ಮಂಗಳೂರಿನಲ್ಲಿ ನಕಲಿ ವೋಟರ್ ಐಡಿ ಜಾಲ ಪತ್ತೆ!!ಇದನ್ನು ಮಾಡುತ್ತಿದ್ದ ಶಾಸಕರ್ಯಾರು ಗೊತ್ತಾ?

ಚುನಾವಣೆ ಹತ್ತಿರವಾಗುತ್ತಿದ್ದಂತೆ ಕರಾವಳಿಯ ಒಂದು ಕ್ಷೇತ್ರದ ಜನಪ್ರಿಯ ಶಾಸಕರೊಬ್ಬರ ಪ್ರೇರಣೆಯಲ್ಲಿಯೇ ನಕಲಿ ವೋಟರ್ ಐಡಿ ಮಾಡುವ ಜಾಲವೊಂದನ್ನ ಬಿಟಿವಿ ಜಾಲಾಡಿದೆ. ಹೌದು ಮಂಗಳೂರಿನ ದಕ್ಷಿಣ ವಿಧಾನಸಭಾ ಕ್ಷೇತ್ರದ ಜನಪ್ರಿಯ ಜನಮನ್ನಣೆ ಗಳಿಸಿರುವ ಶಾಸಕರೇ ಪ್ರೇರಣೆಯಲ್ಲಿಯೇ ರಮಾನಂದ ಪೂಜಾರಿ ಎನ್ನುವಾತ ಈ ನಕಲಿ ವೋಟರ್ ಐಡಿಯನ್ನ ಸೃಷ್ಟಿಸಿ ಚುನಾವಣೆ ಮುನ್ನವೇ ಶಾಸರನ್ನ ಮತ್ತೆ ಗೆಲ್ಲಿಸಬೇಕು ಇರಾದೆಯನ್ನ ಇಟ್ಟುಕೊಂಡೇ ಈ ನಕಲಿ ವೋಟರ್ ಐಡಿ ಮಾಡುವ ದಂಧೆಯನ್ನ ಮಾಡ್ತಿದ್ದಾನೆ. ಇದೀಗ ಇವೆಲ್ಲದರ ಬಗ್ಗೆ ಬಿಟಿವಿ ಬಲೆ ಬೀಸಿ ಎಲ್ಲ ಮಾಹಿತಿಯನ್ನ ಸಂಗ್ರಹಿಸಿದೆ. ಜನಪ್ರಿಯ ಶಾಸಕರೇ ಇವೆಲ್ಲದರ ದಂಧೆಗೆ ಬ್ಯಾಕ್ ಬೋನ್ ಆಗಿರುವುದು ಕರಾವಳಿ ಜಿಲ್ಲೆಯಲ್ಲಿ ಮತ್ತಷ್ಟು ಸಂಚಲನ ಮೂಡಿಸಿದೆ.

ಅಲ್ಲದೆ ಕಾಂಗ್ರೆಸ್ ಪಕ್ಷದವರ ಗೂಂಡಾ ವರ್ತನೆ ಬೆಂಗಳೂರಿಗೆ ಮಾತ್ರ ಸೀಮಿತವಾಗದೇ, ಕರಾವಳಿಯಲ್ಲೂ ಕಾಂಗ್ರೆಸ್ ತನ್ನ ಚಾಲಿಯನ್ನ ರಮಾನಂದ ಪೂಜಾರಿಯ ಮೂಲಕ ಮುಂದುವರಿಸಿದೆ. ಯಾಕಂದ್ರೆ ಈತನ ನಕಲಿ ವೋಟರ್ ಐಡಿ ಜಾಲದ ಬಗ್ಗೆ ವೀಡಿಯೋವೊಂದನ್ನ ಸಂಗ್ರಹಿಸಲಾಗಿತ್ತು.

  

 

ಈ ಮಾಹಿತಿ ತಿಳಿದ ರಮಾನಂದ ಪೂಜಾರಿ ಬಿಜೆಪಿ ಕಾರ್ಯಕರ್ತನೋರ್ವನಿಗೆ ಫೋನ್ ಹಾಯಿಸಿ ಜೀವ ಬೆದರಿಕೆವೊಡ್ಡಿದ್ದಲ್ಲದೆ, ಕೈ ಕಾಲು ಕಟ್ ಮಾಡುವ ಬೆದರಿಕೆಯನ್ನೊಡ್ಡಿದ್ದಾನೆ. ಇದರಲ್ಲೆ ತಿಳಿಯುತ್ತೆ ಕಾಂಗ್ರೆಸ್ ಎಷ್ಟು ಕೀಳುಮಟ್ಟದಲ್ಲಿದೆ ಎನ್ನುವುದು. ಅಲ್ಲದೆ ಇಲ್ಲಿ ಈತನಿಗೆ ಬೆನ್ನೆಲುಬಾಗಿ ನಿಂತಿರೋದು ಬೇರಾರು ಅಲ್ಲ ಜನಪ್ರಿಯ ಶಾಸಕ ಜೆ.ಆರ್.ಲೋಬೊ. ಇವರು ಅಲ್ಲಿ ಇಲ್ಲಿ ಸುತ್ತಾಡಿ ಅಭಿವೃದ್ದಿ, ಯೋಜನೆ ಹಾಗೂ ಉದ್ಘಾಟನೆಗಳನ್ನು ಮಾಡುತ್ತ ಜನಸಾಮಾನ್ಯರನ್ನ ಮೆಚ್ಚಿಸುವಂತ ಕಾರ್ಯ ಮಾಡ್ತಾರೆ.

ಅದ್ರೆ ತಮ್ಮ ಪಕ್ಕದಲ್ಲೇ ಕೂರಿಸ್ಕೊಂಡಿರುವ ರಮಾನಂದ ಪೂಜಾರಿಯನ್ನ ಪ್ರೇರೇಪುಸುವುದು ಎಷ್ಟು ಸರಿ ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.