ಚುನಾವಣೆ 2018 – ಮಂಡ್ಯ ಕ್ಷೇತ್ರ

ಮಂಡ್ಯ ವಿಧಾನಸಭಾ ಕ್ಷೇತ್ರ

ಕರ್ನಾಟಕ  2018 ರ ಅಸೆಂಬ್ಲಿ ಎಲೆಕ್ಷನ್ ರೆಡಿ ಆಗ್ತಿದೆ. ಈ ಬಾರಿ ಪಕ್ಷಗಳ ನಡುವಿನ ಪೈಪೋಟಿ ಹೆಂಗಿದೆ ಅಂದ್ರೆ ಎಂದೂ ಕಂಡರಿಯದ ಚುನಾವಣೆಗೆ ರಾಜ್ಯ  ಸಾಕ್ಷಿಯಾಗತ್ತೆ ಅನ್ನೋದ್ರಲ್ಲಿ ನೋ ಡೌಟ್. .ಯಾವ ಕ್ಷೇತ್ರದಲ್ಲಿ ಯಾರು ನಿಲ್ತಾರೆ?, ಯಾರು ಗೆಲ್ತಾರೆ?, ಯಾವ ಪಕ್ಷ ಅಧಿಕಾರಕ್ಕೆ ಬರತ್ತೆ? ಯಾರು ಮುಖ್ಯಮಂತ್ರಿ ಆಗ್ತಾರೆ?  ಅನ್ನೋ ಚರ್ಚೆ ಶುರುವಾಗಿವೆ…ಅಷ್ಟೇ ಅಲ್ಲ …ಈಗಿನ ಆಡಳಿತ ಪಕ್ಷ  5 ವರ್ಷಗಳಲ್ಲಿ ಮಾಡಿರೋ ಸಾಧನೆ, ಕೊಟ್ಟ ಭರವಸೆಗಳು ಈಡೇರಿಸೋದ್ರಲ್ಲಿ ಎಷ್ಟು ಯಶಸ್ವಿಯಾಗಿದೆ…ವಿರೋಧ ಪಕ್ಷಗಳು  5 ವರ್ಷಗಳಲ್ಲಿ ಏನೇನು ಮಾಡಿವೆ..ಅನ್ನೋ ಮಾತು ಕತೆಗಳೂ  ಹಳ್ಳಿ ಹಳ್ಳಿಯಲ್ಲೂ ನಡೀತಿವೆ… ರಾಜ್ಯದ ಮತದಾರ ಈ ಬಾರಿ  ಯಾರ ಕೈ ಹಿಡಿಬಹುದು, ಯಾರ ಕೈ ಬಿಡಬಹುದು ಅನ್ನೋ ಪ್ರಶ್ನೆಗೆ ಉತ್ತರ ಇಲ್ಲಿದೆ.

ಮಂಡ್ಯ .ಈ ಹೆಸರು ಇಂಡಿಯಾದಲ್ಲೇ ಫೇಮಸ್. ಹಲವಾರು ವಿಷಯಗಳಿಂದಾಗಿ ಹೆಸರು ಮಾಡಿರೋ ಕ್ಷೇತ್ರ. ಏಷ್ಯಾದಲ್ಲೇ ಪ್ರಪ್ರಥಮ ಶುಗರ್ ಫ್ಯಾಕ್ಟರಿ ಪ್ರಾರಂಭವಾಗಿದ್ದು ಇದೇ ಮಂಡ್ಯದಲ್ಲಿ. ಅಷ್ಟೇ ಅಲ್ಲ ರಾಜ್ಯದ ಮೊತ್ತ ಮೊದಲ ಡ್ಯಾಂ ನಿರ್ಮಾಣ ಆಗಿದ್ದೂ ಕೂಡಾ ಇಲ್ಲೇನೆ…ಇಲ್ಲಿನ ಜನರ ಮಾತಿನ ಶೈಲಿ, ಲೈಫ್ ಸ್ಟೈಲ್, ಹಳ್ಳಿಯ ಆ ಸೊಗಡು ಬೇರೆ ಭಾಗಕ್ಕಿಂತ ವಿಭಿನ್ನ.  ಇಡೀ ದೇಶಾದ್ಯಂತ ಮಂಡ್ಯದ ಹೆಸರು ಕೇಳಿ ಬರೋದಕ್ಕೆ ಮತ್ತೊಂದು ಕಾರಣ ಅಂದ್ರೆ ಅದು ಜೀವನದಿ ಕಾವೇರಿ ವಿಷ್ಯ . ಕಾವೇರಿಗೂ ಮಂಡ್ಯದ ಜನರಿಗೂ ಅವಿನಾಭಾವ ನಂಟಿದೆ . ಕಾವೇರಿ ನದಿ ನೀರಿನ ವಿಚಾರ ಬಂದ್ರೆ ಸಾಕು ಇಲ್ಲಿನ ಜನ ಸಿಡಿದೇಳ್ತಾರೆ, ರಸ್ತೆಗೆ ಇಳಿದು ಪ್ರತಿಭಟನೆ ಮಾಡ್ತಾರೆ. ಇಷ್ಟೆಲ್ಲದ್ರ ಜತೆಗೆ ಸಮಸ್ಯೆಗಳೂ ಸಾಕಷ್ಟಿವೆ ಇಲ್ಲಿ. ಕಳೆದ ವರ್ಷದಿಂದ ಇಲ್ಲಿನ ಜನ ಕುಡಿಯೋದಕ್ಕೆ, ಕೃಷಿಗೆ  ನೀರಿಲ್ಲದೆ ಪರದಾಟ ಅನುಭವಿಸುವಂತಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರು ಮತ್ತು ಸಾಂಸ್ಕೃತಿಕ ನಗರಿ ಮೈಸೂರಿನ ಮಧ್ಯೆ ಮಂಡ್ಯ ಇದ್ರೂ ಸಹ ಎರಡು ಹೆದ್ದಾರಿಗಳು ಮಂಡ್ಯದ ಮೂಲಕ ಹಾದು ಹೋಗಿದ್ರೂ ಕೂಡಾ ಈ ಕ್ಷೇತ್ರ ಇನ್ನೂ ಹಳ್ಳಿಯಾಗೇ ಉಳಿದಿದೆ.

ಮಂಡ್ಯ ವಿಧಾನಸಭಾ ಕ್ಷೇತ್ರ  ರಾಜಕೀಯ ಅಂತ ಬಂದಾಗ ಇಡೀ ದೇಶದ ಕೇಂದ್ರ ಬಿಂದುವಾಗತ್ತೆ. ಇದೇ ಕ್ಷೇತ್ರದಿಂದ ಹಲವಾರು ರಾಜಕೀಯ ನೇತಾರರು ಬಂದು ಹೋಗಿದ್ದಾರೆ. 2018 ರ ಚುನಾವಣೆ ಹತ್ತಿರ ಬರ್ತಾ ಇದ್ದಂಗೆ ಮಂಡ್ಯದಲ್ಲಿ ಕಲರ್ ಫುಲ್ ರಾಜಕೀಯ ಪ್ರಾರಂಭವಾಗಿಬಿಟ್ಟಿದೆ. ಯಾರು, ಯಾವ ಪಕ್ಷದಿಂದ ಅಭ್ಯರ್ಥಿಗಳಾಗ್ತಾರೆ? ಅದ್ರಲ್ಲಿ ಯಾರು ಈ ಬಾರಿ ಗೆಲ್ತಾರೆ ಅನ್ನೋ ಚರ್ಚೆಗಳು ಮಂಡ್ಯದಾದ್ಯಂತ ಶುರುವಾಗಿ ಬಿಟ್ಟಿದೆ…ಇಡೀ ರಾಜ್ಯದ ಕಣ್ಣು ಮಂಡ್ಯದ ಮೇಲೆ ಬಿದ್ದಿದೆ. ಅದಕ್ಕೆ ಕಾರಣ ಇದೆ. ಅದೆಲ್ಲದರ ಬಗ್ಗೆ ಹೇಳೋಕು ಮೊದಲು ಕಳೆದ ಬಾರಿಯ ಚುನಾವಣೆ ಹಾಗೂ ಆಗ ಸ್ಪರ್ಧಿಸಿದವರ ಹಾಗೂ  ಅವರು ಪಡೆದುಕೊಂಡ ಮತಗಳ ವಿವರ ಹೇಳಲೇ ಬೇಕು..

2013 ರ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಯಾರ್ಯಾರು ನಿಂತಿದ್ರು.. ಅವ್ರು ಎಷ್ಟೆಷ್ಟು ಮತಗಳನ್ನು ಪಡೆದಿದ್ರು ಯಾರು ಯಾವ ಸ್ಥಾನದಲ್ಲಿದ್ದಾರೆ ನೋಡೋಣ

 

 

ಹೌದು.  2013 ರ ಚುನಾವಣೆಯನ್ನು ಗಮನಿಸೋದಾದ್ರೆ ಪ್ರಮುಖವಾಗಿ ನಾಲ್ಕು ಜನ ಅಭ್ಯರ್ಥಿಗಳು ಕಣದಲ್ಲಿದ್ರು…ಕಾಂಗ್ರೆಸ್ ನಿಂದ ಕಣಕ್ಕಿಳಿದಿದ್ದ ರೆಬೆಲ್ ಸ್ಚಾರ್ ಅಂಬರೀಶ್ 90329 ಮತಗಳನ್ನು ಪಡೆಯೋ ಮೂಲಕ  ಗೆದ್ದು ಶಾಸಕರಾದ್ರು…ಅವ್ರಿಗೆ ತೀವ್ರ ಪೈಪೊಟಿ ನೀಡಿದ್ದು ಅಂದ್ರೆ  2 ಬಾರಿ ಶಾಸಕರಾಗಿದ್ದ  ಜೆಡಿಎಸ್ ನ ಎಂ ಶ್ರೀನಿವಾಸ್. ಅವ್ರು 47392 ಮತಗಳನ್ನು  ಪಡೆಯೋ ಮೂಲಕ 2 ನೇ ಸ್ಥಾನದಲ್ಲಿದ್ರೆ, ಬಿಜೆಪಿ ಮಾತ್ರ ಇಲ್ಲಿ  ಕಳಪೆ ಪರ್ಫಾರ್ಮೆನ್ಸ್ ನೀಡಿತ್ತು. ಕೇವಲ 3094 ಮತಗಳನ್ನು ಗಳಿಸೋ ಮೂಲಕ ಬಿಜೆಪಿಯ ಟಿ ಎಲ್ ರವಿಶಂಕರ್ 3 ನೇ ಸ್ಥಾನಕ್ಕೆ ತಳ್ಳಲ್ಪಟ್ರೆ ಕೆಜೆಪಿ ಯ ಡಿ ವೆಂಕಟೇಶ್ ಆಚಾರ್ 1457 ಮತಗಳನ್ನು ಪಡೆದು 4 ನೇ ಸ್ಥಾನಕ್ಕೆ ತೃಪ್ತಿ ಪಟ್ಕೊಂಡ್ರು.

ಮಂಡ್ಯಕ್ಕೆ ಮೊದಲಿನಿಂದಲೂ ದೊಡ್ಡಮಟ್ಟದ ಹೆಸರಿತ್ತು ನಿಜ. ಆದ್ರೆ ರಾಜಕೀಯವಾಗಿ ಕಲರ್ ಫುಲ್ ಆಗೋದಕ್ಕೆ ಕಾರಣ ರೆಬೆಲ್ ಸ್ಟಾರ್ ಅಂಬರೀಶ್.. ಕಳೆದ ಬಾರಿ ಈ ಕ್ಷೇತ್ರದಿಂದ ಅಂಬರೀಶ್ ಎಲೆಕ್ಷನ್ ಗೆ ನಿಂತುಕೊಂಡಾಗ ಅವರಿಗೆ ಸಿಕ್ಕ ಅಭೂತಪೂರ್ವ ಸಪೋರ್ಟ್ ನಿಜಕ್ಕೂ ರಾಜಕೀಯ ನೇತಾರರನ್ನೂ ದಂಗುಬಡಿಸಿತ್ತು..ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಖುದ್ದಾಗಿ ಬಂದು ಅಂಬರೀಶ್ ಪರ ನಿಂತು ಪ್ರಚಾರ ಮಾಡಿದ್ರು..ಜತೆಗೆ ಬೇರೆ ಬೇರೆ ಕಡೆಯಿಂದಾನು ಅಂಬರೀಶ್ ಗೆ ಸಪೋರ್ಟ್ ಸಿಕ್ತು. ಜೆಡಿಎಸ್ ಹಿಂಬಾಗಿಲಿನ ಮೂಲಕ ಅಂಬರೀಶ್ ಗೆ ಸಪೋರ್ಟ್ ಮಾಡ್ತು…ಅದಕ್ಕೆ ಕಾರಣ ಜೆಡಿಎಸ್ ನಿಂದ ಕಣಕ್ಕಿಳಿದಿದ್ದ 2 ಬಾರಿ ಶಾಸಕರಾಗಿದ್ದ  ಎಂ ಶ್ರೀನಿವಾಸ್  ಆಪರೇಶನ್ ಕಮಲಕ್ಕೆ ಒಳಗಾಗಿ ಬಿಜೆಪಿ ಸೇರ್ತಾರೆ ಅನ್ನೋ ಸುದ್ದಿ. ಇದು ಜೆಡಿಎಸ್ ವರಿಷ್ಟ ದೇವೇಗೌಡ ಹಾಗೂ ಕುಮಾರ ಸ್ವಾಮಿಯವರ ನಿದ್ದೆಗೆಡಿಸಿತ್ತು.ಹಾಗಾಗಿ ಅವ್ರು ಕೂಡಾ ಅಂಬರೀಶ್ ಗೆ ಸಪೋರ್ಟ್ ಮಾಡಿದ್ರು. ಪರಿಣಾಮ ಅಂಬರೀಶ್ ಅವ್ರು ಗೆದ್ರು ಸಚಿವರೂ ಕೂಡಾ ಆದ್ರು….ಇದೆಲ್ಲಾ 2013ರ ಚುನಾವಣೆ ಸಂದರ್ಭದಲ್ಲಿ ನಡೆದ ಬೆಳವಣಿಗೆ. ಆದ್ರೆ ಈಗ ಮತ್ತೆ ಚುನಾವಣೆ ಬಂದಿದೆ. ಈಗ ಅಲ್ಲಿನ ಪರಿಸ್ಥಿತಿ ಹೇಗಿದೆ?…ಕಾಂಗ್ರೆಸ್ , ಜೆಡಿಎಸ್ ಹಾಗೂ ಬಿಜೆಪಿ ಇಂದ ಕಣಕ್ಕಿಳಿಯೋರ ಪಟ್ಟಿಯಲ್ಲಿ ಯಾರ್ಯಾರ ಹೆಸರಿದೆ…ಅಂತಿಮವಾಗಿ ಯಾರಿಗೆ ಟಿಕೆಟ್ ಸಿಗತ್ತೆ ಅನ್ನೋದನ್ನು ನೋಡೋಣ…

ಕೈ ಟಿಕೆಟ್ ಆಕಾಂಕ್ಷಿಗಳು:

 

2018ರ ಚುನಾವಣಾ ರಣಕಣದ ಕಾಂಗ್ರೆಸ್ ಟಿಕೆಟ್  ಆಕಾಂಕ್ಷಿಗಳ ಲಿಸ್ಟ್ ನಲ್ಲಿ ಯಾರಿದ್ದಾರೆ ಅಂತಾ  ನೋಡ್ತಾ ಹೋದ್ರೆ ಪ್ರಮುಖವಾಗಿ ಕೇಳಿ ಬರೋ ಹೆಸರೇ ಮಾಜಿ ಸಚಿವ, ಹಾಲಿ ಶಾಸಕ ರೆಬೆಲ್ ಸ್ಟಾರ್ ಅಂಬರೀಶ್ ಹೆಸರು. ಅಂಬರೀಶ್ ಅವ್ರಿಗೆ ಮಂಡ್ಯ ನಗರ ಹಾಗೂ ಕಸಬಾ ಹೋಬಳಿಯಲ್ಲಿ ಒಳ್ಳೆ ಹೆಸರಿದೆ ನಿಜ.ಆದ್ರೆ ಅದೇ ರೀತಿ ಮಂಡ್ಯದ ಕೆರೆಗೋಡು ಮತ್ತು ಬಸರಾಳು ಹೋಬಳಿಯಲ್ಲಿ ಅವ್ರಿಗೆ ತೀವ್ರ ವಿರೋಧ ಇದೆ.ಆದ್ರೂ ಕೂಡಾ ಮಂಡ್ಯ ಗೆಲ್ಲೋ ತಾಕತ್ತು ಅಂಬಿಗೆ ಇದೆ ಅಂತಾ ಅಲ್ಲಿನ ಜನ ಹೇಳ್ತಿದ್ದಾರೆ. ಇದೆಲ್ಲದರ ಜತೆಗೆ ಮುಖಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ ಅವ್ರಿಗೂ ಅಂಬರೀಶ್ ಅವ್ರಿಗೆ ಬಿ ಫಾರ್ಮ್ ನೀಡಬೇಕು ಅನ್ನೋ ಇಂಗಿತ ಇದೆ. ಅದಕ್ಕೆ ಕಾರಣ ಅಂದ್ರೆ ಸಚಿವ ಸ್ಥಾನದಿಂದ ಅಂಬಿುಯನ್ನು ಕೆಳಗಿಳಿಸಿದ ಮೇಲೆ ಅವ್ರು ಅಪ್ಸೆಟ್ ಆಗಿದ್ದು ನಿಜ. ಆದ್ರೆ ಶ್ರೀನಿವಾಸ್ ಪ್ರಸಾದ್ ತರಹ  ಪಕ್ಷ ಬಿಡೋದಾಗ್ಲಿ ಪಕ್ಷದ ಬಗ್ಗೆ, ನಾಯಕರ ಬಗ್ಗೆ ಮಾತಾಡೋದಾಗ್ಲಿ ಮಾಡಿಲ್ಲ. ಇದಷ್ಟೇ ಅಲ್ಲದೆ ಅಂಬರೀಶ್ ಅವ್ರಿಗೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಕೃಪಕಟಾಕ್ಷ ಕೂಡಾ ಇದೆ. ಹಾಗಾಗಿ ಬಹುತೇಕ ಅಂಬಿಗೆ ಈ ಬಾರಿ ಬಿಫಾರ್ಮ್ ಸಿಗಬಹುದು.. ಆದ್ರೆ  ಇನ್ನೊಂದು ಸುದ್ದಿ ಏನಪ್ಪ ಅಂದ್ರೆ ಅಂಬಿ ಗೆ ಟಿಕೆಟ್ ಸಿಕ್ರೆ ಅವ್ರೇನು ಮಾಡ್ತಾರೆ? ಉನ್ನತ ಮೂಲಗಳ ಪ್ರಕಾರ ತಮ್ಮ ಪತ್ನಿ ನಟಿ ಸುಮಲತಾ ಅವ್ರನ್ನು ಅಥವಾ ಪುತ್ರ ಅಭಿಷೇಕ್ ಗೌಡ ಅವ್ರನ್ನು ನಿಲ್ಲಿಸೋ ಚಾನ್ಸ್ ಕೂಡಾ ಇದೆ. ಇದೆಲ್ಲದರ ಜತೆಗೆ ಇತ್ತೀಚೆಗಷ್ಟೇ ಮಂಡ್ಯದ ಹಿರಿಯ ಮುತ್ಸದ್ದಿ ಮಾಜಿ ಸಂಸದರಾಗಿರೋ ಜಿ ಮಾದೇಗೌಡರನ್ನು ಭೇಟಿಯಾಗಿ ಅಂಬರೀಶ್ ಚರ್ಚಿಸಿರೋದು ಅವ್ರಿಗೆ ಪ್ಲಸ್ ಪಾಯಿಂಟ್.

 

 

ರಮ್ಯಾ , ಮಾಜಿ ಸಂಸದೆ, ನಟಿ

ಕೈ ಟಿಕೆಟ್ ಗೆ ಮಂಡ್ಯದಲ್ಲಿ ಅಬರೀಶ್ ಅವ್ರ ಹೆಸರಿನ ಜತೆಗೆ ದೊಡ್ಡದಾಗಿ ಕೇಳಿ ಬರ್ತಿರೋ ಮತ್ತೊಂದು ಹೆಸರೇ ಸ್ಯಾಂಡಲ್ ವುಡ್ ಕ್ವೀನ್ ಮಾಜಿ ಸಂಸದರಾಗಿರೋ ರಮ್ಯಾ ಅವ್ರದ್ದು..ಈ ಬಾರಿ ರಮ್ಯಾ ಅವ್ರಿಗೆ ಕೈ ಟಿಕೆಟ್ ಸಿಕ್ರೂ ಆಶ್ಚರ್ಯ ಇಲ್ಲ. ಯಾಕಂದ್ರೆ ಒಂದು ಬಾರಿ ಮಂಡ್ಯದಿಂದ ನಿಂತು ಗೆದ್ದು ಸಂಸದರಾಗಿದ್ದ ರಮ್ಯಾ  ಅಲ್ಲಿನ ಜನಮನದಲ್ಲಿ ಇರೋದಂತೂ ಸತ್ಯ. ಆದ್ರೆ 2014ರಲ್ಲಿ ಲೋಕಸಭಾ ಚುನಾವಣೆಗೆ ರಮ್ಯ ನಿಂತ್ರೂ ಕೂಡಾ ಅಲ್ಲಿನ ಜನ ಅವ್ರ ಕೈ ಹಿಡಿಯಲಿಲ್ಲ. ಆಗಿನಿಂದಾನೆ ರಮ್ಯಾ ರಾಷ್ಟ ರಾಜಕಾರಣದಿಂದ ರಾಜ್ಯ ರಾಜಕಾರಣಕ್ಕೆ ಬರ್ತಾರೆ ಅನ್ನೋ ಗುಸು ಗುಸು ಪ್ರಾರಂಭವಾಗಿತ್ತು. ಅದಕ್ಕೆ ಪೂರಕವೆಂಬಂತೆ ರಮ್ಯಾ ಮಂಡ್ಯಕ್ಕೆ ಆಗಿಂದಾಗೆ ಭೇಟಿ ಕೊಡ್ತಾ ಇದ್ರು. ಅಷ್ಟೇ ಅಲ್ಲ ಇದೀಗ ಮಂಡ್ಯದಲ್ಲಿ ಮನೆ ಕೂಡಾ ಮಾಡಿದ್ದಾರೆ. ಆ ನೂತನ ಮನೆಯ ಗೃಹಪ್ರವೇಶ ರಮ್ಯಾ ಬರ್ತ್ ಡೇ ದಿನ ಅಂದ್ರೆ ಇದೇ 29ಕ್ಕೆ ನಡೆಯಲಿದೆ. ಇದೆಲ್ಲದರ ಜತೆಗೆ ರಮ್ಯಾ ಗೆ ಭಾವಿ ಕಾಂಗ್ರೆಸ್ ಅಧ್ಯಕ್ಷ ಅಂತಾನೇ ಕರೆಸಿಕೊಳ್ಳೋ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಅಭಯ ಹಸ್ತ ಇರೋ ಕಾರಣ, ಅಂಬರೀಶ್ ಅವ್ರಿಗೆ ಬೇರೆ ಏನಾದ್ರೂ ಭರವಸೆಗಳನ್ನು ನೀಡಿ ಮನವೊಲಿಸಿ ರಮ್ಯಾ ಅವ್ರಿಗೆ ಈ ಬಾರಿ ಟಿಕೆಟ್ ನೀಡೋ ಚಾನ್ಸಸ್ ಕೂಡಾ ಇಲ್ಲದಿಲ್ಲ.

 

ಅಂಬರೀಶ್ ಮತ್ತು ರಮ್ಯ ಜತೆಗೆ ಮಂಡ್ಯ ಕ್ಷೇತ್ರದಲ್ಲಿ ಕೇಳಿ ಬರ್ತಿರೋ ಮತ್ತೊಂದು ಹೆಸರು ಮಂಡ್ಯ ಕಾಂಗ್ರೆಸ್ ಜಿಲ್ಲಾಧ್ಯಕ್ಷ , ಮಾಜಿ ಸಚಿವ ಎಂಎಸ್ ಆತ್ಮಾನಂದ  ಅವ್ರದ್ದು. ಈ ಹಿಂದಿನಿಂದಲೂ ಕೂಡಾ ತಾವೊಬ್ಬ ಪ್ರಬಲ ಆಕಾಂಕ್ಷಿ ಅಂತಾನೇ ಹೇಳಿಕೊಂಡು ಬಂದಿರೋ ಆತ್ಮಾನಂದ ಅವ್ರ ಕೈ ಯನ್ನು ಕೈ ನಾಯಕರು ಹಿಡಿತಾರಾ ಅಂತಾ ಕೇಳಿದ್ರೆ ಬಹುಷ ಆ ಸಾಧ್ಯತೆಗಳು ತುಂಬಾನೇ ಕಡಿಮೆ ಅನ್ನೋ ಮಾತು ಕೇಳಿ ಬರ್ತಿದೆ. ಪ್ರಿಫರೆನ್ಸ್ ಲಿಸ್ಟ್ ನಲ್ಲಿ ನೋಡೋದಾದ್ರೆ ಅಂಬರೀಶ್, ರಮ್ಯಾ ನಂತರದ ಸ್ಥಾನ ಆತ್ಮಾನಂದ ಅವ್ರದ್ದು.

 

ಇದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ವಿಚಾರವಾದ್ರೆ, ಮಂಡ್ಯದಲ್ಲಿ ಕಾಂಗ್ರೆಸ್ ಗೆ ಸೆಡ್ಡು ಹೊಡೆಯೋ ಕೆಪಾಸಿಟಿ ಇರೋ ಪಕ್ಷ ಅಂದ್ರೆ ಅದು ಜೆಡಿಎಸ್. ಈ ಹಿಂದೆ ಸಾಕಷ್ಚು ಬಾರಿ ಜೆಡಿಎಸ್ ಅದನ್ನು ಸಾಬೀತು ಪಡಿಸಿ ತೋರಿಸಿದೆ ಕೂಡಾ. ಹಾಗಿದ್ರೆ ಜೆಡಿಎಸ್ ಲಿಸ್ಟ್ ನಲ್ಲಿ ಇರೋ ಆಕಾಂಕ್ಷಿಗಳು ಯಾರು ಬನ್ನಿ ನೋಡೋಣ

ದಳಪತಿ ಯಾರು?

 

ಎಂ ಶ್ರೀನಿವಾಸ್, ಮಾಜಿ ಶಾಸಕ

ಮಂಡ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಪೈಪೋಟಿ ನೀಡೋ ಸಾಮರ್ಥ್ಯ ಇರೋದು ಜೆಡಿಎಸ್ ಗೆ ಅನ್ನೋದು ಈ ಹಿಂದಿನ ಚುನಾವಣಾ ಫಲಿತಾಂಶಗೆಳು ಹೇಳ್ತಿವೆ. ಹಾಗಂತ ಅದು ಸುಲಭಕ್ಕೆ ಕೈ ತುತ್ತಾಗಲ್ಲ ಅನ್ನೋದು ನಿಜ.ಈ ಬಾರಿ ಅಂತೂ ಮಂಡ್ಯದಿಂದ ನಿಲ್ಲೋದಕ್ಕೆ ಜೆಡಿಎಸ್ ನಲ್ಲಿ ತುಂಬಾ ಜನ ಆಕಾಂಕ್ಷಿಗಳಿದ್ದಾರೆ. ಅವ್ರಲ್ಲಿ  ಪ್ರಮುಖರು ಅಂದ್ರೆ ಈ ಹಿಂದೆ 2 ಬಾರಿ ಶಾಸಕರಾಗಿದ್ದ ಎಂ ಶ್ರೀನಿವಾಸ್. ಆದ್ರೆ ಈ ಬಾರಿ ಅವ್ರಿಗೆ ಟಿಕೆಟ್ ಸಿಗೋದು ತುಂಬಾ ಕಷ್ಟ. ಯಾಕಂದ್ರೆ ಜೆಡಿಎಸ್ ನಾಯಕರಿಗೇನೆ ಶ್ರೀನಿವಾಸ್ ಅಂದ್ರೆ ಆಗಲ್ಲ. ಜೆಡಿಎಸ್ ವರಿಷ್ಠರಾಗಿರೋ ದೇವೇಗೌಡ್ರು ಮತ್ತು ಹೆಚ್ ಡಿ ಕುಮಾರ ಸ್ವಾಮಿ ಅವ್ರಿಗೆ ಎಂ ಶ್ರೀನಿವಾಸ್ ಮೇಲೆ ಒಲವಿಲ್ಲ.ಕಾರಣ ಕಳೆದ ಬಾರಿ ಅವ್ರ ಮೇಲೆ ಕೇಳಿ ಬಂದ ಬಿಜೆಪಿ ಸೇರ್ಪಡೆ ಆಗ್ತಾರೆ ಅನ್ನೋ ಸುದ್ದಿ. ಇದು ಒಂದ್ಕಡೆ ಆದ್ರೆ, ಮತ್ತೊಂದ್ಕಡೆ ರೇವಣ್ಣ ಅವ್ರ ಪತ್ನಿ ಭವಾನಿ ರೇವಣ್ಣ ಅವ್ರು ಮಂಡ್ಯದವರೇ ಆಗಿರೋ ಕಾರಣ ಅವ್ರು ಎಂ ಶ್ರೀನಿವಾಸ್ ಗೆ ಟಿಕೆಟ್ ಕೊಡೋದಕ್ಕೆ ವಿರೋಧಿಸ್ತಿದ್ದಾರೆ. ಇಷ್ಟೇ ಅಲ್ಲ ಎಂ ಶ್ರೀನಿವಾಸ್ ಕಳೆದ ಬಾರಿ ಸೋತಿದ್ರು, ಜತೆಗೆ  ಅವ್ರ ಅಳಿಯ ಜಿಲ್ಲಾ ಪಂಚಾಯತ್ ಮೆಂಬರ್ ಯೋಗೇಶ್ ಗೌಡ ಹೆಸರು ಹಾಳು ಮಾಡಿಕೊಂಡಿರೋದ್ರಿಂದ ಎಂ ಶ್ರೀನಿವಾಸ್ ಗೆ ಈ ಬಾರಿ ಟಿಕೆಟ್ ಸಿಗೋದು ಡೌಟ್.

ಅಶೋಕ್ ಜಯರಾಂ, ಮಾಜಿ ಸಚಿವ ಎಸ್ ಡಿ ಜಯರಾಂ ಪುತ್ರ

ಎಂ ಶ್ರೀನಿವಾಸ್ ಗೆ ಜೆಡಿಎಸ್ ಟಿಕೆಟ್ ಸಿಕ್ಕಿಲ್ಲಾಂದ್ರೆ  ಮತ್ಯಾರಿಗೆ ಅಂತಾ ತುಂಬಾ ಜನ ಕೇಳ್ತಾರೆ ನಿಜ. ಅಂತಹವರ ಪೈಕಿ ಕೇಳಿ ಬರ್ತಿರೋ ಇನ್ನೊಂದು ಹೆಸರು ಮಾಜಿ ಸಚಿವ ಎಸ್ ಡಿ ಜಯರಾಂ ಪುತ್ರ ಅಶೋಕ್ ಜಯರಾಂ. ಆದ್ರೆ ಅವ್ರ ವಯಸ್ಸು ಇನ್ನೂ ಸಣ್ಣದು ಹಾಗೇ ಇವ್ರನ್ನು ಬೇಗ ಸೋಲಿಸಬಹುದು ಅನ್ನೋ ಕಾರಣಕ್ಕೆ ಅವ್ರಿಗೆ ಟಿಕೆಟ್ ಸಿಗೋ ಚಾನ್ಸ್ ಕೂಡಾ ತುಂಬಾ ಕಡಿಮೆ ಇದೆ.

 

ಮಂಡ್ಯದಲ್ಲಿ ಈ ಬಾರಿ ಜೆಡಿಎಸ್ ನಿಂದ ಕಣಕ್ಕಿಳಿಯೋ ಆಕಾಂಕ್ಷಿಗಳ ಪಟ್ಟಿಯಲ್ಲಿ ದೊಡ್ಡಗಾಗಿ ಕೇಳಿ ಬರ್ತಿರೋ ಹೆಸರೇ ಕೀಲಾರ ಕೃಷ್ಣ ಅರ್ಥಾತ್ ಕೀಲಾರ ರಾಧಾಕೃಷ್ಣ. ಇವ್ರು ಮೂಲತಃ ಬೆಂಗಳೂರು ಮೂಲದ ಉದ್ಯಮಿ. ಕೀಲಾರ ಕೃಷ್ಣ ಅಂತೂ ಈಗಾಗಲೇ ತಮ್ಮ ಚುನಾವಣಾ ಚಟುವಟಿಕೆಗಳನ್ನು ಪ್ರಾರಂಭಿಸಿದ್ದಾಗಿದೆ. ಎಲ್ಲರ ಜತೆ ಮಾತುಕತೆ ನಡೆಸ್ತಿದ್ದಾರೆ.  ಅಂಬರೀಶ್ ಅವ್ರ ಜತೆಗೂ ನಿಕಟ ಸಂಪರ್ಕ ಇದೆ..ಹಾಗೇನೇ ಬೇರೆ ಉಳಿದ ನಾಯಕರುಗಳ ಜತೆಗೂ ಚೆನ್ನಾಗಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಪ್ರಭಾವಿ ಹಾಗೂ ಆರ್ಥಿಕ ಬಲ ಜಸ್ತಿ ಇರೋರು. ಹಾಗಾಗಿ ಜೆಡಿಎಸ್ ಈ ಬಾರಿ ಕೀಲಾರ ರಾಧಾಕೃಷ್ಣರಿಗೇನೆ ಬಿ ಫಾರ್ಮ್ ಕೊಡೋ ಚಾನ್ಸ್ ಕಾಣಿಸ್ತಾ ಇದೆ.

ಇನ್ನುಳಿದಂತೆ ಜಿಲ್ಲಾ ಪಂಚಾಯತ್ ಸದಸ್ಯರಾಗಿರೋ ಚಂದಗಾಲು ಶಿವಣ್ಣ ಜೆಡಿಎಸ್ ನಿಂದ  ಜ ಪಂ ಗೆ ಟಿಕೆಟ್ ಸಿಕ್ಕಿರ್ಲಿಲ್ಲ ಅಂತಾ ಬಸರಾಳು ವಿನಲ್ಲಿ ಬಂಡಾಯವಾಗಿ ಪಕ್ಷೇತರರಾಗಿ ನಂತು ವಿಜಯಶಾಲಿಯಾಗಿದ್ರು. ಹಾಗಾಗಿ ಅವ್ರ ಸಾಮರ್ಥ್ಯವನ್ನು ಅಲ್ಲಗಳೆಯುವಂತಿಲ್ಲ. ಇದ್ರ ಜತೆಗೆ ಎಂ ಶ್ರೀನಿವಾಸ್ ಅಳಿಯ  ಯೋಗೇಶ್ ಕೂಡಾ ಮಂಡ್ಯ ಕ್ಷೇತ್ರದ ಟಿಕೆಟ್ ಆಕಾಂಕ್ಷಿ.

ಮಂಡ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮಧ್ಯೆ ನೇರ ಹಣಾಹಣಿ ಇದೆ ನಿಜ. ಆದ್ರೆ ಈ ಬಾರಿ ಮಿಶನ್ 150 ಅಂತಿರೋ ಬಿಜೆಪಿ ಕೂಡಾ ಸುಮ್ನೆ ಕೂರೋದಿಲ್ಲ. ಹಾಗಾಗಿ ಈ ಬಾರಿ ಬಿಜೆಪಿಯಿಂದ ಇಲ್ಲಿ ಯಾರು ಕಣಕ್ಕಿಳಿಯಬಹಿದು ಅನ್ನೋದನ್ನು ನೋಡೋದಾದ್ರೆ

ಕಮಲ ಹಿಡಿಯೋರ್ಯಾರು

 

ಅರವಿಂದ್, ಬಿಜೆಪಿ ತಾಲೂಕು ಅಧ್ಯಕ್ಷ

ಶಿವಲಿಂಗಯ್ಯ, ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಅಧ್ಯಕ್ಷ

ತೇಜಸ್ವಿನಿ ರಮೇಶ್, ಮಂಡ್ಯ ಜಿಲ್ಲಾ ಉಸ್ತುವಾರಿ

 

ಮಂಡ್ಯದಲ್ಲಿ ಬಿಜೆಪಿ ಕಮಲದ ಹೂವನ್ನು ಅರಳಿಸಬೇಕಾದ್ರೆ ಬಹುಷಃ ತುಂಬಾ ಕಷ್ಟ…ಇಲ್ಲಿ ವರೆಗಿನ ಸಾಕಷ್ಟು ಚುನಾವಣೆಗಳಲ್ಲಿ ಬಿಜೆಪಿ ಇಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನೋ ರೀತಿ ಇದೆ. ಆದ್ರೂ ಕೂಡಾ ಈ ಬಾರಿ ಬಿಜೆಪಿ ತಾಲೂಕು ಅಧ್ಯಕ್ಷರಾಗಿರೋ ಅರವಿಂದ್ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಜಿ ಅಧ್ಯಕ್ಷ  ಶಿವಲಿಂಗಯ್ಯ ಹಾಗೂ ಮಂಡ್ಯ ಜಿಲ್ಲಾ ಬಿಜೆಪಿ ಉಸ್ತುವಾರಿ ತೇಜಸ್ವಿನಿ ರಮೇಶ್ ಅವ್ರ ಹೆಸರು ಕೇಳಿ ಬರ್ತಿದೆ…ಆದ್ರೆ ಬಿಜೆಪಿ ನಾಯಕರು ಯಾರಿಗೆ ಇಲ್ಲಿ ಟಿಕೆಚ್ ನೀಡ್ತಾರೆ ಅನ್ನೋದನ್ನು ಕೊನೆ ಘಳಿಗೆ ವರೆಗೆ ಕಾದು ನೋಡಬೇಕಿದೆ.‘

ಪಿನ್  ಪಾಯಿಂಟ್

ಒಟ್ನಲ್ಲಿ ಮಂಡ್ಯ ಮಹಾಯುದ್ಧವನ್ನು ಗೆಲ್ಲೋದಕ್ಕೆ ಕಾಂಗ್ರೆಸ್,ಜೆಡಿಸ್ ಹಾಗೂ ಬಿಜೆಪಿ ಕಸರತ್ತು ಮಾಡ್ತಿರೋದಂತೂ ಸತ್ಯ. ಆದ್ರೆ  ಜೆಡಿಎಸ್ ನಿಂದ ಕೀಲಾರ ರಾಧಾಕೃಷ್ಣ ಅವ್ರಿಗೆ ಟಿಕೆಟ್ ಸಿಕ್ರೆ ಮಂಡ್ಯ ದ ರಾಜ್ಯಭಾರ ಜೆಡಿಎಸ್ ಪಾಲಾಗೋದಂತು ಗ್ಯಾರಂಟಿ.

ಇದು ಮಂಡ್ಯದ ಚುನಾವಣಾ ಲೆಕ್ಕಾಚಾರ .ಮಂಡ್ಯದ ಚುನಾವಣೆಯ ಇತಿಹಾಸ ತೆಗೆದು ನೋಡಿದ್ರೆ ಇಲ್ಲಿನ ಜನ ತಮಗೆ ಬೇಕಾದ ಅರ್ಹರನ್ನು ಗೆಲ್ಲಿಸಿದ್ದಾರೆ ಅನ್ನೋದಂತು ನಿಜ.ಅಷ್ಟೇ ಅಲ್ಲ ಗೆದ್ದವರನ್ನು ಸೋಲಿಸಿರೋ ಹಾಗೇನೆ ಸೋತಿರೋರನ್ನು ಗೆಲ್ಲಿಸಿರೋ ಉದಾಹರಣೆ ಕೂಡಾ ಮಂಡ್ಯದಲ್ಲಿದೆ. ಹಾಗಾಗಿ ಈ ಬಾರಿಯ  ಚುನಾವಣೆಯಲ್ಲಿ ಏನಾಗತ್ತೆ ಅನ್ನೋದು ಮಂಡ್ಯದ ಮತದಾರರ ಕೈಯಲ್ಲಿದೆ.

ಪ್ರತ್ಯುತ್ತರ ನೀಡಿ

Please enter your comment!
Please enter your name here