ಚುನಾವಣಾ ಕುರುಕ್ಷೇತ್ರ 2018 – ರೋಣ ( ಗದಗ)

ರೋಣ ವಿಧಾನಸಭಾ ಕ್ಷೇತ್ರ

ಈಗ ಕುರುಕ್ಷೇತ್ರದಲ್ಲಿ ಹೇಳ್ತಾ ಇರೋದು ದ್ರೋಣಪೂರಾ ಅಂತಾಲೇ ಕರೆಯೋ ಗದಗ ಜಿಲ್ಲೆಯ ರೋಣ ವಿಧಾನಸಭಾ ಕ್ಷೇತ್ರದ ಬಗ್ಗೆ. ಕಳೆದ ಹಲವು ದಶಕಗಳಿಂದ ಕಾಂಗ್ರೆಸನ ಭದ್ರಕೋಟೆಯಾಗಿರೋ ಈ ಕ್ಷೇತ್ರದಲ್ಲಿ ಈ ಬಾರಿ ಇಲ್ಲಿನ ರಣಕಣ ಹೇಗಿದೆ ? ಸದ್ಯದ ರಾಜಕೀಯ ಬೆಳೆವಣೆಗೆಗಳೇನು ಅನ್ನೋದು ನೋಡೋಣ ಬನ್ನಿ.

ರೋಣ ವಿಧಾನಸಭಾ ಕ್ಷೇತ್ರ. ಗದಗ ಜಿಲ್ಲೆಯಲ್ಲಿರೋ ವಿಧಾನಸಬಾ ಕ್ಷೇತ್ರಗಳ ಪೈಕಿ ದೊಡ್ಡ ಕ್ಷೇತ್ರ ಇದು. ಕ್ಷೇತ್ರ ಪುನರ್ ವಿಂಗಡಣೆಯಿಂದಾಗಿ ಗದಗ, ಮುಂಡರಗಿ ಹಾಗೂ ರೋಣ ತಾಲೂಕಿನಲ್ಲಿ ಈ ಮತಕ್ಷೇತ್ರ ಹಂಚಿ ಹೋಗಿದೆ. ಸುಮಾರು 104 ಹಳ್ಳಿಗಳನ್ನು ಹೋಂದಿರೋ ಈ ಕ್ಷೇತ್ರ  ಪ್ರಾಚೀನ ದೇವಾಲಯಗಳನ್ನು ಹೊಂದಿದೆ. ಬೇಡಿದ್ದನ್ನು ಕರುಣಿಸೋ ಮಹಾ ಮಾತೆ ಇಟಗಿ ಭೀಮಾಂಬಿಕಾ ದೇವಿ ನೆಲಸಿದ ಪುಣ್ಯ ಕ್ಷೇತ್ರ ಇದೇ ವಿದಾನಸಭಾ ಕ್ಷೇತ್ರದಲ್ಲಿದೆ. ಇನ್ನು ಹಿಂದೂ-ಮುಸ್ಲಿಮ್ ಭಾವೈಕ್ಯೆ ಸಾರೋ ಹಜರತ್ ಸುಲೇಮಾನ್ ಶಾವಲಿ ದರ್ಗಾ, ನರೇಗಲ್ ನ ಅಬ್ದುಲ್ ರಹಿಮಾನ ಶಾವಲಿ ದರ್ಗಾ, ಕೋಮು ಸಾಮರಸ್ಯದ ಬೀಡು ಡಂಬಳದ ತೋಂಟದಾರ್ಯಮಠ. ಹಾಳಕೇರಿಯ ಅನ್ನಧಾನೇಶ್ವರಮಠ,  ಖ್ಯಾತ ಸಂಗೀತ ವಿದ್ವಂಸ ಪಂಡಿತ ಭೀಮಸೇನ ಜೋಶಿ ಹುಟ್ಟಿದ ನಾಡು ಈ ರೋಣ. ಕನ್ನಡಕ್ಕಾಗಿ ಹೋರಾಡಿದ ಆಲೂರು ವೆಂಕಟರಾವ್…ಅಂದಾನಪ್ಪ ದೊಡ್ಡಮೇಟಿ. ಅಬ್ಬಿಗೇರಿ ವಿರುಪಾಕ್ಷಪ್ಪ ಅವ್ರಿಗೆ ಜನ್ಮ ನೀಡಿದ ಕ್ಷೇತ್ರ. ಆದ್ರೆ ಜಾತಿ ಲೆಕ್ಕಾಚಾರ ನೋಡಿದ್ರೆ ಲಿಂಗಾಯತ ಸಮುದಾಯವೇ ಹೆಚ್ಚು ಬಲಿಷ್ಠವಾಗಿದೆ. ನಂತರದ ಪರಿಶಿಷ್ಠ ಜಾತಿಯ ಸಮುದಾಯ, ಕುರುಬರು ಹಾಗೂ ಮುಸ್ಲಿಮರು ಬರ್ತಾರೆ.  ಇಲ್ಲಿನ ಪ್ರಮುಖವಾಗಿ ರೈತಾಪಿ ವರ್ಗದವರೇ  ಹೆಚ್ಚು ಇದ್ದು, ಈರುಳ್ಳಿ ಹಾಗೂ ಮೆಣಸಿನಕಾಯಿ ಬೆಳೆಗಳಿಗೆ ಹೆಚ್ಚು ಆದೈತೆ ಕೊಡ್ತಾರೆ. ಇಷ್ಟೇಲ್ಲಾ ಹೋಂದಿರೋ ಈ ರೋಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ  ಗಟ್ಟಿಯಾದ ನೆಲೆ ಇದೆ. ಬಿಜೆಪಿಯಲ್ಲಿನ ಗೊಂದಲ ಕಾಂಗ್ರೆಸಿಗೆ ಮತ್ತುಷ್ಟು ಪುಷ್ಠಿ ನೀಡಿದೆ. ಇನ್ನು ಈ ಬಾರಿಯ ರಾಜಕೀಯ ಬೆಳವಣಿಗೆಗಳೇನು ಅನ್ನೋದನ್ನು ಹೇಳ್ತೀವಿ ಆದ್ರೆ ಅದಕ್ಕೂ ಮೊದಲು 2013ರ ಮತಬರಹ ನೋಡೋಣ

2013 ರ ಮತಬರಹ

ಇದು 2013ರ ಮತಬರಹ. ಕಾಂಗ್ರೆಸ್ ನ ಗುರುಪಾದಗೌಡ ಸಂಗನಗೌಡ ಪಾಟೀಲ್ ಅಂದ್ರೆ ಜಿಎಸ್ ಪಾಟೀಲ್ 74592 ಮತಗಳನ್ನು ಪಡೆದು ಗೆದ್ದು ಶಾಸಕರಾದ್ರು. ಇನ್ನು ಬಿಜೆಪಿಯಿಂದ ಕಣಕ್ಕಿಳಿದಿದ್ದ ಕಳಕಪ್ಪ ಗುರುಶಾಂತಪ್ಪ ಬಂಡಿ 56366 ಮತಗಳನ್ನು ಪಡೆದು ಸೋತ್ರು. ಜೆಡಿಎಸ್ ನ ಹೇಮಗಿರೀಶ್ ಹಾವಿನಾಳ 6344 ಮತಗಳನ್ನು ಪಡೆದ್ರು.

ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ನ ಜಿ ಎಸ್ ಪಾಟೀಲ್ರು ಮಾಜಿ ಸಚಿವ ಕಳಕಪ್ಪ ಬಂಡಿ ಅವ್ರನ್ನ 18227 ಮತಗಳ ಅಂತರದಿಂದ ಸೋಲಿಸಿದ್ರು. ಹಾಗಾಗಿ ಜಿಎಸ್ ಪಾಟೀಲ್ರ ಹವಾ ಇಲ್ಲಿ ಜಾಸ್ತಿ ಇದೆ. ರೋಣ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ಸೇತರರಿಗೆ ಹೆಚ್ಚು ಒಲಿದ ಕ್ಷೇತ್ರ. ಆದ್ರೆ ಕಳೆದ ಎರಡು ದಶಕಗಳಿಂದ ಕಾಂಗ್ರೆಸನ ಭದ್ರಕೋಟೆಯಾಗಿ ಮಾರ್ಪಟ್ಟಿದೆ. ಕಾರಣ ಕಾಂಗ್ರೆಸ ಹೊರತು ಪಡಿಸಿ ಇತರರಲ್ಲಿ ಒಗ್ಗಟ್ಟು ಇಲ್ಲದ್ದು. ಸತತ ಎರಡು ಬಾರಿ ಸೋತಿದ್ದ ಕಾಂಗ್ರೆಸ ಪಕ್ಷ 2013ರಲ್ಲಿ ಮತ್ತೆ ತನ್ನ ಗೆಲುವಿನ ಹಳಿಗೆ ಮರಳಿದೆ. ಹಾಗಿದ್ರೆ ಇಲ್ಲಿನ ಸದ್ಯದ ರಾಜಕೀಯ ಸ್ಥಿತಿಗತಿ ಹೇಗಿದೆ? ಬಿಜೆಪಿಯಿಂದ ಯಾರ್ಯಾರು ಆಕಾಂಕ್ಷಿಗಳಿದ್ದಾರೆ? ಕಾಂಗ್ರೆಸ್ ಪಕ್ಷದಿಂದ ಜಿ ಎಸ್ ಪಾಟೀಲ್ರೇ ಅಖಾಡಕ್ಕೆಳಿತಾರಾ? ನೋಡೋಣ ಬನ್ನಿ

ಕೈ ಅಭ್ಯರ್ಥಿ

ಜಿಎಸ್ ಪಾಟೀಲ್, ಶಾಸಕರು

ಹಾಲಿ ಶಾಸಕರಾಗಿರೋ ಜಿಎಸ್ ಪಾಟೀಲರೇ ಈ ಬಾರಿ ಕೂಡಾ ರೋಣ ಕ್ಷೇತ್ರದಿಂದ ಕಣಕ್ಕಿಳಿಯೋದ್ರಲ್ಲಿ ಅನುಮಾನ ಇಲ್ಲ. ಇನ್ನು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಹವಾ ಇದ್ದು. ಅದರಲ್ಲೂ ಶಾಸಕ ಜಿ ಎಸ್ ಪಾಟೀಲ್ರ ಪ್ರಭಾವ ಕ್ಷೇತ್ರದಲ್ಲಿ ಹೆಚ್ಚು ಕೆಲ್ಸ ಮಾಡ್ತೀದೆ ಅದಕ್ಕೆ ಕಾರಣ ಕ್ಷೇತ್ರದಲ್ಲಿ ಜಿ ಎಸ್ ಪಾಟೀಲ್ ಮಾಡಿರುವ ಅಭಿವೃದ್ಧಿ ಕೆಲಸಗಳು. ಇನ್ನು ಪ್ರಮುಖವಾಗಿ ರೈತರ ಹೊಲಗಳಿಗೆ ಹೆಚ್ಚಾಗಿ ಸಂಪರ್ಕ ರಸ್ತೆಗಳ ನಿರ್ಮಾಣ, ಕೃಷಿ ಹೊಂಡಗಳ ದಾಖಲೆ ನಿರ್ಮಾಣ. ಕೆರೆಗಳಿಗೆ ನೀರು ತುಂಬಿಸಿದ್ದು, ಗ್ರಾಮೀಣ ಭಾಗದಲ್ಲಿ ಸಿಸಿ ರಸ್ತೆ ನಿರ್ಮಾಣ, ಕುಡಿಯೋ ನೀರಿನ ಘಟಕಗಳ ಸ್ಥಾಪನೆಯಂತಹ ಅಭಿವೃದ್ಧಿ ಕೆಲ್ಸಗಳ ಜತೆಗೆ ಪಕ್ಷದ ಮೇಲಿನ ಹಿಡಿತ ಹಾಗೂ ಪಕ್ಷ ಸಂಘಟನೆ ಜತೆಗೆ ಕಾರ್ಯಕರ್ತರ ಜತೆ ಇವರಿಗಿರೋ ಒಡನಾಟ ಇವೆಲ್ಲಾ ಜಿಎಸ್ ಪಾಟೀಲರಿಗೆ ಪ್ಲಸ್ ಪಾಯಿಂಟ್. ಹಾಗೇನೇ ಹಿಂದೆಂದಿಗಿಂತಲೂ ಈ ಬಾರಿ ಮಾಡಿರೋ ಅಭಿವೃದ್ಧಿ ಕೆಲಸಗಳು ಅವ್ರ ಕೈ ಹಿಡಿಯಲಿವೆ ಅನ್ನೋದು ಇಲ್ಲಿನ ಮತದಾರರ ಅಭಿಪ್ರಾಯ. ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವ್ರ ಪ್ರಭಾವ ಹೆಚ್ಚಾಗಿ ಕಂಡು ಬರ್ತಿದೆ. ಹಾಗಾಗಿ ಈ ಬಾರಿ ಮತ್ತೆ ಜಿಎಸ್ ಪಾಟೀಲ್ ಗೆಲ್ಲೋದು ಖಚಿತ

ಕಮಲ ಮುಡಿಯೋರ್ಯಾರು?

ಈ ಬಾರಿ ರೋಣ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯೋದಕ್ಕೆ ಸಾಕಷ್ಟು ಜನ ಆಕಾಂಕ್ಷಿಗಳಿದ್ದಾರೆ. ಆದ್ರೆ ಅವ್ರಲ್ಲಿ ಮಾಜಿ ಸಚಿವರಾಗಿರೋ ಕಳಕಪ್ಪ ಬಂಡಿ ಅವ್ರ ಹೆಸರು ಮೊದಲನೇ ಸ್ಥಾನದಲ್ಲಿದೆ. ಈ ಹಿಂದೆ ಎರಡು ಬಾರಿ ಗೆದ್ದು ಬೀಗಿದ್ದ ಕಳಕಪ್ಪ ಬಂಡಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವ್ರ ಕಟ್ಟಾ ಬೆಂಬಲಿಗ. ಶೆಟ್ಟರ್ ಮುಖ್ಯಮಂತ್ರಿಯಾದ ನಂತ್ರ, ಕಳಕಪ್ಪ ಬಂಡಿಗೆ  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವ ಸ್ಥಾನ ಕೂಡಾ ಸಿಕ್ಕಿತ್ತು. ಆದ್ರೆ  2013ರ ಚುನಾವಣೆಯಲ್ಲಿ ಕಾಂಗ್ರೆಸನ ಜಿ ಎಸ್ ಪಾಟೀಲ್ ರ ಎದುರು ಇವ್ರು ಸೋಲಬೇಕಾಯ್ತು. ಕಳೆದ ಬಾರಿ ಚುನಾವಣೆಯಲ್ಲಿ ಕಳಕಪ್ಪ ಬಂಡಿ ಸೋಲೋದಕ್ಕೆ ಕಾರಣ ಇವ್ರ ಸಹೋದರ ಸಿದ್ದಪ್ಪ ಬಂಡಿ ಕ್ಷೇತ್ರದ ಜನರೊಂದಿಗೆ ನಡೆದುಕೊಂಡ ರೀತಿ. ದಲಿತರ ಮೇಲೆ ನಡೆಸಿದ ಗೂಂಡಾಗಿರಿ ಚುನಾವಣೆಯಲ್ಲಿ ನೇರ ಪರಿಣಾಮ ಬೀರ್ತು. ಬಂಡಿ ಒಡೆತನದ ಪೆಟ್ರೋಲ್ ಬಂಕ್ ನಲ್ಲಿ 30 ರೂಪಾಯಿ ಪೆಟ್ರೋಲ್ ಕೇಳಿದ್ದಕ್ಕೆ ಲಂಬಾಣಿ ಯುವಕನನ್ನು ಮಾರಾಣಾಂತಿಕವಾಗಿ  ಹಲ್ಲೆ ನಡೆಸಿ ಆ ಸಮುದಾಯದ ಸಿಟ್ಟಿಗೆ ಕಾರಣ ರಾಗಿದ್ರು.  ಇದಷ್ಟೇ ಅಲ್ಲ, ಇನ್ನೂ ಈ ರೀತಿಯ ದರ್ಪದ ಮಾತುಗಳು ಕಡಿಮೆ ಆಗಿಲ್ಲ ಅನ್ನೋದ ಕ್ಷೇತ್ರದ ಜನ್ರದ್ದು.ಹಾಗಾಗಿ ಇವ್ರಿಗೆ ಟಿಕೆಟ್ ಸಿಕ್ಕಿದ್ರೂ ಕೂಡಾ ಈ ಬಾರಿ ಗೆಲ್ಲೋದು ತುಂಬಾನೇ ಕಷ್ಟ.

ಶ್ರೀಶೈಲಪ್ಪ ಬಿದರೂರು.

ಮಾಜಿ ಶಾಸಕರಾಗಿರೋ ಶ್ರೀಶೈಲಪ್ಪ ಬಿದರೂರು ಅವ್ರ ಹೆಸರು ಕೂಡಾ ಈ ಬಾರಿ ರೋಣ ವಿಧಾನಸಭಾ ಕ್ಷೇತ್ರಕ್ಕೆ ಕೇಲಿ ಬರ್ತಿದೆ. 1996 ರಲ್ಲಿ ನಡೆದ ಚುನಾವಣೆಯಲ್ಲಿ ಜಾತ್ಯತೀತ ಜನತಾದಳದಿಂದ ಗೆದ್ದಿದ್ದ ಶ್ರೀಶೈಲಪ್ಪ ಬಿದರೂರು, ಮತ್ತೆ 2008ರಲ್ಲಿ  ಗದಗನಲ್ಲಿ ಬಲಾಡ್ಯ ಅಭ್ಯರ್ಥಿ ಎಂದೇ ಗುರುತಿಸಿಕೊಂಡಿದ್ದ ಪ್ರಭಾವಿ ನಾಯಕ ಎಚ್ ಕೆ ಪಾಟೀಲರನ್ನು ಸೋಲಿಸಿ ಎರಡನೇ ಭಾರಿ ಶಾಸಕರಾಗಿ ಆಯ್ಕೆಯಾಗಿದ್ರು.ಆದ್ರೆ ಈ ಬಾರಿ ಟಿಕೆಟ್ ಸಿಗೋದು ಡೌಟ್. ಸಿಕ್ಕಿದ್ರೂ ಕೂಡಾ ಜಿಎಸ್ ಪಾಟೀಲರನ್ನು ಸೋಲಿಸೋದು ತುಂಬಾ ಕಷ್ಟ ಅಂತಾ ಇಲ್ಲಿನವರೇ ಹೇಳ್ತಿದ್ದಾರೆ.

ತೆನೆ ಹೊರೋದ್ಯಾರು?

ನಿಂಗನಗೌಡ ಪಾಟೀಲ್, ಆಕಾಂಕ್ಷಿ

ಈ ಬಾರಿ ಜೆಡಿ ಎಸ್ ನಿಂದ ಕೇಳಿ ಬರ್ತಿರೋ ಹೆಸರು  ನಿಂಗನಗೌಡ ಪಾಟೀಲ್ ಅನ್ನೋರದ್ದು  ಏಷಿಯಾ ಖಂಡದಲ್ಲಿಯೇ  ಮೊದಲ ಸಹಕಾರಿ ಸಂಘ ಸ್ಥಾಪಿಸಿದ್ದ ಕಣಗಿನಹಾಳದ ಸಹಕಾರಿ ಪಿತಾಮಹರೆಸಿಕೊಂಡಿದ್ದ ಸಿದ್ದನಗೌಡ ಪಾಟೀಲ್ ರ ಮೊಮ್ಮಗ ಇವ್ರು. ಪ್ರಥಮ ದರ್ಜೆ ಗುತ್ತಿಗೆದಾರರಾಗಿರೋ ಇವ್ರು ಸದ್ಯ ಜೆಡಿ ಎಸ್ ನಲ್ಲಿ ಗುರಿತಿಸಿಕೊಂಡಿದ್ದಾರೆ ಅಲ್ಲದೆ ಈ ಬಾರಿ ಇಲ್ಲಿಂದ ಕಣಕ್ಕಿಳಿಯೋದಕ್ಕೆ ಆಕಾಂಕ್ಷಿಯಾಗಿದ್ದಾರೆ.  ಇವ್ರ ಜತೆಗೆ ಎಚ್ ಎಸ್ ಸೋಂಪೂರ ಅವ್ರ ಹೆಸರು ಕೂಡಾ ಇಲ್ಲಿಂದ ಕೇಳಿ ಬರ್ತಿದೆ.ಹೋರಾಟದ ಮೂಲಕವೇ ಬೆಳಕಿಗೆ ಬಂದ ಇವ್ರು, ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ್ರ ಸಂಘಟನೆಯಲ್ಲಿ ಗುರುತಿಸಿಕೊಂಡ ನಂತರ ತಾವೇ ಕರ್ನಾಟಕ ಜನ ಹಿತ ವೇದಿಕೆ ಅಂತ ಸಂಘಟನೆ ಸ್ಥಾಪಿಸಿಕೊಂಡು ಹೋರಾಟಗಳಲ್ಲಿ ಭಾಗಿಯಾಗಿದ್ದಾರೆ. ಈ ಬಾರಿ ಇವ್ರು ಕೂಡಾ ಇಲ್ಲಿಂದ ನಿಲ್ಲೋದಕ್ಕೆ ಆಕಾಂಕ್ಷಿ.

ರೋಣ ವಿಧಾನಸಭಾ ಕ್ಷೇತ್ರದಲ್ಲಿ ಟೋಟಲ್ 219700 ಮತದಾರರಿದ್ದು  ಅವ್ರಲ್ಲಿ ಲಿಂಗಾಯತರು 50ಸಾವಿರದಷ್ಟಿದ್ರೆ ಹಿಂದುಳಿದ ವರ್ಗ 33000, ಕುರುಬರು 32000 ಮತದಾರರಿದ್ದಾರೆ. ಇವ್ರ ಜತೆಗೆ  ಜಂಗಮರು, ಬಣಜಿಗರು ರೆಡ್ಡಿಗಳು ಗಾಣಿಗೇರ ಹೀಗೆ ಹಲವಾರು ಜಾತಿಯ ಮತದಾರರಿದ್ದಾರೆ. ಆದ್ರೆ ಲಿಂಗಾಯತ ಮತಗಳೇ ಇಲ್ಲಿ ನಿರ್ಣಾಯಕ. ಇನ್ನು ಇಲ್ಲಿ ಚುನಾವಣೆ ಹತ್ತಿರವಾಗ್ತಾ ಇದ್ರು ಬಿಜೆಪಿಯ ಕಾರ್ಯಕರ್ತರಲ್ಲಿ ಒಗ್ಗಟ್ಟಿನ ಕೊರತೆ ಇದೆ.ಇದುವರೆಗೂ ಸಹ ರೋಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್‌ನ ವಿರುದ್ಧ ಬಿಜೆಪಿ ಧ್ವನಿಯೆತ್ತಿಲ್ಲ ಹಾಗಾನೇ ಬಿಜೆಪಿ ಟಿಕೆಟ್ ಕಳಕಪ್ಪ ಬಂಡಿ ಅವರಿಗೆ ಸಿಗತ್ತಾ ಅನ್ನೋ ಗೊಂದಲ, ಬಿಜೆಪಿಯಲ್ಲಿರೋ ಬಣದ ರಾಜಕೀಯವೂ ಸಹ..  ಹಾಲಿ ಶಾಸಕ ಜಿ ಎಸ್ ಪಾಟೀಲ್ರ ಗೆಲುವಿನ ನಾಗಾಲೊಟಕ್ಕೆ ಕಾರಣವಾಗಬಹುದು. ರೋಣ ಕ್ಷೇತ್ರದಲ್ಲಿ ಕಾಂಗ್ರೆಸ ಪಕ್ಷ ಗೆದ್ರೆ ಅದು ಪಕ್ಕದ ನರಗುಂದ ವಿಧಾನಸಭಾ ಕ್ಷೇತ್ರದ ಮೇಲೂ ಪರಿಣಾಮ ಬೀರೋದ್ರಿಂದ ಕಾಂಗ್ರೆಸ್ ಇದನ್ನು ಗಂಭೀರವಾಗಿ ತೆಗೆದುಕೊಂಡಿದೆ.

ಶಾಸಕ ಜೀಎಸ್ ಪಾಟೀಲ್ ಅವ್ರಿಗೆ ಈ ಬಾರಿ ತಾವು ಕ್ಷೇತ್ರಕ್ಕೆ ಮಾಡಿದ ಅಭಿವೃದ್ಧಿ ಕೆಲಸಗಳೇ ಅವ್ರ ಕೈ ಹಿಡಿಯಲಿವೆ. ಯಾಕಂದ್ರೆ ಅಷ್ಟೊಂದು ಅಭಿವೃದ್ಧಿ ಕೆಲ್ಸಗಳನ್ನು ಪಾಟೀಲರು ಮಾಡಿದ್ದಾರೆ. ಇದರ ಜತೆಗೆ ಕಳೆದ ಚುನಾವಣೆಯಲ್ಲಿ ಸೋತು ಹೋಗಿದ್ದ ಬಿಜೆಪಿಯ ಮಾಜಿ ಸಚಿವ ಕಳಕಪ್ಪ ಬಂಡಿ ಸೋಲಿನಿಂದ ಪಾಠ ಕಲಿತಂತೆ ಕಾಣ್ತಿಲ್ಲ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಬಹಿರಂಗವಾಗಿಯೇ ಗದಗನ ತಹಶೀಲ್ದಾರ ಅವ್ರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಮಹದಾಯಿ ನೀರು ಕೇಳಿದ ರೈತನ ಮೇಲೆ ಕೈ ಮಾಡಲು ಹೋಗಿದ್ದು ಇವರೆಡೂ ಘಟನೆಗಳು ಜನ್ರ ಮನಸ್ಸಿನಲ್ಲಿರೋದ್ರಿಂದ ಅದರ ಪರಿಣಾಮ ಈ ಬಾರಿ ಕಾಂಗ್ರೆಸ್ ನ ಜಿಎಸ್ ಪಾಟೀಲ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸತ್ತೆ. ಹಾಗಾಗಿ ಲಾಸ್ಟ್ ಎಲೆಕ್ಷನ್ ನಲ್ಲಿ 18 ಸಾವಿರ ಮತಗಳ ಅಂತರದಿಂದ ಗೆದ್ದಿದ್ದ ಜಿ ಎಸ್ ಪಾಟೀಲ್ರು ಈ ಭಾರಿಯೂ ತಮ್ಮ ವಿಜಯ ಪತಾಕೆ ಹಾರಿಸೋದು ಖಂಡಿತಾ ಅಂತಿದ್ದಾರೆ. ಇಲ್ಲಿನ ಪ್ರಜ್ನಾವಂತ ಮತದಾರರು.

 

 

From the web

ಪ್ರತ್ಯುತ್ತರ ನೀಡಿ

Please enter your comment!
Please enter your name here