ಚುನಾವಣೆಯ ದ್ವೇಷಕ್ಕೆ ಕುಟುಂಬ ಅತಂತ್ರ- ಊರಿಂದ ಬಹಿಷ್ಕಾರ ಹಾಕಿದ ಗ್ರಾಮಸ್ಥರು!

 

ad

ವಿಧಾನಸಭೆ ಚುನಾವಣೆ ನಡೆದು ಸರ್ಕಾರ ಸಹ ರಚನೆಯಾಗಿದೆ. ಆದ್ರೆ, ಇನ್ನು ರಾಜಕೀಯ ದ್ವೇಷ ಹಾಗೂ ಸೇಡು ಮಾತ್ರ ಮುಗಿದಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್​ ಪರ ಕೆಲಸ ಮಾಡಿದ್ದಾರೆ ಅನ್ನೋ ಒಂದೇ ಒಂದು ಕಾರಣಕ್ಕೆ ಕುಟುಂಬವೊಂದಕ್ಕೆ ಬಹಿಷ್ಕಾರ ಹಾಕಿದ ಪ್ರಕರಣ ಮೈಸೂರಿನಲ್ಲಿ ನಡೆದಿದೆ.
ಮೈಸೂರು ಜಿಲ್ಲೆಯ ಹುಣಸೂರಿನ ಹಂದನಹಳ್ಳಿಯ ಬಸವನಾಯಕ ಕುಟುಂಬವನ್ನ ಊರಿಂದ ಹೊರಹಾಕಿದ್ದಾರೆ ಎನ್ನಲಾಗಿದೆ. ಜಿ.ಪಂ. ಸದಸ್ಯೆ ಗೌರಮ್ಮ ಪತಿ ಸೋಮಶೇಖರ್​ ಕುಟುಂಬಸ್ಥರಿಗೆ ಬಹಿಷ್ಕಾರ ಹಾಕಿದ್ದು ಮೂರು ತಿಂಗಳಿಂದ ಯಾವೊಂದು ಸಣ್ಣ ಸಹಾಯವನ್ನೂ ಗ್ರಾಮಸ್ಥರು ಮಾಡ್ತಿಲ್ವಂತೆ

ಊರಲ್ಲಿರೋ ಯಾವ್ದೇ ಅಂಗಡಿಯಲ್ಲೂ ಏನನ್ನೂ ಕೊಡ್ತಿಲ್ಲ. ಒಂದು ವೇಳೆ ಯಾರಾದ್ರೂ ಸಹಾಯ ಮಾಡಿದ್ರೆ 500 ರೂಪಾಯಿ ದಂಡ ಹಾಕ್ತಾರಂತೆ. ದಿಕ್ಕು ಕಾಣದ ಕುಟುಂಬಸ್ಥರು ಮೈಸೂರಿಂದಲೇ ಎಲ್ಲಾ ವಸ್ತುಗಳನ್ನ ತಂದು ಜೀವನ ಸಾಗಿಸ್ತಿದ್ದಾರೆ. ಸಿಎಂ ಕುಮಾರಸ್ವಾಮಿಯವ್ರೇ ನಮಗೆ ಸಹಾಯಮಾಡ್ಬೇಕು. ಇಲ್ಲದಿದ್ರೆ ಇಡೀ ಕುಟುಂಬ ಆತ್ಮಹತ್ಯೆ ಮಾಡಿಕೊಳ್ತೇವೆ ಅಂತ ಅಳಲು ತೋಡಿಕೊಳ್ತಿದ್ದಾರೆ.