್ ಭರಣಿ ಅವ್ರು ಇಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ರು. ಆದ್ರೆ ಅದಾದ ನಂತ್ರ ಕ್ಷೇತ್ರದಲ್ಲಿ ಭರಣಿ ಅವ್ರು ಕಾಣಿಸಿಕೊಂಡಿರ್ಲಿಲ್ಲ. ಹಾಗಾಗಿ ಈ ಬಾರಿ ನಾರಾಯಣ ಸ್ವಾಮಿ ಅವ್ರು ನಿಲ್ಲೋದ್ರಲ್ಲಿ ಅನುಮಾನ ಇಲ್ಲ. ಸತತವಾಗಿ ದಿನೇಶ್ ಗದುಂಡೂರಾವ್ ಅವ್ರು ಇಲ್ಲಿ ಗೆಲ್ತಾ ಬಂದಿರೋದ್ರಿಂದ ಈ ಬಾರಿ ಇಲ್ಲಿನ ಜನ ಹೊಸಬರನ್ನು ಆಯ್ಕೆ ಮಾಡೋಣ ಅಂತೇನಾದ್ರು ಯೋಚನೆ ಮಾಡಿದ್ರೆ ಅದರ ಲಾಭ ನಾರಾಯಣ ಸ್ವಾಮಿಗೆ ಆಗಬಹುದಷ್ಟೇ ಹೋರತು ದೊಡ್ಡ ಮಟ್ಟದ ಗೆಲುವಿನ ನಿರೀಕ್ಷೆ ಮಾಡುವ ಹಾಗಿಲ್ಲ.

ಈ ಕ್ಷೇತ್ರದಲ್ಲಿ ಒಟ್ಟು 230000 ಮತದಾರರಿದ್ದು. ಒಂದೇ ಸಮುದಾಯದವರು ನಿರ್ಣಾಯಕತರು ಅಂತ ಈ ಕ್ಷೇತ್ರದಲ್ಲಿ ಯಾರೂ ಇಲ್ಲ .ಒಂದು ವರ್ಗಕ್ಕೆ ಸೇರಿದವರು ಜಾಸ್ತಿ ಇನ್ನೊಂದು ವರ್ಗಕ್ಕೆ ಸೇರಿದವರು ಕಡಿಮೆ ಅಂತಿಲ್ಲ. ಬದಲಾಗಿ ಎಲ್ಲಾ ಜಾತಿ ಧರ್ಮಕ್ಕೆ ಸೇರಿದ ಮತದಾರರು ಇಲ್ಲಿದ್ದಾರೆ. ವಿವಿಧ ಭಾಷೆ ಹಾಗೂ ವಿವಿಧ ಜಾತಿ ವಿವಿಧ ಧರ್ಮಗಳವ್ರು ಇಲ್ಲಿರೋ ಕಾರಣ  ಈ ಕ್ಷೇತ್ರವನ್ನು ಮಿನಿ ಭಾರತ ಅಂತಾನೂ ಕರಿತಾರೆ. ಬೆಂಗಳೂರಿನ ಹೃದಯಬಾಗದಲ್ಲಿರೋ ಗಾಂಧಿನಗರದಲ್ಲಿ  ಗೆಲ್ಲೋದು ಅಂದ್ರೆ ಅಷ್ಟು ಸುಲಭವಲ್ಲ ಜನರ ಜತೆಗೆ ಒಡನಾಟ ಹಾಗೂ ಅಭಿವೃದ್ಧಿ ಮಾಡಿದರಷ್ಟೇ ಇಲ್ಲಿ ಗೆಲ್ಲಬಹುದು ಹಾಗಾಗಿ ದಿನೇಶ್ ಗುಂಡೂರಾವ್ ಅವ್ರು ಅದನ್ನು ನಿರಂತರವಾಗಿ ಮಾಡ್ತಾ ಬಂದಿರೋದ್ರಿಂದ ಗೆಲ್ತಾ ಬಂದಿದ್ದಾರೆ ಮತ್ತು ಇದೀಗ 5 ನೇ ಗುಲುವಿಗೆ ಕಾಯ್ತಿದ್ದಾರೆ.

ಗಾಂಧಿ ನಗರ ವಿಧಾನಸಬಾ ಕ್ಷೇತ್ರದಲ್ಲಿ ಐದನೇ ಗೆಲುವಿಗೆ ರೆಡಿಯಾಗಿರೋ ದಿನೇಶ್ ಗುಂಡೂರಾವ್ ಅವ್ರು ಈಗಾಗಲೇ ತಮ್ಮ ಕ್ಷೇತ್ರದಲ್ಲಿ ಹವಾ ಕ್ರಿಯೇಟ್ ಮಾಡಿದ್ದಾರೆ. ಇಲ್ಲಿರೋ 7 ವಾರ್ಡ್ ಗಳ ಪೈಕಿ 5 ರಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ ಅಂದ್ರೆ ಇಲ್ಲಿ ಬೇರೆ ಯಾವ ಪಕ್ಷ ಕೂಡಾ ಕಾಂಗ್ರೆಸ್ ಗೆ ಫೈಟ್ ಕೊಡೋದಕ್ಕೆ ಸಾಧ್ಯ ಇಲ್ಲ ಅನ್ನಿಸ್ತಿದೆ. ಇನ್ನು ದಿನೇಶ್ ಅವ್ರ ಪತ್ನಿ ತಬು ಅವ್ರು ಕ್ಷೇತ್ರದಲ್ಲಿ ಓಡಾಡ್ತಾ ಮಹಿಳೆಯರ ಜತೆ ಬೆರೆಯುತ್ತಾ..ಜನ ಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸ್ತಾ ಇರೋದು ಹಾಗೇನೇ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿರೋ ದಿನೇಶ್ ಗುಂಡೂರಾವ್ ಅವ್ರು ಕ್ಷೇತ್ರ ಸುತ್ತುತ್ತಾ ಪಕ್ಷ ಸಂಘಟನೆ ಜತೆ ಮತದಾರರ ಮನ ಗೆಲ್ತಿರೋದು ನೋಡಿದ್ರೆ ಇವರ 5 ನೇ ಗೆಲುವು ಅತಿ ದೊಡ್ಡ ಗೆಲುವಾಗೋ ಎಲ್ಲಾ ಸೂಚನೆಗಳು ಸಿಗ್ತಾ ಇದೆ.