ಚುನಾವಣಾ ಕುರುಕ್ಷೇತ್ರ 2018 – ಮುದ್ದೇಬಿಹಾಳ (ವಿಜಯಪುರ ಜಿಲ್ಲೆ)

ಮುದ್ದೇಬಿಹಾಳ ವಿಧಾನಸಬಾ ಕ್ಷೇತ್ರ

ಈಗ ನಾವು ಹೇಳ್ತಿರೋ ಕ್ಷೇತ್ರ ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ. ತನ್ನದೇ ಆದ ರಾಜಕೀಯ ವಿಶೇಷತೆಗಳಿಂದ ಸುದ್ದಿಯಾಗ್ತಾ ಇದೆ. ಈ ಬಾರಿ ಅಂತೂ ಇಲ್ಲಿ ಜಿದ್ದಾ ಜಿದ್ದಿನ ಸಮರವಾಗೋದಂತೂ ಗ್ಯಾರಂಟಿ. ಇಲ್ಲಿನ ರಾಜಕೀಯದ  ಗ್ರೌಂಡ್ ರಿಪೋರ್ಟ್ ಕುರುಕ್ಷೇತ್ರದಲ್ಲಿ

 ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ. ಬಿಸಿಲ ನಾಡು ಅಂತಾನೇ ಕರೆಯೋ ವಿಜಯಪುರ ಜಿಲ್ಲೆಯಲ್ಲಿರೋ ವಿಧಾನಸಭಾ ಕ್ಷೇತ್ರಗಳ ಪೈಕಿ ಇದೂ ಕೂಡಾ ಒಂದು. ಪ್ರಸ್ತುತ ಕಾಂಗ್ರೆಸ್ ನ ಭದ್ರಕೋಟೆಯಾಗಿರೋ ಇಲ್ಲಿ ಸಿಎಸ್ ನಾಡಗೌಡ ಅವ್ರು ಶಾಸಕರಾಗಿ ಆಡಳಿತ ನಡೆಸ್ತಿದ್ದಾರೆ. ನಾಗಠಾಣ ಮೀಸಲು ಕ್ಷೇತ್ರ ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರಗಳಲ್ಲಿ ಪಾಟೀಲರ ಪ್ರಾಬಲ್ಯವೇ ಹೆಚ್ಚಿದೆ. ಪ್ರತೀ ಕ್ಷೇತ್ರದಲ್ಲೂ ಮೇಲ್ವರ್ಗದ ಅಭ್ಯರ್ಥಿಗಳೇ ಹೆಚ್ಚಿನ ಮನ್ನಣೆ ಗಳಿಸಿದ್ದು, ಜಾತಿ ಆಧಾರಿತ ಚುನಾವಣೆಗೆ ಹಿಡಿದ ಕೈಗನ್ನಡಿ. ರಾಷ್ಟ್ರೀಯ ಪಕ್ಷಗಳಲ್ಲಿ ಅವರದ್ದು ‘ನಾ ಮಾಟೆ ಶಾಸನಂ’ ಎಂಬ ಸ್ಥಿತಿ. ಆಂತರಿಕ ಕಲಹ, ಒಗ್ಗಟ್ಟಿನ ಕೊರತೆ, ಪ್ರಬಲ ನಾಯಕತ್ವದ ಅಭಾವ ಬಿಜೆಪಿ-ಕಾಂಗ್ರೆಸ್-ಜೆಡಿಎಸ್ ಮೂರೂ ಪಕ್ಷಗಳನ್ನೂ ಕಾಡುತ್ತಿದೆ. ಜಿಲ್ಲಾ ರಾಜಕಾರಣದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಹಾಗೂ ಶಾಸಕ ಶಿವಾನಂದ ಪಾಟೀಲರ ಶೀತಲ ಸಮರ ಮತ್ತೆ ಬಿರುಗಾಳಿ ಎಬ್ಬಿಸುವ ಲಕ್ಷಣಗಳು ಗೋಚರಿಸತೊಡಗಿವೆ. ಇನ್ನು ಕಮಲ ಪಾಳೆಯದಿಂದ ಹೊರ ನಡೆದ ವಿಧಾನ ಪರಿಷತ್ ಸದಸ್ಯ ಬಸನಗೌಡ ಪಾಟೀಲ (ಯತ್ನಾಳ) ನಡೆ ರಾಜಕೀಯ ಚಲನಶೀಲತೆಗೆ ಅಡ್ಡ ಬಂದ ಬೆಕ್ಕಿನಂತಾಗಿದೆ. ಇದೆಲ್ಲದರ ಜತೆಗೆ ಕೈ ಶಾಸಕರಾಗಿದ್ದ ಎಸ್ ಎಸ್ ಪಾಟೀಲ್ ನನಡಹಳ್ಳಿ ‘ಕೈ’ ಬಿಟ್ಟು ಹೊರೆ ಹೊತ್ತಿರುವುದು ಈ ಕ್ಷೇತ್ರದಲ್ಲಿ ರಾಜಕೀಯ ಬಿರುಗಾಳಿ ಬೀಸೋ ಮುನ್ಸೂಚನೆ ಸಿಕ್ಕಂತಾಗಿದೆ. ಇಲ್ಲಿನ ರಾಜಕೀಯ ಸ್ಥಿತಿ ಗತಿಗಳ ಬಗ್ಗೆ ಹೇಳ್ತೀವಿ ಆದ್ರೆ ಅದಕ್ಕೂ ಮೊದಲು 2013ರ ಮತಬರಹ ನೋಡೋಣ

2013ರ ಮತಬರಹ

GFX VO ಇದು 2013ರ ಮತಬರಹ. ಕಾಂಗ್ರೆಸ್ ನಿಂದ ಕಣಕ್ಕಿಳಿದಿದ್ದ ಸಿಎಸ್ ನಾಡಗೌಡ್ರು 34747 ಮತಗಳನ್ನು ಪಡೆಯೋ ಮೂಲಕ ಗೆದ್ದು ಶಾಸಕರಾದ್ರು. ಇನ್ನು ಇವರಿಗೆ ಫೈಟ್ ಕೊಟ್ಟ ಜೆಡಿಎಸ್ ನ ಪ್ರಭುಗೌಡ ದೇಸಾಯಿ 12227 ಮತಗಳನ್ನು ಪಡೆದ್ರೆ ಬಿಜೆಪಿಯ ಮಲ್ಲಕೇಂದ್ರಗೌಡ ಪಾಟೀಲ್ 9761 ಮತಗಳನ್ನಷ್ಟೇ ಪಡೆಯೋದಕ್ಕೆ ಸಾಧ್ಯವಾಯ್ತು.

v/o2: ಬಿಸಿಲೂರು ಖ್ಯಾತಿಯ ವಿಜಯಪುರದ ಎಂಟು ವಿಧಾನ ಸಭೆ ಕ್ಷೇತ್ರಗಳ ಪೈಕಿ ಒಂದು ಬಿಜೆಪಿ ವಶದಲ್ಲಿದ್ದರೆ, ಆರು ಕ್ಷೇತ್ರಗಳು ಕಾಂಗ್ರೆಸ್ ತೆಕ್ಕೆಯಲ್ಲಿದೆ. ಆದ್ರೆ ಈ ಬಾರಿ ಕಾಂಗ್ರೆಸ್ ಗೆ ಇಲ್ಲಿ ದೊಡ್ಡ ಆಘಾತ ಕಾದಿದೆ ಅನ್ನೋದ್ರಲ್ಲಿ ಡೌಟ್  ಇಲ್ಲ. ಯಾಕಂದ್ರೆ ಕಾಂಗ್ರೆಸ್ ನಿಂದ ಉಚ್ಛಾಟಿತರಾಗಿರೋ ದೇವರಹಿಪ್ಪರಗಿ ಶಾಸಕ ಎಸ್ ಪಾಟೀಲ್ ನಡಹಳ್ಳಿ ಜೆಡಿಎಸ್ ಗೆ ಸೇರಿ ಇಲ್ಲಿಂದ ಕಣಕ್ಕಳಿಯೋದ್ರಿಂದ ಕಾಂಗ್ರೆಸ್ ಗೆ ಈಗಾಗಲೇ ನಡುಕ ಪ್ರಾರಂಭವಾಗಿದೆ. ಹಾಗೇನೇ ಜೆಡಿಎಸ್ ಗೆ ಈ ಭಾಗದಲ್ಲಿ ಆನೆ ಬಲ ಬಂದಂತಾಗಿದೆ. ಮುದ್ದೇಬಿಹಾಳ ಕ್ಷೇತ್ರದಲ್ಲಿ ಕಾಂಗ್ರೆಸ್ ಸಿಎಸ್ ನಾಡಗೌಡ್ರು ಶಾಸಕರಾಗಿದ್ದಾರೆ. ಹಾಗಾಗಿ ಈ ಬಾರಿ ಮುದ್ದೇಬಿಹಾಳ ಕ್ಷೇತ್ರದ ಚುನಾವಣೆ ನಡಹಳ್ಳಿ ವರ್ಸಸ್ ನಾಡಗೌಡ ಎಂಬಂತಾಗಿದೆ. ಇಲ್ಲಿನ ಮತ್ತಷ್ಟು ರಾಜಕೀಯ ವಿಚಾರಗಳನ್ನು ಹೇಳ್ತೀವಿ ಆದ್ರೆ ಅದಕ್ಕೂ ಮೊದಲು ಈ ಬಾರಿ ಇಲ್ಲಿಂದ ಕಣಕ್ಕಿಳಿಯೋರು ಯಾರು…ಅವ್ರ ಬಲಾಬಲಾ ಏನು ನೋಡೋಣ.

ಕೈ ಅಭ್ಯರ್ಥಿ

ಕಾಂಗ್ರೆಸ್ ಭದ್ರಕೋಟೆಯಾಗಿರುವ ಮುದ್ದೇಬಿಹಾಳ ಕ್ಷೇತ್ರ ಶಾಸಕ ಸಿ.ಎಸ್.ನಾಡಗೌಡರ ಹಿಡಿತದಲ್ಲಿದೆ. ಸತತ ಐದು ಬಾರಿ ಇಲ್ಲಿಂದ ಶಾಸಕರಾಗಿರುವ ನಾಡಗೌಡ್ರು ಇದೀಗ ಆರನೇ ಬಾರಿ ಅದೃಷ್ಠ ಪರೀಕ್ಷೆಗೆ ಮುಂದಾಗ್ತಿದ್ದಾರೆ. ಕಳೆದ ಬಾರಿ ಇವ್ರನ್ನು ಗೆಲ್ಲಿಸಿದ್ದ ಇಲ್ಲಿನ ಮತದಾರರು ಈ ಬಾರಿ ಮತ್ತೆ ಗೆಲ್ಲಿಸ್ತಾರೆ ಅಂತಾ ಹೇಳೋಕಾಗಲ್ಲ. ಯಾಕಂದ್ರೆ ಸತತ 5 ಬಾರಿ ಗೆದ್ದಿದ್ರೂ ಕ್ಷೇತ್ರದಲ್ಲಿ ಜನರ ನಿರೀಕ್ಷೆಗೆ ತಕ್ಕಂತೆ ಏನೂ ಕೆಲ್ಸ ಮಾಡಿಲ್ಲ. ಹಾಗಾಗಿ ಇಲ್ಲಿನ ಮತದಜಾರ ಇವ್ರ ಬಗ್ಗೆ ಅಸಮಾಧಾನದಿಂದ ಇದ್ದಾರೆ. ಇವ್ರು ದೆಹಲಿಯ ವಿಶೇಷ ಸಂಸದೀಯ ಕಾರ್ಯದರ್ಶಿಗಳೂ ಆಗಿರೋದ್ರಿಂದ ತಮಗೆ ಬೇಕಾದಂತೆ ಕ್ಷೇತ್ರಕ್ಕೆ ಒಳ್ಳೆಯ ಅನುದಾನವನ್ನು ತರಬಹುದಿತ್ತು. ಜನರ ನಿರೀಕ್ಷೆಗೂ ಮೀರಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಬಹುದಿತ್ತು. ಆದ್ರೆ ಅದ್ಯಾವುದನ್ನೂ ನಾಡಗೌಡ್ರು ಮಾಡಿಲ್ಲ ಅನ್ನೋ ಆರೋಪ ಇಲ್ಲಿನ ಜನರದ್ದು. ಇನ್ನು ಈ ಕ್ಷೇತ್ರದಲ್ಲಿ ಜಾತಿ ರಾಜಕಾರಣಕ್ಕಿಂತ ವ್ಯಕ್ತಿತ್ವ ರಾಜಕಾರಣದ ಮೇಲೆ ಮತದಾರ ಒಲವು ಜಾಸ್ತಿ. ಇನ್ನು ಇವ್ರಿಗೆ ಕಳೆದ ಬಾರಿ ತೀವ್ರ ಪೈಪೋಟಿ ನೀಡೋರು ಬೇರೆ ಪಕ್ಷಗಳಲ್ಲಿ ಯಾರು ಇಲ್ದೇ ಇದ್ದಿದ್ದೂ ಕೂಡಾ ಇವ್ರ ಸತತ ಗೆಲುವಿಗೆ ಕಾರಣ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಇನ್ನು ಕಳೆದ ಬಾರಿ ಆಯ್ಕೆಯಾದ ಸಿ.ಎಸ್. ನಾಡಗೌಡ ಅವರು ಮತಕ್ಷೇತ್ರದಲ್ಲಿ ಇರುವುದಕ್ಕಿಂತ ಬೆಂಗಳೂರು ಹಾಗೂ ದೆಹಲಿಯಲ್ಲಿ ವಾಸವಾಗಿರೋದೇ ಹೆಚ್ಚು ಅಂತಾ ಇಲ್ಲಿನವರು ಹೇಳ್ತಿರೋದು ನೋಡಿದ್ರೆ ಈ ಬಾರಿ ಇವ್ರು ಗೆಲ್ಲೋ ಸಾಧ್ಯತೆ ತುಂಬಾ ಕಡಿಮೆ ಇದೆ.

ತೆನೆ ಹೊರೋದ್ಯಾರು?

ದೇವರಹಿಪ್ಪರಗಿಯ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಕಾಂಗ್ರೆಸ್ ನಿಂದ ಹೊರ ಬಂದ ಮೇಲೆ ತೆನೆ ಹೊತ್ತಿದ್ದಾರೆ. ಹಾಗೇನೇ ದೇವರಹಿಪ್ಪರಗಿಯನ್ನು ಜೆಡಿಎಸ್ ನಾಯಕ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವ್ರಿಗೆ ಕೊಟ್ಟು ಮುದ್ದೇಬಿಹಾಳದತ್ತ ಗಮನ ಕೇಂದ್ರೀಕರಿಸಿದ್ದಾರೆ. ಹಾಗಾಗಿ ಈ ಬಾರಿ ಇಲ್ಲಿಂದ ಇವ್ರು ಕಣಕ್ಕಿಳಿಯೋದ್ರಲ್ಲಿ ಅನುಮಾನ ಇಲ್ಲ. ಆದ್ರೆ ಗಮನಿಸಬೇಕಾದ ವಿಚಾರ ಅಂದ್ರೆ ನಡಹಳ್ಳಿ ಅವ್ರು ಮೂಲತಃ ಮುದ್ದೇಬಿಹಾಳದವರೇ . 2003 ಹಾಗೂ 2008ರಲ್ಲಿಯೇ ಮುದ್ದೇಬಿಹಾಳದಿಂದ ಇವ್ರು ಕಣಕ್ಕೆ ಇಳಿಯಬೇಕಾಗಿತ್ತು. ಆದ್ರೆ ಅನಿವಾರ್ಯ ಕಾರಣಗಳಿಂದ ದೇವರಹಿಪ್ಪರಗಿ ಕ್ಷೇತ್ರದಿಂದ ಕಾಂಗ್ರೆಸ್ ನಿಂದ ಕಣಕ್ಕಿಳಿದು ಶಾಸಕನಾಗಿ ಆಯ್ಕೆ ಆಗಿದ್ದಾರೆ. ಆದ್ರೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹಾಗೂ ಕಾಂಗ್ರೆಸ್ ಸರ್ಕಾರ ವಿರುದ್ಧ ಪದೇ ಪದೇ ವಾಕ್ಸಮರ ಮಾಡುತ್ತಿದ್ದ ಕಾರಣ ನಡಹಳ್ಳಿ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸಿತ್ತು. ಹಾಗಂತ ಸುಮ್ಮನಾಗದ ನಡಹಳ್ಳಿ ಇದೀಗ ಕಾಂಗ್ರೆಸ್ ಬೆನ್ನೆಲುಬು ಮುರಿಯೋದಕ್ಕೆ ಮುಂದಾಗಿದ್ದಾರೆ. ಹಾಗಾಗಿ ತಮ್ಮ  ಸ್ವಕ್ಷೇತ್ರ ಮುದ್ದೇಬಿಹಾಳ ದಿಂದ ಅಖಾಡಕ್ಕೆ ಧುಮುಕುತ್ತಿದ್ದಾರೆ. ಅಷ್ಟೇ ಅಲ್ಲ ಈಗಾಗಲೇ ನಡಹಳ್ಳಿ ಆವ್ರು  ಮತದಾರ ಮನೆ ಮನೆಗೆ ಭೇಟಿ ನೀಡಿ ತಮ್ಮಗೆ ಮತದಾನ ನೀಡಬೇಕೆಂದು ವಿನಂತಿಸಿಕೊಳ್ಳುತ್ತಿದ್ದಾರೆ. ಕಳೆದೆರಡು ಬಾರಿ ವಲಸೆ ಕ್ಷೇತ್ರದಲ್ಲಿ ನಿಂತು ಗೆಲುವು ಸಾಧಿಸಿದ ಇವ್ರು ಈ ಬಾರಿ ತಮ್ಮ ಕ್ಷೇತ್ರದಲ್ಲಿ ಗೆಲ್ಲದೇ ಇರೋದಕ್ಕೆ ಸಾಧ್ಯವೇ ಇಲ್ಲ ಅಂತಿದ್ದಾರೆ ಇಲ್ಲಿನ ರಾಜಕೀಯ ನಾಡಿಮಿಡಿತ ಬಲ್ಲವರು. ಒಟ್ಟಿನಲ್ಲಿ ಈ ಬಾರಿ ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ನಡಹಳ್ಳಿ ಹವಾ ನಡೆಯುತ್ತದೆಂದು ಕಾಣ್ತಾ ಇದೆ. ಇದು ಹಾಲಿ ಶಾಸಕ ನಾಡಗೌಡರಿಗೂ ಆತಂಕ ಹುಟ್ಟಿಸಿರೋದು ಸುಳ್ಳಲ್ಲ.

ಕಮಲ ಹಿಡಿಯೋರ್ಯಾರು?

ಅಂದಹಾಗೆ ಈ ಕ್ಷೇತ್ರದಲ್ಲಿ ಬಿಜೆಪಿ ಅಷ್ಟೊಂದು ಪ್ರಭಾವಶಾಲಿಯಾಗಿಲ್ಲ . ಒಂದ್ವೇಳೆ ಕಮಲ ಪಾಳಯದ  ವಿಧಾನ ಪರಿಷತ್ ಸದಸ್ಯ ಬಸನಗೌಡ ಪಾಟೀಲ (ಯತ್ನಾಳ) ಬಿಜೆಪಿಯಲ್ಲೇ ಇದ್ದಿದ್ರೆ ಒಂದು ಹಂತದ ಪ್ರತಿರೋಧವನ್ನು ಬಿಜೆಪಿಯಿಂದ ನಿರೀಕ್ಷಿಸಬಹುದಾಗಿತ್ತು. ಆದ್ರೆ ಅವ್ರು ಬಿಜೆಪಿ ಬಿಟ್ಟು ಹೊರ ನಡೆದಿರೋದ್ರಿಂದ ಬಿಜೆಪಿಗೆ ಇಲ್ಲಿ ಹೇಳಿಕೊಳ್ಳೋ ನಾಯಕತ್ವ ಅಂತೂ ಇಲ್ಲ. ಆದ್ರೂ ಈ ಬಾರಿ ಬಿಜೆಪಿಯಿಂದ ಇಲ್ಲಿ ಕಣಕ್ಕಿಳಿಯೋದಕ್ಕೆ ಪ್ರಮುಖವಾಗಿ ಮಂಗಳಾದೇವಿ ಬಿರಾದಾರ ಮತ್ತು ಆರ್.ಎಸ್.ಪಾಟೀಲ ಅನ್ನೋ ಇಬ್ಬರ ಹೆಸರು ಕೇಳಿ ಬರ್ತಿದೆ ಇವ್ರಲ್ಲಿ ಬಿಜೆಪಿ ಯಾರಿಗೆ ಟಿಕೆಟ್ ಕೊಡತ್ತೆ. ಅಥ್ವಾ ಇನ್ಯಾರನ್ನಾದ್ರೂ ಅಭ್ಯರ್ಥಿಯನ್ನು ಹುಡುಕುತ್ತಾ ಕಾದುನೋಡಬೇಕು.
v/o3: ಮುದ್ದೇಬಿಹಾಳ  ಕ್ಷೇತ್ರದಲ್ಲಿ ಒಟ್ಟು 197743 ಮತದಾರರಿದ್ದು ಕುರುಬರು, ಲಿಂಗಾಯತರು ಹಾಗೂ ಲಿಂಗಾಯತ ರೆಡ್ಡಿಯವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಕ್ಷೇತ್ರದಲ್ಲಿ ಶಾಸಕ ಸಿ.ಎಸ್. ನಾಡಗೌಡ ಹೇಳಿಕೊಳ್ಳುವಷ್ಟು ಅಭಿವೃದ್ಧಿ ಮಾಡಿಲ್ಲ. ಇನ್ನು ಶಾಸಕ ನಾಡಗೌಡ ದೆಹಲಿಯ ವಿಶೇಷ ಸಂಸದೀಯ ಕಾರ್ಯದರ್ಶಿ ಕೂಡಾ ಆಗಿದ್ದಾರೆ. ಅಭಿವೃದ್ಧಿಗೆ ಬೇಕಾಗುವಷ್ಟು ಅನುದಾನ ತರುವಲ್ಲಿ ವಿಫಲವಾಗಿದ್ದಾರೆ. ಕಾಂಗ್ರೆಸ್ ಉಚ್ಛಾಟಿತ ಶಾಸಕರಾಗಿರೋ ಎ.ಎಸ್. ನಡಹಳ್ಳಿ ಲಿಂಗಾಯತ ರೆಡ್ಡಿಯಾಗಿದ್ದು, ಈ ಕ್ಷೇತ್ರದಲ್ಲಿ ಲಿಂಗಾಯತ ಹಾಗೂ ಲಿಂಗಾಯತ ರೆಡ್ಡಿಯವರೇ ಜಾಸ್ತಿ. ಇದು ಕೂಡ ನಡಹಳ್ಳಿಯವರಿಗೆ ಮತ್ತೊಂದು ಪ್ಲಸ್ ಪಾಂಯಿಂಟ್ ಆಗಿದೆ. ಇನ್ನು ಸಿಎಸ್ ನಾಡಗೌಡರು ಕೂಡ ಲಿಂಗಾಯತ ರೆಡ್ಡಿಯವರೇ ಆಗಿರೋದ್ರಿಂದ ಜಾತಿ ರಾಜಕಾರಣ ಹೇಗೆ ವರ್ಕೌಟ್ ಆಗತ್ತೆ ನೋಡಬೇಕು.ಜತೆಗೆ ಇಲ್ಲಿನ ಜನ ವ್ಯಕ್ತಿತ್ವ ರಾಜಕಾರಣವನ್ನು ಗಮನಿಸೋದ್ರಿಂದ ಏನಾಗತ್ತೆ ಕಾದು ನೋಡಬೇಕು.ಇನ್ನು. ಈ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಜೆಡಿಎಸ್, ಬಿಜೆಪಿ ಅನ್ನೋದಕ್ಕಿಂತ ಹೆಚ್ಚಾಗಿ  ನಡಹಳ್ಳಿ ವರ್ಸಸ್ ನಾಡಗೌಡ ನಡುವಿನ ಎಲೆಕ್ಷನ್ ಅಂತಾನೆ ಹೇಳಲಾಗ್ತಿದೆ.

ಐದು ಬಾರಿ ಶಾಸಕರಾಗಿದ್ರೂ ಕಾಂಗ್ರೆಸ್ ನ ಸಿಎಸ್ ನಾಡಗೌಡ ಅವ್ರ ಬಗ್ಗೆ ಮುದ್ದೇಬಿಹಾಳದ ಮತದಾರರಿಗೆ ಈ ಬಾರಿ ಒಳ್ಳೆ ಅಭಿಪ್ರಾಯ ಇಲ್ಲ.ಕ್ಷೇತ್ರದ ಜನ ಏನೇನು ಬಯಸಿದ್ರೋ ಅದ್ಯಾವ ಅಭಿವೃದ್ಧಿಯೂ ಇಲ್ಲಿ ಆಗಿಲ್ಲ.ಹಾಗಾಗಿ ಸಹಜವಾಗೇ ಇಲ್ಲಿನ ಮತದಾರರು ಬದಲಾವಣೆಯನ್ನು ಬಯಸಿದ್ದಾರೆ. ಅದೇ ಸಮಯಕ್ಕೆ ಈಗ ಜೆಡಿಎಸ್ ನಿಂದ ಸ್ಥಳೀಯರಾಗಿರೋ ಎಎಸ್ ಪಾಟೀಲ್ ನಡಹಳ್ಳಿ ಅವ್ರು ಕಣಕ್ಕಿಳಿಯೋದ್ರಿಂದ ನಡಹಳ್ಲಿ ಗೆಲ್ಲಿಸಲು ಇಲ್ಲಿನ ಮತದಾರರು ಮುಂದಾಗಿದ್ದಾರೆ. ಹಾಗಾಗಿ ಬಹಳ ಸುಲಭವಾಗಿ ಈ ಕ್ಷೇತ್ರ ಜೆಡಿಎಸ್ ಪಾಲಾಗೋ ಸಾಧ್ಯತೇನೇ ಕಾಣಿಸ್ತಿದೆ.

ಪ್ರತ್ಯುತ್ತರ ನೀಡಿ

Please enter your comment!
Please enter your name here