ಗುಜರಾತ್ ಚುನಾವಣೆಯಲ್ಲಿ ಹಣಬಲ ಕೆಲಸ ಮಾಡಿದೆ !! ಇವಿಎಂ ಕೂಡಾ ಬ್ಯಾನ್ ಆಗಬೇಕು : ಹಾರ್ದಿಕ್ ಪಟೇಲ್

ಗುಜರಾತ್ ಚುನಾವಣಾ ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಪಾಟೀದಾರ್ ಚಳುವಳಿಯ ಮುಖಂಡ ಹಾರ್ಧಿಕ್ ಪಟೇಲ್ ಪ್ರತಿಕ್ರಿಯಿಸಿದ್ದಾರೆ.

ಇಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಹಾರ್ದಿಕ್ ಪಟೇಲ್, ಬಿಜೆಪಿ ಹಣದ ಬಲದಿಂದ ಚುನಾವಣೆ ಗೆದ್ದಿದೆ. ಜನರು ಉತ್ತಮ ಆದೇಶ ನೀಡಿದ್ದಾರೆ ಆದರೆ ಬಿಜೆಪಿ ಹಣದ ಮೂಲಕ ತನ್ನ ಗೆಲುವು ದಾಖಲಿಸಿದೆ ಎಂದಿದ್ದಾರೆ.

ಬಿಜೆಪಿಯ ದಬ್ಬಾಳಿಕೆಯ ವಿರುದ್ದ ನಮ್ಮ ಹೋರಾಟ ಮುಂದುವರಿಯಲಿದೆ. ಪಟೇಲ್ ಸಮುದಾಯ ಬಿಜೆಪಿಯ ವಿರುದ್ದ ತಿರುಗಿ ಬಿದ್ದಿದೆ. ಕಾಂಗ್ರೇಸ್ ಉತ್ತಮ ಪ್ರದರ್ಶನ ನೀಡಿದೆ. ಆದ್ದರಿಂದ ಕಳೆದ ಬಾರಿಗಿಂತ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ ಎಂದರು.

 

ಇವಿಎಮ್ ಮೂಲಕ ಚುನಾವಣೆಯಲ್ಲಿ ಬಿಜೆಪಿ ಜನರಿಗೆ ಮೋಸ ಮಾಡಿದೆ. ಮೊದಲು ಇವಿಎಮ್ ಮೂಲಕ ನಡೆಸುವ ಚುನಾವಣೆಯನ್ನು ನಿಲ್ಲಿಸಬೇಕು. ತಂತ್ರಜ್ಞಾನದಲ್ಲಿ ಮುಂದಿರುವ ರಾಷ್ಟ್ರಗಳೇ ಅದನ್ನು ಬಳಸುತ್ತಿಲ್ಲ. ನಮ್ಮ ರಾಷ್ಟ್ರದಲ್ಲೂ ಅದು ನಿಲ್ಲಬೇಕಿದೆ ಎಂದರು.

ನಾನು ತೆರೆದ ಪುಸ್ತಕ, ತೆರೆದ ಪುಸ್ತಕದಂತೆ ಹೋರಾಟ ಮುಂದುವರಿಸುತ್ತೇನೆ. ಚಳುವಳಿಯ ಭಾಗವಾಗಿ ನನ್ನ ಕೆಲಸ ಮಾಡಿದ್ದೇನೆ. ಮುಂದೆಯೂ ಮಾಡುತ್ತೇನೆ ಎಂದು ತಿಳಿಸಿದ್ದಾರೆ.