ಚುನಾವಣಾ ಕುರುಕ್ಷೇತ್ರ 2018 – ಸಾಗರ (ಶಿವಮೊಗ್ಗ ಜಿಲ್ಲೆ)

ಸಾಗರ ವಿಧಾನಸಭಾ ಕ್ಷೇತ್ರ

ಇವತ್ತು ನಾವು ಕುರುಕ್ಷೇತ್ರದಲ್ಲಿ ಹೇಳ್ತಿರೋದು ಸಾಗರ ವಿಧಾನಸಭಾ ಕ್ಷೇತ್ರದ ಬಗ್ಗೆ. ಸದಾ ರಾಜಕೀಯ ವಿಚಾರಗಳಿಗೇ ಸುದ್ದಿಯಾಗೋ  ಈ ಕ್ಷೇತ್ರದಲ್ಲಿ ಈ ಬಾರಿ ಯಾರ್ಯಾರ ಮಧ್ಯೆ ಫೈಟ್ ಇದೆ. ಪ್ರಸ್ತುತ ಇಲ್ಲಿನ ರಾಜಕೀಯ ಪರಿಸ್ಥಿತಿ ಏನು ನೋಡೋಣ

ಸಾಗರ ವಿಧಾನಸಭಾ ಕ್ಷೇತ್ರ. ಶಿವಮೊಗ್ಗ ಜಿಲ್ಲೆಯ ಪ್ರತಿಷ್ಟಿತ ಕ್ಷೇತ್ರಗಳಲ್ಲಿ ಒಂದು. ಕಂದಾಯ ಸಚಿವರ ತವರು ಕ್ಷೇತ್ರ. ಇಲ್ಲೇನಿದ್ರೂ ಕಾಂಗ್ರೆಸ್ ಬಿಜೆಪಿ ನಡುವೆ ನೇರ ಹಣಾಹಣಿ.. ಈ ಬಾರಿ ಕೂಡ ಚುನಾವಣಾ ಕಣ ರಂಗೇರಿದೆ. ಈವರೆಗೆ ನಡೆದ ಎಲ್ಲಾ ಹದಿಮೂರು ಚುನಾವಣೆಗಳಲ್ಲೂ ಈಡಿಗ ಜನಾಂಗದ ಆಭ್ಯರ್ಥಿಗಳೇ ಇಲ್ಲಿ ಶಾಸಕರಾಗಿ ಆಯ್ಕೆಯಾಗಿರುವುದು ವಿಶೇಷ. ರೈತರು, ಅಡಿಕೆ ಬೆಳಗಾರರು.. ಹೆಚ್ಚಿನ ಸಂಖ್ಯೆಯಲ್ಲಿ ಇದಾರೆ. ಸಾಗರ ಸಾಮಾಜಿಕ ಹೋರಾಟದ ನೆಲೆಯೂ ಹೌದು. ರಾಜಕೀಯವಾಗಿ ಪ್ರಜ್ಞಾವಂತರು ಇರುವ ಕ್ಷೇತ್ರ. ಕಾಗೋಡು ಹೋರಾಟದಿಂದ ದೇಶದ ಗಮನ ಸೆಳೆದಿರುವ ಕ್ಷೇತ್ರ. ಗೇಣಿದಾರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದುದ್ದು ಇದೇ ಕ್ಷೇತ್ರದಲ್ಲಿ. ಅಡಿಕೆ, ಶುಂಠಿ ಬೆಳೆದುಕೊಂಡು ಆರ್ಥಿಕವಾಗಿ ರೈತರು ಸಬಲರಾಗಿದ್ದಾರೆ. ಇಡೀ ದೇಶದಲ್ಲಿಯೇ ಗಮನಸೆಳೆದಿರುವ ಸಿಗಂದೂರು ಚೌಡೇಶ್ವರಿ ನೆಲೆಸಿರುವುದು ಸಾಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿಯೇ ಈ ಬಾರಿ ಈ ತಾಯಿ ಯಾರಿಗೆ ಆಶೀರ್ವಾದ ನೀಡುತ್ತಾಳೆ ಅನ್ನೋದು ಕುತೂಹಲ ಕೆರಳಿಸಿದೆ. ಹಾಗಿದ್ರೆ ಇಲ್ಲಿನ ರಾಜಕೀಯ ಬೆಳವಣಿಗೆಗಳೇನು ಅನ್ನೋದನ್ನು ಹೇಳ್ತೀವಿ ಆದ್ರೆ ಅದಕ್ಕೂ ಮೊದಲು 2013ರ ಮತಬರಹ ನೋಡೋಣ.

 

2013ರ ಮತಬರಹ

ಇದು 2013ರ ಮತಬರಹ. ಕಾಂಗ್ರೆಸ್ ನಿಂದ ಅಖಾಡಕ್ಕಿಳಿದಿದ್ದ ಕಾಗೋಡು ತಿಮ್ಮಪ್ಪನವರು ಇಲ್ಲಿ 71960 ಮತಗಳನ್ನು ಪಡೆಯೋದ್ರ ಮೂಲಕ ಗೆದ್ದು ಸಚಿವರಾಗಿದ್ದಾರೆ. ಇನ್ನು ಕೆಜೆಪಿ ಯ ಬಿ ಆರ್ ಜಯಂತ್ 30712 ಮತಗಳನ್ನು ಪಡೆದಿದ್ರೆ, ಜೆಡಿಎಸ್ ನಿಂದ ಕಣಕ್ಕಿಳಿದಿದ್ದ ಬೇಳೂರು ಗೋಪಾಲಕೃಷ್ಣ 23217 ಮತಗಳನ್ನು ಪಡೆದ್ರು. ಆದ್ರೆ ಶರಾವತಿ ಸಿ ರಾವ್ 5355 ಮತಗಳನ್ನು ಪಡೆಯೋದ್ರ ಮೂಲಕ ಬಿಜೆಪಿ ಇಲ್ಲಿ ನಾಲ್ಕನೇ ಸ್ಥಾನಕ್ಕೆ ತಳ್ಳಪ್ಟಟ್ಟಿತ್ತು.

ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವು ತಿಂಗಳು ಬಾಕಿ ಇದೆ. ಆಗಲೇ ಕ್ಷೇತ್ರದಲ್ಲಿ ಲೆಕ್ಕಾಚಾರಗಳು ಗರಿಗೆದರಿದ್ದು, ಟಿಕೆಟ್​ಗಾಗಿ ಅಭ್ಯರ್ಥಿಗಳು ಮುಗಿಬಿದ್ದಿದ್ದಾರೆ. ಸದ್ಯ ಕಾಂಗ್ರೆಸ್ ವಶದಲ್ಲಿರೋ ಈ ಕ್ಷೇತ್ರದಲ್ಲಿ ಕಾಗೋಡು ತಿಮ್ಮಪ್ಪನವರು ಕಂದಾಯ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾಗೋಡು ತಿಮ್ಮಪ್ಪ 5 ಬಾರಿ ಶಾಸಕರಾಗಿದ್ದರೆ, 2004 ಮತ್ತು 2008ರ ಚುನಾವಣೆಯಲ್ಲಿ ತಿಮ್ಮಪ್ಪರ ಅಕ್ಕನ ಮಗನೂ ಆಗಿರುವ ಬೇಳೂರು ಗೋಪಾಲಕೃಷ್ಣ ಇಲ್ಲಿ ಕಾಗೋಡು ತಿಮ್ಮಪ್ಪನವರನ್ನು ಸೋಲಿಸಿ ಜಯದ ನಗೆ ಬೀರಿದ್ದರು. ಇದಾದ ಮೇಲೆ 2ನೇ ಬಾರಿಗೆ ಬಿಎಸ್‍ವೈ ಅಲೆಯಿಂದಾಗಿ 2008 ರಲ್ಲಿ ಕಾಗೋಡು ಸೋತ್ರು ಅಲ್ಲದೆ ಬೇಳೂರು ಮತ್ತೆ ಗೆಲುವಿನ ಪತಾಕೆ ಹಾರಿಸಿದ್ರು. ಆದ್ರೆ ಈ ಬಾರಿ ಒಂದಷ್ಟು ಗೊಂದಲಗಳು ಕಾಂಗ್ರೆಸ್ ನಲ್ಲಿದೆ. ಈಗಾಗಲೇ ಕಳೆದ ಬಾರಿ 2 ನೇ ಸ್ಥಾನ ಪಡೆದ ಕೆಜೆಪಿಯಲ್ಲಿದ್ದ ಬಿ ಆರ್ ಜಯಂತ್ ಕಾಂಗ್ರೆಸ್ ಸೇರಿದ್ದಾರೆ. ಈ ನಡುವೆ ಕಳೆದ ಬಾರಿಯ ಚುನಾವಣೆ ತನ್ನ ಕೊನೆ ಚುನಾವಣೆ ಹಾಗಾಗಿ ಸಚಿವ ಸ್ಥಾನ ಕೊಡಿ ಅಂತಾ ಕಾಗೋಡು ಕೇಳಿದ್ರಂತೆ ಹಾಗಾಗಿ ಅವ್ರಿಗೆ ಸಚಿವ ಸ್ಥಾನ ಕೂಡಾ ಸಿಕ್ಕಿತ್ತು. ಈ ಬಾರಿ ಕಾಗೋಡು ಎಲೆಕ್ಷನ್ ಗೆ ನಿಲ್ಲೋದು ಡೌಟ್. ಇನ್ನು ಬಿಜೆಪಿಯಿಂದ ಬಹುತೇಕ ಬೇಳೂರು ಗೋಪಾಲಕೃಷ್ಣ ಅವ್ರ ಹೆಸರೇ ಫೈನಲ್ ಅನ್ನೋ ಮಾತು ಕೂಡಾ ಕೇಳಿ ಬರ್ತಿದೆ. ಹಾಗಿದ್ರೆ ಬನ್ನಿ ಈ ಕ್ಷೇತ್ರದಲ್ಲಿ ಯಾರ್ಯಾರು ಕಣಕ್ಕಿಳಿತಾರೆ ಹಾಗೂ ಅವ್ರ ಬಲಬಲಾ ನೋಡೋಣ

ಕೈ ಅಭ್ಯರ್ಥಿ

 

ಕಾಗೋಡು ತಿಮ್ಮಪ್ಪ, ಸಚಿವರು

ಕಾಗೋಡು ತಿಮ್ಮಪ್ಪನವರು ಕಳೆದ ಬಾರಿಯೇ ಕೊನೆಯ ಚುನಾವಣೆ ಅಂತಾ ಹೇಳಿದ್ರು. ಆದ್ರೆ ಈ ಬಾರಿ ಸಚಿವರಾಗಿರೋ ಕಾರಣ ಮತ್ತೊಮ್ಮೆ ನಿಲ್ಲೋದಕ್ಕೆ ಅವಕಾಶ ಕೇಳೋ ಸಾಧ್ಯತೆ ಇದೆ.ಆದ್ರೆ ಒಂದ್ವೇಳೇ ನಿಂತ್ರೂ ಕೂಡಾ ಗೆಲ್ಲೋದಕ್ಕೆ ಕಷ್ಟ ಇದೆ. ಯಾಕಂದ್ರೆ ಕಳೆದ ಬಾರಿ ಕೆಜೆಪಿ ಬಿಜೆಪಿ ತಿಕ್ಕಾಟದಿಂದ ಕಾಂಗ್ರೆಸ್ ಗೆದ್ದಿತ್ತು. ಹಾಗಾಗಿ ಈ ಬಾರಿ ಸಚಿವರಾಗಿದ್ರೂ ಕೂಡಾ ಕಾಗೋಡು ತಿಮ್ಮುಪ್ಪ ಅವ್ರಿಗೆ ಇಲ್ಲಿ ಕಷ್ಟ ಇದೆ. ಕಂದಾಯ ಸಚಿವ ಕಾಗೋಡು ತಿಮ್ಮಪ್ಪನವರು ಒಂದಷ್ಟು ಕೆಲ್ಸ ಮಾಡಿದ್ದಾರೆ ಬಗರ್​ಹುಕಂ ಹಕ್ಕು ಪತ್ರಕೊಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಕಸ್ತೂರಿ ರಂಗನ್ ವರದಿ ಅಧಿಸೂಚನೆ ವಿರುದ್ಧ ಹೋರಾಡುತ್ತಿದ್ದಾರೆ.  ಕುಡಿಯುವ ನೀರು, ಬರಪರಿಹಾರ ಕಾಮಗಾರಿಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಆದ್ಯತೆ ನೀಡಿದ್ದಾರೆ ನಿಜ. ಆದರೆ, ವಯಸ್ಸು 86 ದಾಟಿರುವುದರಿಂದ ಈ ಬಾರಿ ಸ್ಪರ್ಧಿಸುತ್ತಾರಾ ? ಜತೆಗೆ ಕಾಂಗ್ರೆಸ್ ಹೈ ಕಮಾಂಡ್ ಇವ್ರಿಗೆ ಟಿಕೆಟ್ ಕೊಡುತ್ತಾ ಎಂಬ ಅನುಮಾನ ಇದೆ. ಇಲ್ಲಿ ಇನ್ನೊಂದು ವಿಷ್ಯ ಹೇಳಲೇ ಬೇಕು. ಕಾಂಗ್ರೆಸ್​ನಲ್ಲಿ ಕಾಗೋಡು ತಿಮ್ಮಪ್ಪ ಬಿಟ್ಟರೆ, 2ನೇ ಹಂತದ ನಾಯಕರು ಈ ಕ್ಷೇತ್ರದಲ್ಲಿ ಇಲ್ಲ..ಒಂದು ವೇಳೆ ಕಾಗೋಡು ತಿಮ್ಮಪ್ಪರಿಗೆ ಟಿಕೆಟ್ ಕೊಡದಿದ್ರ ಅವರ ಪುತ್ರಿ ಡಾ.ನಂದಿಯವರಿಗೆಯಾದರೂ ಕೊಡಬೇಕೆಂಬುದು ಕಾರ್ಯಕರ್ತರ ಒತ್ತಾಯ.. ಆದ್ರೆ ಅವರು ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಕಾರಣ ಇಲ್ಲಿನ ಮತದಾರರು ಅವ್ರನ್ನು ಗೆಲ್ಲಿಸೋದು ಅನುಮಾನ.

ಬಿಜೆಪಿ ಅಭ್ಯರ್ಥಿ

 

ಬೇಳೂರು ಗೋಪಾಲಕೃಷ್ಣ, ಮಾಜಿ ಶಾಸಕ

ಯಸ್ ಮಾಜಿ ಶಾಸಕರಾಗಿರೋ ಬೇಳೂರು ಗೋಪಾಲಕೃಷ್ಣ ಈ ಕ್ಷೇತ್ರದಿಂದ ಈ ಬಾರಿ ನಿಲ್ಲೋದ್ರಲ್ಲಿ ಅನುಮಾನ ಇಲ್ಲ. ಯಾಕಂದ್ರೆ ಈಗಾಗಲೇ ಬೇಳೂರು 2 ಬಾರಿ ಇಲ್ಲಿಂದ ಗೆದ್ದು ತಾವೇನು ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ. 2004 ಹಾಗೂ 2008 ರಲ್ಲಿ ಇದೇ ಕ್ಷೇತ್ರದಿಂದ ಗೆದ್ದು ಶಾಸಕರಾದವ್ರು ಬೇಳೂರು ಗೋಪಾಲಕೃಷ್ಣ ಅವ್ರು. ಅದ್ರಲ್ಲೂ ಪ್ರಭಾವಿ ಸಚಿವರಾಗಿರೋ ಕಾಗೋಡು ತಿಮ್ಮಪ್ಪನವರನ್ನು ಸಚಿವರಾಗಿದ್ದಾಗಲೇ ಸೋಲಿಸಿದ ಖ್ಯಾತಿ ಬೇಳೂರು ಅವ್ರಿಗಿದೆ. ಆ ಗೆಲುವು ಬೇಳೂರು ಅವ್ರಿಗೆ ರಾಜ್ಯ ಮಟ್ಟದಲ್ಲಿ ಹೆಸರನ್ನು ತಂದುಕೊಟ್ಟಿತ್ತು. ಆದ್ರೆ ಕಳೆದ ಬಾರಿ ಕೆಜೆಪಿ ಬಿಜೆಪಿ ನಡುವಿನ ಕಚ್ಟಾಟ ನೋಡಿ ಬೇಳೂರು ಮನನೊಂದಿದ್ರು. ಆದ್ರೆ ಈಗ ಮತ್ತೆ ಬಿಜೆಪಿಯಿಂದ ಕಣಕ್ಕಿಳಿಯೋದಕ್ಕೆ ರೆಡಿಯಾಗಿದ್ದಾರೆ. ಈಗಾಗಲೇ ಬೇಳೂರು ಸಾಗರದಲ್ಲಿ ಬೀಡು ಬಿಟ್ಟಿದ್ದು ಸುಮಾರು ನಾವಲ್ಕೂವರೆ ವರ್ಷಗಳಿಂದ ಕ್ಷೇತ್ರದಲ್ಲಿ ಓಡಾಡ್ತಾ ಜನರ ಜತೆ ಬೆರೆಯುತ್ತಿದ್ದಾರೆ. ಇನ್ನು ಜನ ಇವ್ರನ್ನು ಇಷ್ಟಪಡೋದಕ್ಕೂ ಕಾರಣ ಇದೆ. ಈ ಹಿಂದೆ ಶಾಸಕರಾಗಿದ್ದಾಗ, ಬಿಜೆಪಿ ಆಡಳಿತ ಇದ್ದ ಸಂದರ್ಭದಲ್ಲಿ ಸುಮಾರು 70 ಕೋಟಿ ವೆಚ್ಚದಲ್ಲಿ ಶರಾವತಿ ಕುಡಿಯುವ ನೀರಿನ ಯೋಜನೆಯನ್ನು ಇಲ್ಲಿಗೆ ತಂದಿದ್ದು ಇವ್ರೇನೇ. ಹಾಗೇನೇ ಸಾಗರ ಕ್ಷೇತ್ರದಲ್ಲಿ ಇರೋ ಹೊಸನಗರ ಈ ಹಿಂದೆ ಹಳೆ ನಗರವಾಗಿತ್ತು. ಆದ್ರೆ ಬೇಳೂರು ಗೋಪಾಲಕೃಷ್ಣ ಇಲ್ಲಿ ಶಾಸಕರಾದ ಮೇಲೆ ಸಾಕಷ್ಟು ಅಭಿವೃದ್ಧಿ ಕೆಲ್ಸಗಳನ್ನು ಮಾಡಿದ್ದಾರೆ. ಇಲ್ಲಿನ ತಾಲೂಕು ಕಛೇರಿ, ಪೋಲೀಸ್ ಸ್ಟೇಷನ್, ಅಗ್ನಿಶಾಮಕದಳ ಕಚೇರಿ ಹೀಗೇ ಜನರಿಗೆ ಸಹಾಯವಾಗೋ ಬಹಳಷ್ಟು ಮೂಲಭೂತ ಸೌಕರ್ಯಗಳನ್ನು ಬೇಳೂರು ಕ್ಷೇತ್ರಕ್ಕೆ ತಂದು ಕೊಟ್ಟಿದ್ದಾರೆ. ಹಾಗಾಗಿ ಅವ್ರಿದ್ದ ಕಾಲದಲ್ಲೇ ಇದು ಹೊಸನಗರವಾಯ್ತು. ಈಗಾಗದಲೇ ಪರಿವರ್ತನಾ ರ್ಯಾಲಿಯಲ್ಲೂ ಕೂಡಾ ಬೇಳೂರು ಸಖತ್ತಾಗಿ ಮಿಂಚಿದ್ದು ಜನ ಗುರುತಿಸಿದ್ದಾರೆ. ಅಲ್ಲದೆ ಬಿಜೆಪಿಯಿಂದ ಬೇರೆ ಯಾರ ಹೆಸರು ಕೇಳಿ ಬಂದ್ರೂ ಬೇಳೂರು ಗೋಪಾಲಕೃಷ್ಣ ಅವ್ರಿಗೇನೇ ಟಿಕೆಟ್ ಕೊಡಬೇಕು ಅಂತಾ ಮತದಾರರು ಹೇಳ್ತಿರೋದು ನೋಡಿದ್ರೆ.ಬೇಳೂರು ಸಚಿವ ಕಾಗೋಡು ಅವ್ರನ್ನು ಸೋಲಿಸಿ ಸಾಗರದಲ್ಲಿ ಮತ್ತೊಮ್ಮೆ ಇತಿಹಾಸ ಮರುಕಳಿಸುವಂತೆ ಮಾಡೋದ್ರಲ್ಲಿ ಅನುಮಾನ ಇಲ್ಲ..

ತೆನೆ ಹೊರೋದ್ಯಾರು?

ಜೆಡಿಎಸ್​ ನಿಂದ ಸಾಗರದಲ್ಲಿ ಕಣಕ್ಕಿಳಿಯೋದು ಯಾರು ಎಂಬುದು ಗೊಂದಲದಲ್ಲಿ ಇದೆ. ಯಾಕಂದ್ರೆ ಈ ಬಾರಿ ಜೆಡಿಎಸ್ ನಿಂದ ಇಲ್ಲಿ ಕಣಕ್ಕಿಳಿಯೋದಕ್ಕೆ. ಅದ್ರಲ್ಲಿ ಕಾಗೋಡು ಹಾಗೂ ಬೇಳೂರು ಗೋಪಾಲಕೃಷ್ಣ ಅವ್ರಿಗೆ ಪೈಪೋಟಿ ನೀಡುವಂತ ಅಭ್ಯರ್ಥಿಗಳು ಯಾರೂ ಕಾಣಿಸ್ತಿಲ್ಲ. ಹಾಗಾಗಿ ಬಹುತೇಕ  ಕಾಂಗ್ರೆಸ್ ಅಥವಾ ಬಿಜೆಪಿಯಲ್ಲಿ ಯಾರಾದ್ರೂ ಬಂಡಾಯ ಎದ್ರೆ ಅಂತಹವರನ್ನು ಜೆಡಿಎಸ್ ತನ್ನ ತೆಕ್ಕೆಗೆ ಹಾಕಿಕೊಂಡು ಇಲ್ಲಿಂದ ಕಣಕ್ಕಿಳಿಸೋ ಸಾಧ್ಯತೆ ಇದೆ.

ಈ ಕ್ಷೇತ್ರದಲ್ಲಿ ಒಟ್ಟು 1,74,976 ಮತದಾರರಿದ್ದು ಈಡಿಗರು – 34,000, ಬ್ರಾಹ್ಮಣರು 32,000 ಹಾಗೂ ಲಿಂಗಾಯಿತರು  34,000 ಜನರಷ್ಟಿದ್ದಾರೆ. ಅಲ್ಲದೆ ಮುಸ್ಲಿಮರು, ದಲಿತರು ಬಹುತೇಕ ಸಮ ಪ್ರಮಾಣದಲ್ಲಿ ಇದ್ದಾರೆ. ಈ ನಾಲ್ವರ ಪೈಕಿ ಮೂರು ಸಮುದಾಯದ ಮತ ಸೆಳೆಯಬಲ್ಲವರು ಇಲ್ಲಿ ಗೆಲುವು ಸಾಧಿಸುತ್ತಾ ಬಂದಿದ್ದಾರೆ. ಬೇಳೂರು ಗೋಪಾಲಕೃಷ್ಣ ಅವ್ರು ಈಡಿಗರಾಗಿದ್ದು ಎಲ್ಲಾ ಸಮುದಾಯದವ್ರ ಜತೆಗೆ ಇವರ ಒಡನಾಟ ತುಂಬಾ ಚೆನ್ನಾಗಿದೆ.ಇನ್ನು ಈ ಬಾರಿ ಕಾಂಗ್ರೆಸ್​ನಿಂದ ಕಾಗೋಡು ತಿಮ್ಮಪ್ಪ ಸ್ಪರ್ಧಿಸದೆ ಇದ್ರೆ, ಇದರ ಲಾಭ ಬಿಜೆಪಿಗೆ ಆಗುವ ಸಾಧ್ಯತೆಗಳು ಹೆಚ್ಚು.. ಅದರಲ್ಲೂ ಮೋದಿ ಅಲೆ, ಬಿಎಸ್​ವೈರ ಪ್ರಭಾವೂ ಇಲ್ಲಿದೆ. ಹಲವಾರು ವರ್ಷಗಳಿಂದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಸಕ್ರೀಯವಾಗಿ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕ್ಷೇತ್ರ ಸುತ್ತಿ ಪಕ್ಷ ಸಂಘಟನೆಗೂ ಒತ್ತು ನೀಡಿಕೊಂಡು ಬಂದಿದ್ದಾರೆ. ಹಾಗಾಗಿ ಇಲ್ಲಿನ ಜನ ಈ ಬಾರಿ ಬಿಜೆಪಿ ಕೈ ಹಿಡಿಯೋ ಚಾನ್ಸ್ ಇದೆ.

ಬಿಜೆಪಿಯಿಂದ ಬೇಳೂರು ಗೋಪಾಲಕೃಷ್ಣ ಸ್ಪರ್ಧಿಸಿದರೆ ಮೋದಿ ಅಲೆ, ಬಿಎಸ್​ವೈ ಅಲೆ ವರ್ಕಔಟ್ ಆದರೆ ಬೇಳೂರು ಗೆಲುವು ಸುಲಭವಾಗತ್ತೆ. ಇನ್ನು ಇತ್ತೀಚೆಗೆ ನಡೆದ ಪರಿವರ್ತನಾ ಸಮಾವೇಶದಲ್ಲಿ ಬೇಳೂರು ಫುಲ್ ಮಿಂಚಿದ್ದಾರೆ.. ಕಾಗೋಡು ತಿಮ್ಮಪ್ಪನವರಿಂದ ಕ್ಷೇತ್ರಏನೂ ಅಭಿವೃದ್ಧಿಯಾಗಿಲ್ಲ.ಮತದಾರರು ಇಂತವರಿಗೆ ಸರಿಯಾದ ಪಾಠ ಕಲಿಸಬೇಕು ಎಂದು ಘರ್ಜಿಸಿದ್ದಾರೆ. ಬೇಳೂರು ಅವ್ರ ಮಾತಿನಿಂದ ಕಾರ್ಯಕರ್ತರಲ್ಲೂ ಒಂದು ರೀತಿ ಉತ್ಸಾಹ ಉಕ್ಕಿರೋದು ನೋಡಿದ್ರೆ  ಮೋದಿ ಅಲೆ, ಬಿಎಸ್​ವೈ ಬೆಂಬಲವೂ ಸಿಕ್ಕರೆ ಬೇಳೂರು ಅವರು ಮತ್ತೊಮ್ಮೆ ಈ ಕ್ಷೇತ್ರದಲ್ಲಿ ಅಧಿಕಾರ ಹಿಡಿಯೋದು ಗ್ಯಾರಂಟಿ.

 

 

 

 

 

From the web

ಪ್ರತ್ಯುತ್ತರ ನೀಡಿ

Please enter your comment!
Please enter your name here