ಬರೋಬ್ಬರಿ 500 ಕೆಜಿ ತೂಕ ಹೊಂದಿದ್ದ, ಜಗತ್ತಿನ ದಢೂತಿ ಮಹಿಳೆ ಈಜಿಪ್ಟ್​ನ ಎಮಾನ್ ಅಹ್ಮದ್ ಇಂದು ಕೊನೆಯುಸಿರೆಳೆದಿದ್ದಾಳೆ ಅಬುದಾಬಿಯ ಬುರ್ಜಿಲ್ ಆಸ್ಪತ್ರೆಯಲ್ಲಿ 37 ವರ್ಷದ ಎಮಾನ್ ಅಹ್ಮದ್ ವಿಧಿವಶಳಾದ್ಳು. ಎಮಾನ್ ಅಹ್ಮದ್ ಕಳೆದ ಮಾರ್ಚ್​ ತಿಂಗಳಲ್ಲಿ ತೂಕ ಇಳಿಸಿಕೊಳ್ಳಲು ಮುಂಬೈನ ಸೈಫಿ ಆಸ್ಪತ್ರೆಯಲ್ಲಿ ದಾಖಲಾಗಿ 300 ಕೇಜಿ ತೂಕ ಇಳಿಸಿಕೊಂಡಿದ್ಳು. ಅದಾದ ಬಳಿಕ ಅವಳ ಸಹೋದರಿ ಎಮಾನ್ ತೂಕ ಇಳಿದೇ ಇಲ್ಲ ಅಂತ ಆಸ್ಪತ್ರೆಯ ವೈದ್ಯರ ವಿರುದ್ಧ ಆರೋಪ ಹೊರಿಸಿ ಕಳೆದ ಮೇ ತಿಂಗಳಲ್ಲಿ ಅಬುದಾಬಿಯ ಬುರ್ಜಿಲ್ ಆಸ್ಪತ್ರೆಗೆ ಸೇರಸಿದ್ದಳು. ಆದ್ರಿವತ್ತು ಎಮಾನ್ ಅಹಮ್ಮದ್ ಕೊನೆಯುಸಿರೆಳೆದ್ದಿದ್ದಾಳೆ. ಹೃದಯ ಮತ್ತು ಕಿಡ್ನಿ ಸಂಬಂಧಿ ಖಾಯಿಲೆಯಿಂದ ಎಮಾನ್​ ಮೃತಪಟ್ಟಿದ್ದಾಳೆ ಅಂತ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಎಮಾನ್​ಗೆ 20 ತಜ್ಞ ವೈದ್ಯರು  ಚಿಕಿತ್ಸೆ ನೀಡ್ತಾ ಇದ್ರು. ಅಂದ್ಹಾಗೆ ಎಮಾನ್ ಕಳೆದ ವಾರವಷ್ಟೆ 37ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಳು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here