ಚುನಾವಣಾ ಕುರುಕ್ಷೇತ್ರ 2018 – ಹಳಿಯಾಳ

ಹಳಿಯಾಳ ವಿಧಾನಸಬಾ ಕ್ಷೇತ್ರ

ರಾಜ್ಯವಿಧಾನ ಸಭೆ ಚುನಾವಣೆಗೆ ಇನ್ನೇನು ನಾಲ್ಕೈದು ತಿಂಗಳು ಬಾಕಿ ಇದೆ.ಈಗಾಗಲೆ ಚುನಾವಣಾ ಅಖಾಡ ಸಿದ್ದವಾಗ್ತಿದೆ. ಈಗಾಗಲೇ ರಾಜ್ಯದ ಪ್ರಭಾವಿ ಸಚಿವರೊಬ್ಬರ ಕ್ಷೇತ್ರದ ಮೇಲೆ ಜನರ ಕಣ್ಣು ನೆಟ್ಟಿದೆ. ಹಾಗಾದ್ರೆ ಅದು ಯಾವ ಕ್ಷೇತ್ರ ಅನ್ನೋ ಕುತೂಹಲ ನಿಮಗೂ ಇರಬಹುದು. ಯಸ್ ನಾವು ಇವತ್ತು ನಿಮಗೆ ಹೇಳೋದಿಕ್ಕೆ ಹೊರಟಿರೋದು ಕೈಗಾರಿಕಾ ಸಚಿವ ದೇಶಪಾಂಡೆ ಕ್ಷೇತ್ರ ಹಳಿಯಾಳ ವಿಧಾನಸಭಾ ಕ್ಷೇತ್ರದ ಬಗ್ಗೆ..ಇಲ್ಲಿನ ರಾಜಕೀಯ ಬೆಳವಣಿಗೆಗಳನ್ನು ನೋಡೋಣ ಬನ್ನಿ

ಹಳಿಯಾಳ ವಿಧಾನಸಭಾ ಕ್ಷೇತ್ರ.ಇದು ಕರಾವಳಿ, ಮಲೆನಾಡು, ಬಯಲು ಸೀಮೆ ಉತ್ತರಕನ್ನಡ ಜಿಲ್ಲೆಯಲ್ಲಿರೋ ಕ್ಷೇತ್ರ. ಎರಡು ತಾಲೂಕುಗಳನ್ನು ಸೇರಿರೋ ಈ ಕ್ಷೇತ್ರದಲ್ಲಿ ಈಗಾಗಲೇ ಚುನಾವಣಾ ಕಾವು ಪ್ರಾರಂಭವಾಗಿದೆ. ರಾಜ್ಯದ ಪ್ರಭಾವಿ ಮಂತ್ರಿ ಅಂತಾನೇ ಗುರುತಿಸಿಕೊಂಡಿರೋ ಕೈಗೈರಿಕಾ ಸಚಿವ ಆರ್ ವಿ ದೇಶಪಾಂಡೆ ಕೇತ್ರ ಇದಾಗಿರೋದ್ರಿಂದ ಸಹಜವಾಗಿ ಎಲ್ಲರ ಗಮನ ಈ ಕ್ಷೇತ್ರದ ಮೇಲಿದೆ. ಇಲ್ಲಿ ರೈತರು, ಕೂಲಿಕಾರರು ಹೆಚ್ಚಾಗಿದ್ದು, ಯಾವುದೆ ಜಾತೀಯ ರಾಜಕಾರಣ ಕೆಲಸ ಮಾಡಲ್ಲ. ಹೆಚ್ಚಾಗಿ ಕುಣಬಿ, ಗೌಳಿ, ಸಿದ್ದಿ ಹೀಗೆ ವಿವಿಧ ಹಿಂದುಳಿದವರ್ಗದವರು ಇಲ್ಲಿದ್ದಾರೆ. ಇಲ್ಲಿನ ವಿಶೇಷತೆ ಅಂದ್ರೆ ಇಲ್ಲಿ ಮತದಾರರು ಯಾವುದೇ ಒಂದು ಪಕ್ಷಕ್ಕೆ ಸೇರಿಕೊಂಡವರಲ್ಲ, ಈ ಕ್ಷೇತ್ರದಲ್ಲಿ ಚುನಾವಣೆ ವೇಳೆ ಜಾತಿಗಿಂತ  ಜಣ ಜಣ ಕಾಂಚಾಣವೆ ಹೆಚ್ಚು ವರ್ಕ್ ಮಾಡತ್ತೆ ಅಂತರೆ ಇಲ್ಲಿನರು. ಚುನಾವಣೆ ಬರೋರವರೆಗೆ ಸುಮ್ಮನಿದ್ದು ಎಲೆಕ್ಷನ್ ಘೋಷಣೆ ಆಗ್ತಿದ್ದಂತೆ ಈ ಕ್ಷೇತ್ರದ ಜನಪ್ರತಿನಿಧಿಗೆ ಎಚ್ಚರವಾಗತ್ತಂತೆ. ನಿರಂತರವಾಗಿ ಇಲ್ಲಿ ಗೆಲ್ಲೋದಕ್ಕೆ ಕಾರಣ ಕೂಡಾ ಮನಿ ಪವರ್ ಅಂತೆ. ಹಾಗಾಗಿ ಇಲ್ಲಿಂದ ಆಯ್ಕೆಯಾಗಿರೋ ಸಚಿವರು ಮತ್ತೆ ಮತ್ತೆ ಗೆಲ್ಲೋದಕ್ಕೆ ಆಮಿಷ ಒಡ್ತಾರೆ ಹೊರತು ಅಭಿವೃದ್ಧಿ ಅನ್ನೋದು ಕಾಣೋದೇ ಇಲ್ಲ. ಹಾಗಿದ್ರೆ ಈ ಬಾರಿ ಈ ಕ್ಷೇತ್ರದ ಜನ ಮತ್ತೆ ದೇಶಪಾಂಡೆ ಅವ್ರನ್ನೇ ಗೆಲ್ಲಿಸ್ತಾರ? ಬದಲಾವಣೆ ಬಯಸಿದ್ದಾರಾ? ಇಲ್ಲಿನ ಸದ್ಯದ ರಾಜಕೀಯ ಸನ್ನಿವೇಶ ಹೇಗಿದೆ? ಎಲ್ಲದರ ಬಗ್ಗೆ ಪಿನ್ ಟು ಪಿನ್ ಹೇಳ್ತೀವಿ. ಆದ್ರೆ ಅದಕ್ಕೂ ಮೊದಲು 2013 ರ ಮತಬರಹ ಹೇಗಿತ್ತು ನೋಡೋಣ

 

2013ರ ಮತಬರಹ

ಇದು 2013ರ ಮತಬರಹ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದ ಆರ್ ವಿ ದೇಶಪಾಂಡೆ 54545 ಮತಗಳನ್ನು ಪಡೆಯೋ ಮೂಲಕ ಗೆದ್ದು ಶಾಸಕರಾಗಿ ಸಚಿವರಾಗಿದ್ದಾರೆ. ಇವರಿಗೆ ತೀವ್ರ ಪೈಪೋಟಿ ನೀಡಿದ ಜೆಡಿಎಸ್ ನಿಂದ ಅಖಾಡಕ್ಕೆ ಇಳದಿದ್ದ ಸುನೀಲ್ ಹೆಗಡೆ 48819 ಮತಗಳನ್ನು ಪಡೆದು ಎರಡನೆ ಸ್ಥಾನಕ್ಕೆ ತೃಪ್ತಿ ಪಟ್ಕೊಂಡ್ರು, ಇನ್ನೂ ಬಿಜೆಪಿಯಿಂದ ಸ್ಪರ್ಧಿಸಿದ್ದ ರಾಜು ದೂಳಿ ಕೇವಲ 7761 ಮತಪಡೆದ್ರು.

ಹಳಿಯಾಳದಿಂದ ಗೆದ್ದು ಕೈಗಾರಿಕಾ ಸಚಿವರಾಗಿರೋ ದೇಶಪಾಂಡೆಯವ್ರನ್ನು ಇಲಿನ ಜನ ಶಾಶ್ವತ ಕೈಗಾರಿಕಾ ಮಂತ್ರಿ ಅಂತಾನೂ ಕರಿತಾರೆ. ಸುಮಾರು 20 ವರ್ಷಗಳ ಕಾಲ ಅವ್ರು ಮಂತ್ರಿಯಾದ್ರೂ ಕೂಡಾ ಕಳೆದ ಬಾರಿ ಇಲ್ಲಿ ಗೆಲ್ಲೋದಕ್ಕೇನೇ ಹರಸಾಹಸ ಮಾಡಬೇಕಾಯ್ತು. ಈ ಬಾರಿ ಅಂತೂ ಇಲ್ಲಿನ ಚಿತ್ರಣ ಸಂಪೂರ್ಣ ಬದಲಾಗಿದೆ. ಮತದಾರರಿಗೆ ಆಮಿಶವೊಡ್ಡಿ ಗೆಲ್ತೀನಿ ಅಂದ್ರೆ ಅದು ಈ ಬಾರಿ ಕಷ್ಟ. ಯಾಕಂದ್ರೆ ಕೈಗಾರಿಕಾ ಸಚಿವರಾಗಿದ್ರೂ ಕೂಡಾ ಕ್ಷೇತ್ರಕ್ಕೆ ಹೇಳುವಂತ ಯಾವುದೇ ದೊಡ್ಡ ಕೈಗಾರಿಕೆಯನ್ನು ತರದೆ ತನ್ನ ಕ್ಷೇತ್ರವನ್ನು ಬಯಲು ಸೀಮೆಯಲ್ಲಿ ಬರಡಾಗಿಸಿದ್ದಾರೆ. ಇಲ್ಲಿನ ಜನ ಶ್ರಮಜೀವಿಗಳಾಗಿದ್ದು ದಿನವಿಡಿ ಹೊಲದಲ್ಲಿ ಕಷ್ಟ ಪಟ್ಟು ದುಡಿದು, ಜೀವನ ನಡೆಸ್ತಿದ್ದಾರೆ. ಅವರ ಜೀವನ ಇನ್ನೂ ಹಸನಾಗಿಲ್ಲ.ಈ ಕ್ಷೇತ್ರ ಹಿಂದೆ ಹೇಗಿತ್ತೋ ಇವ್ರು ಸಚಿವರಾದ ಮೇಲೂ ಕೂಡಾ ಹಾಗೇ ಇದೆ. ಆದ್ರೆ ಸಮೀಪದಲ್ಲೇ ಇರೋ ಮಂಗಳೂರಿನಲ್ಲಿ ಕೈಗಾರಿಕೆಗಳು ಬೆಳಿತಾ ಇದೆ. ಎಷ್ಟೋ ಜನರಿಗೆ ಉದ್ಯೋಗ ಸಿಕ್ಕಿದೆ. ಆದ್ರೆ ಸಚಿವರು ತಮ್ಮ ಸ್ವಕ್ಷೇತ್ರ ಉತ್ತರಕನ್ನಡದಲ್ಲಿ ಏನೇನೂ ಮಾಡಿಲ್ಲ. ಕೈಗಾರಿಕೆ ಬೆಳೆದಿಲ್ಲ, ಜನರಿಗೆ ಉದ್ಯೋಗ ಭಾಗ್ಯ ಇಲ್ಲವೇ ಇಲ್ಲ. ಹಾಗಾಗಿ ಸಹಜವಾಗೇ  ದೇಶಪಾಂಡೆ ಮೇಲೆ ಇಲ್ಲಿನ ಮತದಾರರಿಗೆ ಅಸಮಾಧಾನ ಆಕ್ರೋಶ ಇದೆ. ಅದೇ ಕಾರಣಕ್ಕೆ ದೇಶಪಾಂಡೆ ಹೇಗಾದ್ರೂ ಮಾಡಿ ಗೆಲ್ಲಲೇ ಬೇಕು ಅಂತಾ ಬಿಜೆಪಿ ಕಡೆ ಮುಖ ಮಾಡ್ತಿದ್ದಾರೆ. ಈ ಬೆಳವಣಿಗೆಗಳ ಬಗ್ಗೆ ಮತ್ತಷ್ಟು ಹೇಳ್ತೀವಿ ಅದಕ್ಕೂ ಮೊದಲು ಇಲ್ಲಿ ಯಾರ್ಯಾರು ಕಣಕ್ಕಿಳಿತಾರೆ…ಅನ್ನೋದನ್ನು ನೋಡೋಣ

ಕೈ ಅಭ್ಯರ್ಥಿ

ಆರ್ ವಿ ದೇಶಪಾಂಡೆ, ಸಚಿವರು

ಕಳೆದ 40 ವರ್ಷದಿಂದಲ್ಲೂ ಸಚಿವ ಆರ್ ವಿ ದೇಶಪಾಂಡೆ ಇಲ್ಲಿ ಕಾಂಗ್ರೆಸ್ ಭಾವುಟ ಹಾರಿಸ್ತಾ ತಮ್ಮ ಭದ್ರಕೋಟೆ ನಿರ್ಮಿಸಿದ್ದರು. ಆದ್ರೆ 2008ರಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಸುನಿಲ್ ಹೆಗಡೆ, ದೇಶಪಾಂಡೆಯವ್ರನ್ನು ಸೋಲಿಸಿದ್ರು. ಮತ್ತೆ 2013ರ ಚುನಾವಣೆಯಲ್ಲಿ ದೇಶಪಾಂಡೆ ಇಲ್ಲಿಂದ ಜಯಗಳಿಸಿದ್ರು. ಇದೀಗ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾ ಹಣಾಹಣಿ ಇದೆ.ಕಳೆದ 40 ವರ್ಷದಿಂದ ಕಾಂಗ್ರೆಸ್ ನಿಂದ ಕಣಕ್ಕಿಳಿದು ಆಯ್ಕೆ ಆಗ್ತಾ ಬಂದಿದ್ದ ದೇಶಪಾಂಡೆ ಅವ್ರ ಬುಡ ಅಲುಗಾಡ್ತಾ ಇದೆ. ಕಾಂಗ್ರೆಸ್ ನಿಂದನೇ ಮತ್ತೆ ಇಲ್ಲಿ ಕಣಕ್ಕಿಳಿದ್ರೆ ಜನ ಈ ಬಾರಿ ಕೈ ಹಿಡಿಯಲ್ಲ ಅನ್ನೋದೂ ಸಚಿವರಿಗೆ ಗೊತ್ತಾಗಿದೆ. ಹಾಗಾಗಿ ಕಾಂಗ್ರೆಸ್ ಗೆ ಕೈ ಕೊಟ್ಟು ಬಿಜೆಪಿ ಗೆ ಹಾರೋದಕ್ಕೆ ಸನ್ಮಾನ್ಯ ದೇಶಪಾಂಡೆ ಸಾಹೇಬ್ರು ಮುಂದಾಗಿದ್ದಾರೆ. ಯಾಕಂದ್ರೆ ಈ ಹಿಂದೆ ಇದೆ ಸುನೀಲ್ ಹೆಗಡೆ ಜೆಡಿಎಸ್ ನಿಂದ ನಿಂತು 1  ಸಲ ಇವ್ರನ್ನು ಸೋಲಿಸಿದ್ರು. ಅದ್ಕಿಂತ ಹೆಚ್ಚಾಗಿ ಹೆಗಡೆ ಈಗ ಬಿಜೆಪಿ ಗೆ ಸೇರಿದ್ದಾರೆ. ಹಾಗಾಗಿ ತಾನು ಇಲ್ಲಿ ಗೆಲ್ಲಬೇಕು ಅಂದ್ರೆ ಬಿಜೆಪಿಗೆ ಸೇರಬೇಕು ಅನ್ನೋ ಯೋಚನೆ ದೇಶಪಾಂಡೆ ಅವ್ರದ್ದು. ಹಾಗಾಗಿ ದೇಶವಾಂಡೆ ಅವ್ರನ್ನು ಕೈ ಅಭ್ಯರ್ತಿ ಅಂತಾ ಈಗಲೇ ಹೇಳೋದಿಕ್ಕಾಗಲ್ಲ. ದೇಶಪಾಂಡೆ ಬಿಜೆಪಿ ಗೆ ಹೋದ್ರೆ ಕಾಂಗ್ರೆಸ್ ನಿಂದ ಇಲ್ಲಿ ಯಾರು ಕಣಕ್ಕಿಳಿತಾರೆ ಅನ್ನೋದೇ ಪ್ರಶ್ನೆ.

 

  1. ರಾಜೂ ದೂಳಿ, ಟಿಕೇಟ್ ಆಕಾಂಕ್ಷಿ

ಸಚಿವ ದೇಶಪಾಂಡೆ ಬಿಜೆಪಿಗೆ ಬರ್ತಾರೆ ಅನ್ನೋದು ಒಂದ್ಕಡೆ ಆದ್ರೆ ಬಿಜೆಪಿಯಲ್ಲೂ ಪ್ರಬಲ ಆಕಾಂಕ್ಷಿಗಳು ರೆಡಿಯಾಗಿದ್ದಾರೆ. ಅವ್ರಲ್ಲಿ ಒಬ್ರು ರಾಜೂ ದೂಳಿ ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ರಾಜೂ ಧೂಳಿಗೆ ತೀವ್ರ ಮುಖಭಂಗವಾಗಿತ್ತು. ಇಲ್ಲಿ  ಬಿಜೆಪಿ ನಿರೀಕ್ಷಿತ ಮತ ಗಳಿಸೋದ್ರಲ್ಲಿ ಯಶಸ್ವಿಯಾಗಿರ್ಲಿಲ್ಲ.ಇದು ಕಾರ್ಯಕರ್ತರಿಗೆ ತುಂಬಾ ಶಾಕ್ ಆಗಿತ್ತು. ಅಲ್ಲದೆ ಜೆಡಿಎಸ್ ನಿಂದ ಬಿಜೆಪಿಗೆ ಬಂದಿರೋ ಸುನೀಲ್ ಹೆಗಡೆ ಹಾಗೂ ರಾಜೂ ಧೂಳಿ ನಡುವೆ ಇತ್ತೀಚೆಗೆ ನಡೆದ ಒಂದು ಘಟನೆಯಿಂದಾಗಿ ಬಿಜೆಪಿ ಮುಖಂಡರೆ ರಾಜೂ ಧೂಳಿ ಅವರನ್ನು ಸ್ವಲ್ಪ ದೂರವಿಟ್ಟಿದ್ದಾರೆ, ಆದ್ರೂ ಇವ್ರು ಟಿಕೆಟ್ ಗೆ ಫೈಟ್ ಮಾಡ್ತಿದ್ದಾರೆ.

 

 

  1. ಸುನೀಲ್ ಹೆಗಡೆ, ಪ್ರಬಲ ಆಕಾಂಕ್ಷಿ

ಕಳೆದ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ದಿಸಿ ದೇಶಪಾಂಡೆ ಅವ್ರಿಗೆ ಟಫ್ ಪೈಟ್ ಕೊಟ್ಟಿದ್ದ ಸುನೀಲ್ ಹೆಗಡೆ  ಜೆಡಿಸ್ ತೊರೆದು ಬಿಜೆಪಿ ಗೆ ಬಂದಿದ್ದಾರೆ. ಹಾಗಾಗಿ ಈ ಬಾರಿ ದೇಶಪಾಂಡೆ ಅವ್ರನ್ನು ಸೋಲಿಸಲೇ ಬೇಕು ಅಂತಾ ಹೊರಟಿರೋ ಬಿಜೆಪಿ ಸುನೀಲ್ ಹೆಗಡೆ ಅವ್ರಿಗೆ ಟಿಕೆಟ್ ಕೊಡೋ ಚಾನ್ಸ್ ಕಾಣಿಸ್ತಾ ಇದೆ.ಇತ್ತೀಚೆಗೆ ಹಳಿಯಾಳದಲ್ಲಿ ನಡೆದ ಬಿಜೆಪಿ ಪರಿರ್ವತನಾ ಯಾತ್ರೆಯಲ್ಲಿ ಮಾಜಿ ಮುಖ್ಯ ಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯ್ಯೂರಪ್ಪ ಸಾರ್ವಜನಿಕ ಸಭೆಯನ್ನ ಉದ್ದೇಶಿಸಿ ಮಾತ್ನಾಡೋ ವೇಳೆ ಚುನಾವಣೆಯಲ್ಲಿ ಎಲ್ಲರೂ ಸುನೀಲ್ ಹೆಗಡೆ ಅವರನ್ನು ಬೆಂಬಲಸಿ ಅಂತಾ ಹೇಳೊ ಮೂಲಕ ಸುನೀಲ್ ಹೆಗಡಯೇ  ಅಭ್ಯರ್ಥಿ ಎನ್ನುವ ಮುನ್ನ ಸೂಚನೆ ನೀಡಿದ್ದಾರೆ ಇದ್ದರಿಂದ ಸುನೀಲ್ ಅಭಿಮಾನಿಗಳಲ್ಲಿ ಮತ್ತಷ್ಟು ಹುಮ್ಮಸು ಹೆಚ್ಚಾಗಿದೆ. ಆದ್ರೆ ಕೊನೆ ಕ್ಷಣದಲ್ಲಿ ದೇಶಪಾಂಡೆ ಅವ್ರು ಈ ಕ್ಷೇತ್ರವನ್ನು ಗೆಲ್ಲಬೇಕು ಮತ್ತು ಮಂತ್ರಿ ಆಗಬೇಕು ಅನ್ನೋ ಆಸೆಯಿಂದ ಬಿಜೆಪಿಗೆ ಬಂದ್ರೆ ಸುನೀಲ್ ಹೆಗಡೆಗೆ ಟಿಕೆಟ್ ಸಿಗೋದು ಕಷ್ಟ.

ದಳಪತಿಗಳ್ಯಾರು?

 

ಕೆ ಆರ್ ರಮೇಶ್. ಪ್ರಬಲ ಆಕಾಂಕ್ಷಿ

ಜೆಡಿಎಸ್ ನಿಂದ ಮಾಜಿ ಶಾಸಕ ಸುನೀಲ್ ಹೆಗಡೆ ಬಿಜೆಪಿಗೆ ಸೇರಿದ ಮೇಲೆ ಕೆ ಆರ್ ರಮೇಶ ಅವರ ಹೆಸರು ಇಲ್ಲಿ ಕೇಳಿ ಬರ್ತಿದೆ. ಆದ್ರೆ ಇವರು ಕ್ಷೇತ್ರದಲ್ಲಿ ಇರದೆ ಬೆಂಗಳೂರಿನಲ್ಲಿ ನೆಲೆಸಿದ್ದು, ಹಳಿಯಾಳ ಕ್ಷೇತ್ರದಲ್ಲಿ ಅವರ ಪ್ರಭಾವ ಅಷ್ಟೊಂದು ಗಟ್ಟಿಯಾಗಿಲ್ಲ, ಸದ್ಯದ ಪರಿಸ್ಥಿತಿಯನ್ನು ನೋಡಿದ್ರೆ ಬಯಲು ಸೀಮೆ ಹಳಿಯಾಳದಲ್ಲಿ ಜೆಡಿಎಸ್ ಅಭ್ಯರ್ಥಿ ಯಾರು ಎನ್ನುವು ಕಷ್ಟವಾಗಿದೆ,ಆದ್ರೆ ಕೆಲ ತಿಂಗಳ ಹಿಂದೆ ಹಳಿಯಾಳಕ್ಕೆ ಬಂದ ಕೆ ಆರ್ ರಮೇಶ ಒಂದಿಷ್ಟು ಕಾರ್ಯಕ್ರಮವನ್ನು ಮಾಡಿ ಕುಮಾರಸ್ವಾಮಿ ಹಾಗೂ ದೇವೆಗೌಡ್ರನ್ನು ಕರೆಸಿ ಕಾರ್ಯಕ್ರಮ ಮಾಡೋ ಮೂಲಕ ಒಂದಿಷ್ಟು ಹವಾ ಕ್ರಿಯೇಟ್ ಮಾಡಿದ್ರು,ಹಾಗಾಗಿ ಬಹುತೇಕ  ಜೆಡಿಎಸ್ ತೆನೆ ಇವ್ರ ಹೆಗಲೇರೋ ಸಾಧ್ಯತೆನೇ ಜಾಸ್ತಿ ಇದೆ.

ಹಳಿಯಾಳ ವಿಧಾನಸಭಾ ಕ್ಷೇತ್ರ ತುಂಬಾನೇ ಹಿಂದುಳಿದಿದೆ.ಇಲ್ಲಿಂದ ಗೆದ್ದು ಸಚಿವರಾದ ದೇಶಪಾಂಡೆ ಅವ್ರು ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಏನು ಮಾಡಿಲ್ಲ ಅನ್ನೋದ ಜನರ ಆಕ್ರೋಶಕ್ಕೆ ಕಾರಣವಾಗಿದೆ.ಸದ್ಯ  ಇದೀಗ ಕ್ಷೇತ್ರದಲ್ಲಿ ರಾಜಕೀಯ ಚಿತ್ರಣ ಸಂರ್ಪೂಣ ಬದಲಾಗಿದೆ. ಜೆಡಿಎಸ್ ನಿಂದ ಮಾಜಿ ಶಾಸಕ ಸುನೀಲ್ ಹೆಗಡೆ ಬಿಜೆಪಿ ಸೇರಿರೋದು ದೇಶಪಾಂಡೆಗೆ ದೊಡ್ಡ ಆಘಾತ ತಂದಿದೆ ಹೀಗಾಗಿ ಈ ಹಿಂದೇಲ್ಲಾ ಕ್ಷೇತ್ರಕ್ಕೆ ಆಗೋಮ್ಮೆ  ಈಗೊಮ್ಮೆ ಕಾಲಿಡುತ್ತಿದ್ದ ಆರ್ ವಿ ಡಿ, ಇದೀಗ ಕಾಲಿಗೆ ಗಾಲಿ ಕಟ್ಟಿಕೊಂಡು ಕ್ಷೇತ್ರದ ಗಲ್ಲಿ ಗಲ್ಲಿಯಲ್ಲಿ ಗಿರಕಿ ಹೊಡೆಯಲು ಶುರುಮಾಡಿದ್ದಾರೆ. ಕ್ಷೇತ್ರದಲ್ಲಿ ಸಣ್ಣಪುಟ್ಟ ಕಾರ್ಯಕ್ರಮವಿದ್ರೂ ಹಾಜರಾಗತ್ತಾರೆ. ಇದುವರೆಗೂ ಕ್ಷೇತ್ರದಲ್ಲಿ ಏನು ಕಾರ್ಯ ಮಾಡದ ಇವರು ಓಣಿ ಓಣಿಯಲ್ಲಿ ಅಡಿಗಲ್ಲು ಹಾಕಿ ಜನರನ್ನು ಸೆಳೆಯುವ ಪ್ರಯತ್ನ ಮಾಡತ್ತಿದ್ದಾರೆ. ಆದ್ರೆ ಬುದ್ಧಿವಂತ ಮತದಾರ ಇದನ್ನು ಗಿಮಿಕ್ ಅಂತಾ ಹೇಳ್ತಿದ್ದಾರೆ. ಜತೆಗೆ ಹಿಂದೆ ಸುನೀಲ್ ಹೆಗಡೆ ಶಾಸಕರಾಗಿದ್ದ ಅವಧಿಯಲ್ಲಿ ಕ್ಷೇತ್ರದಲ್ಲಾಗಿರೋ ಅಭಿವೃದ್ಧಿ ಬಗ್ಗೆ ಜನ ಮಾತಾಡ್ತಿದ್ದಾರೆ.

ಪಿನ್ ಪಾಯಿಂಟ್

ಚಾಣಾಕ್ಷ್ಯ ರಾಜಕಾರಣಿ ಅಂತಾನೇ ಕರೆಸಿಕೊಳ್ಳೋ ದೇಶಪಾಂಡೆ ಗೆ ಹೇಗೆ ಕ್ಷೇತ್ರ ಗೆಲ್ಲಬೇಕು, ಯಾವ ಅಸ್ತ್ರ ಇಲ್ಲಿ ವರ್ಕೌಟ್ ಆಗತ್ತೆ ಅನ್ನೋದು ಗೊತ್ತಿದೆ. ಒಂದಂತೂ ನಿಜ ದೇಶಪಾಂಡೆ ಬಿಜೆಪಿಗೆ ಬಂದು ಇಲ್ಲಿಂದ ಕಣಕ್ಕಿಳಿದ್ರೆ ಅವ್ರು ಗೆಲ್ಲೋದು ಗ್ಯಾರಂಟಿ ಜತೆಗೆ ಮತ್ತೆ ಕೈಗಾರಿಕಾ ಮಂತ್ರಿ ಕೂಡಾ ಆಗಬಹುದು ಅದಕ್ಕಾಗೇ ಕಾಂಗ್ರೆಸ್ ಬಿಟ್ಟು ಕಮಲ ಹಿಡಿಯೋದಕ್ಕೆ ಹೊರಟಿದ್ದಾರೆ ಅಂತಾ ಇಲ್ಲಿನ ಜನ ಹೇಳ್ತಿರೋದು ನೋಡಿದ್ರೆ ದೇಶಪಾಂಡೆ ಬಿಜೆಪಿಗೆ ಬರ್ತಾರೆ ಅನ್ನೋದಕ್ಕೆ ಪುಷ್ಟಿ ಕೊಡತ್ತೆ..

 

 

ಪ್ರತ್ಯುತ್ತರ ನೀಡಿ

Please enter your comment!
Please enter your name here