ಸ್ವಂತ ಶಕ್ತಿಯಿಂದ ಭಾರತ ಚುನಾವಣೆ ಎದುರಿಸಲಿ – ಮೋದಿಗೆ ಪಾಕ್ ಟಾಂಗ್

ಪಾಕ್ ಮುಂದಿಟ್ಟುಕೊಂಡು ಚುನಾವಣೆ ಗೆಲ್ಲಲು ಮೋದಿ ಯತ್ನ !! ಸುಮ್ ಸುಮ್ನೆ ಪಾಕ್ ನ ಎಳೆದು ತರ್ಬೇಡಿ !!

ಹೀಗಂತ ಪ್ರಧಾನಿ ನರೇಂದ್ರ ಮೋದಿಗೆ ಪಾಕ್ ಖಡಕ್ ಆಗಿ ಹೇಳಿದೆ. ಗುಜರಾತ್ ನಲ್ಲಿ ಕಾಂಗ್ರೆಸ್ ಗೆಲ್ಲಲು ಪಾಕಿಸ್ತಾನ ಕಾಂಗ್ರೆಸ್ ಗೆ ಸಹಕಾರ ನೀಡುತ್ತಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಆರೋಪಕ್ಕೆ ಪಾಕ್ ವಿದೇಶಾಂಗ ಸಚಿವಾಲಯ ಖಡಕ್ ಆಗಿ ಪ್ರತಿಕ್ರಿಯೆ ನೀಡಿದೆ.

“ಸ್ವಂತ ಶಕ್ತಿಯಿಂದ ಚುನಾವಣೆ ಗೆಲ್ಲುವುದನ್ನು ಭಾರತ ರೂಢಿಸಿಕೊಳ್ಳಲಿ. ಎಲ್ಲದಕ್ಕೂ ಪಾಕ್​ ಅನ್ನು ದೂರುವ ಕೆಲಸವನ್ನು ಮೊದಲು ನಿಲ್ಲಿಸಬೇಕು” ಎಂದು ಪಾಕ್​ನ ವಿದೇಶಾಂಗ ಸಚಿವಾಲಯದ ಅಧಿಕಾರಿ ಟ್ವಿಟ್​ ಮೂಲಕ ಮೋದಿ ಟೀಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.

 

ಗುಜರಾತ್​ ಎಲೆಕ್ಷನ್​ನಲ್ಲಿ ಪಾಕ್​ ಪರೋಕ್ಷವಾಗಿ ಭಾಗವಹಿಸುತ್ತಿದೆ. ಅಹ್ಮದ್​ ಪಟೇಲ್​ರನ್ನು ಗುಜರಾತ್​ ಮುಖ್ಯಮಂತ್ರಿಯನ್ನಾಗಿ ಮಾಡಲು ಮಣಿಶಂಕರ್​ ಅಯ್ಯರ್​ ಅಹ್ಮದ್​ ಪಟೇಲ್​ ಮನಮೋಹನ್​ಸಿಂಗ್​ ಅವರು ಪಾಕ್​ ಸೇನೆಯ ಉನ್ನತಾಧಿಕಾರಿಗಳನ್ನ ಬೇಟಿ ಮಾಡಿ ಚರ್ಚಿಸಿದ್ದಾರೆ ಎಂಬ ಮಾಹಿತಿ ಇದೆ ಎಂದು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಆರೋಪಿಸಿದ್ದರು.

 

ಪ್ರಧಾನಿ ಮೋದಿಯ ಈ ಭಾಷಣಕ್ಕೆ ಭಾರೀ ಟೀಕೆ ವ್ಯಕ್ತವಾಗಿತ್ತು. ಈ ದೇಶದೊಳಗೆ ಪಾಕ್ ಅಧಿಕಾರಿಗಳು ಸಭೆ ನಡೆಸುತ್ತಾರೆ ಮತ್ತು ರಾಜಕೀಯ ತಂತ್ರಗಾರಿಕೆ ರೂಪಿಸುತ್ತಿದ್ದಾರೆ ಎಂಬುದು ಗಂಭೀರವಾದ ವಿಷಯ. ಇಂತಹ ವಿಷಯವನ್ನು ಪ್ರಧಾನಿ ಗೌಪ್ಯವಾಗಿ ಇಟ್ಟುಕೊಂಡು ಆರೋಪಿಗಳನ್ನು ಬಂಧನಕ್ಕೊಳಪಡಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಅದನ್ನು ಬಿಟ್ಟು ಬಹಿರಂಗ ಸಭೆಯಲ್ಲಿ ಹೇಳಿದ್ದಾರೆ ಎಂದರೆ ಸೋಲಿಗೆ ಹೆದರಿದ್ದಾರೆ ಎಂದರ್ಥ ಎಂಬ ಟೀಕೆಗಳು ಭಾರತದಲ್ಲಿ ವ್ಯಕ್ತವಾಗಿತ್ತು.

ಪ್ರಧಾನಿಯೊಬ್ಬರು ದೇಶದ ಭದ್ರತೆಯ ವಿಚಾರವನ್ನು ಚುನಾವಣೆಗೆ ಬಳಸುತ್ತಿರೊ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ಪಾಕಿಸ್ತಾನ ಸರಕಾರ ಕೂಡ ಪ್ರತಿಕ್ರಿಯೆ ನೀಡಿದೆ.