ಚುನಾವಣಾ ಕುರುಕ್ಷೇತ್ರ 2018 – ಮಹದೇವಪುರ( ಬೆಂಗಳೂರು )

ಮಹದೇವಪುರ ವಿಧಾನಸಭಾ ಕ್ಷೇತ್ರ

ಈಗ ನಾವು ಹೇಳ್ತಿರೋದು ಬೆಂಗಳೂರಿನ ಮಹದೇವಪುರ ವಿಧಾನಸಬಾ ಕ್ಷೇತ್ರದ ಬಗ್ಗೆ. ಪ್ರಸ್ತುತ ಬಿಜೆಪಿಯ ಅರವಿಂದ ಲಿಂಬಾವಳಿ ಇಲ್ಲಿನ ಶಾಸಕರು. ಎಲೆಕ್ಷನ್ ಹತ್ತಿರವಾಗ್ತಿರೋ ಈ ಸಂದರ್ಭದಲ್ಲಿ ಇಲ್ಲಿನ ರಾಜಕೀಯ ಚಿತ್ರಣ ಏನು? ಈ ಬಾರಿ ಯಾರು ಗೆಲ್ಲೋ ಚಾನ್ಸ್ಇದೆ ನಾವು ಹೇಳ್ತೀವಿ ನೋಡಿ.

ಮದಹೇವಪುರ ವಿಧಾನಸಭಾ ಕ್ಷೇತ್ರ. ಬೆಂಗಳೂರು ನಗರ ಜಿಲ್ಲೆಯಲ್ಲಿರೋ, ರಾಜಕಾರಣಕ್ಕೆ ಹೆಸರಾಗಿರೋ ಪ್ರತಿಷ್ಚಿತ ಕ್ಷೇತ್ರ. ಮಹದೇವಪುರ ಐಟಿ ಬಿಟಿಯ ಕೇಂದ್ರ ಬಿಂದು. ದೇಶವಿದೇಶಗಳಲ್ಲೂ ವೈಟ್​ ಫೀಲ್ಡ್​ನ ಹೆಸರು ರಾರಾಜಿಸುತ್ತಿದೆ, ಮಾಹಿತಿ ತಂತ್ರಜ್ಷಾನದ ಕ್ಷೇತ್ರ ಇದು. ಅಷ್ಟೇ ಅಲ್ಲ ಬಿಬಿಎಂಪಿಗೆ ಅತಿ ಹೆಚ್ಚು ತೆರಿಗೆ ಸಂಗ್ರಹ ಮಾಡಿಕೊಡೋ ಕ್ಷೇತ್ರ ಕೂಡಾ ಹೌದು.  ಸಾವಿರಾರು ಕೊಟಿ ತೆರಿಗೆ ಸಂಗ್ರಹಿಸುವ ಮೂಲಕ ನಗರ ಮತ್ತೆ ರಾಜ್ಯದಲ್ಲೆ ಅತಿ ಹೆಚ್ಚು ತೆರಿಗೆ ನೀಡುವ ವಿದಾನ ಸಭಾ ಕ್ಷೇತ್ರ ಇದಾಗಿದೆ. ಈ ಕ್ಷೇತ್ರ ಬಿಬಿಎಂಪಿ ಮತ್ತು ಗ್ರಾಮೀಣ ಪ್ರದೇಶವನ್ನು ಒಳಗೊಂಡಿದೆ. 8 ಬಿಬಿಎಂಪಿ ಮತ್ತು 11 ಗ್ರಾಮ ಪಂಚಾಯತಿಗಳು ಇಲ್ಲಿವೆ. ಇಲ್ಲಿರೋ 6 ಜಿಲ್ಲಾಪಂಚಾಯತ್ ಗಳ ಪೈಕಿ 5 ಕಾಂಗ್ರೆಸ್ ಮತ್ತು 1 ಬಿಜೆಪಿ ಕೈಯಲ್ಲಿದೆ ಇದನ್ನು ನೋಡಿದ್ರೆ ಗ್ರಾಮೀಣ ಪ್ರದೇಶದಲ್ಲಿ ಕಾಂಗ್ರೆಸ್ ಕಡೆ ಹೆಚ್ಚಿನ ಒಲವು ಕಾಣಿಸುತ್ತೆ. ಹಾಗಾಗೇನೇ ಈ ಬಾರಿ ಕಾಂಗ್ರೆಸ್ ಇಲ್ಲಿ ಜಯ ಸಾಧಿಸಲಿದೆ ಅನ್ನೋದು ಸಾರ್ವಜನಿಕ ವಲಯದಲ್ಲಿ ಕೇಳಿ ಬರ್ತಿರೋ ಮಾತು. ಇಲ್ಲಿನ ರಾಜಕೀಯ ಚಿತ್ರಣದ ಬಗ್ಗೆ ಮತ್ತಷ್ಟು ಹೇಳ್ತೀವಿ ಆದ್ರೆ ಅದಕ್ಕೂ ಮೊದಲು 2013ರ ಮತಬರಹ ನೋಡೋಣ

 

2013ರ ಮತಬರಹ

ಇದು 2013ರ ಮತಬರಹ. ಮಾಜಿ ಸಚಿವ ಅರವಿಂದ ಲಿಂಬಾವಳಿ ಇಲ್ಲಿಂದ ಕಣಕ್ಕಿಳಿದು 110244 ಮತಗಳನ್ನು ಪಡೆಯೋ ಮೂಲಕ ಗೆದ್ದು ಶಾಸಕರಾದ್ರು. ಇನ್ನು ಅವ್ರಿಗೆ ತೀವ್ರ ಪೈಪೋಚಿ ನೀಡಿದ ಕಾಂಗ್ರೆಸ್ ನ ಎಂಸಿ ಶ್ರೀನಿವಾಸ್ ಅವ್ರು 104095 ಮತಗಳನ್ನು ಗಳಿಸೋ ಮೂಲಕ ಕೇವಲ 6149 ಮತಗಳ ಅಂತರದಲ್ಲಿ ಸೋತ್ರು.

ಕಳೆದ ಬಾರಿಯ ರಿಸಲ್ಟ್ ನೋಡಿದ್ರೆ ಸಾಕು ಇಲ್ಲಿ ಬಿಜೆಪಿಯತ್ತ ಇದ್ದ ಮತದಾರನ ಒಲವು ಕಾಂಗ್ರೆಸ್ ನತ್ತ ತಿರುಗಿದೆ ಅನ್ನೋದು ಗೊತ್ತಾಗತ್ತೆ. ಇಲ್ಲಿ ಬಿಜೆಪಿ ಹೋಲ್ಡ್ ಕಡಿಮೆ ಆಗೋದಕ್ಕೆ ಕಾರಣ ಅರವಿಂದ ಲಿಂಬಾವಳಿ ಅವ್ರು. ಸತತವಾಗಿ 2 ಬಾರಿ ಗೆದ್ದ ಅರವಿಂದ ಲಿಂಬಾವಳಿ ಅವ್ರು ಸಚಿವರಾಗಿದ್ದಾಗ ಈ ಕ್ಷೇತ್ರಕ್ಕೆ ಏನೂ ಮಾಡಿಲ್ಲ. ಕೇವಲ ಬಾಯಿ ಮಾತಿನಲ್ಲಿ ಮಾತ್ರ ಅಭಿವೃದ್ಧಿ ಅದನ್ನು ಹೊರತು ಪಡಿಸಿದ್ರೆ ರಾಜಕೀಯ ಭಾಷಣಗಳಿಗೆ ಮಾತ್ರ ಸೀಮಿತವಾಗಿದ್ದಾರೆ. ಹಾಗಾಗಿ ಲಿಂಬಾವಳಿ ಅವ್ರ ಮಾತೂ ಕೇಳಿ ಕೇಳಿ ಇಲ್ಲಿನ ಜನ ರೋಸಿ ಹೋಗಿದ್ದಾರೆ ಹೋಪ್ಸ್ ಕಳೆದುಕೊಂಡಿದ್ದಾರೆ.ಹಾಗಾಗಿ ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾತಾಡೋದಾದ್ರೆ ಆಡಳಿತ ವಿರೋಧಿ ಅಲೆ ಅಂದ್ರೆ ಲಿಂಬಾವಳಿ ವಿರುದ್ಧದ ಅಲೆ ಜೋರಾಗಿದೆ. ಇನ್ನು ಕಾಂಗ್ರೆಸ್ ಎಸಿ ಶ್ರೀನಿವಾಸ್ ಅವ್ರು ಕಳೆದ ಬಾರಿಯೇ ಫೈಟ್ ಕೊಟ್ಟಿರೋ ಕಾರಣ ಈ ಬಾರಿ ಅವ್ರು ಸುಲಭವಾಗಿ ಬಿಜೆಪಿಯನ್ನು ಬೀಟ್ ಮಾಡೋ ಸಾಧ್ಯತೆ ಇದೆ. ಇಲ್ಲಿನ ರಾಜಕೀಯದ ಒಳಸುಳಿಗಳನ್ನು ಹೇಳ್ತೀವಿ ಆದ್ರೆ ಅದಕ್ಕೂ ಮೊದಲು ಯಾವ ಪಕ್ಷದಿಂದ ಯಾರು ಕಣಕ್ಕಿಳಿತಾರೆ ಅವ್ರ ಪ್ಲಸ್ ಮೈನಸ್ ಏನು ನೋಡೋಣ

ಬಿಜೆಪಿ ಅಭ್ಯರ್ಥಿ

 

ಮಾಜಿ ಸಚಿವ ಹಾಗೂ ಹಾಲಿ ಶಾಸಕರಾಗಿರೋ ಅರವಿಂದ ಲಿಂಬಾವಳಿಯವ್ರೇ ಈ ಬಾರಿ ಕೂಡಾ ಬಿಜೆಪಿಯಿಂದ ಇಲ್ಲಿ ಕಣಕ್ಕಿಳಿತಾರೆ ಅನ್ನೋದ್ರಲ್ಲಿ ಎರಡು ಮಾತಿಲ್ಲ ಆದ್ರೆ ಈ ಬಾರಿ ಗೆಲ್ಲೋದು ತುಂಬಾ ಕಷ್ಟ ಇದೆ. ಯಾಕಂದ್ರೆ ಅವ್ರು ಸ್ಥಳೀಯರಲ್ಲ. ಸಾಕಷ್ಟು ಹಗರಣಗಳಲ್ಲಿ ಲಿಂಬಾವಳಿ ಹೆಸರು ಕೇಳಿ ಬಂದಿದೆ. ಭೂಮಾಫಿಯಾದ ಜತೆಗೆ ನಂಟಿದೆ ಅನ್ನೋ ಆರೋಪವಿದೆ. ಇದೆಲ್ಲದರ ಜತೆಗೆ ಕ್ಷೇತ್ರದ ಜನರ ಕೈಗೆ ಸುಲಭವಾಗಿ ಸಿಗಲ್ಲ. ಅಷ್ಟೇ ಅಲ್ಲ ಮಾಧ್ಯಮಗಳ ಕೈಗೆ ಕೂಡಾ ಸಿಗಲ್ಲ. ಸ್ಲಂಗಳಲ್ಲಿ ಏನಾದ್ರೂ ಸಮಸ್ಯೆ ಆದ್ರೆ ಅಥವಾ ಪ್ರೊಟೆಸ್ಟ್ ಗಳೇನಾದ್ರೂ ಇದ್ರೆ ಅಲ್ಲಿಗೆ ಹೋಗೋದೇ ಇಲ್ಲ ಹಾಗಾಗಿ ಇವ್ವೊಬ್ಬ ಹೈಫೈ ರಾಜಕಾರಣಿ ಅನ್ನೋ ಮಾತನ್ನು ಇಲ್ಲಿನ ಜನ ಹೇಳ್ತಾರೆ. ಇನ್ನು ನಾಯಕರ ಜತೆ ಕೂಡಾ ಸೇರಲ್ಲ, ಇವ್ರು ಸಚಿವರಾಗಿದ್ದಾಗ ಕ್ಷೇತ್ರಕ್ಕೆ ಏನೇನೂ ಮಾಡಿಲ್ವಂತೆ. ಅಲ್ಲದೆ ಶಾಸಕಾರದ ಮೇಲೆ ಒಂದೇ ಒಂದು ಬಾರಿ ಕೂಡಾ ಕ್ಷೇತ್ರದ ಬಗ್ಗೆ ಅಸೆಂಬ್ಲಿಯಲ್ಲಿ ಮಾತಾಡಿಲ್ಲ, ಕ್ಷೇತ್ರಕ್ಕೆ ಬರೋ ಅನುದಾನವನ್ನು ತಂದಿಲ್ಲ ಹಾಗಾಗಿ ಅದು ವಾಪಾಸ್ ಆಗಿದ್ಯಂತೆ. ಈ ಎಲ್ಲಾ ಕಾರಣಕ್ಕೆ ಇಲ್ಲಿನ ಮತದಾರ ಈ ಬಾರಿ ಅರವಿಂದ ಲಿಂಬಾವಳಿ ಗೆಲುವಿಗೆ ಹುಳಿ ಹಿಂಡೋದು ಗ್ಯಾರಂಟಿ

ಕೈ ಅಭ್ಯರ್ಥಿ

ಎಸಿ ಶ್ರೀನಿವಾಸ್, ಕೈ ಅಭ್ಯರ್ಥಿ

ಎಸಿ ಶ್ರೀನಿವಾಸ್ ಈ ಬಾರಿ ಇಲ್ಲಿಂದ ಕಣಕ್ಕಿಳಿಯೋದು ಪಕ್ಕಾ ಆಗಿದೆ. ಕಳೆದ ಬಾರಿ ಕೇವಲ 5-6 ಸಾವಿರ ಮತಗಳ ಅಂತರದಿಂದ ಇವ್ರು ಸೋತಿದ್ರು. ಆದ್ರೆ ಈಗ ಇವರ ಪ್ರಭಾವ ಕ್ಷೇತ್ರದಲ್ಲಿ ಜೋರಾಗಿದೆ. ಅದಕ್ಕೆ ಉದಾಹರಣೆ ಅಂದ್ರೆ ಮನೆ ಮನೆಗೆ ಕಾಂಗ್ರೆಸ್ ನಡಿಗೆ ಅಭಿಯಾನ. ಮೊತ್ತ ಮೊದಲನೆಯದಾಗಿ ಈ ಅಭಿಯಾನ ಪ್ರಾರಂಭವಾಗಿದ್ದೇ ಇಲ್ಲಿ. ಜತೆಗೆ ಅದು ಅಧ್ಭುತ ಯಶಸ್ಸನ್ನೂ ಗಳಿಸಿತು. ಸ್ವತ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವ್ರೇ ಇಲ್ಲಿಂದ ಎಲೆಕ್ಷನ್ ಗೆ ಕಂಟೆಸ್ಟ್ ಮಾಡ್ಬೇಕು ಅಂತಿದ್ರು. ಆದ್ರೆ ಎಸಿ ಶ್ರೀನಿವಾಸ್ ಅವ್ರ ಹವಾ ನೋಡಿ ಶ್ರೀನಿವಾಸ್ ಅವ್ರೇ ಇಲ್ಲಿಂದ ನಿಲ್ಲಲಿ ಅಂತಾ ನಿರ್ಧರಿಸಿದ್ರು. ಇದು ಶ್ರೀನಿವಾಸ್ ಅವ್ರಿಗೆ ಇರೋ ಜನಮನ್ನಣೆಯನ್ನು ತೋರಿಸಿಕೊಡತ್ತೆ. ಇನ್ನು ಹೇಳಿ ಕೇಳಿ ಇವ್ರು ಇಲ್ಲಿನ ಸ್ತಳೀಯರು. ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿದ್ದವರು ಹಾಗಾಗಿ ಇಲ್ಲಿನ ಜನರ ನಾಡಿಮಿಡಿತ ಇವ್ರಿಗೆ ಚೆನ್ನಾಗಿ ಗೊತ್ತು. ಕಳೆದ ಬಾರಿ ಸೋತ್ರೂ ಕೂಡಾ ಕ್ಷೇತ್ರ ಬಿಟ್ಟು ಹೋಗಿಲ್ಲ ಬದಲಾಗಿ ಕ್ಷೇತ್ರದಲ್ಲೇ ಓಡಾಡಿ ಜನರಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸ್ತಿದ್ದಾರೆ. ಅಷ್ಟೇ ಅಲ್ಲದೆ ರಾಜ್ಯ ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳು ನಿರಂತರವಾಗಿ ಕ್ಷೇತ್ರದ ಜನರಿಗೆ ತಿಳಿಸೋ ಕೆಲ್ಸದಲ್ಲಿ ನಿರತರಾಗಿದ್ದಾರೆ. ಹಾಗಾಗಿ ಈ ಬಾರಿ ಮಹದೇವಪುರದ ಮತದಾರ ಬಹುತೇಕ ಎಸಿ ಶ್ರೀನಿವಾಸ್ ಅವ್ರ ಕೈ ಹಿಡಿಯೋದು ಪಕ್ಕಾ.

ತೆನೆ ಹೊರೋದ್ಯಾರು?

ಮಹದೇವಪುರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೆಕ್ ಟು ನೆಕ್ ಫೈಟ್ ಇದೆ. ಜೆಡಿಎಸ್ ಕಳೆದ ಬಾರಿಯ ಚುನಾವಣೆಯಲ್ಲಿ ಅಂತಹ ಸಾಧನೆಯನ್ನೇನೂ ಮಾಡಿಲ್ಲ. ಹಾಗಾಗಿ ಈ ಬಾರಿ ಇಲ್ಲಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸತ್ತಾ ಕಾದು ನೋಡಬೇಕು. ಸದ್ಯದ ಪರಿಸ್ಥಿತಿಯಲ್ಲಿ ಜೆಡಿಎಸ್ ನಿಂದ ಸತ್ತೀಶ್ ಅನ್ನೋರ ಹೆಸರು ಕೇಳಿ ಬರ್ತಿದೆ. ಆದ್ರೆ ಅಧಿಕೃತವಾಗಿ ಪಕ್ಷ ಯಾರನ್ನು ಕಣಕ್ಕಿಳಿಸತ್ತೆ ಕಾದು ನೋಡಬೇಕು.

ಮಹದೇವಪುರ ವಿಧಾನಸಬಾ ಕ್ಷೇತ್ರದಲ್ಲಿ ಒಟ್ಟು 324829 ಮತದಾರರಿದ್ದಾರೆ. ಕಳೆದ ಚುನಾವಣೆಯಲ್ಲಿ ಶೇಕಡ 69.81 ರಷ್ಟು ಮತಗಳು ಚಲಾವಣೆ ಆಗಿದ್ದು, ಚಲಾವಣೆಗೊಂಡ ಮತಗಳ ಪೈಕಿ ಶೆಕಡ 45.91 ಕಾಂಗ್ರೆಸ್, 48.62 ಬಿಜೆಪಿ, ಪಡೆದುಕೊಂಡಿತ್ತು. ಇನ್ನು ಈ ಕ್ಷೇತ್ರವನ್ನು ಐಟಿ ಹಬ್ ಅಂತಾನೇ ಕರೆಯಲಾಗತ್ತೆ ಆದ್ರೆ ಇಲ್ಲಿ ಸರಿಯಾಗಿರೋ ರಸ್ತೆ ವ್ಯವಸ್ಥೆ ಇಲ್ಲ, ಟ್ರಾಫಿಕ್ ಸಮಸ್ಯೆ ಸಿಕ್ಕಾಪಟ್ಟೆ ಇದೆ. ಇಲ್ಲಿ ಈ ಸ್ಥಿತಿಗೆ ಶಾಸಕರೇ ನೇರ ಹೊಣೆ ಅಂತಿದ್ದಾರೆ ಇಲ್ಲಿನ ಜನ. ಅರವಿಂದ ಲಿಂಬಾವಳಿ ಅವ್ರ ಸಮಯದಲ್ಲಿ ಬಿಬಿಎಂಪಿ ಸೀಟ್ ಗಳನ್ನು ಗೆಲ್ಲೋದಿಕ್ಕೆ ಸಾಧ್ಯವಾಗದೇ ಬಿಜೆಪಿ ನಾಮಾವಶೇಷವಾಗಿತ್ತು. ಹಾಗಾಗಿ ಈ ಬಾರಿ ಬಿಜೆಪಿ ಇಲ್ಲಿ ಗೆಲ್ಲೋದು ತುಂಬಾ ಕಷ್ಟ.

 

ಯಸ್ ಮಹದೇವಪುರ ವಿಧಾನಸಬಾ ಕ್ಷೇತ್ರದಲ್ಲಿ ಈಗಾಗಲೇ ಕಾಂಗ್ರೆಸ್ ನ ಎಸಿ ಶ್ರೀನಿವಾಸ್ ಅವ್ರ ಹೆಸರು ಜೋರಾಗಿ ಕೇಳಿ ಬರ್ತಿದೆ. ಅವ್ರು ಶಾಸಕರಾಗದೇ ಇದ್ರೂ ಕ್ಷೇತ್ರಕ್ಕೆ ಸರಕಾರದ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲ್ಸ ಮಾಡ್ತಿರೋದನ್ನ ಜನ ಮೆಚ್ಚಿದ್ದಾರೆ. ಇನ್ನು ಕಳೆದ ಬಾರಿಯ ಸೋಲು ಅವ್ರಿಗೆ  ಅನುಕಂಪದ ಮತಗಳನ್ನು ದೊರಕಿಸಿಕೊಡೋದ್ರಲ್ಲಿ ಅನುಮಾನ ಇಲ್ಲ. ಎಲ್ಲದರ ಜತೆಗೆ ಶಾಸಕ ಲಿಂಬಾವಳಿ ಅವ್ರ ಸಂಪೂರ್ಣ ವೈಫಲ್ಯ ಮೇಜರ್ ಆಗಿ ಶ್ರೀನಿವಾಸ್ ಅವ್ರಿಗೆ ಪ್ಲಸ್ ಪಾಯಿಂಟ್ ಆಗತ್ತೆ.ಹಾಗಾಗಿ ಮಹದೇವಪುರದಲ್ಲಿ ಶ್ರೀನಿವಾಸ್ ಗೆಲ್ಲೋದು ಗ್ಯಾರಂಟಿ ಅಂತಿದ್ದಾರೆ ಇಲ್ಲಿನ ಪ್ರಜ್ನಾವಂತ ಮತದಾರರು

 

 

 

ಪ್ರತ್ಯುತ್ತರ ನೀಡಿ

Please enter your comment!
Please enter your name here