ಚುನಾವಣಾ ಕುರುಕ್ಷೇತ್ರ 2018 – ಶಿವಾಜಿನಗರ (ಬೆಂಗಳೂರು)

ಶಿವಾಜಿ ನಗರ ವಿಧಾನಸಭಾ ಕ್ಷೇತ್ರ

ಇವತ್ತಿನ ಕುರುಕ್ಷೇತ್ರದಲ್ಲಿ ನಾವು ಹೇಳ್ತಿರೋದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿರೋ ಪ್ರತಿಷ್ಠಿತ ಶಿವಾಜಿ ನಗರ ವಿಧಾನಸಭಾ ಕ್ಷೇತ್ರದ ಬಗ್ಗೆ. ಸದ್ಯ ಇಲ್ಲಿ ಗೆದ್ದಿರೋ ರೋಶನ್ ಬೇಗ್ ಸಚಿವರಾಗಿದ್ದಾರೆ ಕಳೆದ 10 ವರ್ಷಗಳಿಂದ ಕಾಂಗ್ರೆಸ್ ತೆಕ್ಕೆಯಲ್ಲಿರೋ ಈ ಕ್ಷೇತ್ರದಲ್ಲಿ ಭಾರಿ ಬದಲಾವಣೆ ಆಗೋ ಚಾನ್ಸ್ ಕಾಣಿಸ್ತಿದೆ. ಇಲ್ಲಿನ ರಾಜಕೀಯ ಬೆಳವಣಿಗೆಗಳ ಕಂಪ್ಲೀಟ್ ರಿಪೋರ್ಟ್ ಕುರುಕ್ಷೇತ್ರದಲ್ಲಿ

ಶಿವಾಜಿ ನಗರ ವಿಧಾನಸಭಾ ಕ್ಷೇತ್ರ. ಬೆಂಗಳೂರಿನಲ್ಲಿರೋರಿಗೆ ಈ ಹೆಸರು ಗೊತ್ತಿಲ್ದೇ ಇರೋದಕ್ಕೆ ಸಾಧ್ಯನೇ ಇಲ್ಲ. ಇಲ್ಲಿನ ರಸೆಲ್ ಮಾರ್ಕೇಟ್, ಚರ್ಚು,ಮಸೀದಿ, ದೇವಸ್ಥಾನ, ಹಾಗೇನೇ ಇಲ್ಲಿ ನಡೆಯೋ ವ್ಯಾಪಾರ ವಹಿವಾಟುಗಳು.ದಿನ ನಿತ್ಯ ಜನಸಂದಣಿಯಿಂದ ತುಂಬಿರೋ ಕ್ಷೇತ್ರ ಶಿವಾಜಿನಗರ

. ಈ ಕ್ಷೇತ್ರ ರಾಜಕೀಯಕ್ಕೂ ಹೆಸರಾಗಿದೆ. ಈ ಹಿಂದೆ ಬಿಜೆಪಿಯ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಈ ಕ್ಷೇತ್ರವನ್ನು ತಮ್ಮ ಭದ್ರ ಕೋಟೆಯಾಗಿ ಮಾಡ್ಕೊಂಡಿದ್ರು. ಆದ್ರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅವ್ರು ಹೆಬ್ಬಾಳದತ್ತ ಹೋದ ಮೇಲೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಧ್ವಜ ಹಾರೋದಕ್ಕೆ ಪ್ರಾರಂಭವಾಯ್ತು. 2008 ಹಾಗೂ 2013ರಲ್ಲಿ ಸತತವಾಗಿ ಕಾಂಗ್ರೆಸ್ ನ ರೋಷನ್ ಬೇಗ್ ಶಾಸಕರಾಗಿ, ಸಚಿವರಾಗಿದ್ದಾರೆ. ಆದ್ರೆ ಈ ಬಾರಿ ಇಲ್ಲಿನ ರಾಜಕೀಯ ಹವಾ ಹೇಗಿದೆ ಇಲ್ಲಾಗ್ತಿರೋ ಮೇಜರ್ ಚೇಂಜಸ್ ಏನು ಅನ್ನೋದ್ನನು ಹೇಳ್ತೀವಿ. ಆದ್ರೆ ಅದಕ್ಕೂ ಮೊದಲು 2013ರ ಮತಬರಹ ನೋಡೋಣ.

 

2013ರ ಮತಬರಹ

 

ಇದು 2013ರ ಮತಬರಹ ಕಾಂಗ್ರೆಸ್ ನ ರೋಷನ್ ಬೇಗ್ 49649 ಮತಗಳನ್ನು ಪಡೆದು ಗೆದ್ದು ಶಾಸಕರಾದ್ರೂ ಸಚಿವರೂ ಆದ್ರು. ಇನ್ನು ಬಿಜೆಪಿಯ ನಿರ್ಮಲ್ ಕುಮಾರ್ ಸುರಾನಾ ಕೇವಲ28794 ಮತಗಳನ್ನು ಪಡೆದು ಸೋತ್ರು.

ಇಲ್ಲಿ ಕಳೆದ 2 ಟರ್ಮ್ ನಲ್ಲೂ ಕೂಡಾ ಸಚಿವ ರೋಷನ್ ಬೇಗ್ ಗೆದ್ದಿದ್ದಾರೆ ನಿಜ. ಆದ್ರೆ ತಮ್ಮ ಕ್ಷೇತ್ರಕ್ಕೆ ಏನು ಮಾಡಿದ್ದಾರೆ ಅಂದ್ರೆ ಇಲ್ಲಿನ ಜನ ಹೇಳ್ತಿದ್ದಾರೆ ಈ ಹಿಂದೆ ಶಿವಾಜಿ ನಗರ ಹೇಗಿತ್ತೋ ಇಗಲೂ ಹಾಗೇ ಇದೆ ರೋಷನ್ ಬೇಗ್ ಕ್ಷೇತ್ರಕ್ಕೆ ಏನೇನೂ ಮಾಡಿಲ್ಲ ಅಂತಾ. ಆದ್ರೆ ಬಿಜೆಪಿಯ ಕಟ್ಟಾ ಸುಬ್ರಹ್ಮಣ್ಯ ನಾಯ್ಚು ಇಲ್ಲಿದ್ದಾಗ ಮಾಡಿದ್ದ ಅಭಿವೃದ್ಧಿ ಕೆಲ್ಸಗಳನ್ನು ಇಲ್ಲಿನ ಜನ ಈಗಲೂ ನೆನಪಿಸಿಕೊಳ್ತಿದ್ದಾರೆ. ಇನ್ನು ಈ ಬಾರಿ ಇಲ್ಲಿಂದ ಯಾರು ಕಣಕ್ಕಿಳಿತಾರೆ ಅನ್ನೋದು ತುಂಬಾ ಇಂಟ್ರೆಸ್ಟಿಂಗ್ ವಿಚಾರ. ಅದ್ರಲ್ಲೂ ಈ ಹಿಂದೆ ಶಿವಾಜಿ ನಗರದಲ್ಲಿ ಗೆದ್ದು ಹವಾ ಸೃಷ್ಟಿ ಮಾಡ್ಕೊಂಡಿದ್ದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವ್ರು ಈ ಬಾರಿ ದಿಢೀರ್ ಅಂತಾ ಇಲ್ಲಿಂದ ಕಣಕ್ಕಿಳಿಯೋದಕ್ಕೆ ಮುಂದಾಗಿದ್ದಾರೆ. ಬನ್ನಿ ಹಾಗಿದ್ರೆ ಈ ಬಾರಿ ಇಲ್ಲಿಂದ ಯಾವ ಪಕ್ಷದಿಂದ ಯಾರು ಅಬ್ಯರ್ಥಿಗಳು ನೋಡೋಣ

ಕೈ ಅಭ್ಯರ್ಥಿ

 

ರೋಷನ್ ಬೇಗ್, ಸಚಿವ

ಯಸ್ ಸತತ 2 ಬಾರಿ ಗೆದ್ದು ಸಚಿವರಾಗಿರೋ ರೋಷನ್ ಬೇಗ್ ಶಿವಾಜಿ ನಗರದಲ್ಲಿ ಹ್ಯಾಟ್ರಿಕ್ ಬಾರಿಸಲು ಮುಂದಾಗ್ತಿದ್ದಾರೆ. ಆದ್ರೆ ಈ ಬಾರಿ ಗೆಲ್ಲೋದು ತುಂಬಾ ಕಷ್ಟ. ಅದಕ್ಕೆ ಕಾರಣವಿದೆ. ಶಾಸಕ, ಸಚಿವರಾದ ಮೇಲೆ ಕ್ಷೇತ್ರದ ಜನ ಅವರಿಂದ ತುಂಬಾ ನೀರಿಕ್ಷೆ ಇಟ್ಕೊಂಡಿರ್ತಾರೆ. ಆದ್ರೆ ಆ ಎಲ್ಲಾ ನಿರೀಕ್ಷೆಗಲು ವಿಫಲವಾದಾಗ ಸಹಜವಾಗೇ ಜನ ತಿರುಗಿ ಬೀಳ್ತಾರೆ. ಇಲ್ಲೂ ಹಾಗೇ ಆಗೋ ಚಾನ್ಸ್ ಕಾಣಿಸ್ತಿದೆ.ಯಾಕಂದ್ರೆ ಸಚಿವ ರೋಷನ್ ಬೇಗ್ ಗೆ ತಾನು ಈ ಅಭಿವೃದ್ಧಿ ಕೆಲ್ಸ ಮಾಡಿದ್ದೀನಿ ಅಂತಾ ತೋರಿಸಿಕೊಳ್ಳೋದಕ್ಕೆ ನಾಲ್ಕು ಕೆಲ್ಸಗಳ ಉದಾಹರಣೆ ಇಲ್ಲಿ ಸಿಕ್ಕಲ್ಲ. ಇನ್ನು ಜನರ ಕೈ ಗೆ ಸಿಗದ ಹೈಪೈ ರಾಜಕಾರಣಿ ಆಗಿದ್ದಾರೆ ರೋಶನ್ ಬೇಗ್. ಸ್ಥಳೀಯ ಆಡಳಿತದ ಮೇಲೆ ಹಸ್ತಕ್ಷೇಪ ಮಾಡ್ತಾರೆ. ಇನ್ನು ಮಾತಾಡೋವಾಗ ನಾಲಿಗೆ ಮೇಲೆ ಹಿಡಿತ ಇಲ್ಲ. ಕೆಲ ದಿನಗಳ ಹಿಂದೆ ಕಾರ್ಯಕ್ರಮವೊಂದ್ರಲ್ಲಿ ಪ್ರಧಾನಿ ಮೋದಿ ಅವ್ರ ನೋಟ್ ಬ್ಯಾನ್ ಬಗ್ಗೆ ಮಾತಾಡೋವಾಗ ಏನೇನೋ ಮಾತಾಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ರು. ಹಾಗೇನೇ ಕ್ಷೇತ್ರದ ಜನರ ಸಮಸ್ಯೆಗೆ ಇವ್ರು ಸ್ಪಂದಿಸೋದಿಲ್ಲ ಅನ್ನೋ ಆರೋಪ ಇವ್ರ ಮೇಲಿದೆ. ಕಷ್ಟಸುಖಗಳಿಗೆ ಸ್ಪಂದಿಸಲ್ಲ ಬಡವರಿಗೆ ಮನೆ ಇಲ್ಲ, ಸೂಕ್ತ ಶೌಚಾಲಯ ವ್ಯವಸ್ತೆ ಇಲ್ಲ. ಕುಡಿಯುವ ನೀರು, ರಸ್ತೆ ಒಳಚರಂಡಿ ವ್ಯವಸ್ಥೆಗಳು ಸರಿಯಾಗದಿಲ್ಲ. 2 ಬಾರಿ ಶಾಸಕರಾದ್ರೂ ಕೂಡಾ ಬಹುತೇಕ ಬಡವರಿಗೆ ಹಕ್ಕು ಪತ್ರವನ್ನೇ ವಿತರಿಸಿಲ್ಲ. ರಾಮಸ್ವಾಮಿ ಪಾಳ್ಯ, ಹಲಸೂರು, ಹಿಲ್ ಟಾಪ್ ಪ್ರದೇಶದಲ್ಲಿ ಬಹುತೇಕ ಬಡವರಿದ್ದಾರೆ. ಆದ್ರೆ ಅವ್ರನ್ನು ಕೇಳೋರೇ ಇಲ್ಲದಂತಾಗಿದೆ. ಸಚಿವರು ಬಿಜೆಪಿ ಮತದಾರರಿರೋ ಜಾಗಗಳ ಬಗ್ಗೆ ಗಮನ ಹರಿಸದೇ ಇರೋದು ಕೂಡಾ ಇಲ್ಲಿನ ಮತದಾರರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಎಲ್ಲ ಅಂಶಗಳು ಸಚಿವ ರೋಶನ್ ಬೇಗ್ ಗೆ ಹಿನ್ನಡೆಯನ್ನುಂಟುಮಾಡೋದು ಖಂಡಿತಾ..

ಬಿಜೆಪಿ ಅಭ್ಯರ್ಥಿ

ಕಟ್ಟಾ ಸುಬ್ರಹ್ಮಣ್ಯನಾಯ್ಡು, ಮಾಜಿ ಸಚಿವ

ಯಸ್ ಈ ಬಾರಿ ದಿಢೀರ್ ಬೆಳವಣಿಗೆಯಲ್ಲಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮತ್ತೆ ಶಿವಾಜಿ ನಗರದಿಂದ ಕಣಕ್ಕಿಳಿಯಲಿದ್ದಾರೆ. ಈ ಹಿಂದೆ ಶಿವಾಜಿ ನಗರ ಅಂದ್ರೆ ಕಟ್ಟಾ, ಕಟ್ಟಾ ಅಂದ್ರೆ ಶಿವಾಜಿ ನಗರ ಅನ್ನೋ ತರಹ ಇತ್ತು. ಆದ್ರೆ ಕಟ್ಟಾ ಹೆಬ್ಬಾಳಕ್ಕೆ ಹೋಗಿ ನಿಂತ ಮೇಲೆ 2 ಬಾರಿ ಕೂಡಾ ಈ ಕ್ಷೇತ್ರ ಕಾಂಗ್ರೆಸ್ ಪಾಲಾಗಿತ್ತು. ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವ್ರು ಇಲ್ಲಿ ನಿಂತಾಗ ಗೆದ್ದಿರೋದೇನೂ ಸುಮ್ನೇ ಅಲ್ಲ ಅವ್ರು ಈ  ಕ್ಷೇತ್ರದಲ್ಲಿ ಬಹಳ ಭಿವೃದ್ಧಿ ಕೆಲ್ಸ ಮಾಡಿದ್ದಾರೆ. ಈ ಕ್ಷೇತ್ರದ ವ್ಯಾಪ್ತಿಯಲ್ಲಿರೋ ಬೌರಿಂಗ್ ಆಸ್ಪತ್ರೆಯ ನವೀಕರಣ, ಬಸ್ ಸ್ಟಾಂಡ್, ದೊಡ್ಡ ಮೋರಿ ಹೀಗೆ ಸಾಕಷ್ಟು ಅಭಿವೃದ್ಧಿ ಕೆಲ್ಸಗಳನ್ನು ಮಾಡಿರೋದು ಕಟ್ಟಾ ಸುಬ್ರಹ್ಮಣ್ಯ ನಾಯ್ಡು

ಅವ್ರು. ಹಾಗಾಗಿ ಇಲ್ಲಿನ ಜನ ಅವ್ರನ್ನು ನೆನಪಿಸಿಕೊಳ್ತಾರೆ. ಇನ್ನು ಕಟ್ಟಾ ಇರಬೇಕಿದ್ರೆ ಸಾಮರಸ್ಯ ಇತ್ತು ಆದ್ರೆ ಈಗ ರೋಶನ್ ಬೇಗ್ ಒಂದೇ ವರ್ಗದವರನ್ನು ಓಲೈಸುತ್ತಿರೋ ಕಾರಣ ಆ ಸಾಮರಸ್ಯ ಕಡಿಮೆ ಆಗಿದೆ. ಕಟ್ಟಾ ಅವ್ರು ಇಲ್ಲಿಂದ ಹೋದ ನಂತರವೂ ಇಲ್ಲಿ ಬಿಜೆಪಿಗೆ ಮತ ಬರೋದು ಕಡಿಮೆ ಆಗಿಲ್ಲ. ಬಿಜೆಪಿ ಪ್ರಭಾವ ಇನ್ನೂ ಇದೆ. ಸಂಪಂಗಿರಾಮನಗರ,ವಸಂತ್ ನಗರ, ಜಯಮಹಲ್, ಹಲಸೂರು ಬಾಗಗಳಲ್ಲಿ ಬಿಜೆಪಿ ಕಟ್ಟಾಳುಗಳು ಪಾರ್ಟಿ ಬಿಟ್ಟಿಲ್ಲ. ಆದ್ರೆ 10 ವರ್ಷಗಳಿಂದ ಇಲ್ಲಿ ಬಿಜೆಪಿಗೆ ನಾಯಕತ್ವ ಕೊರತೆ ಇತ್ತು. ಈಗ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮತ್ತೆ ಈ ಕ್ಷೇತ್ರಕ್ಕೆ ಬರ್ತಿರೋದ್ರಿಂದ ಎಲ್ರೂ ಒಗ್ಗಟ್ಟಾಗಿ ಕಟ್ಟಾ ನಾಯಕತ್ವದಲ್ಲಿ ಈ ಬಾರಿ ಎಲೆಕ್ಷನ್ ಪೈಟ್ ಗೆ ರೆಡಿಯಾಗ್ತಿದ್ದಾರೆ

ತೆನೆ ಹೊರೋದ್ಯಾರು?

ಬಶೀರ್, ಪ್ರಬಲ ಆಕಾಂಕ್ಷಿ

ಬಷೀರ್ ಅವ್ರು ಈಗಾಗಲೇ ಶಿವಾಜಿ ನಗರದ ಜೆಡಿಎಸ್ ಅಭ್ಯರ್ಥಿ ಅಂತಾ ಕ್ಷೇತ್ರದಲ್ಲಿ ಪ್ರಚಾರ ಆಗಿದೆ. ಹಾಗಾಗಿ ಬಹುತೇಕ ಅವ್ರೇ ಇಲ್ಲಿಂದ ಕಣಕ್ಕಿಳಿತಾರೆ. ಇನ್ನು ಈ ಭಾಗದಲ್ಲಿ ಹೆಚ್ ಡಿ ಕುಮಾರಸ್ವಾಮಿ ಅಥವಾ ಜನತಾದಳದ ಪರ ಮತದಾರರಿಗೆ ಸ್ವಲ್ಪ ಒಲವಿರೋ ಕಾರಣ ಬಶೀರ್ ಅವ್ರಿಗದೆ ಮತದಾರನ ಅಭಯ ಇರೋದಂತೂ ಪಕ್ಕ. ಗೆಲ್ಲೋದಕ್ಕೆ ಕಷ್ಟವಾದ್ರೂ ಕೂಡಾ ಒಂದು ಪಕ್ಷ ಅಥವಾ ಅಭ್ಯರ್ಥಿಯನ್ನು ಸೋಲಿಸೋ ತಾಕತ್ತು ಇವ್ರಿಗಿದೆ.

ಇನ್ನುಳಿದಂತೆ ಎಸ್ ಡಿ ಪಿ ಐ ನಿಂದ  ವಸೀಂ ಅಹಮ್ಮದ್ ಅನ್ನೋರು ಕಣಕ್ಕಿಳಿತಾರೆ, ಎಂಐಎಂ ಪಕ್ಷದಿಂದ  ನಿಂದ ಮುಜಾಹಿದ್ ಅಹಮ್ಮದ್ ಅನ್ನೋದು ಅಖಾಡದಲ್ಲಿರ್ತಾರೆ. ಹಾಗಾಗಿ ಜೆಡಿಎಸ್,ಸೇರಿದಂತೆ ಇಲ್ಲುಳಿದ ಈ 2 ಪಕ್ಷಗಳಿಂದಲೂ ಮುಸ್ಲಿಂ ಅಭ್ಯರ್ಥಿಗಳೇ ಇರೋ ಕಾರಣ ಕಾಂಗ್ರೆಸ್ ನ ರೋಷನ್ ಬೇಗ್ ಅವ್ರಿಗೆ ಬೀಳೋ ಮತಗಳು ಹಂಚಿ ಹೋಗೋದ್ರಲ್ಲಿ ಡೌಟ್ ಇಲ್ಲ. ಇದು ಬಿಜೆಪಿಗೆ ದೊಡ್ಡ ಲಾಭ ತರೋದಂತೂ ಗ್ಯಾರಂಟಿ.

ಶಿವಾಜಿ ನಗರ ಅಂದ್ರೆ ಇದೊಂತರಹ ಮಿನಿ ಇಂಡಿಯಾ ಇದ್ದಂಗೆ. ಇಲ್ಲಿ ಎಲ್ಲಾ ಭಾಷೆಯ ಜನ ಇದ್ದಾರೆ. ಬಹುತೇಕ ಹಿಂದುಳಿದವರೇ ಇಲ್ಲಿ ಜಾಸ್ತಿ. ನೇಕಾರರಿದ್ದಾರೆ, ಉತ್ತರಭಾರತದವರಿದ್ದಾರೆ, ತೆಲುಗು ತಮಿಳು ಭಾಷಿಕರಿದ್ದಾರೆ. ಒಟ್ಟು 2 ಲಕ್ಷ ಮತದಾರರಿರೋ ಈ ಕ್ಷೇತ್ರದಲ್ಲಿ ಒಂದು ಲಕ್ಷದ 15 ಸಾವಿರ ಹಿಂದೂಗಳು,70 ಸಾವಿರ ಮುಸ್ಲಿಂ ಹಾಗೂ 10 ಸಾವಿರಕ್ಕೂ ಹೆಚ್ಚು ಕ್ರಿಶ್ಚಿಯನ್ಸ್ ಇದ್ದಾರೆ. ಇನ್ನು ಈ ಕ್ಷೇತ್ರ ಹಿಂದೂ ಮುಸ್ಲಿಂ ಕ್ರಿಷ್ಚಿಯನ್ ಸೌಹಾರ್ದತೆಗೆ ಹೆಸರಾಗಿದೆ. ಇಲ್ಲಿ ಶಾಂತಿ ಸುವ್ಯವಸ್ಥೆ ಇದೆ. ಒಂತರಹ ಜಾತ್ಯಾತೀತ ಕ್ಷೇತ್ರ ಅನ್ನಬಹುದು ಆದ್ರೆ ಅಭಿವೃದ್ಧಿ ಆಗದೇ ಇಲ್ಲಿನ ಜನ ಹತಾಶರಾಗಿದ್ದಾರೆ.ಹಾಗಾಗಿ ಬದಲಾವಣೆಯನ್ನು ಬಯಸ್ತಿದ್ದಾರೆ.

 

ಕಳೆದ 10 ವರ್ಷಗಳಿಂದ ಕಾಂಗ್ರೆಸ್ ನ ರೋಷನ್ ಬೇಗ್ ಅವ್ರು ಇಲ್ಲಿ ಶಾಸಕರಾಗ ಸಚಿವರಾಗಿದ್ದಾರೆ. ಆದ್ರೂ ಇಲ್ಲಿ ಅಭಿವೃದ್ಧಿ ಅನ್ನೋದು ಆಗೇ ಇಲ್ಲ. ಆದ್ರೆ ಇನ್ನೂ ಕೂಡಾ ಇಲ್ಲಿನ ಜನ 10 ವರ್ಷಗಳ ಹಿಂದೆ ಬಿಜೆಪಿಯ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವ್ರು ಮಾಡಿರೋ ಭಿವೃದ್ಧಿ ಕೆಲ್ಸಗಳನ್ನೇ ಹೇಳ್ತಿರೋದು ನೋಡಿದ್ರೆ. ಈ ಬಾರಿ ಇಲ್ಲಿನ ಜನ ಸಚಿವರನ್ನು ಸೋಲಿಸಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವ್ರನ್ನು ಗೆಲ್ಲಿಸೋದು ಗ್ಯಾರಂಟಿ ಅನ್ನಿಸ್ತಿದೆ.

 

 

ಪ್ರತ್ಯುತ್ತರ ನೀಡಿ

Please enter your comment!
Please enter your name here