ಕೇರಳದ ಪಲಕ್ಕಾಡ್ ನಲ್ಲಿ ಆನೆಯ ಆರ್ಭಟ! ಮದವೇರಿ ಜನರನ್ನು ಹೈರಾಣಾಗಿಸಿದ ಗಜರಾಜ!!

ದೇವಸ್ಥಾನದ ಪೂಜೆಗಳಿಗೆ ಆನೆಗಳನ್ನು ಕರೆ ತರೋದು ಸಾಮಾನ್ಯವಾದ ಸಂಗತಿ. ಆದರೆ ಹೀಗೆ ಕರೆತರಲಾಗುವ ಆನೆಗಳು ಮದವೇರಿ ಅವಾಂತರ ಸೃಷ್ಟಿಸುವುದು ಇದೇ ಮೊದಲಲ್ಲ. ಇದೀಗ ಕೇರಳದ ಪಲಕ್ಕಾಡ್​ ಜಿಲ್ಲೆಯ ಕುಝಾಲ್​​ಮನ್ನಂ ಎಂಬ ಗ್ರಾಮಕ್ಕೆ ನುಗ್ಗಿದ ಸಾಕಾನೆ ಮನಬಂದಂತೆ ಅಡ್ಡಾಡಿದ್ದು, ಗ್ರಾಮಸ್ಥರ ಎದೆಯಲ್ಲಿ ನಡುಕ ಮೂಡಿಸಿದೆ.

ad

ಗ್ರಾಮದ ದೇವಾಲಯದ ಪೂಜಾ ಕಾರ್ಯಕ್ಕೆ ಆನೆಯನ್ನು ಕರೆಸಲಾಗಿತ್ತು.  ಆದರೆ ಈ ಆನೆ ಮದವೇರಿ ಗ್ರಾಮದ ಎಲ್ಲೆಡೆ ಓಡಾಡಿದ್ದು, ಜನರನ್ನು ಮನಬಂದಂತೆ ಓಡಿಸಿದೆ. ಅಷ್ಟೇ ಅಲ್ಲ  ವಾಹನಗಳನ್ನು ಸೊಂಡಿಲಿನಿಂದ ಎಸೆದಿದೆ. ಅದೃಷ್ಟವಶಾತ ಘಟನೆಯಲ್ಲಿ ಯಾರಿಗೂ ಪ್ರಾಣ ಹಾನಿ ಉಂಟಾಗಿಲ್ಲ.

ಕೆಲವರು ಗಾಯಗೊಂಡಿದ್ದು, ಮದವೇರಿದ ಆನೆಯನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಹರಸಾಹಸ ನಡೆಸಿದ್ದಾರೆ. ಇನ್ನು ಆನೆ ದಾಳಿಯ ಈ ವಿಡಿಯೋ ಎಲ್ಲೆಡೆ ವೈರಲ್​ ಆಗಿದ್ದು, ಮದವೇರಿದ ಆನೆಯ ಅವಾಂತರ ನೋಡಿ ಜನ  ಕಂಗಾಲಾಗಿದ್ದಾರೆ.