ವಿದೇಶಿ ಮಾರುಕಟ್ಟೆಯಲ್ಲಿ ದಕ್ಷಿಣ ಭಾರತದ ಅಕ್ಕಿ ತಿರಸ್ಕೃತವಾಗ್ತಿರೋದೇಕೆ?

European Union, Iran and US Rejected South Indian Rice for excess pesticide residue.
European Union, Iran and US Rejected South Indian Rice for excess pesticide residue.

ದಕ್ಷಿಣ ಭಾರತದ ಆಹಾರ ವಿಶ್ವದಲ್ಲೇ ಪ್ರಸಿದ್ಧಿ ಪಡೆದುಕೊಂಡಿದೆ. ಅದರಲ್ಲೂ ದಕ್ಷಿಣ ಭಾರತದಲ್ಲಿ ಉತ್ಪಾದನೆಯಾಗುವ ವಿವಿಧ ತಳಿಯ ಅಕ್ಕಿಗಳು ಫುಲ್ ಫೇಮಸ್​. ಆದರೇ ಇದೀಗ ರೈತರ ಚಿಕ್ಕ ತಪ್ಪಿನಿಂದಾಗಿ ವಿದೇಶಗಳಲ್ಲಿ ಭಾರತದ ಅದರಲ್ಲೂ ದಕ್ಷಿಣ ಭಾರತದ ಅಕ್ಕಿ ಮಾರಾಟಕ್ಕೆ ಸಂಚಕಾರ ಬಂದಿದೆ. ಹೌದು ಮಿತಿ ಮೀರಿದ ಕೀಟನಾಶಕ ಬಳಕೆಯಿಂದ ದಕ್ಷಿಣ ಭಾರತದ ಅಕ್ಕಿಯ ಗುಣಮಟ್ಟ ಕುಸಿದಿದೆ ಎಂಬ ಆರೋಪ ಕೇಳಿಬಂದಿದ್ದು, ಇದೇ ಕಾರಣಕ್ಕೆ ದಕ್ಷಿಣ ಭಾರತದಿಂದ ರಫ್ತಾದ ಅಕ್ಕಿಯನ್ನು ಐರೋಪ್ಯ ಒಕ್ಕೂಟ, ಇರಾನ್‌ ಮತ್ತು ಅಮೆರಿಕದ ಮಾರುಕಟ್ಟೆಗಳು ತಿರಸ್ಕರಿಸಿವೆ.


ನಿಗದಿತ ಮಟ್ಟಕ್ಕಿಂತ ಹೆಚ್ಚಿನ ಕೀಟನಾಶಕದ ಅಂಶ (ಗರಿಷ್ಠ ಶೇಷಾಂಶ) ಅಕ್ಕಿಯಲ್ಲಿ ಇರುವುದು ಇದಕ್ಕೆ ಕಾರಣ. ಈ ಬಗ್ಗೆ ಎಚ್ಚರವಹಿಸಬೇಕು ಮತ್ತು ರೈತ ರಿಗೆ ಮಾರ್ಗದರ್ಶನ ನೀಡಬೇಕು ಎಂದು ಕೇಂದ್ರ ಸರ್ಕಾರದ ಸಂಸ್ಥೆಯೂ ಸೂಚನೆ ಕೊಟ್ಟಿದೆ.

 

ಈ ಸಂಬಂಧ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಎಣ್ಣೆ ಬೀಜ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕ ಬಿ.ಕೆ.ಶ್ರೀವಾಸ್ತವ ರಾಜ್ಯ ಕೃಷಿ ಮಿಷನ್‌ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

 


ರಾಜ್ಯ ಸರ್ಕಾರದ ಕೃಷಿ ನಿರ್ವಹಣಾ ಸಂಸ್ಥೆ ಕೃಷಿ ಇಲಾಖೆ ಹಾಗೂ ಕೃಷಿ ವಿಶ್ವವಿದ್ಯಾಲಯಗಳಿಗೆ ಇದೇ ವಿಷಯ ಉಲ್ಲೇಖಿಸಿ ಪತ್ರ ಬರೆಯಲಾಗಿದೆ. ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ತಮಿಳುನಾಡು ಮತ್ತು ಕೇರಳ ಸರ್ಕಾರಗಳಿಗೂ ಈ ಸುತ್ತೋಲೆ ಹೋಗಿದೆ. ಬೆಂಕಿರೋಗದ ನಿಯಂತ್ರಣಕ್ಕೆ ಸಿಂಪಡಿಸಿದ ಶಿಲೀಂಧ್ರನಾಶಕಗಳನ್ನು ವಿಪರೀತ ಪ್ರಮಾಣದಲ್ಲಿ ಬಳಸಿರುವುದೇ ಇದಕ್ಕೆ ಕಾರಣ ಎಂದು ರಾಷ್ಟ್ರೀಯ ಆಹಾರ ಭದ್ರತಾ ಮಿಷನ್‌ ಅಭಿಪ್ರಾಯಪಟ್ಟಿದೆ.

From the web

ಪ್ರತ್ಯುತ್ತರ ನೀಡಿ

Please enter your comment!
Please enter your name here