ಚುನಾವಣೆ 2018 – ತೇರದಾಳ

ಬಾಗಲಕೋಟೆ ಜಿಲ್ಲೆಯ ತೇರದಾಳ ವಿಧಾನಸಭಾ ಕ್ಷೇತ್ರ

ನಾವು ಕುರುಕ್ಷೇತ್ರದಲ್ಲಿ ಇವತ್ತು ಹೇಳ್ತಿರೋ ಮತ್ತೊಂದು ವಿಧಾನಸಭಾ ಕ್ಷೇತ್ರ ಅಂದ್ರೆ ಉತ್ತರ ಕರ್ನಾಟಕದ 17 ಜಿಲ್ಲೆಗಳ 96 ವಿಧಾನಸಭಾ ಕ್ಷೇತ್ರಗಳ ಮಧ್ಯಭಾಗದಲ್ಲಿರೋ ಕ್ಷೇತ್ರ. ರಾಜ್ಯ ಹಾಗೂ ರಾಷ್ಚ್ರ ರಾಜಕಾರಣದಲ್ಲಿ ಗಮನ ಸೆಳೆದಿರೋ ಕ್ಷೇತ್ರ. ರಾಜಕೀಯ ನಿಷ್ಣಾತರ ಪ್ರಕಾರ ಹೇಳೋದಾದ್ರೆ ಉತ್ತರ ಕರ್ನಾಟಕದ ಮತ ಬೇಟೆಗೆ ಸೂಕ್ತವಾಗಿರೋ ಕ್ಷೇತ್ರ. ಬಿಜೆಪಿಯ ಭದ್ರಕೋಟೆಯಾಗಿದ್ದ ಕ್ಷೇತ್ರ. ಅದ್ಯಾವುದು ಅಂದ್ರೆ ಈ ಬಾರಿಯ ಚುನಾವಣಾ ಜಿದ್ದಾ ಜಿದ್ದಿಗೆ ಕಾರಣವಾಗಿರೋ ಬಾಗಲಕೋಟೆ ಜಿಲ್ಲೆಯ ತೇರದಾಳ ವಿಧಾನಸಭಾ ಕ್ಷೇತ್ರ. ಇಲ್ಲಿನ ಚುನಾವಣಾ ಸ್ಥಿತಿ ಗಥಿಗಳೇನು ಅನ್ನೋದ್ರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

 ತೇರದಾಳ.

ಬಾಗಲಕೋಟೆ ಜಿಲ್ಲೆಯ ಪ್ರಮುಖ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು. ಈ ಹಿಂದೆ ಘಟಾನು ಘಟಿಗಳು ಇದೇ ಜಿಲ್ಲೆಯಿಂದ ನಿಂತು ಗೆದ್ದಿದ್ದಾರೆ…ಸೋತಿದ್ದಾರೆ ಕೂಡಾ. .ಎಸ್ ನಿಜಲಿಂಗಪ್ಪನವರು 1962 ರಲ್ಲಿ ಅವಿರೋಧವಾಗಿ ಇಲ್ಲಿಂದ ಆಯ್ಕೆಯಾಗಿದ್ರು.1991 ರಲ್ಲಿ ರಾಮಕೃಷ್ಣ ಹೆಗಡೆಯವ್ರು ಇಲ್ಲಿ ನಿಂತು ಸೋತಿದ್ರು. ಅದೂ ಕೂಡಾ ಹೆಗಡೆಯವ್ರು ಪ್ರಧಾನಿ ಅಭ್ಯರ್ಥಿ ಅಂತಾ ಬಿಂಬಿತರಾಗಿದ್ರೂ ಇಲ್ಲಿನ ಜನ ಅವ್ರ ಕೈ ಹಿಡಿದಿರಲಿಲ್ಲ. ಹಾಗಾಗಿ ರಾಷ್ಟ್ಪ ಮಟ್ಟದಲ್ಲಿ ಈ ಜಿಲ್ಲೆ ಗಮನ ಸೆಳೆದಿದೆ.ಇನ್ನು ಈ ಬಾರಿಯ ಅಸೆಂಬ್ಲಿ ಎಲೆಕ್ಷನ್ ನಲ್ಲೂ ಕೂಡಾ ತೇರದಾಳ  ಸೆಂಟರ್ ಆಫ್ ಎಟ್ರಾಕ್ಷನ್ ಆಗಿದೆ. ಈಗಾಗಲೇ ರಾಜಕೀಯ ನೇತಾರರು ತೇರದಾಳದಿಂದ ಸ್ಪರ್ಧಿಸ್ತಾರೆ ಅನ್ನೋ ಮಾತೇ ಇಲ್ಲಿನ ಮಹತ್ವವನ್ನು ತೋರ್ಸತ್ತೆ.

ಈ ಕ್ಷೇತ್ರದ ಚುನಾವಣಾ ಲೆಕ್ಕಾಚಾರದ ಬಗ್ಗೆ ಹೇಳೋದಕ್ಕೂ ಮೊದಲು 2013ರ ಎಲೆಕ್ಷನ್ ರಿಸಲ್ಟ್ ಹೇಗಿತ್ತು ನೋಡೋಣ

 

2013ಮತಬರಹ

 

 

ಇದು ತೇರದಾಳ ಕ್ಷೇತ್ರದ 2013 ರ ಚುನಾವಣಾ ಫಲಿತಾಂಶ. ಕಾಂಗ್ರೆಸ್ ನಿಂದ ಕಣಕ್ಕಿಳಿದಿದ್ದ ಉಮಾಶ್ರಿ ಅವ್ರು ಇಲ್ಲಿ 70189 ಮತಗಳನ್ನು ಗಳಿಸೋ ಮೂಲಕ ಗೆದ್ದು ಶಾಸಕರಾದ್ರು. ಸಚಿವರೂ ಆದ್ರು. ಇನ್ನು ಪ್ರಬಲ ಪೈಪೊಟಿ ಕೊಟ್ಟ ಬಿಜೆಪಿಯ ಸಿದ್ದು ಸವದಿ ಕೇವಲ ಮೂರೂವರೆ ಸಾವಿರ ಕಡಿಮೆ ಮತಗಳನ್ನು ಅಂದ್ರೆ 67,590 ಮತ ಪಡೆಯೋ ಮೂಲಕ 2 ನೇ ಸ್ಥಾನಗಳಿಸಿದ್ರು, ಇನ್ನು ಕೆಜೆಪಿಯ ಬಸವರಾಜ್ ಬಾಳಿಕಾಯಿ 5582 ಮತಗಳನ್ನು ಗಳಿಸೋ ಮೂಲಕ ಬಿಜೆಪಿ ಸೋಲಿಗೆ ಕಾರಣರಾದ್ರು. ಹಾಗೇ ,ಜೆಡಿಎಸ್ ನ ರಂಗನಗೌಡ ಪಾಟೀಲ್ ಹಾಗೇನೇ ಬಿಎಸ್ಆರ್ ನ ರಮೇಶ್ ಕೇಸರಕೊಪ್ಪ ನಂತರದ ಸ್ಥಾನ ಪಡೆದ್ರು.

ತೇರದಾಳ ಕ್ಷೇತ್ರದಲ್ಲಿ ಜಾತಿವಾರು ನೋಡೋದಾದ್ರೆ 45 ಸಾವಿರದಷ್ಟಿರೋ ನೇಕಾರರ ಮತಗಳೇ  ನಿರ್ಣಾಯಕ. ಇನ್ನುಳಿದಂತೆ ಲಿಂಗಾಯತ ಪಂಚಮಸಾಲಿಗಳು 18ಸಾವಿರದಷ್ಟಿದ್ರೆ ಜೈನ ಮತಗಳು 18ಸಾವಿರ ಇದೆ. ಮಾಳಿ,ಬಣಜಿಗ,ಗಾಣಿಗ, ಎಸ್ಸಿ, ಹಾಲುಮತದ ಮತಗಳು ತಲಾ 15 ರಿಂದ ಇಪ್ಪತ್ತು ಸಾವಿರದಷ್ಟಿದೆ. ಹಾಗಿದ್ರೆ ತೇರದಾಳ ಕ್ಷೇತ್ರ ಹೇಗಿದೆ?ಯಾಕೆ ಇಲ್ಲಿಂದ ಎಲೆಕ್ಷನ್ ಗೆ ನಿಲ್ಲೋದಕ್ಕೆ ನಾಯಕರು ಮುಂದಾಗ್ತಿದ್ದಾರೆ ಅನ್ನೋದನ್ನು ನೋಡ್ಲೇ ಬೇಕು..ಜತೆಗೆ ಕೈ, ಕಮಲ ಹಾಗೂ ತೆನೆ ಪಕ್ಷದಿಂದ ಯಾರ್ಯಾರು ಆಕಾಂಕ್ಷಿಗಳಿದ್ದಾರೆ? ಯಾರಿಗೆ ಟಿಕೆಟ್ ಸಿಗಬಹುದು ಅನ್ನೋದನ್ನು ನೋಡೋಣ

 

ಕೈ ಟಿಕೆಟ್ ಆಕಾಂಕ್ಷಿಗಳು

ಉಮಾಶ್ರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು

ಹಾಲಿ ಶಾಸಕರು ಹಾಗೂ ಸಚಿವರೂ ಆಗಿರೋ ಉಮಾಶ್ರಿ  ತೇರದಾಳ ಕ್ಷೇತ್ರದ ಕಾಂಗ್ರೆಸ್ ನ ಏಕೈಕ ಅಭ್ಯರ್ಥಿ .2008 ರಲ್ಲಿ ಬೆಂಗಳೂರಿನಿಂದ ಬಂದು ತೇರದಾಳ ಕ್ಷೇತ್ರದಲ್ಲಿ ನಿಂತು ಸೋತಿದ್ರು. ಆದ್ರೆ 2013 ರಲ್ಲಿ ಇಲ್ಲಿಂದ ಗೆದ್ದು ಸಚಿವರೂ ಆದ್ರು. ಆದ್ರೆ ಅದು ಅವ್ರ ಗೆಲುವು ಅನ್ನೋದಕ್ಕಿಂತ ಬಿಜೆಪಿ ಕೆಜೆಪಿ ಜಗಳ ಉಮಾಶ್ರಿ ಅವ್ರನ್ನು ಗೆಲ್ಲಿಸಿತ್ತು ಅನ್ನೋದು ನಿಜ.ಆದ್ರೆ ಈಗ ಪರಿಸ್ಥಿತಿ ಹಾಗಿಲ್ಲ ಕೆಜೆಪಿ ಬಿಜೆಪಿ ಒಂದಾಗಿದೆ. ಹಾಗಾಗಿ ಈ ಬಾರಿ ಉಮಾಶ್ರಿ ಈ ಕ್ಷೇತ್ರದಿಂದ ನಿಂತ್ರೆ ಗೆಲ್ತಾರ ಅನ್ನೋ  ಪ್ರಶ್ನೆ ನೇ ಕೇಳಿ ಬರ್ತಿದೆ ಹೊರತು ಉತ್ತರ ಸಿಕ್ತಿಲ್ಲ. ಇನ್ನು ಸಚಿವರಾದ ಮೇಲೆ ಉಮಾಶ್ರಿ ತಮ್ಮ ಕ್ಷೇತ್ರಕ್ಕೆ ಏನು ಮಾಡಿದ್ದಾರೆ ಅನ್ನೋದು ಕೌಂಟ್ ಆಗತ್ತೆ.. ಹಾಗಾಗಿ ಕಾಂಗ್ರೆಸ್ ನಾಯಕರು ಮತ್ತೆ ಉಮಾಶ್ರಿಗೆ ಮಣೆ ಹಾಕ್ತಾರಾ..ಅಥವಾ ಬೇರೆ ಯಾರನ್ನದ್ರು ನಿಲ್ಲಿಸ್ತಾರಾ ಕಾದು ನೋಡಬೇಕು. ಒಂದ್ವೇಳೆ  ಉಮಾಶ್ರಿ ಅವ್ರಿಗೆ ಬಿ ಫಾರ್ಮ್ ಕೊಟ್ರೆ ಅವ್ರು  ಗೆಲ್ಲೋ ಚಾನ್ಸಸ್ ಇಲ್ಲ  ಅಂತಿದ್ದಾರೆ ಇಲ್ಲಿನ ಜನ.

   

 

 

ಕಮಲ ಹಿಡಿಯೋರ್ಯಾರು

 

 

 

 

 

ಬಿಎಸ್ ಯಡಿಯೂರಪ್ಪ, ಮಾಜಿ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷ

ಈ ಬಾರಿ ತೇರದಾಳ ಕ್ಷೇತ್ರದಿಂದ ಮಾಜಿ ಸಿಎಂ ,ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವ್ರೇ ನಿಲ್ತಾರೆ ಅನ್ನೋ ಸುದ್ದಿ ದೊಡ್ಡದಾಗಿ ಕೇಳಿ ಬರ್ತಿದೆ. ಬಿಜೆಪಿ ಹೈಕಮಾಂಡ್ ಕೂಡಾ ಉತ್ತರ ಕರ್ನಾಟಕದ ಕ್ಶೇತ್ರದಿಂದ ಈ ಬಾರಿ ಚುನಾವಣೆಗೆ ನಿಲ್ಲಬೇಕು ಅನ್ನೋ ಸೂಚನೆಯನ್ನು ಬಿಎಸ್ ವೈ ಗೆ ಕೊಟ್ಟಿದೆ. ಹಾಗಾಗಿ ಯಡಿಯೂರಪ್ಪ ಖಾಸಗಿ ಸರ್ವೇಯನ್ನು ಕೂಡಾ ಮಾಡಿಸಿದ್ದಾರೆ. ಅದ್ರಲ್ಲಿ ತಮ್ಮ ಗೆಲುವು ನಿಶ್ಚಿತ ಅನ್ನೋದು ಗೊತ್ತಾಗ್ತಿದ್ದಂತೆ ತಮ್ಮ ಪುತ್ರನನ್ನು ಶಿಕಾರಿಪುರದಿಂದ ನಿಲ್ಲಿಸಿ ಯಡಿಯರೂಪ್ಪನವು ತಾವು ತೇರದಾಳದಿಂದ ನಿಲ್ಲೋದಕ್ಕೆ ಪ್ಲಾನ್ ಮಾಡಿದ್ದಾರೆ. ಆದ್ರೆ ಈಗಲೇ ಅದ್ರ ಬಗ್ಗೆ ಖಚಿತ ಪಡಿಸಿದ್ರೆ ಅವರ ವಿರುದ್ಧ ಅಪಪ್ರಚಾರ ಮಾಡೋ ಸಾಧ್ಯತೆಗಳಿವೆ ಅನ್ನೋ ಕಾರಣಕ್ಕೆ ಈಗಲೇ ಅದನ್ನು ಬಿಎಸ್ ವೈ ಅಧಿಕೃತವಾಗಿ ಹೇಳ್ತಿಲ್ಲ. ಇನ್ನು ಲಿಂಗಾಯತ ಪಂಚಮಸಾಲಿ ಮತಗಳು ಇಲ್ಲಿ ಸುಮಾರು 18000 ದಷ್ಟು ಇರೋ ಕಾರಣ, ಜತೆಗೆ ಯಡಿಯೂರಪ್ಪನವರಿಗೆ ಮಾಜಿ ಸಿಎಂ ಅನ್ನೋ ವರ್ಚಸ್ಸು ಇರೋ ಕಾರಣ ಅವ್ರು ಗೆಲ್ಲೋದ್ರಲ್ಲಿ ಅನುಮಾನವೇ ಇಲ್ಲ. ಜತೆಗೆ ಈ ಕ್ಷೇತ್ರದಲ್ಲಿ ಈ ಹಿಂದೆ ರಾಷ್ಟ್ರ ರಾಜಕಾರಣದಲ್ಲಿ ಹೆಸರು ಮಾಡಿದ ನೇತಾರರು ನಿಂತು ಗೆದ್ದ ಉದಾಹರಣಗಳಿರೋ ಕಾರಣ ಇದು ತುಂಬಾ ಯೋಗ ಇರೋ ಕ್ಷೇತ್ರ.ಜತೆಗೆ ಉತ್ತರ ಕರ್ನಾಟಕದ ಬಹುತೇಕ ವಿಧಾನಸಭಾ ಕ್ಷೇತ್ರಗಳ ಮೇಲೆ ಇದು ಪರಿಣಾಮವನ್ನು ಬೀರಿ ಅಲ್ಲೂ ಬಿಜೆಪಿ ಜಾಸ್ತಿ ಸೀಟ್ ಗಳಿಸಬಹುದು ಅನ್ನೋ ಲೆಕ್ಕಾಚಾರ ಕೂಡಾ ಇದೆ.

 

ಸಿದ್ದು ಸವದಿ, ಮಾಜಿ ಶಾಸಕ

ಬಿಎಸ್ ಯಡಿಯೂರಪ್ಪ ಈ ಕ್ಶೇತ್ರದಿಂದ ನಿಂತಿಲ್ಲ ಅಂದ್ರೆ ಮತ್ತಿನ ಚಾನ್ಸ್ ಇರೋದು  ಸಿದ್ದು ಸವದಿ ಅವರಿಗೆ. ಜಮಖಂಡಿ ಕ್ಷೇತ್ರದಿಂದ ನಿಂತು ಶಾಸಕರಾಗಿದ್ದ  ಸಿದ್ದು ಸವದಿ ಅವ್ರು ತೇರದಾಳ ಕ್ಷೇತ್ರವಾದ ನಂತರ  2008 ರಲ್ಲಿ ಇಲ್ಲಿಂದ ನಿಂತು ಗೆದ್ರು. ಆದ್ರೆ 2013 ರಲ್ಲಿ ಕೇವಲ ಮೂರುವರ ಸಾವಿರ ಮತಗಳ ಅಂತರದಲ್ಲಿ ಸೋಲು ಅನುಭವಿಸಿದ್ರು. ಕಾರಣ ಬಿಜೆಪಿ ಕೆಜೆಪಿ ನಡುವಿನ ಕಚ್ಚಾಟ. ಆದ್ರೆ ಈ ಬಾರಿ ಅಂತಹ ಕಚ್ಚಾಟ ಇಲ್ದೇ ಇರೋದ್ರಿಂದ ಸಿದ್ದು ಸವದಿಗೆ ಬಿಜೆಪಿ ಮಣೆ ಹಾಕೋ ಸಾಧ್ಯತೆ ಇದೆ.

 

ಬಸವರಾಜಿ ಬಾಳೀಕಾಯಿ

ಸಿದ್ದು ಸವದಿ ಅವ್ರ ಜತೆಗೆ ಟಿಕೆಟ್ ಆಕಾಂಕ್ಷಿಗಳ ರೇಸ್ ನಲ್ಲಿರೋದು  ಬಸವರಾಜ್ ಬಾಳೀಕಾಯಿ. ಬಿಜೆಪಿಯಿಂದ ಸಿಡಿದೆದ್ದು ಹೋಗಿ ಕೆಜೆಪಿ ಸೇರ್ಕೊಂಡಿದ್ದ ಬಾಳೀಕಾಯಿ ಅವ್ರು ತಾನು ಗೆಲ್ಲೋದಿಕ್ಕೆ ಸಾಧ್ಯವಾಗದೇ ಇದ್ರೂ ಕೂಡಾ ಬಿಜೆಪಿಯನ್ನು ಸೋಲಿಸೋದ್ರಲ್ಲಿ ಪ್ರಮುಖ ಪಾತ್ರ ವಹಿಸಿದ್ರು.ಹಾಗಾಗಿ  ಯಡಿಯೂರಪ್ಪ ಅವ್ರ ಜತೆಗೆ ಬಸವರಾಜ್ ಬಾಳೀಕಾಯಿ ಆಗ ಹೋಗಿದ್ದ ಕಾರಣ ರಾಜ್ಯಾಧ್ಯಕ್ಷರಾಗಿರೋ ಬಿಎಸ್ ವೈ ಒಂದ್ವೇಳೆ ತಾವು ನಿಲ್ಲದೇ ಹೋದಲ್ಲಿ ತಮ್ಮ ಆಪ್ತ ಬಾಳೀಕಾಯಿ ಗೆ ತೇರದಾಳ ಕ್ಷೇತ್ರದ ಟಕೆಟ್ ಕೊಟ್ರೂ ಆಶ್ಚರ್ಯ ಇಲ್ಲ.

 

 

ದಳಪತಿ ಗಳ್ಯಾರು

ರಂಗನಗೌಡ ಪಾಟೀಲ್, ಪರಾಜಿತ ಅಭ್ಯರ್ಥಿ

ಬಸವರಾಜ್ ಕೊಣ್ಣೂರು, ಪ್ರಬಲ ಆಕಾಂಕ್ಷಿ

 

ಕಳೆದ ಬಾರಿ ಜೆಡಿಎಸ್ ನಿಂದ ಕಣಕ್ಕಿಳಿದಿದ್ದ ರಂಗನಗೌಡ ಪಾಟೀಲ್ ಹೇಳಿಕೊಳ್ಳುವಂತಹ ಸಾಧನೆ ಏನೂ ಮಾಡಿಲ್ಲ. ಲಾಸ್ಟ್  ಎಲೆಕ್ಷನ್ ನಲ್ಲಿ ಅದು ಗೊತ್ತಾಗಿದೆ. ಹಾಗಾಗಿ ಅವ್ರ ಬದಲಿಗೆ ಈ ಬಾರಿ ಬಸವರಾಜ್ ಕೊಣ್ಣೂರು ಅವ್ರಿಗೆ ಜೆಡಿಎಸ್ ಮಣೆ ಹಾಕೋ ಸಾಧ್ಯತೆ ಇದೆ. ಈಗಾಗಲೇ ಬೂಸವರಾಜ್ ಕೊಣ್ಣೂರು ಪ್ರಚಾರವನ್ನು ಪ್ರಾರಂಭಿಸಿದ್ದಾರೆ.

ಇದು ತೇರದಾಳ ಕ್ಷೇತ್ರದಲ್ಲಿ ಸದ್ಯಕ್ಕಿರೋ ಪರಿಸ್ಥಿತಿ. ರಾಜ್ಯ ಸರ್ಕಾರ ಇತ್ತೀಚೆಗಷ್ಟೇ ನೇಕಾರರ ಸಾಲ ಮನ್ನಾ ಮಾಡಿರೋ ಕಾರಣ ಅದು ಉಮಾಶ್ರಿ ಅವರಿಗೆ ಪ್ಲಸ್ ಪಾಯಿಂಟ್ ಆಗಬಹುದು. ಆದ್ರೆ ಪಕ್ಷ ಸಂಘಟನೆ ಹಾಗೂ ಮತದಾರರನ್ನು ತಮ್ಮತ್ತ ಸೆಳೆಯಲು ಸಚಿವೆ ಉಮಾಶ್ರಿ  ಯಶಸ್ವಿಯಾಗಿದ್ದಾರಾ ಅಂದ್ರೆ ಜನ ಇಲ್ಲಾ ಅಂತಿದ್ದಾರೆ. ಇನ್ನು ಬಿಜೆಪಿಯಿಂದ ಯಡಿಯೂರಪ್ಪ ಹೆಸರು ಕೇಳಿ ಬಂದಿರೋದ್ರಿಂದ ಜನ ಅವ್ರತ್ತ ಮುಖ ಮಾಡ್ತಾರೆ ಅನ್ನೋದ್ರಲ್ಲಿ ಅನುಮಾನ ಇಲ್ಲ.. ಒಂದ್ವೇಳೆ ಸಿದ್ದು ಸವದಿಗೆ ಟಿಕೆಟ್ ಸಿಕ್ರೂ ಸವದಿ ಗೆಲ್ಲೋ ಚಾನ್ಸಸ್ ಜಾಸ್ತಿ ಇದೆ.

ಪಿನ್ ಪಾಯಿಂಟ್

ಒಟ್ನಲ್ಲಿ ತೇರದಾಳ ತಳಮಳ ಈಗಾಗಲೇ ಶುರುವಾಗಿದೆ. ಬಿಎಸ್ ಯಡಿಯೂರಪ್ಪ ಈ ಕ್ಷೇತ್ರದಿಂದ ಸ್ಪರ್ಧಿಸಿದ್ರೆ ಮಾತ್ರ ಅಲ್ಲ ಅವ್ರು ಇಲ್ಲಿಂದ ಸ್ಪರ್ಧಿಸದೇ ಇದ್ರೂ ಕೂಡಾ ಈ ಬಾರಿ ಉಮಾಶ್ರಿ ಗೆಲುವು ಇಲ್ಲಿ ಕಷ್ಚ. ತೇರದಾಳ ಕ್ಷೇತ್ರದ ಜನ ವಲಸಿಗರನ್ನು ಈ ಬಾರಿ ಗೆಲ್ಲಿಸಬಾರದು ಅನ್ನೋ ನಿರ್ಧಾರಕ್ಕೆ ಬಂದಿರೋದ್ರಿಂದ ಉಮಾಶ್ರಿ ಅವ್ರು ಸಚಿವರಾಗಿದ್ದಾರೆ ಅನ್ನೋ ಲೆಕ್ಕಾಚಾರ ಇಟ್ಕೊಂಡು ಮತ್ತೆ ಅವ್ರಿಗೆ ಟಿಕೆಟ್ ಕೊಟ್ರೆ ಈ ಕ್ಷೇತ್ರವನ್ನು ಕಾಂಗ್ರೆಸ್ ಮರೆತು ಬಿಡೋದು ಒಳ್ಳೇದು.

ಏನೇ ಆದ್ರೂ ಬಿಜೆಪಿ ಬೆಂಕಿ ಚೆಂಡು ಯಡಿಯೂರಪ್ಪ ತೇರದಾಳದಿಂದ ಸ್ಪರ್ಧಿಸ್ತಿದ್ದಾರೆ ಅನ್ನೋ ಸುದ್ದಿಯಿಂದ ಚುನಾವಣೆಗೂ ಮುನ್ನ ತೇರದಾಳ ಕ್ಷೇತ್ರ ಇಡೀ ರಾಜ್ಯದ ಗಮನ ಸೆಳೆದಿದೆ. ಮೂರೂ ರಾಜಕೀಯ ಪಕ್ಷಗಳು ಈ ಬಾರಿ ಪೈಪೋಟಿಗೆ ಬಿದ್ದಿರೋದ್ರಿಂದ ಮತದಾರರು ಯಾರ ಕೈ ಹಿಡಿತಾರೆ ಯಾರ ಕೈ ಬಿಡ್ತಾರೆ ಅನ್ನೋದನ್ನು ಕಾದು ನೋಡಬೇಕು.

 

 

ಪ್ರತ್ಯುತ್ತರ ನೀಡಿ

Please enter your comment!
Please enter your name here