ಚುನಾವಣಾ ಕುರುಕ್ಷೇತ್ರ 2018 ಕಿತ್ತೂರು(ಬೆಳಗಾವಿ ಜಿಲ್ಲೆ)

ಕಿತ್ತೂರು ವಿಧಾನಸಭಾ ಕ್ಷೇತ್ರ

ಈಗ ನಾವು ಹೇಳ್ತಿರೋದು ಕಿತ್ತೂರು ವಿಧಾನಸಭಾ ಕ್ಷೇತ್ರದ ಬಗ್ಗೆ. ಪ್ರಸ್ತುತ ಕಾಂಗ್ರೆಸ್ ನ ಡಿಬಿ ಇನಾಮ್ದಾರ್ ಇಲ್ಲಿ ಶಾಸಕರಾಗದಿದ್ದಾರೆ. ಈ ಬಾರಿ ಇಲ್ಲಿ ಮಾವ ಅಳಿಯನ ನಡುವೆ ಫೈಟ್ ಏರ್ಪಟ್ಟಿದೆ. ಬನ್ನಿ ಹಾಗಿದ್ರೆ ಎಲೆಕ್ಷನ್ ಗೆ ಕ್ಷೇತ್ರ ಹೇಗೆ ಸಜ್ಜಾಗಿದೆ  ನೋಡೋಣ.

ಕಿತ್ತೂರು ವಿಧಾನಸಭಾ ಕ್ಷೇತ್ರ. ಕುಂದಾ ನಗರಿ ಬೆಳಗಾವಿ ಜಿಲ್ಲೆಯ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದು. ರಾಷ್ಟ್ರದಲ್ಲಿ ಮೊದಲ ಬಾರಿಗೆ ಬ್ರಿಟಿಷ್‌ರ ವಿರುದ್ಧ ಹೋರಾಟದ ಕಹಳೆ ಮೊಳಗಿಸಿದ ವೀರರಾಣಿ ಕಿತ್ತೂರು ಚೆನ್ನಮ್ಮನ ನಾಡಿನಲ್ಲಿ ಇದೀಗ ಚುನಾವಣಾ ಕಣ ರಂಗೇರಿದೆ. ಕ್ಷೇತ್ರದಲ್ಲಿ ರೈತ ಸಂಘಟನೆ ಮುದುಡಿಕೊಂಡಿದೆ.

ಕೈ ವಶದಲ್ಲಿದ್ದ  ಕ್ಷೇತ್ರ ಕಮಲದ ತೆಕ್ಕೆಗೆ ಹೋಗಿತ್ತು ಆದ್ರೆ ಅದಾದ ಮೇಲೆ ಕಿತ್ತೂರು ಕ್ಷೇತ್ರ ಇದೀಗ ಮತ್ತೆ ಕೈ ವಶದಲ್ಲಿದೆ. ಈಗ ಮತ್ತೊಂದು ಚುನಾವಣೆ ಬಂದಿದೆ ಈ ಬಾರಿ ಕಿತ್ತೂರಿನಲ್ಲಿ ಗೆಲುವಿನ ಕಹಳೆ ಮೊಳಗಿಸಲು ಎರಡೂ ರಾಷ್ಟ್ರೀಯ ಪಕ್ಷಗಳು ಹೋರಾಟ ನಡೆಸುತ್ತಿವೆ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಲ್ಲಿ ಟಿಕೇಟ್ ಗಾಗಿ ಕಿತ್ತಾಟ ಶುರುವಾಗಿದೆ. ಇನ್ನು ರಾಷ್ಟ್ರೀಯ ಪಕ್ಷಗಳ ಟಿಕೆಟ್ ಕಿತ್ತಾಟವನ್ನು ಲಾಭ ಮಾಡಿಕೊಳ್ಳಲು ಈ ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲುವ ಅಭ್ಯರ್ಥಿಯ ಹುಡುಕಾಟದಲ್ಲಿದೆ. ಇಲ್ಲಿ ಕಾಂಗ್ರೆಸ್ ಪಕ್ಷ ಐದು ಬಾರಿ ಗೆದ್ದಿದೆ. ಡಿ.ಬಿ.ಇನಾಮದಾರ ಇದೇ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ಸುರೇಶ ಮಾರೀಹಾಳ ಎರಡು ಬಾರಿ ಗೆದ್ದು ಕಳೆದ ಬಾರಿ ಸೋತಿದ್ದಾರೆ. ಹಾಗಿದ್ರೆ ಈ ಬಾರಿ ಏನಾಗಬಹುದು ಹೇಳ್ತೀವಿ ಆದ್ರೆ ಅದಕ್ಕೂ ಮೊದಲು 2013ರ ಮತಬರಹ ನೋಡೋಣ.

 

2013ರ ಮತಬರಹ

ಇದು 2013ರ ಮತಬರಹ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಡಿಬಿ ಇನಾಮ್ ದಾರ 53924 ಮತಗಳನ್ನು ಪಡೆಯೋದ್ರ ಮೂಲಕ ಗೆದ್ದು ಶಾಸಕರಾದ್ರು. ಬಿಜೆಪಿಯ ಸುರೇಶ್ ಶಿವರುದ್ರಪ್ಪ ಮಾರೀಹಾಳ 35634 ಮತಗಳನ್ನು ಪಡೆದ್ರಿ ಜೆಡಿಎಸ್ ನ ಆನಂದ ಬಾಲಕೃಷ್ಣ ಅಪ್ಪುಗೋಳ 20657 ಮತಗಳನ್ನು ಪಡೆದ್ರು.

ಈ ಬಾರಿ ಕಿತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಜಿದ್ದಾಜಿದ್ದಿನ ಫೈಟ್ ಏರ್ಪಟ್ಟಿರೋದಂತೂ ನಿಜ. ಕಾಂಗ್ರೆಸ್ ನಲ್ಲಿ ಟಿಕೇಟ್ ಗಾಗಿ ಕಾಳಗ ನಡೆಯುತ್ತಿದೆ. ಮಾವ ಇನಾಮದಾರ ಅಳಿಯ ಬಾಬಾಸಹಾಬ ಪಾಟೀಲ್ ಮುಸುಕಿನ ಗುದ್ದಾಟ ನಡೆದಿದೆ. ಈ ಬಾರಿ ಬಿಜೆಪಿಗೆ ಹೋಲಿಸಿದರೆ ಕಾಂಗ್ರೆಸ್ನಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿಲ್ಲವಾದರೂ ಹಾಲಿ ಶಾಸಕ ಡಿ.ಬಿ.ಇನಾಮದಾರ ಅವರಿಗೆ ಸ್ವಂತ ಅಳಿಯ ಬಾಬಾಸಾಹೇಬ ಪಾಟೀಲ ಪ್ರತಿಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ. 2018ರ ಚುನಾವಣೆಗೆ ನಾನೇ ಅಭ್ಯರ್ಥಿ ಎನ್ನುವ ವಿಶ್ವಾಸದಿಂದ ಕಳೆದ ಚುನಾವಣೆಯಲ್ಲಿ ಡಿ.ಬಿ.ಇನಾಮದಾರ್ ಬೆನ್ನಿಗೆ ನಿಂತು ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದ ಬಾಬಾಸಾಹೇಬ, ನಾಲ್ಕು ವರ್ಷಗಳಲ್ಲಿ ಶಾಸಕರ ಬಹುತೇಕ ಕೆಲಸ ಕಾರ್ಯಗಳನ್ನು ನೋಡಿಕೊಂಡಿದ್ದರು. ಆದರೀಗ ಸ್ವತಃ ಇನಾಮದಾರ ಚುನಾವಣೆ ಸಿದ್ಧತೆ ಆರಂಭಿಸಿರುವುದರಿಂದ ಕಂಗೆಟ್ಟು ಅಳಿಯ ಬಾಬಾಸಾಹೇಬ ಬಿಜೆಪಿ ಸೇರ್ತಿದ್ದಾರೆ. ಹಾಗಿದ್ರೆ ಈ ಬಾರಿ ಯಾರ್ಯಾರು ಕಣದಲ್ಲಿರ್ತಾರೆ ಅವ್ರ ಬಲಾ ಬಲ ಏನು ನೋಡೋಣ

ಕೈ ಟಿಕೆಟ್ ಆಕಾಂಕ್ಷಿ

ಕಾಂಗ್ರೆಸ್ ಅಭ್ಯರ್ಥಿ:

ಈ ಬಾರಿ ಕೂಡಾ ಶಾಸಕ ಇನಾಮದಾರ್ ಕಾಂಗ್ರೆಸ್ ನಿಂದ ಕಣಕ್ಕಿಳಿಯೋದಕ್ಕೆ ಮುಂದಾಗಿದ್ದಾರೆ. ಆದ್ರೆ ಇಲ್ಲಿವರೆಗೆ ಇನಾಮ್ ದಾರ್ ಗೆದ್ದಿದ್ದರೂ ವಯ್ಯಕ್ತಿಕ ವರ್ಚಸ್ಸು ಅಷ್ಟೊಂದು ಇಲ್ಲ. ಶಾಸಕರಾಗಿದ್ರೂ ಕೂಡಾ ಕ್ಷೇತ್ರದ ಅಭಿವೃದ್ಧಿ ಅಷ್ಟಕಷ್ಟೇ ಅಂತಾ ಜನ ಹೇಳ್ತಿದ್ದಾರೆ. ಇದರ ಜತೆಗೆ ಶಾಸಕರ ಮೇಲೆ ಆರೋಪಗಳು ಸಾಕಷ್ಟಿವೆ. ಡಿ ಬಿ ಇನಾಮದಾರ ಮಲಪ್ರಭಾ ಸಕ್ಕರೆ ಖಾರ್ಕಾನೆ ಹೆಸರಿನಲ್ಲಿ 120 ಕೋಟಿ ಸಾಲ ಮಾಡಿ ಕಾರ್ಖಾನೆಯನ್ನ ದಿವಾಳಿ ಅಂಚಿಗೆ ನಿಲ್ಲಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿರೋದ್ರಿಂದ ಕ್ಷೇತ್ರದ ಜನತೆ ಅವ್ರ ಮೇಲೆ ವಿಶ್ವಾಸ ಕಳೆದು ಕೊಂಡಿದ್ದಾರೆ. ಇದಷ್ಟೇ ಅಲ್ಲದೆ ಅಳಿಯನಿಗೆ ಕೊಟ್ಟ ಮಾತಿಗೆ ತಪ್ಪಿರೋ ಕಾರಣ ಇವ್ರ ಅಳಿಯ ಬಾಬಾಸಾಹೇಬ ಪಾಟೀಲ್ ಬಿಜೆಪಿ ಸೇರಲು ಮುಂದಾಗಿದ್ದಾರೆ. ಕಾಂಗ್ರೆಸ್ ಹಾಗೂ ಇನಾಮದಾರ ಗೆಲುವಿಗೆ ಶ್ರಮಿಸಿದ್ದ ಬಾಬಾಸಹೇಬ ಬಿಜೆಪಿಗೆ ಹೋಗ್ತಿರೋದ್ರಿಂದ ಇದು ಕಾಂಗ್ರೆಸ್ ಹಾಗೂ ಇನಾಮ್ ದಾರ ಅವ್ರಿಗೆ ದೊಡ್ಡ ಹೊಡೆತ.

 

ಕಾಂಗ್ರೆಸ್ ಅಭ್ಯರ್ಥಿ:

ಕಾಂಗ್ರೇಸ್ ನಿಂದ ಮತ್ತೊಬ್ಬ ಯುವ ಮುಖಂಡ ಹಬೀಬ ಶಿಲ್ಲೇದಾರ ಟಿಕೇಟ ಆಕಂಕ್ಷಿಯಾಗಿದ್ದಾರೆ. ಕ್ಷೇತ್ರದಲ್ಲಿ ಸಾಕಷ್ಟು ಸಾಮಾಜಿಕ ಕೆಲ್ಸ ಕಾರ್ಯಗಳಲ್ಲಿ ಗುರುತಿಸಿಕೊಂಡಿದ್ದಾರೆ. ಮಾಜಿ ಸಚಿವ ಸತೀಶ ಜಾರಕೀಹೋಳಿಯವರ ಕಟ್ಟಾ ಬೆಂಬಲಿಗರಾಗಿರುವ ಇವರು ತಮ್ಮ ಸದ್ಬಾವನಾ ಗುಣಗಳಿಂದ ಸತೀಶ್ ಜಾರಕಿಹೊಳಿ ಮಾರ್ಗದರ್ಶನದಲ್ಲಿ ಸಮಾಜಮುಖಿ ಕೆಲ್ಸದಲ್ಲಿ ತೊಡಗಿದ್ದಾರೆ. ಇಲ್ಲಿ ಲಿಂಗಾಯತರ ನಂತರ ಅತೀ ಹೆಚ್ಚು  ಮತದಾರರು ಮುಸ್ಲಿಂ ಸಮಾಜದವರು ಇರೋದ್ರಿಂದ ಇವರಿಗೆ ಆದ್ಯತೆ ಇದೆ .ಡಿ ಬಿ ಇನಾಮದಾರ ಅವರಿಗಿಂತ ಇವರು ಈಗ ಜಾಸ್ತಿ ರೇಸ್ ನಲ್ಲಿ ಇರೋದು ಕಾಣ್ತಿದೆ. ಪಕ್ಷದಿಂದ ಟಿಕೇಟ್ ಸಿಗದೇ ಇದ್ದಲ್ಲಿ. ಇವರು ಬೆಂಬಲಿಗರ ಒತ್ತಾಯದ ಮೇರಗೆ ಬಂಡಾಯವಾಗಿ ಕೂಡ ಸ್ಪರ್ಧಿಸೋ ಚಾನ್ಸ್ ಇದೆ.

 

ಕಮಲ ಮುಡಿಯೋರ್ಯಾರು?

ಬಿಜೆಪಿ ಅಭ್ಯರ್ಥಿ:

ಬಿಜೆಪಿಯಲ್ಲಿ ಟಿಕೇಟ್ ಗಾಗಿ ಕಿತ್ತಾಟ ನಡೆದಿದೆ. ಮಾಜಿ ಶಾಸಕ ಸುರೇಶ ಮಾರಿಹಾಳ ಈ ಬಾರಿಯೂ ತಮಗೆ ಟಿಕೇಟ್ ನೀಡುವಂತೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರಿಗೆ ದುಂಬಾಲು ಬಿದ್ದಿದ್ದಾರೆ. ಮಾಜಿ ಶಾಸಕ ಸುರೇಶ ಮಾರಿಹಾಳ ಅವರಿಗೇ ಟಿಕೆಟ್ ನೀಡಬೇಕು ಎಂದು ಬಾಲಚಂದ್ರ ಜಾರಕಿಹೊಳಿ ಅವರಿಂದ ಕೂಡಿದ ಕತ್ತಿ ಬಣ ಈಗಾಗಲೆ ಒಂದು ಸುತ್ತಿನ ಎಚ್ಚರಿಕೆ ಹೈಕಮಾಂಡ್ ರವಾನಿಸಿದೆ ಅಂತಾ ಹೇಳಲಾಗ್ತಿದೆ. ಕ್ಷೇತ್ರದಲ್ಲಿ `ಕೆಲಸಗಾರ’ ಎನ್ನುವ ಹಣೆಪಟ್ಟಿ ಇದ್ದರೂ ಕೂಡ ತಮ್ಮ ಎರಡನೇ ಅವಧಿಯಿಂದ ಜನ ಸಂಪರ್ಕ ಕಡಿದುಕೊಂಡಿರುವ ಸುರೇಶ ಮಾರಿಹಾಳಗೆ ತನ್ನದೆ ವರ್ತನೆ ಮುಳುವಾಗುತ್ತಿದೆ. ಉಮೇಶ ಕತ್ತಿ ಸಂಬಂದಿ ಯಾಗಿರುವ ಇವರು ಕೇವಲ ಸಂಬಂಧಗಳ ಲಾಬಿಯಿಂದ ಟಿಕೇಟಗಾಗಿ ಪಟ್ಟು ಹಿಡಿದಿದ್ದಾರೆ.

 

ಬಿಜೆಪಿ ಅಭ್ಯರ್ಥಿ:

ಹೌದು ಈ ಬಾರಿ ಬಿಜೆಪಿಯಿಂದ ಕಣಕ್ಕಿಳಿಯೋದಕ್ಕೆ ದೊಡ್ಡದಾಗಿ ಕೇಳಿ ಬರ್ತಿರೋ ಹೆಸರೇ ಬಾಬಾಸಾಹೇಬ ಪಾಟೀಲ್ ಅವ್ರದ್ದು. ಅವ್ರಿನ್ನೂ ಬಿಜೆಪಿ ಸೇರಿಲ್ಲ ಆದ್ರೆ ಸೇರೋ ಹಂತದಲ್ಲಿದ್ದಾರೆ. ಹಾಗಿದ್ರೂ ಅವ್ರ ಹೆಸರು ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಕೇಳಿ ಬರೋದಕ್ಕೆ ಕಾರಣವಿದೆ. ಕಳೆದ 2013ರಲ್ಲಿ ಕಾಂಗ್ರೆಸ್ ನಿಂದ ಕಣಕ್ಕಿಳಿದಿದ್ದ ತನ್ನ ಮಾವ ಡಿ ಬಿ ಇನಾಮದಾರ ಗೆಲುವಿನಲ್ಲಿ ಪ್ರಮುಖ ರೂವಾರಿಯಾಗಿದ್ದೇ ಬಾಬಾಸಾಹೇಬ ಪಾಟೀಲ್ ಅವ್ರು. ಆದ್ರೆ ಲಾಸ್ಟ್ ಎಲೆಕ್ಷನ್ ನಲ್ಲಿ ಇದು ನನ್ನ ಕೊನೆ ಚುನಾವಣೆ ಮುಂದಿನ ಚುನಾವಣೆಯಲ್ಲಿ ನಿನ್ನನ್ನೇ ನಿಲ್ಲಿಸ್ತೀನಿ ಅಂತಾ ಬಾಬಾಸಾಹೇಬ ಪಾಟೀಲ್ ಅವ್ರ ಮಾವ ಡಿಬಿ ಇನಾಮದಾರ್ ಅವ್ರು ತಮ್ಮ ಅಳಿಯನಿಗೆ ಮಾತು ಕೊಟ್ಟಿದ್ರು. ಆದ್ರೆ ಈ ಬಾರಿ ಮತ್ತೆ ಶಾಸಕರು ತಾನೂ ಯಾರಿಗೂ ಬಿಡೋದಿಲ್ಲ ತನಗೆ ಟಿಕೆಟ್ ಬೇಕು ಅಂಟಾ ಪಟ್ಟು ಹಿಡಿದಿರೋ ಕಾರಣ ಮಾವನ ವರ್ತನೆಯಿಂದ ಬೇಸತ್ತು ಬಾಬಾ ಸಾಹೇಬರು ಬಿಜೆಪಿಗೆ ಸೇರ್ತಿದ್ದಾರೆ. ಜತೆಗೆ ಬಿಜೆಪಿಯವರಿಗೆ ಚೆನ್ನಾಗಿ ಗೊತ್ತು ಬಾಬಾ ಸಾಹೇಬರನ್ನು ಬಿಜೆಪಿಯಿಂದ ನಿಲ್ಲಿಸಿದ್ರೆ ಗೆಲ್ಲೋದು ಗ್ಯಾರಂಟಿ ಅಂತಾ. ಕಳೆದ ನಾಲ್ಕೂವರೆ ವರ್ಷಗಳಿಂದ ಕ್ಷೇತ್ರದಲ್ಲಿ ಶಾಸಕರು ಮಾಡಬೇಕಾದ ಎಲ್ಲ ಕೆಲಸಗಳನ್ನ ಇವ್ರೇ ಮಾಡುತ್ತಾ ಬಂದಿದ್ದಾರೆ. ಜನರ ಜತೆ ಚೆನ್ನಾಗಿ ಬೆರೆಯುತ್ತಾರೆ. ಹಾಗಾಗಿ ಹೆಚ್ಚಿನ ಜನ ಬೆಂಬಲ ಇವ್ರಿಗಿದೆ. ಸಭೆ ಸಮಾರಂಭ, ಜನರ ಕುಂದು ಕೊರತೆ ಸಮಾಜಿಕ ಕಾರ್ಯಗಳಿಗೆ ಬೆನ್ನೆಲುಬಾಗಿ ಇವ್ರು ನಿಂತಿದ್ದಾರೆ. ಇವರಿಗೆ ಡಿ ಬಿ ಇನಾಮದಾರ ಟಿಕೇಟ್ ವಿಷಯದಲ್ಲಿ ಮೋಸ ಮಾಡ್ತಿದ್ದಾರೆ ಅನ್ನೋದು ಗೊತ್ತಾಗ್ತಿದ್ದಂತೆ ಸಚಿವ ಅನಂತ ಕುಮಾರ ಹೆಗಡೆ ಇವ್ರನ್ನು ಮಾತಾಡಿಸಿಕೊಂಡು ಬಂದಿದ್ದಾರೆ. ಬಾಬಾಸಾಹೇಬ ಪಾಟೀಲ್ ಬೆಂಬಲಿಗರ ಅಭಿಪ್ರಾಯ ಮತ್ತು ಒತ್ತಾಯದ ಮೇರೆಗೆ ಬಿಜೆಪಿ ಸೇರ್ಪಡೆಗೆ ಎಸ್ ಅಂದಿದ್ದು ಕ್ಷೇತ್ರದಲ್ಲಿ ಪ್ರಚಾರ ಕೂಡ ಆರಂಬಿಸಿದ್ದಾರೆ.

ಇನ್ನುಳಿದಂತೆ ಬಿಜೆಪಿಯಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಡಿಸಿಸಿ ಬ್ಯಾಂಕ್ ನಿರ್ದೇಶಕ ಮಾಜಿ ಉಪಾಧ್ಯಕ್ಷ ಮಹಾಂತೇಶ ದೊಡಗೌಡರ ಟಿಕೇಟ್ ಗಾಗಿ ಕಿತ್ತೂರಿನಲ್ಲಿ ಟ್ರೈ ಮಾಡ್ತಿದ್ದು ಮಾಜಿ ಮಂತ್ರಿ ಲಕ್ಷ್ಮಣ ಸವದಿ ಮೂಲಕ ಲಾಬಿ ನಡೆಸಿದ್ದಾರೆ. ಆದ್ರೆ ಡಿಸಿಸಿ ಬ್ಯಾಂಕ್ ರಾಜಕಾರಣದಿಂದ ಅವರಿಗೆ ಒಳ್ಳೆ ಹೆಸರಿಲ್ಲ, ಇನ್ನು ಇದೇ ಕ್ಷೇತ್ರದಿಂದ ಬಿಜೆಪಿ ಟಿಕೇಟ್ ಗಾಗಿ ಜಗಧೀಶ ಶೆಟ್ಟರ್ ಅವರ ಕಟ್ಟಾಭಿಮಾನಿ ಅಂತಾ ಹೇಳಿಕೊಳ್ಳೋ ಬಸನಗೌಡಾ ಸಿದ್ರಾಮನಿ ಬಿಜೆಪಿಯ ಪ್ರಬಲ ಆಕಾಂಕ್ಷಿ. ಆದ್ರೆ ಅವ್ಯವಹಾರದ ಆರೋಪಗಳು ಇವ್ರ ಮೇಲಿದೆ.ಇನ್ನು ಡಾ. ಜಗಧೀಶ ಹಾರೂಗೋಪ್ಪ, ಬೈಲಹೊಂಗಲ ಎಪಿಎಂಸಿ ಮಾಜಿ ಅಧ್ಯಕ್ಷ ಸಿ.ಆರ್.ಪಾಟೀಲ, ಆನಂದ ಜಕಾತಿ, ಹನುಮಂತ ಕೊಟಬಾಗಿ ಹೀಗೇ ಬಿಜೆಪಿ ಟಿಕೆಟ್ ಗಾಗಿ ಹಲವಾರು ಮಂದಿ ಇಲ್ಲಿ ಪ್ರಯತ್ನ ಮಾಡ್ತಿದ್ದಾರೆ.

ತೆನೆ ಹೊರೋದ್ಯಾರು?

ಜೆಡಿಎಸ್ ಅಭ್ಯರ್ಥಿ:

ಕಿತ್ತೂರು ಕ್ಷೇತ್ರದಲ್ಲಿ ಅಸ್ತಿತ್ವದಲ್ಲಿಲ್ಲದ ಜೆಡಿಎಸ್ ಮೇಲೆ ಈ ಬಾರಿ ನಿರೀಕ್ಷೆ ಹೆಚ್ಚಿದೆ. ಮಾಜಿ ಸಚಿವ ಬಾಬಾಗೌಡ ಪಾಟೀಲ ಪುತ್ರ ಪ್ರಕಾಶ ಪಾಟೀಲ ಜೆಡಿಎಸ್ನಿಂದ ಸ್ಪರ್ಧಿಸಬಹುದು ಅನ್ನೋ ಮಾತಿದೆ. ರೈತ ಸಂಘಟನೆಯ ಮೂಲಕ ರೈತ ಚಳುವಳಿಯ ಕ್ರಾಂತಿ ನಡೆಸಿ ಕಿತ್ತೂರಿನಿಂದ ಒಂದು ಬಾರಿ ಶಾಸಕರಾಗಿ ಬೆಳಗಾವಿ ಕ್ಷೇತ್ರದಿಂದ ಸಂಸದರಾಗಿ, ಕೇಂದ್ರದ ಮಂತ್ರಿಯೂ ಆಗಿದ್ದ ಬಾಬಾಗೌಡಾ ಪಾಟೀಲ ಎಲ್ಲ ರಾಜಕೀಯ ಪಕ್ಷಗಳ ರುಚಿ ನೋಡಿ ಈಗ ಮತ್ತೇ ಜೆಡಿಎಸ್ ಪಕ್ಷ ಸೇರಿಕೊಂಡಿರುವ ಅವರು, ಕಿತ್ತೂರಿನಿಂದ ತಮ್ಮ ಪುತ್ರ ಪ್ರಕಾಶಗೌಡ ಪಾಟೀಲ ಅವರನ್ನು ಜೆಡಿಎಸ್ ನಿಂದ ಕಣಕ್ಕಿಳಿಸುವ ತಯಾರಿ ನಡೆಸಿದ್ದಾರೆ‌. ಕಳೆದ ಬಾರಿ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಕಿತ್ತೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ 20 ಸಾವಿರಕ್ಕೂ ಹೆಚ್ಚು ಮತಪಡೆದ ಆನಂದ ಅಪ್ಪುಗೋಳ ಅವರು ಸಂಗೊಳ್ಳಿ ರಾಯಣ್ಣ ಸಹಕಾರಿ‌ ಬ್ಯಾಂಕ್ ನ್ನು ದಿವಾಳಿ ಮಾಡಿ ಜೈಲುವಾಸ ಅನುಭವಿಸಿರುವುದರಿಂದ ಅವರ ರಾಜಕೀಯ ಕನಸು ನುಚ್ಚು ನೂರಾಗಿದೆ. ಇಲ್ಲಿ ಜೆಡಿಎಸ್ ಬಾಗಿಲು ಬಾಬಾಗೌಡಾ ಪಾಟೀಲ ಅವರ ಪುತ್ರನಿಗೆ ತೆರೆದಿದೆ.

ಕಿತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 165318 ಮತದಾರರಿದ್ದು 58ಸಾವಿರದಷ್ಟಿರೋ ಲಿಂಗಾಯತರೇ ಇಲ್ಲಿ ನಿರ್ಣಾಯಕರು. ಇನ್ನು ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಆಡಳಿತ ಇದ್ರೂ ಕೂಡಾ ಅಷ್ಟೊಂದು ಅಭಿವೃದ್ಧಿ ಆಗದೇ ಇರೋ ಕಾರಣ ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಕಾಣಿಸ್ತಾ ಇದೆ. ಜತೆಗೆ ಶಾಸಕ ಇನಾಮ್ ದಾರ್ ಅವ್ರು ಇಲ್ಲಿವರೆಗೆ ಗೆಲ್ಲೋದಿಕ್ಕೆ ಕಾರಣವಾಗಿದ್ದೇ ಅವ್ರ ಜತೆಗಿದ್ದ ಅಳಿಯ ಬಾಬಾಸಹಾಬ ಪಾಟೀಲ್. ಆದ್ರೆ ಅವ್ರು ಮುನಿಸಿಕೊಂಡು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರಿದ್ದು ಕೈ ಪಾಳಯಕ್ಕೆ ದೊಡ್ಡ ಹಿನ್ನಡೆ ಅಂತಾನೇ ಹೇಳಬಹುದು. ಇದೆಲ್ಲದರ ನಡುವೆ ಐತಿಹಾಸಿಕ ಕಿತ್ತೂರು ನಲ್ಲಿ ಟಿಕೇಟ್ ಗಾಗಿ ಎಲ್ಲ ರಾಜಕೀಯ ಪಕ್ಷಗಳಲ್ಲಿ ಕಿತ್ತಾಟ ಶುರುವಾಗಿರೋದ್ರಿಂದ ಯಾರು ಈ ಬಾರಿ ಟಿಕೆಟ್ ಪಡೀತಾರೆ ಯಾರು ಗೆಲ್ತಚಾರೆ ಅನ್ನೋದನ್ನು ಸುಲಭವಾಗಿ ಹೇಳೋದಕ್ಕೆ ಸಾದ್ಯವಿಲ್ಲ.

ಕಿತ್ತೂರು ಕ್ಷೇತ್ರದಲ್ಲಿ ಬಿಜೆಪಿಗೆ  ಅಭ್ಯರ್ಥಿಗಳ ಕೊರತೆ ಇಲ್ಲದೇ ಇದ್ರೂ ಗೆಲ್ಲೋ ಅಭ್ಯರ್ಥಿ ಕೊರತೆ ಇದ್ದೇ ಇದೆ. ಹಾಗಾಗಿನೇ ಕ್ಷೇತ್ರದಲ್ಲಿ ಬಿಜೆಪಿ ನಾಯಕರ ಒಳ ಜಗಳದ ಮಧ್ಯೆ ಅನಂತ ಕುಮಾರ ಹೆಗಡೆ ಗೆಲುವಿನ ಹೊಸಮುಖನ್ನ ಬಿಜೆಪಿಗೆ ಪರಿಚಯಿಸಿದ್ದಾರೆ. ಬಿಜೆಪಿ ನಾಯಕರು ಒಳಜಗಳ ಮರೆತು ಬಾಬಾಸಾಹೇಬ ಪಾಟೀಲ ಗೆ ಬೆಂಬಲ ನೀಡಿದರೆ ಬಿಜೆಪಿ ಮತ್ತೊಮ್ಮೆ ವಿಜಯಪತಾಕೆ ಹಾರಿಸೋದ್ರಲ್ಲಿ ಅನುಮಾನ ಇಲ್ಲ. ಆ ಮೂಲಕ ಅಳಿಯ ಬಾಬಾ ಸಹೇಬ ಪಾಟೀಲ್ ಕೊಟ್ಟ ಮಾತು ತಪ್ಪಿದ ತನ್ನ ಮಾವನನ್ನು ಸೋಲಿಸೋದ್ರ ಮೂಲಕ ತಾನೇನು ಅನ್ನೋದನ್ನು ತೋರಿಸಿಕೊಳ್ಳೋದಂತೂ ಗ್ಯಾರಂಚಿ ಅಂತಿದ್ದಾರೆ ಇಲ್ಲಿನ ಮತದಾರರು.