ಚುನಾವಣಾ ಕುರುಕ್ಷೇತ್ರ 2018 – ಕುಮಟಾ(ಉತ್ತರ ಕನ್ನಡ)

ಕುಮಟಾ ವಿಧಾನಸಭಾ ಕ್ಷೇತ್ರ

ಈಗ ನಾವು ಹೇಳ್ತಾ ಇರೋ ಕ್ಷೇತ್ರ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಬಗ್ಗೆ. ಸದ್ಯ ಇಲ್ಲಿ ಕಾಂಗ್ರೆಸ್ ನ ಶಾರದಾಮೋಹನ್ ಶೆಟ್ಟಿ ಎಂಎಲ್ಎ ಆಗಿದ್ದಾರೆ. ಆದ್ರೆ ಈ ಬಾರಿ ಭಾರಿ ಬದಲಾವಣೆಯ ಗಾಳಿ ಇಲ್ಲಿ ಬೀಸುತ್ತಿದ್ದು ಯಾರ ಹವಾ ಜೋರಾಗಿದೆ? ಕ್ಷೇತ್ರ ಎಲೆಕ್ಷನ್ ಗೆ ಹೇಗೆ ಸಜ್ಜಾಗಿದೆ ನೋಡೋಣ.

ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರ. ಉತ್ತರಕನ್ನಡ ಜಿಲ್ಲೆಯ ಪ್ರತಿಷ್ಠಿತ ಕ್ಷೇತ್ರ. ಕೃಷಿ ಭೂಮಿ, ಅರಣ್ಯ ಪ್ರದೇಶ, ಗುಡ್ಡಗಾಡು, ನದಿ-ಹಳ್ಳ ಕೊಳ್ಳಗಳಿರೋ ಪ್ರಾಕೃತಿಕವಾಗಿ ಸಂಪನ್ಮೂಲಭರಿತವಾಗಿರೋ ಪ್ರದೇಶ. ಕುಮಟ ಮತ್ತು ಹೊನ್ನಾವರ ಅರ್ಧ ಭಾಗ ಸೇರಿಕೊಂಡು ಆಗಿರೋ ಈ ವಿಧಾನಸಭಾ ಕ್ಷೇತ್ರದಲ್ಲಿ ರೈತರು, ಮೀನುಗಾರರು  ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇನ್ನು ಯಾಣ. ಗೋಕರ್ಣ, ಓಂ ಬೀಚ್ ಸೇರಿದಂತೆ ಹತ್ತಾರು ಪ್ರವಾಸಿ ತಾಣಗಳು ಇಲ್ಲಿವೆ. ಹಾಗಾಗಿ ದೇಶ ವಿದೇಶಗಳಿಂದ ಪ್ರವಾಸಿಗರು ಇಲ್ಲಿಗೆ ಬರ್ತಾನೇ ಇರ್ತಾರೆ. ಇನ್ನು ರಾಜಕೀಯವಾಗಿ ಹೇಳೋದಾದ್ರೆ ಈ ಕ್ಷೇತ್ರದಲ್ಲಿ ಯಾರು ಸಹ ನಿರಂತರವಾಗಿ ರಾಜಕೀಯದಲ್ಲಿ ನೆಲೆ ಕಂಡುಕೊಂಡವರಿಲ್ಲ. ಈ ಕ್ಷೇತ್ರದ ಜನ ಪ್ರತಿ ಬಾರಿಯೂ ಸಹ ಬದಲಾವಣೆಯನ್ನು ಬಯಸಿದವರು.ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಗೆದ್ದ ಶಾರದಾ ಮೋಹನ್ ಶೆಟ್ಟಿ ಶಾಸಕರಾಗಿದ್ದಾರೆ, ಆದ್ರೆ ಇಲ್ಲಿನ ಜನ ತುಂಬಾ ಬುದ್ದಿವಂತರು ಹಾಗೂ ಪ್ರಜ್ನಾವಂತರಾಗಿರೋದ್ರಿಂದ ತಮಗೆ ಬೇಕಾದ ಅಭ್ಯರ್ಥಿಯನ್ನು ಇಲ್ಲಿವರೆಗೆ ಗೆಲ್ಲಿಸ್ತಾ ಬಂದಿದ್ದಾರೆ. ಈ ಬಾರಿ ಕ್ಷೇತ್ರದ ಜನ ಈ ಭಾರಿ ಬದಲಾವಣೆಗೆ ಮುಂದಾದ ಹಾಗೇ ಕಾಣ್ತಿದೆ. ಎಲ್ಲರ ತಲೆಯಲ್ಲಿಯೂ ಹಿಂದೂತ್ವದ ಗಾಳಿ ಜೋರಾಗಿದೆ, ಹಿಂದೂ ಯುವ ನಾಯಕನೊಬ್ಬನ್ನ ಆಯ್ಕೆ ಮಾಡಬೇಕು ಅಂತಾ ಮತದಾರರು ತುದಿಗಾಲಲ್ಲಿ ನಿಂತಿದ್ದಾರೆ. ಹಾಗಿದ್ರೆ ಆ ಬದಲಾವಣೆ ಏನು ರಾಜಕೀಯವಾಗಿ ಇಲ್ಲಿ ಇನ್ನೂ ಏನೇನು ಆಗಬಹುದು ಎಲ್ಲದರ ಬಗ್ಗೆ ಹೇಳ್ತೀವಿ ಆದ್ರೆ ಅದಕ್ಕೂ ಮೊದಲು 2013ರ ಮತಬರಹ ನೋಡೋಣ.

ಕಳೆದ ಬಾರಿಯ ಚುನಾವಣೆಯಲ್ಲಿ ಶಾರದಾ ಮೋಹನ್ ಶೆಟ್ಟಿ 36756 ಪಡೆದು ಗೆದ್ದು ಶಾಸಕರಾದ್ರು. ಜೆಡಿಎಸ್ ಅಭ್ಯರ್ಥಿಯಾಗಿದ್ದ ದಿನಕರ ಶೆಟ್ಟಿ 35977 ಪಡೆದುಕೊಂಡ್ರೆ. ಬಿಜೆಪಿಯಿಂದ ಸ್ಪರ್ಧಿಸಿದ್ದ ಸೂರಜ್ ನಾಯ್ಕ ಸೋನಿ 29000 ಮತ ಪಡೆದ್ರು ಇನ್ನು ಕೆಜೆಪಿಯಿಂದ ಸ್ಪರ್ಧಿಸಿದ್ದ ಗಾಯತ್ರಿ ಗೌಡ 14182 ಪಡೆದುಕೊಂಡಿದ್ರು

ಕಳೆದ ಬಾರಿಯ ರಿಸಲ್ಟ್ ನೋಡಿದ್ರೆ ಜನ ಒಂದಷ್ಟು ಗೊಂದಲದಲ್ಲಿ ಮತ ಚಲಾಯಿಸಿದ್ದಾರೆ ಅಂತಾ ಅನ್ಸದೇ ಇರಲ್ಲ .ಯಾಕಂದ್ರೆ ಶಾಸಕಿ ಶಾರದಾಮೋಹನ್ ಶೆಟ್ಟಿ ಅವ್ರು ಕೇವಲ ಸಾವಿರ ಮತಗಳ ಅಂತರದಲ್ಲಿ ಗೆದ್ದಿದ್ರು. ಹಾಗಾಗಿ ಈ ಬಾರಿ ಅವ್ರು ಗೆಲ್ಲೋದು ತುಂಬಾ ಕಷ್ಟ ಇದೆ. ಇನ್ನು ಕಳೆದ ಬಾರಿ ಬಿಜೆಪಿ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ ಸೋತಿದ್ರು. ಹಾಗಾಗಿ ಅವ್ರನ್ನು ಒಂದು ಬಾರಿ ಗೆಲ್ಲಸಲೇ ಬೇಕು ಅನ್ನೋ ಮಾತು ಇಲ್ಲಿನ ಜನರಿಂದ ಕೇಳಿ ಬರ್ತಿರೋದು ನೋಡಿದ್ರೆ ಈ ಬಾರಿ ಕಮಲ ಅರಳೋ ಮುನ್ಸೂಚನೆ ಸಿಕ್ತಾ ಇದೆ. ಇನ್ನು ಜೆಡಿಎಸ್ ಪಾಳಯದಲ್ಲಿ ಆಕಾಂಕ್ಷಿಗಳ ಸಂಖ್ಯೆ ಜಾಸ್ತಿ ಇದ್ದು ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ. ಇದು ಯಾವ ಹಂತಕ್ಕೆ ತಲುಪುತ್ತೆ ಅಂತಾ ಹೇಳೋದಕ್ಕೆ ಸಾಧ್ಯ ಇಲ್ಲ. ಹಾಗಾಗಿ ಈ ಬಾರಿ ಕ್ಷೇತ್ರದಲ್ಲಿ ಬಾರಿ ಬದಲಾವಣೆ ಆಗೋದಂತೂ ಗ್ಯಾರಂಟಿ. ಬನ್ನಿ ಹಾಗಿದ್ರೆ ಕ್ಷೇತ್ರದಲ್ಲಿ ಈ ಬಾರಿ ಯಾರ್ಯಾರು ಅಖಾಡಕ್ಕಿಳಿತಾರೆ…ಅವ್ರ ಶಕ್ತಿ ಸಾಮರ್ಥ್ಯಗಳೇನು ನೋಡೋಣ.

 

ಕಾಂಗ್ರೆಸ್ ಅಭ್ಯರ್ಥಿ:

ಕುಮಟ ಹೊನ್ನಾವರ ವಿಧಾನಸಬಾ ಕ್ಷೇತ್ರದ ಶಾಸಕರಾಗಿರೋ ಶಾರದಾ ಮೋಹನ್ ಶೆಟ್ಟಿ ಮತ್ತೆ ಇಲ್ಲಿಂದ ಕಣಕ್ಕಿಳಿಯೋದು ಖಚಿತ ಅಂತಾ ಹೇಳಾಗತ್ತಾ ಇದೆ. ಆದ್ರೆ ಕಳೆದ ಬಾರಿಯ ಹಾಗೆ ಲಕ್ ಕೈ ಹಿಡಿಯುತ್ತಾ ಅಂತಾ ಕೇಳಿದ್ರೆ ಡೌಟ್ ಅಂತಿದ್ದಾರೆ ಇಲ್ಲಿನ ಜನ. ಯಾಕಂದ್ರೆ ಶಾಸಕರಾದ ಮೇಲೆ ಅವ್ರಿಂದ ಕ್ಷೇತ್ರದ ಜನ ತುಂಬಾ ನಿರೀಕ್ಷೆಗಳನ್ನು ಇಟ್ಕೊಂಡಿರ್ತಾರೆ. ಆದ್ರೆ ಈ ನಿರೀಕ್ಷೆಗಳು ಈಡೇರದೇ ಇದ್ದಾಗ ಸಹಜವಾಗೇ ಆಡಳಿತ ವಿರೋಧಿ ಅಲೆ ಎದ್ದೇಳತ್ತೆ. ಇಲ್ಲೂ ಆಗಿರೋದು ಅದೇನೆ. ಶಾಸಕರಾಗಿರೋ ಶಾರದಾ ಮೋಹನ್ ಶೆಟ್ಟಿ ಕ್ಷೇತ್ರದ ತುಂಬಾ ಯೋಜನೆಗಳಿಗೆ ಅಡಿಗಲ್ಲು ಹಾಕಿರೋದು ಬಿಟ್ರೆ ಕಾಮಗಾರಿಗಳು ಆರಂಭವಾಗಿಲ್ಲ. ಹಾಗಾಗಿ  ಭ್ರಷ್ಟಾಚಾರದ ಬಗ್ಗೆ ಗಂಭೀರ ಆರೋಪ ಕೇಳಿಬರತ್ತಾ ಇದೆ. ಶಾಸಕರಾದ ಬಳಿಕ ಕೇವಲ ರಸ್ತೆ, ಗಟಾರಗಳಾಗಿರೋದು ಬಿಟ್ರೆ ಆರ್ಥಿಕವಾಗಿ ಕ್ಷೇತ್ರ ತುಂಬಾ ಹಿಂದೆ ಉಳಿದುಕೊಂಡಿದೆ. ಕಮೀಷನ್ ಗಾಗಿಯೇ ಈ ರೀತಿಯ ಕಾಮಗಾರಿಯನ್ನ ಹೆಚ್ಚೆಚ್ಚು ಮಾಡಲಾಗ್ತಿದೆ ಅಂತಾ ಜನ ಹೇಳತ್ತಿದ್ದಾರೆ. ತಾಯಿ ಶಾಸಕರಾಗಿರೋದ್ರಿಂದ ಇವರ ಮಗ ಪ್ರತಿಯೊಂದು ಕಾಮಗಾರಿಯಲ್ಲಿ ಕಮಿಷನ್ ವ್ಯವಹಾರ ಮಾಡತ್ತಿದ್ದಾರೆ ಹಾಗೂ ಯಾವುದೆ ಕೆಲಸ ಆಗಬೇಕು ಅಂತಾ ಶಾಸಕರ ಬಳಿ ಹೋದ್ರೆ ಅದಕ್ಕೆ ಅವರ ಮಗನ ಪರ್ಮಿಶನ್ ಬೇಕಂತೆ ಅನ್ನೋ ಆರೋಪಗಳಿವೆ. ಅಷ್ಟೆ ಅಲ್ಲ ಇಲಾಗಿರೋ ಕಾಮಗಾರಿ ಸಂಪೂರ್ಣವಾಗಿ ಕಳೆಪೆಯಾಗಿದ್ದು ಭ್ರಷ್ಟಾಚಾರದ ವಾಸನೆ ಹೊಡೆಯುತ್ತಿದೆ ಅಂತಾ ಜನ ಸಾಕಷ್ಟು ಸಲ ಪ್ರತಿಭಟನೆ ಮಾಡಿದ್ದಾರೆ.ಇನ್ನು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಒಂದೆ ಒಂದು ಬಾರಿ ಅಧಿವೇಶನದಲ್ಲಿ ಸಾಸಕರು ತುಟಿ ಬಿಚ್ಚಿಲ್ಲ. ಪರೇಶ್ ಮೇಸ್ತಾ ಸಾವಿನ ಪ್ರಕರಣದಲ್ಲಿ ಇವ್ರು ತುಟಿ ಬಿಚ್ಲಿಲ್ಲ. ಹಾಗಾಗಿ ನಾವು ಕೇವಲ ಇವರಿಗೆ ಮತ ಚಲಾವಣೆಗೆ ಮಾತ್ರ ಬೇಕಾ ಅಂತಾ ಕುಮಟಾ ಹೊನ್ನಾವರ ಕ್ಷೇತ್ರದ ಜನ ಮಾತ್ನಾಡುತ್ತಾ ಇದ್ದಾರೆ. ಇದೆಲ್ಲ ನೋಡಿದ್ರೆ ಈ ಬಾರಿ ಇವ್ರು ನಿಂತ್ರೂ ಗೆಲ್ಲೋದು ಕಷ್ಟ. ಇನ್ನು ಒಂದು ವೇಳೆ ಶಾರದಾ ಮೋಹನ್ ಶೆಟ್ಟಿ ಅವರಿಗೆ ಟಿಕೇಟ್ ತಪ್ಪಿದ್ರೆ ಜಿಲ್ಲಾ ಪಂಚಾಯತ್ ಸದ್ಯರಾಗಿರೋ ರತ್ನಾಕರ್ ನಾಯ್ಕ, ಇಲ್ಲ ರಾಮಚಂದ್ರ ನಾಯ್ಕ (ಆರ್ ಎಚ್ ನಾಯ್ಕ ) ಅವರನ್ನ ಕಾಂಗ್ರೆಸ್ ನಿಂದ ಕಣಕ್ಕಿಸಿಸೋ ಪ್ರಯತ್ನಗಳು ತೆರೆಮರೆಯಲ್ಲಿ ನಡಿತ್ತಾ ಇದೆ.

ಕಮಲ ಮುಡಿಯೋರ್ಯಾರು?

ಬಿಜೆಪಿ ಅಭ್ಯರ್ಥಿ:

ಯಸ್ ಕಳೆದ ಬಾರಿ ಸ್ಪರ್ಧಿಸಿ ಕೆಲವು ಸಾವಿರ ಮತಗಳ ಅಂತರದಿಂದ ಸೋತಿದ್ದ ಬಿಜೆಪಿಯ ಸೂರಜ್ ನಾಯ್ಕ ಸೋನಿ ಮತ್ತೆ ಈ ಬಾರಿ ಅದೃಷ್ಟ ಪರೀಕ್ಷೆಗ ಇಳಿತಿದ್ದಾರೆ. ಕ್ಷೇತ್ರದಲ್ಲಿ ಈ ಸಲ ಏನೆ ಆದ್ರೂ ಕಮಲ ಅರಳಿಸಲು ಜನ ಪಕ್ಕಾ ಪ್ಲಾನ್ ಮಾಡಿದ್ದಾರೆ ಹಾಗಾಗಿ ಸೂರಜ್ ನಾಯ್ಕ ಸೋನಿ ಗೆಲ್ಲೋ ನಿರೀಕ್ಷೆಯಲ್ಲಿದ್ದಾರೆ. ಹೇಳಿ ಕೇಳಿ ಆ ಹಿಂದೂ ಯುವ ನಾಯಕ.  ಕುಮಟಾ ಕ್ಷೇತ್ರಕ್ಕೆ ಮಾತ್ರವಲ್ಲದೆ ಇಡೀ ಜಿಲ್ಲೆಯ ತುಂಬಾ ಮನೆ ಮಾತಾಗಿದ್ದಾರೆ. ಕುಮಟಾ ಕ್ಷೇತ್ರದಲ್ಲಿ  ದಿನದಿಂದ ದಿನಕ್ಕೆ ಬಿಜೆಪಿಗೆ ಪ್ಲಸ್ ಆಗ್ತಿದೆ ಅಂದ್ರೆ ಅದಕ್ಕೆ ಸೂರಜ್ ನಾಯ್ಕ ಅವರಂತ ಹಿಂತೂತ್ವದ ನಾಯಕನೇ ಕಾರಣ ಅಂತಾರೆ ಕ್ಷೇತ್ರದ ಜನ. ಇವರ ಜೊತೆ ಯುವಕರ ದೊಡ್ಡ ಪಡೆ ಇದೆ. ಇದಕ್ಕೂ ಕಾರಣ ಇದೆ ಸೂರಜ್ ನಾಯ್ಕ ಸೋನಿ ಎಂ ಬಿ ಎ ಪಧವೀದರರು. ಕಾಲೇಜು ಫ್ರಿನ್ಸಿಪಾಲರಾಗಿ 9 ವರ್ಷ ಸೇವೆ ಸಲ್ಲಿಸಿ ಇದೀಗ ಜನ ಸೇವೆಗೆ ಬಂದಿದ್ದಾರೆ. ಅಷ್ಟೇ ಅಲ್ಲ ಇವ್ರಿಗೆ ರಾಜಕೀಯ ಕ್ಷೇತ್ರದ ಬಗ್ಗೆ ಸಾಕಷ್ಟು ಅನುಭವ ಇದೆ, ಕಳೆದ ಬಾರಿ ಕ್ಷೇತ್ರದಲ್ಲಿ ಅಭ್ಯರ್ಥಿ ಘೋಷಣೆ ಮಾಡೋದಕ್ಕೆ ವಿಳಂಬವಾಗಿರೋದ್ರಿಂದ ಸೋಲಾಯಿತು, ಇನ್ನು ಇವ್ರು ಕುಮಟ ಯುವ ಒಕ್ಕೂಟದ ಅಧ್ಯಕ್ಷರಾಗಿ, ರಾಜ್ಯ ಕಬ್ಬಡಿ ಸಂಸ್ಥೆಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ರೀಡೆ, ಶಿಕ್ಷಣ, ಸಮಾಜ ಸೇವೆ ಮಾಡತ್ತಾ ಇರೋದ್ರಿಂದ ಜನ ತುಂಬಾನೇ ಇಷ್ಟ ಪಡುತ್ತಾರೆ. ಹಿಂದೂ ಯುವಕರಿಗೆ ನೋವಾದ್ರೆ ತನ್ನ ಜೀವದ ಹಂಗನ್ನು ತೋರೆದು ಅವರ ರಕ್ಷಣೆಗೆ ನಿಲ್ಲತ್ತಾರೆ, ಹೀಗಾಗಿ ಇವರ ಮೇಲೆ ಹಿಂದೂ ವಿರೋಧಿಗಳ ಕಣ್ಣು ಬಿದ್ದಿದೆ. ಕಳೆದ ವರ್ಷ ನವೆಂಬರ್ ನಲ್ಲಿ ಖಾಸಗಿ ಕಾರ್ಯಕ್ರಮವೊಂದಕ್ಕೆ ಹೋಗತ್ತಾ ಇರೋ ಸಮಯದಲ್ಲಿ ಚಂದಾವರ ಗ್ರಾಮದಲ್ಲಿ ಹಿಂದೂ ವಿರೋಧಿಗಳು ಇವ್ರ ಕಾರಿಗೆ ಕಲ್ಲು ಎಸೆದು ಹಲ್ಲೆ ಸಹ ಮಾಡಿದ್ರೂ, ಆದ್ರೂ ಅದನ್ನ ಎದುರಿಸಿ ಗೆದ್ದು ಬಂದಿದ್ದಾರೆ. ಬಳಿಕ ಪರೇಶ್ ಮೇಸ್ತಾ ಸಾವಿನ ಪ್ರಕರಣದಲ್ಲಿ ನ್ಯಾಯಕ್ಕಾಗಿ ಹಿಂದೂ ಯುವಕರು ಪ್ರತಿಭಟನೆ ಮುಂದಾಗಿದ್ದಾಗ ಆ ಯುವಕರ ರಕ್ಷಣೆಗೆ ಸೂರಜ್ ಸೋನಿ ಬರತ್ತಾರೆ ಅಂತಾ ತಿಳಿದ ಖಾಕಿ ಪಡೆಯವರು ಸೂರಜ್.

ಮೇಲೂ ಪ್ರಕರಣ ದಾಖಲಿಸಿ ಜೈಲಿಗೆ ತಳ್ಳೋ ಪ್ರಯತ್ನ ಮಾಡಿದ್ರು . ಇನ್ನೊಂದು ವಿಶೇಷ ಅಂದ್ರೆ 2012ರ ಲ್ಲಿ ನೂರಾರು ಯುವಕರೊಂದಿಗೆ ಕಾಶ್ಮೀರದ ಶ್ರೀನಗರದಲ್ಲಿ ಧ್ವಜಹಾರಿಸಲು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿದ್ದ ಸುನೀಲ್ ಕುಮಾರ ಅವರೊಂದಿಗೆ ತೆರಳಿ ಧ್ವಜ ಹಾರಿಸಿ ಬಂಧಿದ್ದಾರೆ. ಬಿಜೆಪಿ ಹೈಕಮಾಂಡ್ ಕೂಡಾ  ಇವ್ರ ಮೇಲೆ ಕಣ್ಣಿಟ್ಟಿದ್ದು ಕೆಲ ದಿನಗಳಲ್ಲಿ ಬಿಪಿಯ ಚಾಣಕ್ಯ ಅಮೀತ್ ಶಾ ಕುಮಟ ಕ್ಷೇತ್ರಕ್ಕೆ ಭೇಟಿ ನೀಡಲ್ಲಿದ್ದು ಇದು ಬಿಜೆಪಿ ಗೆ ಮತ್ತಷ್ಟು ಬಲ ತರೋದ್ರಲ್ಲಿ ಅನುಮಾನವಿಲ್ಲ. ಇನ್ನುಳಿದಂತೆ ಮಾಜಿ ಶಾಸಕ ಕಳೆದ ಬಾರಿ ಜೆಡಿಎಸ್ ನಿಂದ ನಿಂತು ಸೋತಿದ್ದ ದಿನಕರ ಶೆಟ್ಟಿ, ಜೆಡಿಎಸ್ ನ ಈ ಬಾರಿಯ ಅಭ್ಯರ್ಥಿ ಪ್ರದೀಪ್ ನಾಯಕ ಜತೆಗೆ ಮುಸುಕಿನ ಗುದ್ದಾಟ ನಡೀತಿರೋದ್ರಿಂದ ಬೇಸತ್ತು ಬಿಜೆಪಿಗೆ ಬಂದು ಆಕಾಂಕ್ಷಿಯಾಗಿದ್ದಾರೆ. ಆದ್ರೆ ಇವ್ರ ಜತೆಗೆ ಬಿಜೆಪಿಗೆ ಯಾರೂ ಬರದೇ ಇರೋ ಕಾರಣ ದಿನಕರ ಶೆಟ್ಟಿ ಬಿಜೆಪಿಯಲ್ಲಿದ್ದರೂ ಸದ್ಯ ತಟಸ್ಥಾಗಿರೋ ಹಾಗೆ ಕಂಡುಬರತ್ತಾ ಇದೆ.

 

ತೆನೆ ಹೊರೋದ್ಯಾರು?

ಜೆಡಿಎಸ್ ಅಭ್ಯರ್ಥಿ:

ಪ್ರದೀಪ ನಾಯಕ ಇವರು ಜಿಲ್ಲಾ ಪಂಚಾಯತ ಸದಸ್ಯರಾಗಿದ್ದು ಕುಮಟಾ-ಹೊನ್ನಾವರ ಕ್ಷೇತ್ರದ ಜೆಡಿಎಸ್ ಘೋಷಿತ ಅಭ್ಯರ್ಥಿಯಾಗಿದ್ದಾರೆ. ಈ ಹಿಂದೆ ಜೆಡಿಎಸ್ ನಿಂದ ಶಾಸಕರಾಗಿದ್ದ ದಿನಕರ ಶೆಟ್ಟಿ ಈಗ ಬಿಜೆಪಿಗೆ ಸೇರಿರೋದು ಪ್ರದೀಪ ನಾಯಕ ಅವರಿಗೆ ಜೆಡಿಎಸ್ ನಿಂದ ಅಭ್ಯರ್ಥಿಯಾಗೋದಕ್ಕೆ ಅವಕಾಶ ಸಿಕ್ಕಿದೆ. ಜನ ಏನೋ ಇವರನ್ನ ಇಷ್ಟ ಪಡತ್ತಾರೆ. ಆದ್ರೆ ಕ್ಷೇತ್ರದಲ್ಲಿ ಜೆಡಿಎಸ್ ಎಸ್ ಗೆಲ್ಲೊದು ಸುಲಭದ ಮಾತಲ್ಲ, ಯಾಕೆಂದ್ರೆ ಇಲ್ಲಿ ಈ ಬಾರಿ ಹೆಚ್ಚಾಗಿ ಹಿಂದೂತ್ವದ ಅಲೆ ವರ್ಕ್ ಆಗ್ತಾ ಇರೋದ್ರಿಂದ  ಜೆಡಿಎಸ್ ನ ಪ್ರದೀಪ ನಾಯಕ ಅವರಿಗೆ ಸ್ವಲ್ಪ ಕಷ್ಟವಾಗಬಹುದು ಈ ಕ್ಷೇತ್ರದಲ್ಲಿ ಪ್ರದೀಪ ನಾಯ್ಕ ಅವರನ್ನ ಹೊರತು ಪಡಿಸಿದ್ರೆ ಆ ಪಕ್ಷಕ್ಕೆ ಮತ ಗಿಟ್ಟಿಸಿಕೊಂಡು ಬರುವಂತಾ ನಾಯಕರಿಲ್ಲದೆ ಇರೋದು ಕೂಡಾ ದೊಡ್ಡ ಸಮಸ್ಯೆ ಆಗಲಿದೆ.

ಇನ್ನು ಕ್ಷೇತ್ರದಲ್ಲಿರೋ ಮತದಾರರಲ್ಲಿ ಶೇ 45 ರಷ್ಟು ನಾಮಧಾರಿ (ಈಡಿಗ), ಶೇ 25 ರಷ್ಟು ಹವ್ಯಕ ಬ್ರಾಹ್ಮಣರು, ಇನ್ನೂ ಶೇ 30 ಒಕ್ಕಲಿಗರು, ಮೀನುಗಾರರು ಉಳಿದ ಸಣ್ಣ ಸಮುದಾಯ ಇಲ್ಲಿದೆ, ಇಲ್ಲಿ ನಾಮಧಾರಿ ಅಥವಾ ಈಡಿಗ ಮತಗಳೇ ನಿರ್ಣಾಯಕವಾಗಿರೋದ್ರಿಂದ ಆ ಮತಗಳು ಅದೇ ಸಮುದಾಯಕ್ಕೆ ಸೇರಿದ ಬಿಜೆಪಿಯ ಸೂರಜ್ ನಾಯ್ಕ ಸೋನಿ ಅವ್ರ ಪಾಲಾಗೋದು ಗ್ಯಾರಂಟಿ, ಇನ್ನು ಹಿಂದೂ ಪರ ಅಲೆ ಈ ಬಾರಿ ಇಲ್ಲಿ ಜೋರಾಗಿರೋದು ನೋಡಿದ್ರೆ ಈ ಎಲ್ಲಾ ಕಾರಣದಿಂದಾಗಿ ಬಿಜೆಪಿ ಇಲ್ಲಿ ಜಯಭೇರಿ ಬಾರಿಸೋ ಹಾಗೇ ಕಾಣಿಸ್ತಿದೆ.

 

ಕುಮಟಾ ಹೊನ್ನಾವರ ಕ್ಷೇತ್ರ ಈ ಬಾರಿ ಸದ್ದು ಮಾಡಿದ್ದೇ ಪರೇಶ್ ಮೇಸ್ತಾ ಸಾವಿನ ಪ್ರಕರಣದಿಂದ. ಆದ್ರೆ ಸರ್ಕಾರದ ಕಡೆಯಿಂದ ಆವರ ಕುಟುಂಬಕ್ಕೆ ಅತ್ಯಲ್ಪ ಪರಿಹಾರ ನೀಡಿದ್ದು ಹಾಗೂ ಇದೇ ಸಂದರ್ಭದಲ್ಲಿ ಶಾಸಕರು ಕುಮಟಾ ಕ್ಷೇತ್ರದಲ್ಲಿ ಉತ್ಸವ ಮಾಡಿದ್ದು ಮತದಾರರಲ್ಲಿ ಅಸಮಾಧಾನ ಉಂಟು ಮಾಡಿದೆ. ಒಂದುಕಡೆ ಆಡಳಿತ ವಿರೋಧಿ ಅಲೆ ಮತ್ತೊಂದ್ಕಡೆ ಬಿಜೆಪಿಯ ಯುವ ನಾಯಕ ಸೂರಜ್ ನಾಯ್ಕ ಅವ್ರು ಕಳೆದ ಬಾರಿ ಸೋತ್ರೂ ಕೂಡಾ  ಕ್ಷೇತ್ರ ಬಿಡದೆ ಪಕ್ಷ ಸಂಘಟನೆ ಹಾಗೂ ಜನರ ಮನ ಗೆಲ್ಲೋ ಕ್ಲೆಸ್ ಮಾಡ್ತಿರೋದು ಬಿಜೆಪಿಗೆ ಪ್ಲಸ್ ಪಾಯಿಂಟ್. ಇಲ್ಲಿ ಸೂರಜ್ ನಾಯ್ಕ ಸೋನಿ ಪ್ರಬಲ ನಾಮಧಾರಿ ಸಮಾಜದವರಾಗಿರೋದ್ರಿಂದ ಆ ಸಮಾಜದ ಮತಗಳ ಜೊತೆ ಉಳಿದ ಸಮಾಜದವರ ಬೆಂಬಲ, ಹಿಂದೂತ್ವದ ಅಲೆಯ ಲಾಭ ಇವ್ರಿಗೆ ಸಿಗೋದ್ರಿಂದ ಬಿಜೆಪಿಯ ಸೂರಜ್ ನಾಯ್ಕ ಸೋನಿ ಇಲ್ಲಿ ಗೆದ್ದೇ ಗೆಲ್ತಾರೆ ಅಂತಿದ್ದಾರೆ ರಾಜಕೀಯ ವಿಶ್ಲೇಷಕರು.