ಚುನಾವಣಾ ಕುರು”ಕ್ಷೇತ್ರ” 2018- ರಾಜರಾಜೇಶ್ವರಿ ನಗರ (R R Nagara)

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ

2018 ರ ಚುನಾವಣಾ ಕಣ ರಂಗೇರೋದಕ್ಕೆ ಸ್ಟಾರ್ಟ್ ಆಗ್ಬಿಟ್ಟಿದೆ. ಈಗಾಗಲೇ ರಾಜ್ಯ ರಾಜಧಾನಿ ಬೆಂಗಳೂರಿನ ಒಂದು ಕ್ಷೇತ್ರದ ಹೆಸರು ಎಲ್ಲರ ಬಾಯಲ್ಲೂ ಕೇಳಿ ಬರ್ತಿದೆ. ಈ  ಕ್ಷೇತ್ರದಿಂದ ಸ್ಪರ್ಧಿಸೋದಕ್ಕೆ ಘಟಾನುಘಟಿ ನಾಯಕರು ಟ್ರೈ ಮಾಡ್ತಿದ್ದಾರೆ…ಆ ಕ್ಷೇತ್ರ ಯಾವುದು ಅಂತಾ ಈಗಾಗಲೇ ನಿಮಗೂ ಗೊತ್ತಾಗಿರಬಹುದು ಯಸ್ ಅದು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ. ಇವತ್ತಿನ ಕುರುಕ್ಷೇತ್ರದಲ್ಲಿ ಆರ್ ಆರ್ ನಗರ ಕ್ಷೇತ್ರದ ಫುಲ್ ಡೀಟೇಲ್ಸ್ ಇಲ್ಲಿದೆ ನೋಡಿ.

ಬೆಂಗಳೂರಿನ ರಾಜರಾಜಶ್ವರಿ ನಗರ ಕ್ಷೇತ್ರ ಅಂದ್ರೆ ಬಹುಷಃ ಈಗ ಗೊತ್ತಿಲ್ಲದೇ ಇರೋರು ಯಾರೂ ಇರ್ಲಿಕ್ಕಿಲ್ಲ. ರಾಜಧಾನಿಯಲ್ಲಿರೋ ಈ ಕ್ಷೇತ್ರ ಚುನಾವಣಾ ಜಿದ್ದಾ ಜಿದ್ದಿನಿಂದಲೇ ವರ್ಲ್ಡ್ ಫೇಮಸ್. ಸಾಕಷ್ಟು ಸಿನಿಮಾ ತಾರೆಯರು, ರಾಜಕಾರಣಿಗಳು ಅಷ್ಟೇ ಅಲ್ಲ ಮೊದಲ ಬಾರಿಗೆ ಅಸೆಂಬ್ಲಿ ಎಲೆಕ್ಷನ್ ಗೆ ಸ್ಪರ್ಧಿಸೋದಕ್ಕೆ ಮುಂದಾಗಿರೋರು ಕೂಡಾ ಇದೇ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ.ಹಾಗಿದ್ರೆ ಇಷ್ಟೊಂದು ಆಕಾಂಕ್ಷಿಗಳು ಈ ಕ್ಷೇತ್ರದ ಮೇಲೆ ಒಲವು ತೋರ್ಸ್ತಿರೋದಕ್ಕೆ ಏನು ಕಾರಣ? ಈ ಕ್ಷೇತ್ರದಲ್ಲಿ ಅಂತದ್ದೇನಿದೆ ಅನ್ನೋ ಕುತೂಹಲ ನಿಮಗೂ ಇರಬಹುದು. ಅಷ್ಟೇ ಅಲ್ಲ ಬಿಜೆಪಿ ಜೆಡಿಎಸ್, ಕಾಂಗ್ರೆಸ್ ಸೇರಿದಂತೆ ಅದೃಷ್ಟ ಪರೀಕ್ಷೆಗೆ ಇಳಿಯೋ ಆಕಾಂಕ್ಷಿಗಳ್ಯಾರ್ಯಾರು ಅನ್ನೋದನ್ನೂ ಹೇಳ್ತೀವಿ..ಆದ್ರೆ ಅದಕ್ಕೂ ಮೊದಲು 2013ರ ಚುನಾವಣೆಯಲ್ಲಿ ಈ ಕ್ಷೇತ್ರದ ಪರಿಸ್ಥಿತಿ ಹೇಗಿತ್ತು ಇಲ್ಲಿ ಯಾರ್ಯಾರು ನಿಂತಿದ್ರು. ಎಷ್ಟೆಷ್ಟು ಮತ ಪಡೆದ್ರು ಅನ್ನೋದನ್ನು ನೋಡೋಣ

2013 ಮತಬರಹ

 

2013 ರಲ್ಲಿ ನಡೆದ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ನಿಂದ ನಿಂತಿದ್ದ ಮುನಿರತ್ನ 71,064 ಮತಗಳನ್ನು ಪಡೆಯೋ ಮೂಲಕ ಗೆದ್ದು ಶಾಸಕರಾದ್ರು. ಇಲ್ಲಿ ಮುನಿರತ್ನ ಗೆ ಫೈಟ್ ಕೊಟ್ಟ ಜೆಡಿಎಸ್ ನ ತಿಮ್ಮನಂಜಯ್ಯ 52251 ಮತ ಪಡೆಯೋ ಮೂಲಕ 2 ನೇ ಸ್ಥಾನ ಗಳಿಸಿದ್ರು. ಬಿಜೆಪಿಯ ಎಂ ಶ್ರೀನಿವಾಸ್ 50726 ಮತ ಪಡೆಯೋ ಮೂಲಕ 3 ನೇ ಸ್ಥಾನಕ್ಕೆಕುಸಿದ್ರು..

ಈಗ ಆರ್ ಆರ್ ನಗರದ ಪರಿಸ್ಥಿತಿ ಆ ರೀತಿ ಇಲ್ಲ. ಎಲ್ಲವೂ ಬದಲಾಗಿದೆ.ಜತೆಗೆ ಸಿನಿಮಾ ನಟ ನಟಿಯರ ಕಣ್ಣು ಕೂಡಾ ಇದೇ ಕ್ಷೇತ್ರದ ಮೇಲೆ ಬಿದ್ದಿದೆ…ಹಾಗಿದ್ರೆ ಬನ್ನಿ ಇಲ್ಲಿಂದ ನಿಲ್ಲೋದಕ್ಕೆ ಒಲವು ತೋರ್ತಿರೋರು ಯಾರ್ಯಾರು ಯಾವ ಪಕ್ಷದಿಂದ ನಿಲ್ಲೋದಕ್ಕೆ ರೆಡಿ ಆಗ್ತಿದ್ದಾರೆ ಅನ್ನೋದನ್ನು ನೋಡೋಣ

 

ಕೈ ಟಿಕೆಟ್ ಆಕಾಂಕ್ಷಿಗಳ

 

ಮುನಿರತ್ನ

ಈ ಬಾರಿ ಆರ್ ಆರ್ ನಗರದಿಂದ ಎಲೆಕ್ಷನ್ ಗೆ ನಿಲ್ಲೋದಕ್ಕೆ ಕಾಂಗ್ರೆಸ್ ನಲ್ಲಿ ಅಷ್ಟೊಂದು ದೊಡ್ಡ ಫೈಟ್ ಏನಿಲ್ಲ. ಹಾಲಿ ಶಾಸಕರಾಗಿರೋ ಮುನಿರತ್ನ ಅವ್ರಿಗೆ ಮತ್ತೆ ಕೈ ಟಿಕೆಟ್ ಸಿಗತ್ತೆ. ಆದ್ರೆ ಇಲ್ಲೊಂದು ಟ್ವಿಸ್ಟ್ ಇದೇ. ಮುನಿರತ್ನ ಜೆಡಿಎಸ್ ಗೆ ಹೋಗೋ ಚಾನ್ಸ್ ಇದೆ ಅನ್ನೋ ಮಾತು ಕೇಳಿ ಬಂದಿದೆ. ಈಗಾಗಲೇ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಅವ್ರ ಮಗ ನಿಖಿಲ್ ಕುಮಾರಸ್ವಾಮಿಗೆ ತಮ್ಮ ಕುರುಕ್ಷೇತ್ರ ಸಿನಿಮಾದಲ್ಲಿ ಅವಕಾಶ ಕೊಡೋ ಮೂಲಕ ಅವರಿಗೆ ಆಪ್ತರಾಗೋ ಪ್ರಯತ್ನವನ್ನು ಮಾಡ್ತಿದ್ದಾರೆ. ಒಂದ್ವೇಳೆ ಹಾಗಿಲ್ಲ ಅಂತಾದ್ರೂ ಕುಮಾರ ಸ್ವಾಮಿ ಅವ್ರ ಸಪೋರ್ಟ್ ಪಡೆದುಕೊಳ್ಳೋದಕ್ಕೂ ಮುನಿರತ್ನ ಟ್ರೈ ಮಾಡ್ತಿದ್ದಾರೆ ಅನ್ನೋದು ನಿಜ.

  1. ಹನುಮಂತರಾಯಪ್ಪ,

ಮುನಿರತ್ನ ಒಂದ್ವೇಳೆ ಜೆಡಿಎಸ್ ಗೆ ಹೋದ್ರು ಅಂತಾದ್ರೆ ಅಥವಾ ಕೈ ಹೈಕಮಾಂಡ್ ಅವ್ರಿಗೆ ಟಿಕೋಟ್ ಕೊಟ್ಟಿಲ್ಲಾ ಅಂದ್ರೆ  ಅಧ್ಯಕ್ಷ ಹನುಮಂತರಾಯಪ್ಪ ಅವ್ರಿಗೆ ಟಿಕೆಟ್ ಸಿಗಬಹುದು. ಒಂದ್ವೇಳೆ ಕೈ ಟಿಕೆಟ್ ಸಿಕ್ಕಿಲಾಂದ್ರೆ ಹನುಮಂತರಾಯಪ್ಪ ಜೆಡಿಎಸ್ ನಿಂದ ಕಣಕ್ಕಿಳಿಯೋ ಸಾಧ್ಯತೆ ಕೂಡಾ ಇಲ್ಲದಿಲ್ಲ.

ಇನ್ನು ಬಿಜೆಪಿ ಬಗ್ಗೆ ಮಾತಾಡ್ಲೇ ಬೇಕು. ಯಾಕಂದ್ರೆ ಆರ್ ಆರ್ ನಗರ ಕ್ಷೇತ್ರಕ್ಕೆ ಅತೀ ಹೆಚ್ಚಿನ ಟಿಕೆಟ್ ಫೈಟ್ ಇರೋದೇ ಬಿಜೆಪಿ ಯಲ್ಲಿ. ಹಾಗಿದ್ರೆ ಆಕಾಂಕ್ಷಿಗಳ ಲಿಸ್ಟ್ ನಲ್ಲಿ ಯಾರ್ಯಾರಿದ್ದಾರೆ ನೋಡೋಣ

ಕಮಲ ಹಿಡಿಯೋರ್ಯಾರು

 

  1. ಜಿ.ಹೆಚ್ ರಾಮಚಂದ್ರ, ಮಾಜಿ ಕಾರ್ಪೋರೇಟರ್

ಯಸ್ ಈ ಬಾರಿ ರಾಜರಾಜೇಶ್ವರಿ ನಗರ ವಿಧಾನಭಾ ಕ್ಷೇತ್ರದ ಬಿಜೆಪಿಯ ಪ್ರಮುಖ ಟಿಕೆಟ್ ಆಕಾಂಕ್ಷಿಗಳಲ್ಲಿ ಕೇಳಿ ಬರ್ತಿರೋ ಮೊದಲ ಹೆಸರೇ ಜಿ ಹೆಚ್ ರಾಮಚಂದ್ರ ಅವ್ರದ್ದು. ಈ ಹಿಂದೆ ಕಾರ್ಪೋರೇಟರ್ ಆಗಿದ್ದ ಸಂದರ್ಭದಲ್ಲಿ ಮಾಡಿದ್ದ ಕೆಲಸಗಳೇ ಅವ್ರಿಗೆ ಬೆನ್ನೆಲುಬು. ಈಗಾಗಲೇ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿರೋ ರಾಮಚಂದ್ರ ಅವ್ರಿಗೆ ಈ ಬಾರಿ ಟಿಕೆಟ್ ಕನ್ಫರ್ಮ್ ಆದ್ರೆ ಅವ್ರೇ ರಾಜರಾಜೇಶ್ವರಿ ನಗರದ ಎಂಎಲ್ಎ ಅಂತಾ ಅಲ್ಲಿನ ಜನರೇ ಹೇಳ್ತಿದ್ದಾರೆ.

 

ಅಮೂಲ್ಯ, ನಟಿ ಹಾಗೂ ಜಿ.ಹೆಚ್ ರಾಮಚಂದ್ರ ಅವ್ರ ಸೊಸೆ

ಇನ್ನು ಇಲ್ಲಿ ಕೇಳಿ ಬರ್ತಿರೋ ಮತ್ತೊಂದು ಹೆಸರು ರಾಮಚಂದ್ರ ಅವ್ರ ಸೊಸೆ ಹಾಗೂ ನಟಿ ಅಮೂಲ್ಯ ಅವ್ರದ್ದು. ರಾಮಚಂದ್ರ ಅವ್ರ ಪುತ್ರ ಜಗದೀಶ್ ಅವ್ರನ್ನು ಮದುವೆ ಆದ ನಂತರ ಅಮೂಲ್ಯ ಹಾಗೂ ಜಗದೀಶ್ ದಂಪತಿ ಸಾಮಾಜಿಕ ಕಾರ್ಯಗಳಲ್ಲಿ ನಿರತರಾಗಿದ್ದಾರೆ. ಪರಿಸರ ಸಂರಕ್ಷಣೆ, ಸೇರದಂತೆ ನಾನಾ ರೀತಿಯ ಸಮಾಜ ಪರ ಕೆಲ್ಸಗಳನ್ನು ಮಾಡ್ಕೊಂಡು ಬರ್ತಿದ್ದಾರೆ. ಹಾಗಾಗಿ ಅಮೂಲ್ಯ ನಿಂತ್ರೂ ನಿಲ್ಲಬಹುದು ಇಲ್ಲಾಂದ್ರೆ ತಮ್ಮ ಮಾವನಿಗೆ ಸಪೋರ್ಟ್ ಕೂಡಾ ಮಾಡಬಹುದು

ಶಿಲ್ಪಾ ಗಣೇಶ್, ಬಿಜೆಪಿ ಮುಖಂಡರು, ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ

ಬಿಜೆಪಿ ಆಕಾಂಕ್ಷಿಗಳ ಪಟ್ಟಿಯಲ್ಲಿರೋ ಇನ್ನೊಂದು ಹೆಸರು ಅಂದ್ರೆ ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ ಶಿಲ್ಪಾ ಗಣೇಶ್. ಬಿಜೆಪಿ ಮಹಿಳಾ ಮೋರ್ಛಾದ ಪ್ರಧಾನಕಾರ್ಯದರ್ಶಿ ಶಿಲ್ಪಾ ಗಣೇಶ್ ಈಗಾಗಲೇ ಆರ್ ಆರ್ ನಗರದಲ್ಲಿ ಕಾರ್ಯಕ್ರಮಗಳನ್ನು ಮಾಡ್ತಾ ಜನರ ಮನಸ್ಸು ಗೆಲ್ಲೋದಿಕ್ಕೆ ರೆಡಿ ಆಗ್ತಿದ್ದಾರೆ. ಬಿಜೆಪಿ ಕೊನೆ ಘಳಿಗೆಯಲ್ಲಿ ಶಿಲ್ಪಾ ಗಣೇಶ್ ಅವ್ರಿಗೆ ಬಿ ಫಾರ್ಮ್ ಕೊಡೋ ಚಾನ್ಸ್ ಕೂಡಾ ಇಲ್ಲ ಅಂತಾ ಹೇಳಕ್ಕಾಗಲ್ಲ

ಮುನಿರಾಜು ಗೌಡ, ರಾಜ್ಯ ಬಿಜೆಪಿ ಕಾರ್ಯದರ್ಶಿ

ಇನ್ನು ಬಿಜೆಪಿಯ ರಾಜ್ಯ ಕಾರ್ಯದರ್ಶಿ ಮುನಿರಾಜು ಗೌಡ ಕೂಡಾ ಈ ಕ್ಷೇತ್ರದ ಪ್ರಬಲ ಆಕಾಂಕ್ಷಿ. ಬಿಜೆಪಿಯ ನಾಯಕರ ಜತೆ ನಿಕಟ ಸಂಪರ್ಖ ಹೊಂದಿರೋ ಕಾರಣ ಬಿಜೆಪಿ ಇವ್ರಿಗೆ ಮಣೆ ಹಾಕೋ ಸಾಧ್ಯತೆ ಕೂಡಾ ಇಲ್ಲದಿಲ್ಲ.

 

ರಕ್ಷಿತಾ ಪ್ರೇಮ್, ನಟಿ ನಿರ್ಮಾಪಕಿ

ನ್ನುಳಿದಂತೆ ನಟಿ ನಿರ್ಮಾಪಕಿ,ನಿರ್ದೇಶಕ ಪ್ರೇಮ್ ಪತ್ನಿ ರಕ್ಷಿತಾ ಪ್ರೇಮ್ ಕೂಡಾ ಬಿಜೆಪಿಯಿಂದ ಆರ್ ಆರ್ ನಗರದಲ್ಲಿ ಕಣಕ್ಕಿಳಿಯೋದಕ್ಕೆ ಪ್ರಯತ್ನಿಸ್ತಿದ್ದಾರೆ. ಈ ಸ್ಟಾರ್ ದಂಪತಿಗೆ ಚಿತ್ರರಂಗದಲ್ಲಿ ಇರೋ ಖ್ಯಾತಿಯನ್ನು ಎನ್ ಕ್ಯಾಶ್ ಮಾಡೋದಕ್ಕೇನಾದ್ರೂ ಬಿಜೆಪಿ ಪ್ರಯತ್ನ ಪಡತ್ತೆ ಅಂತಾದ್ರೆ ಖಂಡಿತವಾಗಿಯೂ ರಕ್ಷಿತಾ ಪ್ರೇಮ್ ಗೆ ಇಲ್ಲಿಂದ ಟಿಕೆಟ್ ಸಿಗಹುದು

ಶಾಂಭವಿ.ಎಸ್ ಎಂ ಕೃಷ್ಣ ಪುತ್ರಿ

ಇನ್ನು ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದ ಹಿರಿಯ ಮುತ್ಸದ್ದಿ, ರಾಜಕಾರಣಿ ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವ್ರ ಪುತ್ರಿ ಶಾಂಭವಿ ಕೂಡೇ ಇದೇ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲಿ ಒಬ್ರು.

ಬಿಜೆಪಿಯಲ್ಲಂತೂ ಚುನಾವಣೆಗೂ ಮೊದಲೇ ಆರ್ ಆರ್ ನಗರದಲ್ಲಿ ಯಾರಿಗೆ ಟಿಕೆಟ್ ಕೊಡಬೇಕು ಅನ್ನೋದಕ್ಕೇನೆ ಸ್ಪೆಶಲ್ ವೋಟಿಂಗ್ ನಡೆಸಬೇಕೇನೋ ಅನ್ನೋ ಸ್ಥಿತಿ ಇರೋದು ಸುಳ್ಳಲ್ಲ.

 

ದಳಪತಿಗಳ್ಯಾರು

ಪ್ರಜ್ವಲ್ ರೇವಣ್ಣ, ಜೆಡಿಎಸ್ ಪ್ರಧಾನ ಕಾರ್ಯದರ್ಶಿ

ಆರ್ ಆರ್ ನಗರದಲ್ಲಿ ಈಗ ದೊಡ್ಡ ಮಟ್ಟದಲ್ಲಿ ಜೆಡಿಎಸ್ ಕಡೆಯಿಂದ ಸೌಂಡ್ ಮಾಡ್ತಿರೋರು ಯಾರು ಅಂದ್ರೆ ಅದು ಹೆಚ್ ಡಿ ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ. ಈ ಬಾರಿ ಅಂತೂ ಈ ಕ್ಷೇತ್ರದಲ್ ನಿಲ್ಲಲೇ ಬೇಕು ಅನ್ನೋ ಜಿದ್ದಿಗೆ ಬಿದ್ದಂತೆ ಪ್ರಜ್ವಲ್ ಕ್ಷೇತ್ರದಲ್ಲಿ ಓಡಾಡ್ತಿದ್ದಾರೆ.ಏನೇನೋ ಸ್ಟೇಟ್ ಮೆಂಟ್ ಕೊಟ್ಟು ದೇವೇಗೌಡ್ರಿಂದ ಬುದ್ದಿ ಮಾತು ಹೇಳಿಸಿಕೊಂಡಿದ್ದ ಪ್ರಜ್ವಲ್ ಅವ್ರಿಗೆ ಇದೀಗ ಜೆಡಿಎಸ್ ವರಿಷ್ಠರು ಪ್ರಧಾನ ಕಾರ್ಯದರ್ಶಿ ಹುದ್ದೆ ಕೂಡಾ ನೀಡಿರೋದ್ರಿಂದ ಪ್ರಜ್ವಲ್ ಇಲ್ಲಿಂದ ಕಣಕ್ಕಿಳಿಯೋದು ಗ್ಯಾರಂಟಿ

 

ಲಗ್ಗೆರೆ ನಾರಾಯಣ ಸ್ವಾಮಿ, ಜೆಡಿಎಸ್ ನಾಯಕರು

ಪ್ರಜ್ವಲ್ ರೇವಣ್ಣ ಅವ್ರ ಹೆಸರು ಈ ಕ್ಷೇತ್ರದಲ್ಲಿ ಕೇಳಿ ಬರ್ತಿದ್ರೂ ಕೂಡಾ ಅಲ್ಲಿನ ಜೆಡಿಎಸ್ ನಾಯಕರಾಗಿರೋ ಲಗ್ಗೆರೆ ನಾರಾಯಣ ಸ್ವಾಮಿ ಅವರು ಕೂಡಾ ಇದೇ ಕ್ಷೇತ್ರದ ಟಿಕೆಟ್ ಆಕಾಂಕ್ಷಿ. ಒಂದ್ವೇಳೆ ಪ್ರಜ್ವಲ್ ಗೆ ಇಲ್ಲಿಂದ ಟಿಕೆಟ್ ಸಿಕ್ಕಿಲ್ಲ ಅಂದ್ರೆ ನಾರಾಯಣ ಸ್ವಾಮಿಗೆ ಜೆಡಿಎಸ್ ಟಿಕೆಟ್ ಕನ್ಫರ್ಮ್.

ಉಪ್ಪಿ ರಾಜಕೀಯ

ಹೊಸ ಪಕ್ಷ ಸ್ಥಾಪಿಸಿರೋ  ರಿಯಲ್ ಸ್ಚಾರ್ ಉಪೇಂದ್ರ ಅವ್ರಿಗೂ ಕೂಡಾ ಈ ಕ್ಶೇತ್ರದ ಮೇಲೆ ಒಲವಿದೆ. ಒಂದ್ವೇಳೆ ತಾವು ನಿಲ್ಲದೇ ಇದ್ರೂ ಕೂಡಾ ತಮ್ಮ ಪತ್ನಿ ಪ್ರಿಯಾಂಕ ಉಪೇಂದ್ರ ಅವ್ರನ್ನು ಕಣಕ್ಕಿಳಿಸೋದಕ್ಕೆ ಉಪ್ಪಿ ಪ್ಲಾನ್ ಮಾಡ್ಕೊಂಡಿದ್ದಾರೆ…ಕರ್ನಾಟಕ ಪ್ರಜ್ನಾವಂತ ಜನತಾ ಪಕ್ಷದ ಮುಖಾಂತರ ಉಪ್ಪಿ ಅಥವಾ ಪ್ರಿಯಾಂಕ ಉಪೇಂದ್ರ ಇಲ್ಲಿಂದ ನಿಲ್ಲೊಂದು ಖಚಿತ

 

ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ ರಾಜ ರಾಜೇಶ್ವರಿ ನಗರ ಕ್ಷೇತ್ರ ಈ ಬಾರಿ ಆಕಾಂಕ್ಷಿಗಳ ಫೈಟ್ ನಿಂದಾಗೇ ಹೆಸರು ಮಾಡ್ತಿದೆ.ಯಾರ್ಯಾರು ಯಾವ ಯಾವ ಪಕ್ಷದಿಂದ ಕ್ಯಾಂಡಿಡೇಟ್ ಆಗ್ತಾರೆ ಅನ್ನೋದೆ ಇಲ್ಲಿ ದೊಡ್ಡ ಹೈಪ್ ಕ್ರಿಯೇಟ್ ಆಗೋದಕ್ಕೆ ಕಾರಣವಾಗಿದೆ.ಯಾರು ಗೆಲ್ಲ ಬಹುದು ಅನ್ನೋದು ಟಿಕೆಟ್ ಕೋಡೋದ್ರ ಆಧಾರದ ಮೇಲೆ ನಿಂತಿದೆ.

1 ಕಾಮೆಂಟ್

ಪ್ರತ್ಯುತ್ತರ ನೀಡಿ

Please enter your comment!
Please enter your name here