ಎಲೆಕ್ಷನ್​ ಎಫೆಕ್ಟ್​- ಪ್ರಯಾಣಿಕರಿಗೆ ಬಸ್ ಇಲ್ಲದೇ ಪರದಾಟ!

 

ad


ಪ್ರಯಾಣಿಕರಿಗೆ ಕರ್ನಾಟಕ ಕುರುಕ್ಷೇತ್ರದ ಎಫೆಕ್ಟ್​ ತಟ್ಟಲಿದೆ. ಚುನಾವಣಾ ಕಾರ್ಯಕ್ಕೆ ಕೆಎಸ್​ಆರ್​​ಟಿಸಿ ಮತ್ತು ಬಿಎಂಟಿಸಿಯಿಂದ ಮೂರು ಸಾವಿರಕ್ಕೂ ಹೆಚ್ಚು ಬಸ್​ಗಳನ್ನು ಬಳಸಿಕೊಂಡಿದ್ದು ಬಸ್​ ಸಂಚಾರದಲ್ಲಿ ಭಾರೀ ವ್ಯತ್ಯಯ ಆಗಲಿದೆ. ರಾಜ್ಯದಲ್ಲಿ 8796 ಕೆಎಸ್ಆರ್ಟಿಸಿ ಬಸ್ಸುಗಳಿದ್ದು ಅದ್ರಲ್ಲಿ ಎಲೆಕ್ಷನ್ ಡ್ಯೂಟಿಗಾಗಿ 3900 ರಿಂದ 4000 ಬಸ್ಸುಗಳನ್ನ ನಿಯೋಜಿಸಲಾಗಿದೆ. ಅಲ್ಲದೇ ಚುನಾವಣಾ ಕರ್ತವ್ಯಕ್ಕೆ 40 ಸಾವಿರ ಖಾಸಗಿ, 30 ಸಾವಿರ ಸರ್ಕಾರಿ ವಾಹನ ಸೇರಿ 74 ಸಾವಿರ ವಿವಿಧ ವಾಹನಗಳು ಬಳಕೆ ಆಗ್ತಿವೆ.

 

ಇತ್ತ ಬೆಂಗಳೂರಿನಲ್ಲೂ 1500ಕ್ಕೂ ಹೆಚ್ಚು ಬಿಎಂಟಿಸಿ ಬಸ್​ಗಳನ್ನು ಚುನಾವಣಾ ಕಾರ್ಯಕ್ಕೆ ಬಳಸಿಕೊಳ್ಳಲಾಗ್ತಿದೆ. ಇದ್ರಿಂದ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್​ಗಳ ಸಂಚಾರ ವ್ಯತ್ಯಯವಾಗಲಿದೆ. ಹೀಗಾಗಿ ಮತದಾನಕ್ಕಾಗಿ ಬೆಂಗಳೂರಿನಿಂದ ಹಳ್ಳಿಗಳಿಗೆ ತೆರಳುವ ಮಂದಿಗೆ ಸಮಸ್ಯೆ ಉಂಟಾಗಲಿದೆ. ಈ ಮಧ್ಯೆ ಕೆಎಸ್​ಆರ್​ಟಿಸಿ ಮತ್ತು ಬಿಎಂಟಿಸಿ ಬಸ್​ಗಳ ಸಂಚಾರ ವ್ಯತ್ಯಯವನ್ನೇ ಲಾಭ ಮಾಡಿಕೊಂಡಿರುವ ಖಾಸಗಿ ಬಸ್​ಗಳ ಮಾಲಿಕರು ಪ್ರಯಾಣದರವನ್ನು ದುಪ್ಪಟ್ಟು ಮಾಡಿವೆ. ದೂರದ ಊರುಗಳಿಗೆ ಸಾಗುವ ಬಸ್​ಗಳಲ್ಲಂತೂ ಬುಕ್ಕಿಂಗ್​ ಮಾಡುವ ವೇಳೆಯೇ ದುಪ್ಪಟ್ಟು ದರ ವಸೂಲಿ ಮಾಡಲಾಗ್ತಿದೆ. ಸರ್ಕಾರಿ ಬಸ್​ಗಳ ಕೊರತೆ, ಖಾಸಗಿ ಬಸ್​ಗಳ ದುಬಾರಿ ಪ್ರಯಾಣ ದರದ ಹಿನ್ನೆಲೆಯಲ್ಲಿ ರೈಲುಗಳಿಗೆ ಪ್ರಯಾಣಿಕರು ಮುಗಿಬೀಳ್ತಿದ್ದಾರೆ. ಹೀಗಾಗಿ ಒಂದು ಸೀಟ್​ಗೆ 200ರಿಂದ 250 ಮಂದಿ ಮುಂಗಡ ಬುಕ್ಕಿಂಗ್​ ಮಾಡಿ ವೇಯ್ಟಿಂಗ್​ ಲಿಸ್ಟ್​ನಲ್ಲಿದ್ದಾರೆ.