ಎ.ಮಂಜು ಕ್ಷೇತ್ರದಲ್ಲಿ ನಕಲಿ ಓಟರ್ ಐಡಿ ಸದ್ದು- ಜೆಡಿಎಸ್​ ಕಾರ್ಯಕರ್ತರ ಹೆಸರೇ ನಾಪತ್ತೆ!

ಬೆಂಗಳೂರಿನ ಆರ್.ಆರ್.ನಗರದಲ್ಲಿ ನಕಲಿ ಓಟರ್​ ಐಡಿ ಪ್ರಕರಣ ಸದ್ದು ಮಾಡುತ್ತಿರುವ ಬೆನ್ನಲ್ಲೇ ಸಚಿವ ಎ.ಮಂಜು ಸ್ವಕ್ಷೇತ್ರ ಅರಕಲಗೂಡಿನಲ್ಲೂ ನಕಲಿ ಓಟರ್ ಐಡಿ ಕರ್ಮಕಾಂಡ ನಡೆದಿರುವ ಸಂಗತಿ ಬೆಳಕಿಗೆ ಬಂದಿದೆ. ಸಿಎಂ ಸಿದ್ದರಾಮಯ್ಯ ಆಪ್ತರಾಗಿರುವ ಮುನಿರತ್ನ ಕ್ಷೇತ್ರದ ಜೊತೆಯಲ್ಲೇ ಸಿದ್ದು ಇನ್ನೊಬ್ಬ ಆಪ್ತ ಎ.ಮಂಜು ಕ್ಷೇತ್ರದಲ್ಲೂ ಈ ಆರೋಪ ಕೇಳಿಬಂದಿರೋದು ಹಲವು ಅನುಮಾನ ಮೂಡಿಸಿದೆ.

ad


ಅರಕಲಗೂಡು ತಾಲೂಕಿನ ಹೊಸ ಮತದಾರ ಪಟ್ಟಿಯಲ್ಲಿ ಈ ರೀತಿ ಅವ್ಯೆವಹಾರ ನಡೆದಿದ್ದು, ಬಾನಗೊಂದಿ ಗ್ರಾ.ಪಂ ಸದಸ್ಯೆಯ ಹೆಸರೇ ಮತದಾರ ಪಟ್ಟಿಯಿಂದ ನಾಪತ್ತೆಯಾಗಿದೆ. ಇನ್ನು ಇಲ್ಲಿ 18 ವರ್ಷ ತುಂಬದ ವಿದ್ಯಾರ್ಥಿಗಳಿಗೂ ಮತದಾನ ಭಾಗ್ಯ ಲಭ್ಯವಾಗಿದೆ.
ಇದಲ್ಲದೇ, ಅಗ್ರಹಾರ ಗ್ರಾಮವೊಂದರಲ್ಲೇ 18 ಜೆಡಿಎಸ್​ ಕಾರ್ಯಕರ್ತರ ಹೆಸರು ಮತದಾರ ಪಟ್ಟಿಯಿಂದ ನಾಪತ್ತೆಯಾಗಿದ್ದು, ಹೀಗೆ ಹೆಸರು ನಾಪತ್ತೆಯಾಗಿರೋದರ ಹಿಂದೆ ಕಾಣದ ಕೈಗಳ ಕೈವಾಡವಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ.