ಚುನಾವಣಾ ಕುರು”ಕ್ಷೇತ್ರ” 2018 -ದೇವರಹಿಪ್ಪರಗಿ

ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರ.

ವಿಧಾನ ಸಭೆ ಚುನಾವಣೆ ಘೋಷಣೆಗೂ ಮೊದಲೇ ಅಖಾಡ ಸಿದ್ಧವಾಗಿರೋ ಈ ಕ್ಷೇತ್ರದ ಬಗ್ಗೆ ಹೇಳಲೇ ಬೇಕು. ಇಲ್ಲಿ ಈ ಬಾರಿ ಬಿಜೆಪಿ , ಜೆಡಿಎಸ್ ಮತ್ತು ಕಾಂಗ್ರೆಸ್  ಮಧ್ಯೆ ಪ್ರಬಲ ಪೈಪೋಟಿ ಇದೆ. ಸಾಕಷ್ಟು..ರಾಜಕೀಯ ಬೆಳವಣಿಗೆಯಿಂದಾಗೇ ಪ್ರಸಿದ್ಧವಾಗಿರೋ ಕ್ಷೇತ್ರ ಇದು. ಯಸ್  ಕುರುಕ್ಷೇತ್ರ ದಲ್ಲಿ ನಾವು ಇವಾಗ ಹೇಳೋದಿಕ್ಕೆ ಹೊರಟಿರೋದು ದೇವರ ಹಿಪ್ಪರಗಿ ಅಸೆಂಬ್ಲಿ ಕ್ಷೇತ್ರದ ಬಗ್ಗೆ. ಇಲ್ಲಿನ ಪಿನ್ ಟು ಪಿನ್ ಡಿಟೇಲ್ಸ್ ನಿಮ್ಮ ಮುಂದೆ

ದೇವರ ಹಿಪ್ಪರಗಿ. ಇದು ಬಿಸಿಲೂರು ವಿಜಯಪುರ ಜಿಲ್ಲೆಯಲ್ಲಿರೋ ಕ್ಷೇತ್ರ. ಮೂರು ತಾಲೂಕುಗಳನ್ನೊಳಗೊಂಡಿರೋ ಈ ವಿಧಾನಸಭಾ ಕ್ಷೇತ್ರದಲ್ಲಿ ಹೇಗೆ ಬಿಸಿಲಿನ ತಾಪ ಜಾಸ್ತಿ ಇದ್ಯೋ ಹಾಗೇನೇ ವಿಧಾನ ಸಭಾ ಚುನಾವಣೆ ಕಾವು ಕೂಡ ದಿನೇ ದಿನೇ ಜಾಸ್ತಿ ಆಗ್ತಿದ್ದು ರಾಜ್ಯ ರಾಜಕಾರಣದ ಕೇಂದ್ರ ಬಿಂದು ಆಗಿದೆ.ಇಲ್ಲಿ ಜಾತಿ ರಾಜಕಾರಣ ಜಾಸ್ತಿ ನಡೆಯಲ್ಲ. ಬಹುತೇಕ ಎಲ್ಲಾ ಜಾತಿಯವರೂ ಇಲ್ಲಿದ್ದಾರೆ. ಇಲ್ಲಿನ ಮತದಾರರು ಒಂದೇ ಪಕ್ಷಕ್ಕೆ ಸ್ಟಿಕ್ ಆನ್ ಆಗಿಲ್ಲ ಪಕ್ಷಗಳು ನೀಡೋ ಭರವಸೆಗಳಿಗೂ ಮರುಳಾಗಲ್ಲ. ಬದಲಿಗೆ ಯಾರು ಕಣದಲ್ಲಿದ್ದಾರೆ ಅನ್ನೋದನ್ನು ನೋಡಿಕೊಂಡು ತಮಗೆ ಬೇಕಾದವರನ್ನು ಆರಿಸಿಕೊಂಡು ಬಂದಿದ್ದಾರೆ. ಹಾಗಾಗಿ ಅಭ್ಯರ್ಥಿಗಳ ವ್ಯಯಕ್ತಿಕ ಶಕ್ತಿ ನೋಡಿಕೊಂಡು ಮತದಾರರು ತಮ್ಮ ವೋಟ್ ನ್ನು ನಿರ್ಧರಿಸತಾರೆ…ಇನ್ನು ಹಳ್ಳಿಯಾಗೇ ಉಳಿದಿರೋ ಈ ಕ್ಷೇತ್ರದಲ್ಲಿ ಸಿಟಿ ಅನ್ನೋದೇ ಇಲ್ಲ. ಇಲ್ಲಿನ ಜನ ಶ್ರಮ ಜೀವಿಗಳು, ರೈತರು.

ಹಾಗಿದ್ರೆ ಈ ಬಾರಿ ಈ ಕ್ಷೇತ್ರದಲ್ಲಿ ಇಷ್ಟುದೊಡ್ಡ ರಾಜಕೀಯ ಅಲೆ ಬೀಸೋದಕ್ಕೆ ಏನು ಕಾರಣ ಅನ್ನೋದನವ್ನು ನೋಡಲೇ ಬೇಕು. ಆದ್ರೆ ಅದಕ್ಕೂ ಮುಂಚೆ ಕಳೆದ ಬಾರಿಯ ಎಲೆಕ್ಷನ್ ನ ರಿಸಲ್ಟ್ ಹೇಗಿತ್ತು ಅನ್ನೋದನ್ನು ನೋಡೋಣ

2013 ರ ಮತಬರಹ

 

 

ಇದು 2013ರ ಚುನಾವಣಾ ಫಲಿತಾಂಶ ಕಳೆದ ಬಾರಿಯ ಚುನಾವಣೆಯಲ್ಲಿ ಎಎಸ್ ಪಾಟೀಲ್ ನಡಹಳ್ಳಿ ಕೈ ಅಭ್ಯರ್ಥಿಯಾಗಿ ಕಣಕ್ಕಿಳಿದು 36321 ಮತಗಳನ್ನು ಪಡೆಯೋ ಮೂಲಕ ಶಾಸಕರಾದ್ರು. ಅವರಿಗೆ ಪೈಪೋಟಿ ನೀಡಿದ ಬಿಜೆಪಿಯ ಸೋಮನಗೌಡ ಪಾಟೀಲ್ 28135 ಮತ ಪಡೆದು 2 ನೇ ಸ್ಥಾನ ಪಡೆದ್ರು. ಇನ್ನು ಜೆಡಿಎಸ್ ನ ರೇಷ್ಮಾ ಪಡೇಕನೂರ ಕೇವ 118 ಮತಗಳನ್ನುಪಡೆದ್ರು.

ಆದ್ರೆ ಈಗ ಕ್ಷೇತ್ರದ ರಾಜಕೀಯ ಚಿತ್ರಣ ಕಂಪ್ಲೀಟ್ ಚೇಂಜ್ ಆಗಿದೆ. ಕಾಂಗ್ರೆಸ್ ನಿಂದ ಕಣಕ್ಕಿಳಿದು ಇಲ್ಲಿ ನಡೆದಿರೋ 2 ಕ್ಕೆ 2 ಚುನಾವಣೆಯನ್ನು ಗೆದ್ದಿರೋ ಹಾಲಿ ಶಾಸಕ ಎಎಸ್ ಪಾಟೀಲ್ ನಡಹಳ್ಳಿ ಅವ್ರನ್ನು ಕಾಂಗ್ರೆಸ್ ಪಕ್ಷ ಉಚ್ಛಾಟನೆ ಮಾಡಿದೆ. ಹಾಗಂತ ಅವ್ರೇನು ಸುಮ್ಮನೆ ಕುಳಿತಿಲ್ಲ. ಬದಲಾಗಿ ಜೆಡಿಎಸ್ ಗೆ ಸೇರಿ ತೆನೆ ಹೊತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವ್ರಂತೂ ಈ ಕ್ಷೇತ್ರದ ತುಂಬೆಲ್ಲಾ ಓಡಾಡ್ತಿದ್ದಾರೆ. ಹಾಗಾಗಿ ಈ ಬಾರಿ ಜಿದ್ದಾಜಿದ್ದಿನ ಚುನಾವಣೆಗೆ ಈ ಕ್ಷೇತ್ರ ಸಾಕ್ಷಿಯಾಗ್ತಾ ಇದೆ. ಹಾಗಿದ್ರೆ ಈ ಬಾರಿ ಇಲ್ಲಿಂದ ಕಣಕ್ಕಿಳಿಯೋದಕ್ಕೆ ರೆಡಿಯಾಗ್ತಿರೋ ಬೇರೆ ಬೇರೆ ಪಕ್ಷಗಳ ಕದನ ಕಲಿಗಳು ಯಾರು ನೋಡೋಣ ಬನ್ನಿ.

 

ಜೆಡಿಎಸ್ ಅಭ್ಯರ್ಥಿ

 

ಹೆಚ್ ಡಿ ಕುಮಾರ ಸ್ವಾಮಿ

ಕಳೆದ 2 ಚುನಾವಣೆಯಲ್ಲಿ ಜೆಡಿಎಸ್ ಇಲ್ಲಿ ಹೇಳಿಕೊಳ್ಳುವಂತಾ ಸಾಧನೆ ಏನೂ ಮಾಡಿಲ್ಲ. ಆದ್ರೆ ಈ ಬಾರಿ ದೇವರ ಹಿಪ್ಪರಗಿ ಮತ ಕ್ಷೇತ್ರದಲ್ಲಿ ಜೆಡಿಎಸ್ ಇಂದ ಯಾರು ಅಭ್ಯರ್ಥಿ ಅಂದ್ರೆ ಅಲ್ಲಿನ ಜನ ಹೇಳ್ತಾರೆ ಅದು ಮಾಜಿ ಮುಖ್ಯಮಂತ್ರಿ ಜೆಡಿಎಸ್ ನಾಯಕ ಕುಮಾರ ಸ್ವಾಮಿ ಅಂತಾ .ಹೆಚ್ ಡಿಕೆ  ಈಗಾಗಲೇ ಕ್ಷೇತ್ರಾದ್ಯಂತ ತಮ್ಮ ಪ್ರಚಾರವನ್ನು ಶುರು ಮಾಡಿದ್ದಾರೆ. ಹೆಚ್ ಡಿಕೆ ಇಲ್ಲಿಂದ ಕಣಕ್ಕಿಳಿಯೋದಕ್ಕೆ ಕಾರಣ ಇದೆ. ಈ ಕ್ಷೇತ್ರದಲ್ಲಿ ನಿಂತುಕೊಂಡ್ರೆ ಇಡೀ ಜಿಲ್ಲೆಯಲ್ಲಿ ಬರೋ ಅಷ್ಟೂ ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲೋದಕ್ಕೆ ಟ್ರೈ ಮಾಡಬಹುದು ಅಲ್ಲದೆ ಹೈದ್ರಾಬಾದ್ .ಕರ್ನಾಟಕ, ಮುಂಬೈ ಕರ್ನಾಟಕದ ಭಾಗಗಳಲ್ಲೂ ಪ್ರಭಾವ ಬೀರಬಹುದು. ಹಾಗಾಗಿ ಉತ್ತರದ ಅಧಿಪತ್ಯವನ್ನು ಸ್ಥಾಪಿಸಲು ಇಲ್ಲಿಂದ ಸಾಧ್ಯವಾಗಬಹುದು ಅನ್ನೋ ಲೆಕ್ಕಾಚಾರ ದಳಪತಿಯದ್ದು.. ಇನ್ನು ಇಲ್ಲಿನ ಜನ ವೈಯಕ್ತಿಕವಾಗಿ ಅಭ್ಯರ್ಥಿಗಳನ್ನು ಪರಿಗಣಿಸೋ ಕಾರಣ ಹೆಚ್ ಡಿಕೆ ಅವ್ರಿಗೆ ಇಲ್ಲಿ ಅಭೂತಪೂರ್ವ ಬೆಂಬಲ ಸಿಕ್ಕೇ ಸಿಗತ್ತೆ. ಜೆತೆಗ ಹಾಲಿ ಶಾಸಕ ನಡಹಳ್ಳಿ ಜೆಡಿಎಸ್ ನಲ್ಲಿರೋ ಕಾರಣ ಅವರ ದೊಡ್ಡ ಅಬಿಮಾನಿ ಗಣ ಕುಮಾರ ಸ್ನಾಮಿ ಕೈ ಹಿಡಿಯತ್ತೆ. ಆ ಮೂಲಕ ಗೆಲುವು ಈಸಿಯಾಗತ್ತೆ ಅನ್ನೋದು ಅವ್ರ ಲೆಕ್ಕಾಚಾರ

 

‘ಕಮಲ’ ಯಾರ ಮುಡಿಗೆ

 

ಸೋಮನಗೌಡ ಪಾಟೀಲ್,  ಟಿಕೆಟ್ ಆಕಾಂಕ್ಷಿ, ಪರಾಜಿತ ಬಿಜೆಪಿ ಅಭ್ಯರ್ಥಿ

ಕಳೆದ ಬಾರಿಯ ಚುನಾವಣೆಯಲ್ಲಿ ಕೈ ಪಕ್ಷದಿಂದ ಕಣಕ್ಕಿಳಿದಿದ್ದ ಎಎಸ್ ಪಾಟೀಲ್ ನಡಹಳ್ಳಿ ಅವ್ರ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿಯ ಸೋಮನಗೌಡ ಪಾಟೀಲ್ ಗೆ ತೀವ್ರ ಮುಖಭಂಗವಾಗಿತ್ತು. ನಿರೀಕ್ಷಿತ ಮಟ್ಟದಲ್ಲಿ ಮತಗಳು ಸಿಗದೆ ಪಕ್ಷದ ಕಾರ್ಯಕರ್ತರೂ ಕೂಡಾ ಶಾಕ್ ಆಗಿದ್ರು. ಹಾಗಾಗಿ ಈ ಬಾರಿ ಸೋಮನಗೌಡ ಪಾಟೀಲ್ ಗೆ ಬಿಜೆಪಿ ಟಿಕೆಟ್ ಸಿಗೋದು ಡೌಟ್

ರಾಜು ಗೌಡ ಪಾಟೀಲ್, ಪ್ರಬಲ ಆಕಾಂಕ್ಷಿ

ಹೌದು.   ಈ ಬಾರಿ ಈ ಕ್ಷೇತ್ರದಿಂದ ರಾಜು ಗೌಡ ಪಾಟೀಲ್ ಅವ್ರಿಗೆ ಟಿಕೆಟ್ ಕೊಡಬೇಕು ಅನ್ನೋ ಮಾತುಗಳು ಬಿಜೆಪಿ ವಲಯದಿಂದ ಕೇಳಿ ಬರ್ತಿದೆ. ಬಿಜೆಪಿ ಕಾರ್ಯಕರ್ತರಂತೂ ಟಿಕೆಟ್ ಯಾರಿಗೆ ಸಿಗತ್ತೆ ಅನ್ನೋದನ್ನು ಆಧರಿಸಿ ಚುನಾವಣೆ ತಯಾರಿಯಲ್ಲಿ ಪಾಲ್ಗೊಳ್ಳಲು ತೀರ್ಮಾನಿಸಿದ್ದಾರೆ.

ಹಾಗಾಗಿ ಈ ಭಾರಿಯ ಬಿಜೆಪಿಯ ಮುಂಚೂಣಿಯಲ್ಲಿ ರಾಜುಗೌಡ ಪಾಟೀಲ ಅವರ ಹೆಸರು ಕೇಳಿ ಬಂದಿರೋದ್ರ ಜತೆಗೆ ಅವ್ರು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ವೈ ಅವರ ಆಪ್ತರಾಗಿದ್ದಾರೆ. ಅದಕ್ಕಾಗಿ ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ ಈ ಭಾರಿ ಬಿಜೆಪಿಯಿಂದ ರಾಜುಗೌಡ ಗೆಲ್ಲುವ ಕುದುರೆ ಅಂತಾನೇ ಹೇಳಲಾಗ್ತಿದೆ.

 

‘ಕೈ’ ಆಕಾಂಕ್ಷಿಗಳು

 

  1. ಸುಭಾಷ ಛಾಯಾಗೋಳ, ಗಡಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ
  2. ನಿಂಗನಗೌಡ ಪಾಟೀಲ್, ಜಿ.ಪಂ ಮಾಜಿ ಉಪಾಧ್ಯಕ್ಷ
  3. ಆನಂದ ದೊಡಮನಿ , ಟಿಕೆಟ್ ಆಕಾಂಕ್ಷಿ

ಈ ಬಾರಿ ಈ ಮತ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಗೆ ಪೈಪೋಟಿ ಇದೆ. ನಡಹಳ್ಳಿ ಅವ್ರು 2 ಬಾರಿ ಇಲ್ಲಿಂದ ನಂತು ಗೆದ್ದಿದ್ದಾರೆ ನಿಜ. ಆದ್ರೆ ಅದು ಅವರ ವರ್ಚಸ್ಸಿನ ಮೇಲೆ. ಆದ್ರೆ ಈ ಬಾರಿ ಕೈ ಗೆ ಅಷ್ಟು ಸುಲಭ ಜಯ ಇಲ್ಲಿ ಸಿಗೋದು ಡೌಟ್. ಹಾಗಿದ್ರೂ ಕೂಡಾ ಕೈ ಟಿಕೆಟ್ ಆಕಾಂಕ್ಷಿಗಳಿಗೇನೂ ಕಡಿಮೆ ಇಲ್ಲ ಕೈ ಆಕಾಂಕ್ಷಿಗಳಲ್ಲಿ ಮೊದಲನೇ ಹೆಸರು ಗಡಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸುಭಾಷ ಛಾಯಾಗೋಳ ಅವ್ರದ್ದು. ಇವರ ಜತೆಗೆ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ನಿಂಗನಗೌಡ ಪಾಟೀಲ ಅವ್ರ ಹೆಸರು ಕೇಳಿ ಬರ್ತಿದೆ. ಅಷ್ಟೇ ಅಲ್ಲದೆ ಸ್ಥಳೀಯರಲ್ಲಿ ತಮ್ಮದೇ ಹೆಸರು ಮೂಡಿಸಿರುವ ಆನಂದ ದೊಡಮನಿಯವರ ಹೆಸರು ಕೂಡಾ ಆಕಾಂಕ್ಷಿಗಳ ಲಿಸ್ಟ್ ನಲ್ಲಿದೆ. ಹಾಗಾಗಿ ಕೊನೆ ಘಳಿಗೆಯಲ್ಲಿ

ಯಾರಿಗೆ ಬಿ ಫಾರ್ಮ್ ಸಿಗತ್ತೆ ಅನ್ನೋದನ್ನು ಹೇಳೋದಕ್ಕಾಗಲ್ಲ. ಕಾಂಗ್ರೆಸ್ ನಲ್ಲಿ ಯಾರಿಗೆ ಟಿಕೆಟ್ ಸಿಕ್ರೂ ಕೂಡಾ ಕಾಂಗ್ರೆಸ್ ಗೆಲುವು ಇಲ್ಲಿ ಕಷ್ಟ

ಒಟ್ನಲ್ಲಿ ವಲಸೆ ಮತಕ್ಷೇತ್ರವೆಂದು ಹೆಸರುವಾಸಿಯಾಗಿರುವ ದೇವರಹಿಪ್ಪರಗಿನಲ್ಲಿ ಈ ಭಾರೀ ಜೆಡಿಎಸ್ ಹಾಗೂ ಬಿಜೆಪಿ ನಡುವೆ ಫೈಪೊಟಿ ಇರೋದಂತೂ ನಿಜ.ಆದ್ರೆ ವಿಜಯಪುರ ಜಿಲ್ಲೆ ಎಂಟು ಮತಕ್ಷೇತ್ರಗಳ ಪೈಕಿ ಏಳು ಸ್ಥಾನ ತನ್ನದಾಗಿಸಿಕೊಂಡಿರುವ ಕಾಂಗ್ರೆಸ್‌ನಲ್ಲಿ ಬಿರುಕು ಕಾಣಿಸಿಕೊಂಡಿರೋದ್ರಿಂದ ಕಾಂಗ್ರೆಸ್ ಗೆಲುವು ಇಲ್ಲಿ ಕಷ್ಟ. ಇನ್ನು ಒಂದೇ ಸ್ಥಾನ ಗಳಿಸಿದ್ದರೂ ಸ್ಥಳೀಯ ರಾಜಕೀಯ ರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಬಿಜೆಪಿ ಆಂತರಿಕ ಪೈಪೋಟಿ ಎದುರಿಸುತ್ತಿದೆ.

ಅಸ್ತಿತ್ವವನ್ನೇ ಕಳೆದುಕೊಂಡಿದ್ದ ಜೆಡಿಎಸ್‌ಗೆ ಖುದ್ದು ರಾಜ್ಯಾಧ್ಯಕ್ಷರೇ ನೀರುಣಿಸುತ್ತಿದ್ದು ಕುಮಾರಸ್ವಾಮಿ ಹವಾ ಮಾತ್ರ ಸಖತ್ತಾಗಿದೆ ಇದು ಎಷ್ಟರ ಮಟ್ಟಿಗೆ ಲಾಭ ಆಗುತ್ತೋ ಕಾದು ನೋಡಬೇಕು.

ದೇವರ ಹಿಪ್ಪರಗಿ ಮತ ಕ್ಷೇತ್ರ ಹಿಂದಿನಂತಿಲ್ಲ. ಇಲ್ಲಿ ಗೆಲ್ಲುವ ಕುದುರೆ ಅಂತಾನೇ ಕರೆಸಿಕೊಂಡಿದ್ದ ಹಾಲಿ ಶಾಸಕ ನಡಹಳ್ಳಿ ಕೈ ಜತೆಗಿಲ್ಲ. ಅವ್ರು ಜೆಡಿಎಸ್ ಸೇರಿರೋರೋದ್ರಿಂದ ಜೆಡಿಎಸ್ ಬಲವಾಗಿದೆ. ಕೈ ಕುಗ್ಗಿ ಹೋಗಿದೆ. ಮುಂದಿನ ಮುಖ್ಯಮಂತ್ರಿ ಅಂತಾ ಬಿಂಬಿಸಲಾಗ್ತಿರೋ ಹೆಚ್ ಡಿಕೆ ಸ್ವತಃ ಇಲ್ಲಿಂದ ನಿಲ್ಲೋ ಕಾರಣ ಮತದಾರರ ಮೇಲೆ ಅದು ಪ್ರಭಾವಬೀರಿ ಅವ್ರೇ ಇಲ್ಲಿ ಗೆಲ್ಲೋದು ಕನ್ಫರ್ಮ್.

ಇದು ದೇವರ ಹಿಪ್ಪರಗಿ ಮತ ಕ್ಷೇತ್ರದ ಸದ್ಯದ ರಾಜಕೀಯ ಸನ್ನಿವೇಶದ ಕಂಪ್ಲೀಟ್ ಡೀಟೇಲ್ಸ್. ಚುನಾವಣೆ ಹತ್ತಿರ ಬಂದಾಗ ಇಲ್ಲಿ ಇನ್ನೊಂದಷ್ಟು ಬದಲಾವಣೆಯ ಗಾಳಿ ಬೀಸಿದ್ರೂ ಆಶ್ಚರ್ಯ ಇಲ್ಲ.

 

 

 

From the web

ಪ್ರತ್ಯುತ್ತರ ನೀಡಿ

Please enter your comment!
Please enter your name here