ಚುನಾವಣಾ ಕುರುಕ್ಷೇತ್ರ 2018 – ಕನಕಗಿರಿ (ಕೊಪ್ಪಳ ಜಿಲ್ಲೆ)

ಕನಕಗಿರಿ ವಿಧಾನಸಭಾ ಕ್ಷೇತ್ರ

ಇವತ್ತಿನ ಕುರುಕ್ಷೇತ್ರದಲ್ಲಿ ನಾವು ಹೇಳ್ತಿರೋದು ಕನಕಗಿರಿ ವಿಧಾನಸಭಾ ಕ್ಷೇತ್ರದ ಬಗ್ಗೆ. ಈಗ ಕಾಂಗ್ರೆಸ್ ನ ಶಿವರಾಜ ತಂಗಡಗಿ ಶಾಸಕರಾಗಿರೋ ಈ ಕ್ಷೇತ್ರದಲ್ಲಿ ಸದ್ಯ ಎಲೆಕ್ಷನ್ ಹವಾ ಹೇಗಿದೆ. ರಾಜಕೀಯ ಸ್ಥಿತಿಗತಿಗಳ ಪ್ರಕಾರ ಈ ಬಾರಿಯ ಎಲೆಕ್ಷನ್ ನಲ್ಲಿ ಇಲ್ಲಿ ಏನಾಗಬಹುದು ಅನ್ನೋದ್ರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ

ಕನಕಗಿರಿ ವಿಧಾನಸಭಾ ಕ್ಷೇತ್ರ. ಕಾಲು ಇದ್ರೆ ಹಂಪಿ ನೋಡು, ಕಣ್ಣಿದ್ರೆ ಕನಕಗಿರಿ ನೋಡು ಅನ್ನೋ ಮಾತು ಈ ಕ್ಷೇತ್ರಕ್ಕೆ ಹೇಳಿ ಮಾಡಿಸಿದಂತಿದೆ. ಕೊಪ್ಪಳ ಜಿಲ್ಲಿಯಲ್ಲಿರೋ 5 ವಿಧಾನಸಭಾ ಕ್ಷೇತ್ರಗಳ ಪೈಕಿ ರಾಜಕೀಯ ವಿಚಾರಕ್ಕೆ ಸದ್ದು ಮಾಡ್ತಿರೋ ಗಂಗಾವತಿ ತಾಲೂಕಿನಲ್ಲಿರೋ ಎಸ್ಸಿ ಮೀಸಲು ಕ್ಷೇತ್ರ ಇದು. ಮೊದಲು ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲೆ ಇದ್ದ ಈ ಕ್ಷೇತ್ರ 1978ರಲ್ಲಿ ಸಪರೇಟ್ ವಿಧಾನಸಭಾ ಕ್ಷೇತ್ರವಾಯಿತು. ರಾಯಚೂರು ಜಿಲ್ಲೆಯ ಸಿಂದನೂರು ತಾಲೂಕಿನ ಭಾಗದ ಕೆಲ ಹಳ್ಳಿಗಳು, ಕುಷ್ಟಗಿ ತಾಲೂಕಿನ ಕೆಲ ಹಳ್ಳಿಗಳು ಮತ್ತು ಗಂಗಾವತಿ ತಾಲೂಕಿನ ಕೆಲ ಹಳ್ಳಿಗಳು ಸೇರಿಸಿ ಕನಕಗಿರಿ ವಿಧಾನಸಭಾ ಕ್ಷೇತ್ರ ರೂಪಿತವಾಯ್ತು. 6 ಹೋಬಳಿ ಕೇಂದ್ರ, 22 ತಾಲೂಕ ಪಂಚಾಯತಿ 25 ಗ್ರಾ.ಪಂ, 5 ಜಿ.ಪಂಚಾಯತಿಯನ್ನು ಈ ಕ್ಷೇತ್ರ ಹೊಂದಿದೆ. ಐತಿಹಾಸಿಕ ಮತ್ತು ವ್ಯವಹಾರಿಕ ಕ್ಷೇತ್ರವಾಗಿ ಕೂಡಾ ಪ್ರಸಿದ್ಧಿ ಪಡೆದುಕೊಂಡಿದೆ. ಕನಕಗಿರಿ ಗ್ರಾಮದಲ್ಲಿ ವೆಂಕಟಾಚಲಪತಿ ದೇವಸ್ಥಾನ ಇರೋದ್ರಿಂದ ಇದನ್ನು ಎರಡನೇ ತಿರುಪತಿ ಅಂತಾನೂ ಕರಿತಾರೆ.  ಈ ಕ್ಷೇತ್ರ ಅರ್ಧದಷ್ಟು ನೀರಾವರಿ ಒಳಗೊಂಡಿದ್ದು ಇನ್ನರ್ದ ಮಳೆ ಆದಾರಿತ ಭೂಮಿ ಓಳಗೊಂಡಿದೆ. ಕನಕಗಿರಿಯ ಕಾರಟಗಿ ಸಂಪೂರ್ಣವಾಗಿ ಭತ್ತದ ಕಣಜಹೊಂದಿದೆ, ಕನಕಗಿರಿ ಕ್ಷೇತ್ರದಲ್ಲಿ ಕನಕಗಿರಿ ಮತ್ತು ಕಾರಟಗಿ ಗ್ರಾಮಗಳು ತಾಲೂಕು ಕೇಂದ್ರವಾಗಿವೆ, ಕಾಂಗ್ರೆಸ್ ಸರ್ಕಾರ ಅವಧಿಯಲ್ಲಿ ಎರಡು ತಾಲೂಕು ಮಾಡಿರುವ ಹೆಗ್ಗಳಿಕೆ ಈ ಕ್ಷೇತ್ರಕ್ಕಿದೆ. ರಾಜಕೀಯವಾಗಿ ಕೂಡಾ ಸದ್ದು ಮಾಡ್ತಿರೋ ಕ್ಷೇತ್ರ ಇದು. ಹಾಗಿದ್ರೆ ಇಲ್ಲಿ ರಾಜಕೀಯ ಬೆಳವಣಿಗೆಗಳ ಬಗ್ಗೆ ಹೇಳ್ತೀವಿ ಆದ್ರೆ ಅದಕ್ಕೂ ಮೊದಲು 2013ರ ಮತಬರಹ ನೋಡೋಣ.

2013ರ ಮತಬರಹ

ಇದು 2013ರ ಮತಬರಹ. ಕಾಂಗ್ರೆಸ್ ನ ಶಿವರಾಜ ತಂಗಡಗಿ 49451 ಮತಗಳನ್ನು ಪಡೆಯೋ ಮೂಲಕ ಗೆದ್ದು ಶಾಸಕರಾದ್ರುಯ ಅವ್ರಿಗೆ ಪೈಪೋಟಿ ನೀಡಿದ ಕೆಜೆಪಿ ಯ ಬಸವರಾಜ ದಡೆಸಗೂರು 44391 ಮತಗಳನ್ನು ಪಡೆದ್ರೆ ಬಿಎಸ್ ಆರ್ ಕಾಂಗ್ರೆಸ್ ನ ಭವಾನಿ ಮಠ ಮುಕುಂದ ರಾವ್ 28117 ಮತಗಳನ್ನು ಪಡೆದ್ರು. ಇನ್ನು ಬಿಜೆಪಿಯ ರಾಮಾನಾಯ್ಕ ಲಮಾಣಿ ಕೇವಲ 2948 ಮತಗಳನ್ನು ಪಡೆದು ಹೀನಾಯಾ ಸೋಲು ಅನುಭವಿಸಿದ್ರು.

ಕಳೆದ ಬಾರಿಯ ಚುನಾವಣೆಯ ರಿಸಲ್ಟ್ ನೋಡಿದ್ರೆ ಗೊತ್ತಾಗತ್ತೆ ಇಲ್ಲಿ ಮಾಜಿ ಸಚಿವ ಶಿವರಾಜ ತಂಗಡಗಿ ಹವಾ ಎಷ್ಟಿದೆ ಅಂತ.  ಇನ್ನು  ಈ ಬಾರಿ ಕೂಡಾ ಅಷ್ಟೇನೇ ಈಗಾಗಲೇ ಕ್ಷೇತ್ರದಲ್ಲಿ ತಂಗಡಗಿ ಹೆಸರೇ ದೊಡ್ಡದಾಗಿ ಕೇಳಿ ಬರ್ತಿದೆ. ಕಾಂಗ್ರೆಸ್ ಸರ್ಕಾರ ಅವಧಿಯಲ್ಲಿ ಎರಡು ತಾಲೂಕು ಮಾಡಿರುವ ಹೆಗ್ಗಳಿಕೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಇರೋದ್ರಿಂದ ತಂಗಡಗಿ ಅವ್ರಿಗೆ ಅದು ಲಾಭವಾಗತ್ತೆ. ಅಷ್ಟೇ ಅಲ್ಲ ಕಳೆದ ಬಾರಿ ಬಿಜೆಪಿ ಇಲ್ಲಿ 4 ನೇ ಸ್ಥಾನಕ್ಕೆ ಕುಸಿದ್ದಿದ್ದಲ್ದೇ  ಅಸ್ತಿತ್ವವನ್ನೇ ಕಳೆದಕೊಂಡಿತ್ತು. ಕಳೆದ ಬಾರಿ 2 ಮತ್ತು 3 ನೇ ಸ್ಥಾನಗಳಲ್ಲಿದ್ದ ಕೆಜೆಪಿ ಮತ್ತು ಬಿಎಸ್ ಆರ್ ಕಾಂಗ್ರೆಸ್ ಈ ಬಾರಿ ಇಲ್ಲ. ಹಾಗಾಗಿ ಶಿವರಾಜ್ ತಂಗಡಗಿಗೆ ಅದು ಪ್ಲಸ್ ಪಾಯಿಂಟ್. ಹಾಗಿದ್ರೆ ಈ ಬಾರಿ  ಬಿಜೆಪಿ ಕಾಂಗ್ರೆಸ್ ನಿಂದ ಯಾರ್ಯಾರು ಕಣಕ್ಕಿಳಿತಾರೆ ನೋಡೋಣ

ಕೈ ಅಭ್ಯರ್ಥಿ

ಮಾಜಿ ಸಚಿವ ಶಿವರಾಜ್ ತಂಗಡಗಿ ಈ ಬಾರಿ ಇಲ್ಲಿಂದ ಕಣಕ್ಕಿಳಿಯೋದ್ರಲ್ಲಿ ಅನುಮಾನ ಇಲ್ಲ. ಶಿವರಾಜ ತಂಗಡಗಿ ಈ ಕ್ಷೇತ್ರದಲ್ಲಿ ಸತತ ಎರಡನೇ ಭಾರಿ ಶಾಸಕರಾಗಿ ಎರಡು ಭಾರಿ ಸಚಿವರಾಗಿದ್ದಂತವರು. 2008ರಲ್ಲಿ ಈ ಕ್ಷೇತ್ರ ಎಸ್ಸಿ  ಮೀಸಲು ಕ್ಷೇತ್ರವಾಗಿ ಮಾರ್ಪಾಡಾಯಿತೋ ಆಗ ಬಾಗಲಕೋಟೆ ಜಿಲ್ಲೆಯಿಂದ ಬಂದ ಶಿವರಾಜತಂಗಡಗಿ ಈ ಕ್ಷೇತ್ರದಲ್ಲಿ ಮೊದಲ ಬಾರಿಗೆ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಯಶಾಲಿಯಾದವರು ಅಂದ್ರೆ ಈ ಕ್ಷೇತ್ರದಲ್ಲಿ ಅವ್ರ ಹವಾ ಹೇಗಿದೆ ಅನ್ನೋದು ಗೊತ್ತಾಗತ್ತೆ. ಇನ್ನು ಮೊದಲ ಬಾರಿಗೆ ಬಿಜೆಪಿ ಅಧೀಕಾರದಲ್ಲಿ ಸಚಿವರು ಆದ್ರು ನಂತ್ರ 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಗೊಂಡು ಅಲ್ಲಿಯೂ  ಎರಡನೇ ಭಾರಿಗೆ ಶಾಸಕರಾಗಿ ಆಯ್ಕೆಯಾಗಿ ಕಾಂಗ್ರೆಸ್ ಸರ್ಕಾರದಲ್ಲಿಯೂ ಕೂಡ ಸಚಿವರಾಗಿದ್ರು. ಇನ್ನು ತಂಗಡಗಿ ಕ್ಷೇತ್ರದಲ್ಲಿ ತಮ್ಮದ್ದೇ ಆದ ಪ್ರಭಾವ ಹೊಂದಿದ್ದಾರೆ, ಇವರು ಸಚಿವರಾಗಿದ್ದ ಸಮಯದಲ್ಲಿ ಕ್ಷೇತ್ರದಲ್ಲಿ ನಾನಾರೀತಿಯ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ,ಕ್ಷೇತ್ರಕ್ಕೆ ರೈಸ್ ಟೆಕ್ನಾಲಜಿ ಪಾರ್ಕ ತಂದಿದ್ದಾರೆ, ಮತ್ತು ತಮ್ಮ ಕ್ಷೇತ್ರದ ಬಹುತೇಕ ಕೆರೆಗಳಿಗೆ ನೀರುಣಿಸಿದ್ದಾರೆ, ಸಾಕಷ್ಟು ಅಭಿವೃದ್ದಿ ಮಾಡಿದ್ದಾರೆ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಇನ್ನು ಸಾಕಷ್ಚು ಆರೋಪಗಳು ಇವ್ರ ಮೇಲೆ ಕೇಳಿ ಬಂದ್ರೂ ಕೂಡಾ ಈ ಬಾರಿ ಇಲ್ಲಿನಜನ ಅಭಿವೃದ್ಧಿ ಕೆಲ್ಸವನ್ನು ನೋಡ್ಕೊಂಡು ಇವ್ರೇ ಮತ್ತೊಮ್ಮೆ ಎಂಎಲ್ಎ ಆಗಬೇಕು ಸಚಿವರೂ ಆಗಬೇಕು ಅಂತಿದ್ದಾರೆ.

ಕಮಲ ಹಿಡಿಯೋರ್ಯಾರು

ಕಳೆದ ಬಾರಿ ಕೆಜೆಪಿಯಿಂದ ಕಣಕ್ಕಿಳಿದು 2 ನೇ ಸ್ಥಾನ ಪಡೆದಿದ್ದ ಬಸವರಾಜ ದಡೆಸೂಗೂರು ಅವ್ರು ಈ ಬಾರಿ ಬಿಜೆಪಿಯಿಂದ ಕಣಕ್ಕಿಳಿಯೋದಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಇವ್ರು ಕೂಡ ಕ್ಷೇತ್ರದಲ್ಲಿ ತಮ್ಮದೇ ಪ್ರಭಾವ ಹೊಂದಿದವರಾಗಿದ್ದಾರೆ, ತಮ್ಮ ಹಣ ಬಲದ ಮೂಲಕ ಕ್ಷೇತ್ರದಲ್ಲಿ ಹಿಡಿತಸಾಧಿಸೋ ಪ್ರಯತ್ನದಲ್ಲಿದ್ದಾರೆ. ಕಳೆದ ಬಾರಿ ಪರಾಭವಗೊಂಡಿದ್ದ ಬಸವರಾಜ ಅವ್ರು ಈ ಭಾರಿ ಗೆಲ್ಲಬೇಕೆಂದು ತೊಡೆತಟ್ಟಿ ನಿಂತಿದ್ದಾರೆ. ಆದ್ರೆ ಕೆಲವೊಂದು ವಿಚಾರಗಳು ಅವ್ರಿಗೆ ಮುಳುವಾಗೋ ಎಲ್ಲಾ ಚಾನ್ಸಸ್ ಕಾಣಿಸ್ತಿದೆ. ಅನ್ ಎಜುಕೇಟೆಡ್ ಎಂಬ ಹಣೆಪಟ್ಟಿ ಬಸವರಾಜ ದಡೆಸೂಗೂರು ಮೇಲಿದೆ ಅಂತಾ ಇವ್ರ ವಿರೋಧಿಗಳು ಹೇಳ್ತಿದ್ದಾರೆ, ಅಲ್ಲದೆ ಮೊನ್ನೆ ನಡೆದ ಪರಿವರ್ತನಾ ರ್ಯಾಲಿಯಲ್ಲಿ ಯಡಿಯೂರಪ್ಪನವರು ಬಸವರಾಜ ದಡೆಸೂಗೂರಗೆ ನಿಮ್ಮ ಮತ ನೀಡಿ ಅಂದಿರೋದು ಕೂಡಾ ಬಿಜೆಪಿಯಲ್ಲಿ ಒಡಕಿಗೆ ಕಾರಣವಾಗಿರೋದ್ರಿಂದ ಅದು ಇವ್ರಿಗೆ ದೊಡ್ಡ ಹೊಡೆತ ಕೊಡೋ ಚಾನ್ಸ್ ಇದೆ.

 

ಮುಕುಂದರಾವ್ ಭವಾನಿಮಠ, ಪ್ರಬಲ ಆಕಾಂಕ್ಷಿ

2008ರ ಚುನಾವಣೆಯಲ್ಲಿ ಅತೀ ಕಡಿಮೇ ಅಂತರದಲ್ಲಿ ಪರಾಭವಗೊಂಡಿದ್ದ ಹಾಗೂ ಕಳೆದ ಬಾರಿ ಬಿಎಸ್ಆರ್ ಕಾಂಗ್ರೆಸ್ ನಿಂದ ಸ್ಪರ್ಧಿಸಿ 3 ನೇ ಸ್ಥಾನ ಪಡೆದಿದ್ದ ಮುಕುಂದರಾವ ಭವಾನಿಮಠ ಕೂಡಾ ಈ ಬಾರಿ ಕನಕಗಿರಿಯಿಂದ ಆಖಾಡಕ್ಕಿಳಿಯಲು ಬಿಜೆಪಿ ಟಿಕೆಟ್ ಆಕಾಂಕ್ಷಿ. ತುಂಬಾ ನಿರೀಕ್ಷೆ ಇಟ್ಕೊಂಡಿದ್ದ ಇವ್ರು ಮತ್ತು ಇವ್ರ ಬೆಂಬಲಿಗರಿಗೆ ಈಗ ನಿರಾಶೆಯಾಗಿದೆ. ಕಾರಣ ಮೊನ್ನೆ ಯಡಿಯೂರಪ್ಪ ನೇತೃತ್ವದ ಪರಿವರ್ತನೆಯಾತ್ರೆಯಲ್ಲಿ ಬಿಎಸ್ ವೈ ಬಸವರಾಜ ಅವ್ರಿಗೆ ಮತ ನೀಡಿ ಅಂದಿದ್ದು. ಹಾಗಾಗಿ ಮುಕುಂದರಾವ್ ಭವಾನಿಮಠ ಅವ್ರು ಹೋಪ್ ಕಳೆದುಕೊಂಡಿದ್ದಾರೆ ಅಸಮಾಧಾನಗೊಂಡಿದ್ದಾರೆ. .ಬಿಜೆಪಿ ಟಿಕೇಟ್ ಆಕಾಂಕ್ಷೀಯಾಗಿದ್ದ ಮುಕುಂದಾರಾವ್ ಭವಾನಿಮಠ ಟಿಕೆಟ್ ಕೈ ತಪ್ಪಿದಕ್ಕೆ ದಡೆಸೂಗೂರು ಮತ್ತು ಭವಾನಿಮಠ ಮದ್ಯ ವೈಮನಸ್ಸುಂಟಾಗಿದೆ, ಇದು ಬಿಜೆಪಿ ಗೆ ಮುಳುವಾಗುವ ಸಾದ್ಯತೆಗಳು ಹೆಚ್ಚಿವೆ.

ಜೆಡಿಎಸ್ ಪಾತ್ರ !

ಇನ್ನೂ ಜೆಡಿಎಸ್ ಕನಕಗಿರಿ ಕ್ಷೇತ್ರದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದೆ. ಕಾಂಗ್ರೆಸ್ ಬಿಜೆಪಿಯಲ್ಲಿ ಟಿಕೇಟ್ ಸಿಗದವರು ಜೆಡಿಎಸ್ ಪಕ್ಷದಲ್ಲಿ ಟಿಕೇಟ್ ಪಡೆದು ಜೆಡಿಎಸ್ ಅಭ್ಯರ್ಥಿಯಾಗುವ ಸಾಧ್ಯಗಳು ಇವೆ.ಆದ್ರೆ ಕನಕಗಿರಿ ಕ್ಷೇತ್ರದಲ್ಲಿ ನೇರಹಣಾ ಹಣಿ ಮಾತ್ರ ಕಾಂಗ್ರೆಸ್ ಮತ್ತು  ಬಿಜೆಪಿ ಮಧ್ಯೆ ನಡೆಯಲಿದೆ ಅನ್ನೋದು ಗ್ಯಾರಂಟಿ.

ಇನ್ನು ಈ ಕ್ಷೇತ್ರದ ವಿಶೇಷವೇನೆಂದ್ರೆ ಇಲ್ಲಿ ಒಮ್ಮೆ ಆಯ್ಕೆಯಾದವರು ಎರಡನೇ ಭಾರಿ ಆಯ್ಕೆಯಾದ ಉದಾಹರಣೆ ಬಹಳ ಕಡಿಮೆ. ಆದ್ರೂ ಈ ಕ್ಷೇತ್ರದಲ್ಲಿ ಶಿವರಾಜ ತಂಗಡಗಿ ಎರಡನೇ ಭಾರಿ ಆಯ್ಕೆಯಾಗಿದ್ದಾರೆ. ಇನ್ನೊಂದು ವಿಶೇಷ ಅಂದ್ರೆ ಕನಕಗಿರಿ ಕ್ಷೇತ್ರದಿಂದ ಗೆದ್ದವರು ಬಹುತೇಕರು ಸಚೀವರಾಗಿದ್ದಾರೆ, ಮೊದಲಿಗೆ ಮಲ್ಲಿಕಾರ್ಜುನ್ ನಾಗಪ್ಪ ಗೆದ್ದು ಸಚಿವರಾಗಿದ್ರು, ಅದರಂತೆ ಸಾಲೋನಿ ನಾಗಪ್ಪ ಕೂಡ ಸಚಿವರಾದ್ರು, ಅದರಂತೆ ಪಕ್ಷೇತರ ಅಭ್ಯರ್ಥಿಯಾಗಿ ಮತ್ತು ಕಾಂಗ್ರೆಸ್ ನಿಂದ ನಿಂತು ಗೆದ್ದ ಶಿವರಾಜ ತಂಗಡಗಿ 2 ಬಾರಿನೂ ಸಚಿವರಾಗಿದ್ರು. ಹಾಗಾಗಿ ಈ ಕ್ಷೇತ್ರ ಸಚಿವ ಸ್ಥಾನದ ಅದೃಷ್ಟ ಕ್ಷೇತ್ರ ಅಂತಾನೂ ಬಿಂಬಿತವಾಗಿದೆ.

ಒಟ್ನಲ್ಲಿ ಈ ಭಾರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಬಿಜೆಪಿ ನೇರ ಹಣಾಹಣಿ ಎದುರಾಗಲಿದೆ, ಕಾಂಗ್ರೆಸ್ ನ ಶಿವರಾಜ ತಂಗಡಗಿ ಮತ್ತು ಬಿಜೆಪಿಯಿಂದ ಬಸವರಾಜ ದಡೆಸೂಗೂರು ಮದ್ಯ ನೇರ ಪೈಪೋಟಿ ನಡೆಯಲಿದೆ. ಇದು ಎಸ್ಸಿ ಮೀಸಲು ಕ್ಷೇತ್ರವಾದ್ರು 296637 ಮತದಾರರಿರೋ ಈ ಕ್ಷೇತ್ರದಲ್ಲಿ 60 ಸಾವಿರ ಲಿಂಗಾಯತರು, 30 ಸಾವಿರ ಕುರುಬರು  ಹಾಗೂ 20 ಸಾವಿರ ಎಸ್ಸಿ 20 ಸಾವಿರ ಎಸ್ಟಿ ಮತದಾರರಿದ್ದಾರೆ ಅಂದ್ರೆ  ಲಿಂಗಾಯತರ ಪ್ರಾಬಲ್ಯ ಕ್ಷೇತ್ರದಲ್ಲಿ ಹೆಚ್ಚಿದೆ ಅವರೇ ನಿರ್ಣಾಯಕರು ಆಗಿರುತ್ತಾರೆ ,ಶಿವರಾಜ ತಂಗಡಗಿ ಹಾಗೂ ಬಿಜೆಪಿಯ ಬಸವರಾಜ ದಡೆಸೂಗೂರು ಇಬ್ಬರೂನ ವಲಸಿಗರೆ ಆಗಿರೋ ಕಾರಣ ದೊಡ್ಡ ಪೈಪೋಟಿ ಎದುರಾಗೋದಂತೂ ಗ್ಯಾರಂಟಿ.

ಕನಕಗಿರಿ ವಿಧಾನಸಭಾ ಕ್ಷೇತ್ರದ ವಿಶೇಷತೆ ಅಂತೆಯೇ ಶಿವರಾಜ ತಂಗಡಗಿ 2 ಬಾರಿ ಗೆದ್ದು ಸಚಿವರಾಗಿದ್ದಾರೆ. ಕ್ಷೇತ್ರದಲ್ಲಿ ಹೋಲ್ಡ್ ಇಟ್ಕೊಂಡಿದ್ದು ಕ್ಷೇತ್ರಕ್ಕೆ ಬೇಕು ಬೇಕಾದ ಅಭಿವೃದ್ಧಿಗಳನ್ನು ಮಾಡಿದ್ದಾರೆ. ಇದ್ರ ಜತೆಗೆ ಬಿಜೆಪಿಯೊಳಗಿನ ಭಿನ್ನಮತ, ಅಸಮಾಧಾನಗಳೇ ಶಿವರಾಜ ತಂಗಡಗಿ ಅವ್ರಿಗೆ ಲಾಭವಾಗೋ ಚಾನ್ಸಸ್ ಕೂಡಾ ಇದೆ. ಇನ್ನು ಈ ಬಾರಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ರೆ ತಂಗಡಗಿ ಮತ್ತೊಮ್ಮೆ ಸಚಿವರಾಗೋದು ಗ್ಯಾರಂಟಿ ಅಂತ ಹೇಳ್ತಿರೋ ಇಲ್ಲಿನ ಮತದಾರರು ಮತ್ತೊಮ್ಮೆ ಗೆಲ್ಲಿಸ್ತೀವಿ ಅಂತಿದ್ದಾರೆ.

.

 

 

 

 

 

 

 

 

From the web

ಪ್ರತ್ಯುತ್ತರ ನೀಡಿ

Please enter your comment!
Please enter your name here