ಟ್ವಿಟ್​​ನಲ್ಲೇ ಸಿದ್ದು ಪರ ಬ್ಯಾಟಿಂಗ್ ಮಾಡಿದ ರಮ್ಯ- ರಾಜೀವ್​ ಚಂದ್ರಶೇಖರ್ ಗೆ ರಮ್ಯ ನೀಡಿದ ಉತ್ತರ ಏನು ಗೊತ್ತಾ?

ಪರಿವರ್ತನಾ ರ್ಯಾಲಿಯಲ್ಲಿ ಕಾಂಗ್ರೆಸ್​ ವಿರುದ್ಧ ಕಟುವಾಗಿ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ ವಿರುದ್ಧ ರಮ್ಯ ಸೇರಿದಂತೆ ಕಾಂಗ್ರೆಸ್​​ ನಾಯಕರು ತಿರುಗಿ ಬಿದ್ದಿದ್ದಾರೆ.

ಈ ಮಧ್ಯೆ ತಮ್ಮ ಟ್ವಿಟ್​​ ವಾಗ್ದಾಳಿ ಮುಂದುವರೆಸಿರುವ ಕಾಂಗ್ರೆಸ್ ನಾಯಕಿ ಹಾಗೂ ಮಾಜಿ ಸಂಸದೆ ರಮ್ಯ ಇದೀಗ ಬಿಜೆಪಿ ರಾಜ್ಯಸಭಾ ಸದಸ್ಯ ರಾಜೀವ ಚಂದ್ರಶೇಖರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಟ್ವಿಟ್​ ವಾಗ್ದಾಳಿ ಮುಂದುವರೆಸಿರುವ ರಮ್ಯ, ಈಗ ಬಿಜೆಪಿಯ ರಾಜ್ಯಸಭಾ ಸದಸ್ಯ ರಾಜೀವ ಚಂದ್ರಶೇಖರ್​ ವಿರುದ್ಧ ಕಿಡಿಕಾರಿದ್ದಾರೆ. ಯೋಜನೆಗಳಿಗೆ ಎಷ್ಟು ಭೂಮಿ ಕೊಟ್ಟಿದ್ದೀರಿ ಎಂಬ ರಾಜೀವ್ ಚಂದ್ರಶೇಖರ್​ ಪ್ರಶ್ನೆಗೆ ಉತ್ತರಿಸಿರುವ ರಮ್ಯ, ತಮ್ಮ ಟ್ವಿಟ್​​​ನಲ್ಲಿ ರಾಜೀವ್ ಚಂದ್ರಶೇಖರ್​ಗೆ ನೀಡಲಾಗಿರುವ ಭೂಮಿಯ ವಿವರ ನೀಡಿದ್ದಾರೆ.

ಬೆಂಗಳೂರು ಏರ್​ಪೋರ್ಟ್​ ಬಳಿ 75 ಎಕರೆ ಭೂಮಿ, ಕೋರಮಂಗಲದ ಕೆಎಂಎಫ್​ ಬಳಿ ಭೂಮಿ, ಹಾಸನದಲ್ಲಿ ಎಸ್​ಇಝಡ್​ಗೆ ಭೂಮಿ ಹಾಗೂ ದಾಬಸ್​ಬೇಟೆ ಬಳಿ ಕೆಐಡಿಬಿಅಡಿಯಲ್ಲಿ ಜಮೀನು ಮಂಜೂರು ಮಾಡಿದ್ದೇವೆ ಎಂಬುದರ ಬಗ್ಗೆ ರಮ್ಯ ಸಂಪೂರ್ಣ ಲಿಸ್ಟ್​ನ್ನೇ ಬಿಡುಗಡೆ ಮಾಡಿದ್ದಾರೆ. ಸಿಎಂ ಬಳಿ ಕೇಳಲಾದ ಪ್ರಶ್ನೆಗೆ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿರುವ ರಮ್ಯ ವಿವರಣೆ ನೀಡಿದ್ದಾರೆ. ಇನ್ನು ರಮ್ಯ ಈ ಟ್ವಿಟ್​​ ಮತ್ತಷ್ಟು ಕೋಲಾಹಲ ಸೃಷ್ಟಿಸುವ ಸಾಧ್ಯತೆ ಇದ್ದು, ಬಿಜೆಪಿ ನಾಯಕರು ಹಾಗೂ ಸ್ವತಃ ರಾಜೀವ್ ಚಂದ್ರಶೇಖರ್ ರಿಯಾಕ್ಷನ್​ ಸಾಕಷ್ಟು ಕುತೂಹಲ ಮೂಡಿಸಿದೆ.