ಅಮಾನತ್ತಾದರೂ ಅಧಿಕಾರದಲ್ಲೇ ಮುಂದುವರಿದ ಅಧಿಕಾರಿ- ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕ ಅಸಮಧಾನ!

ರಾಜ್ಯದಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೇ ಉಳಿಗಾಲವಿಲ್ಲ ಎಂಬ ಕೂಗು ಜೋರಾಗಿರುವ ಬೆನ್ನಲ್ಲೇ ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳು ರಾಜಾರೋಷವಾಗಿ ಕೆಲಸ ಮಾಡುತ್ತಿರುವ ಸಂಗತಿ ಬೆಳಕಿಗ ಬಂದಿದೆ.

ad

ಹೌದು ಇಲ್ಲಿ ಭ್ರಷ್ಟ ಅಧಿಕಾರಿಗಳ ಆಟಾಟೋಪಕ್ಕೆ ಕಡಿವಾಣವೇ ಇಲ್ಲದಂತಾಗಿದ್ದು, ಅಮಾನತ್ತಾಗಿದ್ದರೂ ತಮ್ಮ ಹುದ್ದೆಯಲ್ಲೇ ಮುಂದುವರಿಯುತ್ತಿರೋದು ಅವರಿಗಿರುವ ರಾಜಕೀಯ ಪ್ರಭಾವಕ್ಕೆ ಸಾಕ್ಷಿ ಒದಗಿಸುತ್ತಿದೆ. ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ದಿ ನಿಗಮದ (ಕೆಎಸ್ ಎಸ್ ಐಡಿಸಿ) ಜನರಲ್ ಮ್ಯಾನೇಜರ್ ಎಂ ಶಂಕರ್ ಎಂಬಾತ 2011 ಅಕ್ಟೋಬರ್ 3 ರಂದು ಭ್ರಷ್ಠಾಚಾರದ ಹಿನ್ನಲೆಯಲ್ಲಿ ಅಮಾನತ್ತಾಗಿದ್ದರು. ಈ ಅಮಾನತ್ತು ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಪ್ರಾಥಮಿಕವಾಗಿ ಭ್ರಷ್ಠಾಚಾರ ನಡೆದಿರೋದು ಕಂಡು ಬಂದ ಹಿನ್ನಲೆಯಲ್ಲಿ ಹೈಕೋರ್ಟ್ ಎಂ ಶಂಕರ್ ಅರ್ಜಿಯನ್ನು ವಜಾಗೊಳಿಸಿತ್ತು.

ಆ ನಂತರ ನಿಗದ ಭ್ರಷ್ಠಾಚಾರಗಳ ಬಗ್ಗೆ ಹಿರಿಯ ಐಎಎಸ್ ಅಧಿಕಾರಿ ರಜನೀಶ್ ಗೋಯಲ್ ನೇತೃತ್ವದ ಸಮಿತಿಯೂ ವರದಿ ನೀಡಿತ್ತು. ಇಷ್ಟೇಲ್ಲ ಆದ ಮೇಲೆ ಎಚ್ಚೆತ್ತ ಸರ್ಕಾರ ನಿಗಮದ ಹಗರಣಗಳ ತನಿಖೆ ನಡೆಸಲು ಜಸ್ಟಿಸ್ ಪದ್ಮರಾಜ್ ಆಯೋಗವನ್ನೂ ರಚನೆ ಮಾಡಿತ್ತು. ಎಲ್ಲಾ ಸಮಿತಿ, ಆಯೋಗ, ಹೈಕೋರ್ಟ್ ಹೇಳಿದರೂ ಅಮಾನತ್ತಾದ ಎಂ ಶಂಕರ್ ಮಾತ್ರ ಜನರಲ್ ಮ್ಯಾನೇಜರ್ ಹುದ್ದೆಯಲ್ಲಿ ಮುಂದುವರೆದಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಶಾಸಕರೇ ಆಗಿರುವ ಪಿ ಆರ್ ರಮೇಶ್ ಮುಖ್ಯಮಂತ್ರಿಗೆ ಪತ್ರ ಬರೆದು ಇದು ಆಡಳಿತದ ವೈಫಲ್ಯ ಎಂದು ಅಸಮಾದಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್​ ಶಾಸಕರೇ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರೂ ಸರ್ಕಾರ ಮಾತ್ರ ಗಾಡನಿದ್ರೆಯಲ್ಲಿದೆ.