ನಿಮ್ಮ ಬ್ಯಾಗ್​ನಲ್ಲಿ ಕ್ಯಾಶ್ ಇದೆಯಾ.. ಡ್ಯಾಶ್ ಬೋರ್ಡ್​​ನಲ್ಲಿ ಏನಿದೆ.. ಒಂದ್ಸಾರಿ ತೋರಿಸಿ ನೋಡೋಣ..ಡಿಕ್ಕಿ ಒಪೆನ್ ಮಾಡಿ ನೋಡೋಣ..

ನಿಮ್ಮ ಬ್ಯಾಗ್​ನಲ್ಲಿ ಕ್ಯಾಶ್ ಇದೆಯಾ.. ಡ್ಯಾಶ್ ಬೋರ್ಡ್​​ನಲ್ಲಿ ಏನಿದೆ.. ಒಂದ್ಸಾರಿ ತೋರಿಸಿ ನೋಡೋಣ.. ಡಿಕ್ಕಿ ಒಪೆನ್ ಮಾಡಿ ನೋಡೋಣ.. ಇದು ಎಲೆಕ್ಷನ್ ಆಫೀಸರ್​ಗಳ ತಪಾಸಣಾ ಕಾರ್ಯ ವೈಖರಿ.. ಮಲೆನಾಡಿನಲ್ಲಿ ಹಣ ಮತ್ತು ಮದ್ಯದ ಹೊಳೆ ಹರಿಯುತ್ತಿರುವ ಬೆನ್ನಲ್ಲೇ ಜಿಲ್ಲೆಯಾಧ್ಯಂತ ಕಟ್ಟುನಿಟ್ಟಾಗಿ ತಪಾಸಾಣ ಕಾರ್ಯವನ್ನ ಹಗಲು ರಾತ್ರಿ ಮಾಡಲಾಗುತ್ತಿದೆ.

adಎಂಆರ್​ಎಸ್ ಸರ್ಕಲ್, ತೀರ್ಥಹಳ್ಳಿ ರೋಡ್, ಸಾಗರ ರಸ್ತೆ ಚೆಕ್​ಪೋಸ್ಟ್, ಬಾರಂದೂರು ಚೆಕ್​ಪೋಸ್ಟ್​, ಮಡಿಕೆ ಚೀಲೂರು ಚೆಕ್ ಪೋಸ್ಟ್, ಶಿಕಾರಿಪುರ, ಸೊರಬ ಸೇರಿದಂತೆ ಇತರ ಕಡೆಯೂ ಚುನಾವಣಾಧಿಕಾರಿಗಳು ಮತ್ತು ಸಿಆರ್​ಪಿಎಫ್ ಯೋಧರು ಕಣ್ಣಲ್ಲಿ ಕಣ್ಣಿಟ್ಟು ತಪಾಸಣೆ ಮಾಡ್ತಾ ಇದಾರೆ. ಈ ವೇಳೆ ಕಾರ್ ತಪಾಸಣೆ ಮಾಡೋಕೂ ಮುನ್ನ ಕ್ಯಾಶ್ ಇದೆಯಾ.. ಬ್ಯಾಗ್​ನಲ್ಲಿ ದುಡ್ಡಿನ ಕಂತೆಯೇನಾದ್ರೂ ಇದೆಯಾ.. ಅಂತ ಕೇಳಿದ್ರು ಸಾಮಾನ್ಯ ಜನ್ರು ನಗು ನಗುತ್ತಲೇ ಇದ್ರೆ ನಮಗೂ ಸ್ವಲ್ಪ ಕೊಡಿ ಅಂತ ಹೇಳುವುದು ಉಂಟು.. ಮತ್ತೊಬ್ಬರು ಬ್ಯಾಗ್ ಇದೆ.. ಅದರಲ್ಲಿ ಕ್ಯಾಶ್ ಇಲ್ಲ ಸರ್ ಅಂತ ನಗು ನಗುತ್ತಲೇ ಉತ್ತರ ಕೊಟ್ಟು ಹೋಗ್ತಾರೆ.

ಮತ್ತೆ ಕೆಲವರು ಗಾಬರಿಯಾಗಿ… ಎಂಥ ಕ್ಯಾಶ್ ಸರ್.. ಎನ್ನುವವರೂ ಇದಾರೆ. ಅದೇನೆ ಇದ್ರು ಶಿವಮೊಗ್ಗ ಜಿಲ್ಲೆಯಲ್ಲಿ ಈಗಾಗಲೇ ಅಪಾರ ಪ್ರಮಾಣದಲ್ಲಿ ನಗದು ಮತ್ತು ಮದ್ಯ ಪತ್ತೆಯಾಗಿದ್ದು, ತಪಾಸಣಾ ಕಾರ್ಯ ಮತ್ತಷ್ಟು ಬಿಗಿಗೊಳಿಸಲಾಗಿದೆ. ಗ್ರಾಹಕರು ಮಾತ್ರ ಪ್ರಯಾಣ ಮಾಡಬೇಕು ಅಷ್ಟೇ.. ತಪಾಸಣೆ ವೇಳೆ ಸ್ವಲ್ಪ ತೊಂದರೆಯಾದ್ರೂ ಚುನಾವಣೆ ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಅತ್ಯಗತ್ಯ ಅನ್ನೋದು ಚುನಾವಣೆ ಅಧಿಕಾರಿಗಳ ಮಾತು. ಅದೇನೇ ಇರಲಿ ಚುನಾವಣಾಧಿಕಾರಿಗಳ ಈ ಕಾರ್ಯ ನಿಜಕ್ಕೂ ಶ್ಲಾಘನೀಯ.