ರಾಮನಗರದಲ್ಲಿ ಜೆಡಿಎಸ್​​-ಕಾಂಗ್ರೆಸ್​ ಬಿಗ್​ ಫೈಟ್​​!!

ಇನ್ನು ಎಲೆಕ್ಷನ್​ ಡೇಟ್​ ಫಿಕ್ಸ್ ಆಗಿಲ್ಲ ಆಗಲೇ ಎಲೆಕ್ಷನ್​ ಫೈಟ್​ ಶುರುವಾಗಿದ್ದು, ಅದರಲ್ಲೂ ರಾಮನಗರದಲ್ಲಂತೂ ಜೆಡಿಎಸ್​-ಕಾಂಗ್ರೆಸ್ ನಡುವೆ ಭಾರಿ ಜಟಾಪಟಿ ನಡೆದಿದೆ.

ad


ರಾಮನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್​ನ ಪುರಸಭೆ ಮಾಜಿ ಅಧ್ಯಕ್ಷ ಪುರುಷೋತ್ತಮ್​ ಮತ್ತು ಟೀಂ ಜೆಡಿಎಸ್​ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದೆ. ಇದನ್ನು ಖಂಡಿಸಿ ಇವತ್ತು ಮಾಗಡಿಯಲ್ಲಿ ಕಾಂಗ್ರೆಸ್​-ಜೆಡಿಎಸ್​ ಕಾರ್ಯಕರ್ತರ ಘರ್ಷಣೆ ನಡೆದಿದೆ. ಉಭಯ ಪಕ್ಷಗಳ ಕಾರ್ಯಕರ್ತರು ಪರಸ್ಪರ ಕಲ್ಲು ತೂರಾಟ ನಡೆಸಿದ್ದಾರೆ. ಇದ್ರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಮಾಗಡಿ ಪೊಲೀಸರು ಹರಸಾಹಸ ಪಟ್ರು. ಈ ವೇಳೆ ಹಲ್ಲೆ ಮಾಡಿರುವ ಆರೋಪಿಗಳನ್ನು ಬಂಧಿಸುವಂತೆ ಜೆಡಿಎಸ್​ ಕಾರ್ಯಕರ್ತರು ಆಗ್ರಹಿಸಿದ್ದಾರೆ.